Search
  • Follow NativePlanet
Share
» »ಹಿರಿಯೂರಿನ ಮಾರಿ ಕಣಿವೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

ಹಿರಿಯೂರಿನ ಮಾರಿ ಕಣಿವೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

ಮಾರಿ ಕಣಿವೆಯನ್ನು ವಾಣಿ ವಿಲಾಸ ಸಾಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಅತ್ಯಂತ ಹಳೆಯ ಅಣೆಕಟ್ಟು ಇದಾಗಿದೆ. ಈ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದರು.

ಕೃತಕ ಕೆರೆ

ಕೃತಕ ಕೆರೆ

PC:Singhv796

ವಾಣಿ ವಿಲಾಸ ಸಾಗರವು ವೇದಾವತಿ ನದಿಯಾದ್ಯಂತ ಮೈಸೂರು ಒಡೆಯರ್ ನಿರ್ಮಿಸಲಾಗಿರುವ ಒಂದು ಕೃತಕ ಕೆರೆಯಾಗಿದೆ. ವಾಣಿ ವಿಲಸಾ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್‌ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ IV ರ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿದೆ. ಈ ಅಣೆಕಟ್ಟು ಒಂದು ಅತ್ಯಾಧುನಿಕ ವಾಸ್ತುಶಿಲ್ಪವಾಗಿದೆ.ಇದು ಸುತ್ತಮುತ್ತಲಿನ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ನೀರನ್ನು ಒದಗಿಸುತ್ತದೆ. ಇವುಗಳು ಮಧ್ಯ ಕರ್ನಾಟಕದ ಡೆಕ್ಕನ್ ಪ್ರದೇಶದ ಒಣ ಪ್ರದೇಶಗಳಾಗಿವೆ.

 ನೀರಿನ ಮೂಲ

ನೀರಿನ ಮೂಲ

PC:HPNadig

ಈ ಅಣೆಕಟ್ಟು ಹಿರಿಯೂರು ಮತ್ತು ಚಿತ್ರದುರ್ಗ ದೇಶೀಯ ನೀರಿನ ಮೂಲವಾಗಿದೆ. ಇದು ಹಿರಿಯೂರು ಮತ್ತು ಚಳ್ಳಕೆರೆ ತಾಲೂಕಿನ ಬಲ ಮತ್ತು ಎಡ ದಡಗಳ ಕಾಲುವೆಗಳಗಳಲ್ಲಿ 100 ಕ್ಕಿಂತಲೂ ಹೆಚ್ಚು ಚದರ ಕಿಲೋಮೀಟರ್ ಪ್ರದೇಶವನ್ನು ನೀರಾವರಿ ಮಾಡುತ್ತಿದೆ. ಈ ಸ್ಥಳವು NH-4 ಹೆದ್ದಾರಿಯಲ್ಲಿ ಬೆಂಗಳೂರಿನಿಂದ 160 ಕಿಮೀ ಮತ್ತು ಚಿತ್ರದುರ್ಗದಿಂದ 40 ಕಿಮೀ ದೂರದಲ್ಲಿದೆ.

 ಕೃಷಿ ಆಧಾರಿತ ಪಟ್ಟಣ

ಕೃಷಿ ಆಧಾರಿತ ಪಟ್ಟಣ

ಹಿರಿಯೂರು ಮೂಲಭೂತವಾಗಿ ಕೃಷಿ ಆಧಾರಿತ ಪಟ್ಟಣವಾಗಿದೆ. ತೆಂಗಿನಕಾಯಿ, ಕಡಲೆ, ಭತ್ತದಂತಹ ಬೆಳೆಗಳನ್ನು ಬೆಳೆಯಲಾಗುತ್ತದೆ.

ಹಿರಿಯೂರು ಸರಾಸರಿ ಎತ್ತರ 630 ಮೀಟರ್ (2066 ಅಡಿ) ಹೊಂದಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಬೇಸಿಗೆಗಾಲವಾಗಿರುತ್ತದೆ. ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ. ಹಿರಿಯೂರು ಸಾಮಾನ್ಯವಾಗಿ ಒಣ ಹವಾಮಾನವನ್ನು ಹೊಂದಿದೆ.

ಪ್ರವಾಸಿ ಆಕರ್ಷಣೆ

ಪ್ರವಾಸಿ ಆಕರ್ಷಣೆ

PC:Nikhil0000711

ಹಲವು ವರ್ಷಗಳಿಂದ ಈ ಅಣೆಕಟ್ಟು ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಆದರೆ ಇದು ಒಂದು ಪ್ರಮುಖ ಪ್ರವಾಸಿ ತಾಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಇತ್ತೀಚೆಗೆ, ಹತ್ತಿರದ ಅರಣ್ಯ ಕಾಮಗಾರಿಯನ್ನು ಪುನಃಸ್ಥಾಪಿಸಲು ಅರಣ್ಯ ಇಲಾಖೆಯು ಕೈಗೊಂಡ ಅಭಿವೃದ್ಧಿ ಕಾರ್ಯ ಮತ್ತು ಹಳೆಯ ಭಾರತೀಯ ಸಾಂಸ್ಕೃತಿಕ ವಿಷಯದೊಂದಿಗೆ ಔಷಧೀಯ ಸಸ್ಯಗಳ ಉದ್ಯಾನವನವಾದ 'ಪಂಚವಟಿ' ತೋಟಗಳು ಪ್ರವಾಸಿಗರ ಸಂಖ್ಯೆಯನ್ನು ಸುಧಾರಿಸಿದೆ.

ವಾರಾಂತ್ಯದ ಪಿಕ್ನಿಕ್ ತಾಣ

ವಾರಾಂತ್ಯದ ಪಿಕ್ನಿಕ್ ತಾಣ

PC:Karthik Prabhu

ಇದು ಜನಪ್ರಿಯ ವಾರಾಂತ್ಯದ ಪಿಕ್ನಿಕ್ ತಾಣವಾಗಿದೆ. 'ಪಂಚವಟಿ' ತೋಟವು ಸಾಂಸ್ಕೃತಿಕ ವಿಷಯಗಳನ್ನು ಪ್ರತಿನಿಧಿಸುವ ಔಷಧೀಯ ಸಸ್ಯಗಳನ್ನು ಹೊಂದಿದೆ. 'ರಾಶಿಗಳು', 'ಸಪ್ತಾ ಸ್ವರ', 'ನವ ಗ್ರಹಗಳು' ಮತ್ತು ಇನ್ನೂ ಹೆಚ್ಚಿನವು. ಚಿತ್ರದುರ್ಗ ಮತ್ತು ಹೊಸದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಸಾಮಾನ್ಯವಾಗಿ ಮಾರಿ ಕಣಿವೆಗೆ ಭೇಟಿ ನೀಡುತ್ತಾರೆ. ಇಲ್ಲಿನ ಐತಿಹಾಸಿಕ ಮಾರಿಕಾಂಬಾ ದೇವಸ್ಥಾನವು ಹಲವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು NH4 ಬೆಂಗಳೂರು - ಮುಂಬೈ ರಾಷ್ಟ್ರೀಯ ಹೆದ್ದಾರಿ ಯಿಂದ ವಿಚಲಿತಗೊಳ್ಳುವ ಸ್ಥಳದಲ್ಲಿ ಹಿರಿಯೂರಿನಿಂದ ಸುಮಾರು 20 ಕಿ.ಮೀ.ದೂರದಲ್ಲಿದೆ.

 ಕಣಿವೆ ಮಾರಮ್ಮ

ಕಣಿವೆ ಮಾರಮ್ಮ

PC:Karthik Prabhu

ಒಂದು ಸುಂದರವಾದ ಉದ್ಯಾನವನದೊಂದಿಗೆ ವಾಣಿ ವಿಲಾಸ ಸಾಗರಾ ಅಣೆಕಟ್ಟಿನ ಕೆಳಭಾಗದಲ್ಲಿ ಒಂದು ದೇವಾಲಯವಿದೆ. ಈ ದೇವಾಲಯವು ಕಣಿವೆ ಮಾರಮ್ಮನಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ವಾಣಿ ವಿಲಾಸ ಸಾಗರನ್ನು ಮಾರಿ ಕಣಿವೆ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬೋಟಿಂಗ್ ನಡೆಸಲಾಗುವುದು. ಇಲ್ಲಿಗೆ ಬರುವ ಪ್ರವಾಸಿಗರಿಗಾಗಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಬೋಟಿಂಗ್‌ನ ಮಜಾವನ್ನು ಪಡೆಯಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಹಿರಿಯೂರು ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಹಿರಿಯೂರು NH-4 ದಲ್ಲಿದೆ. ಬೆಂಗಳೂರುನಿಂದ ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಹಿರಿಯೂರು ಮೂಲಕ ಹಾದು ಹೋಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more