Search
  • Follow NativePlanet
Share
» »1876 ಮೆಟ್ಟಿಲು ಹತ್ತಿ ಹೋದ್ರೆ...ಇಲ್ಲಿದೆ ಒಂದು ಟ್ರಕ್ಕಿಂಗ್ ಸ್ಪಾಟ್

1876 ಮೆಟ್ಟಿಲು ಹತ್ತಿ ಹೋದ್ರೆ...ಇಲ್ಲಿದೆ ಒಂದು ಟ್ರಕ್ಕಿಂಗ್ ಸ್ಪಾಟ್

By Manjula Balaraj Tantry

ಮಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಜಮಾಲಾಬಾದ್ ಕೋಟೆ ಚಾರಣಿಗರು ಮತ್ತು ಪ್ರಕೃತಿ ಪ್ರೇಮಿಗಳಿಗೆ ಒಂದು ಉತ್ತಮವಾದ ವಾರಾಂತ್ಯದ ತಾಣವಾಗಿದೆ. ಬೆಟ್ಟದ ಮೇಲಿರುವ ಈ ಕೋಟೆಯು 1794 ರಲ್ಲಿ ಟಿಪ್ಪು ಸುಲ್ತಾನರಿಂದ ಕಟ್ಟಲ್ಪಟ್ಟಿದೆ ಮತ್ತು ಶ್ರೀಮಂತ ಸಸ್ಯವರ್ಗ ಈ ಕೋಟೆಯ ಸುತ್ತಲೂ ಇದೆ. ಕೋಟೆಯ ಹಲವಾರು ಅವಶೇಷಗಳನ್ನು ಅದರ ಸಂಕೀರ್ಣದಲ್ಲಿ ಕಾಣಬಹುದು.

1. ಜಮಾಲಾಬಾದ್ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

1. ಜಮಾಲಾಬಾದ್ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

PC- Prashmob

ಜಮಾಲಾಬಾದ್ ಕೋಟೆ ಮತ್ತು ಅದರ ಸುತ್ತಲಿನ ಪ್ರದೇಶವು ಮಧ್ಯಮ ಪ್ರಕಾರದ ಹವಾಮಾನವನ್ನು ಅನುಭವಿಸುತ್ತದೆ. ಆದ್ದರಿಂದ, ವರ್ಷವಿಡೀ ಇದು ಭೇಟಿ ನೀಡಬಹುದಾದ ತಾಣವಾಗಿದೆ. ಆದುದರಿಂದ ನೀವು ಇಲ್ಲಿಯ ಬೆಟ್ಟಗಳ ಸುತ್ತ ಹರಡಿರುವ ದಟ್ಟವಾದ ಸಸ್ಯವರ್ಗಗಳಲ್ಲಿ ಚಾರಣ ಮಾಡ ಬಯಸಿದಲ್ಲಿ ಜಮಲಾಬಾದ್ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ನಿಂದ ಎಪ್ರಿಲ್ ತಿಂಗಳ ಕೊನೆಯವರೆಗೆ. ಈ ಸಮಯದಲ್ಲಿ ಇಲ್ಲಿಯ ತಾಪಮಾನವು ಗರಿಷ್ಟವಾಗಿದ್ದು ಹವಾಮಾನವು ಅನುಕೂಲಕರವಾಗಿರುತ್ತದೆ.

2. ಜಮಾಲಾಬಾದ್ ಕೋಟೆಯ ಬಗ್ಗೆ ಸ್ವಲ್ಪ ತಿಳಿಯೋಣ

2. ಜಮಾಲಾಬಾದ್ ಕೋಟೆಯ ಬಗ್ಗೆ ಸ್ವಲ್ಪ ತಿಳಿಯೋಣ

PC-Sheki nitk

ದೊಡ್ಡದಾದ ಬೆಟ್ಟದ ಮೇಲೆ ನೆಲೆಸಿರುವ ಜಮಾಲಾಬಾದ್ ಕೋಟೆಯು 1794ರಲ್ಲಿ ಟಿಪ್ಪು ಸುಲ್ತಾನರಿಂದ ಅವರ ತಾಯಿ ಜಮಾಲಾಬೀ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಈ ಬಲಾಡ್ಯವಾದ ಕಲ್ಲಿನ ಬೆಟ್ಟಗಳು ಮತ್ತು ಅದರ ಪರಿಸರದಿಂದ ಟಿಪ್ಪು ಸುಲ್ತಾನನು ಬಹಳ ಆಕರ್ಷಿತನಾಗಿದ್ದನು ಎಂದು ಹೇಳಲಾಗುತ್ತದೆ. ಆದುದರಿಂದ ಈ ಗಡಿಯಲ್ಲಿ ಈ ಕೋಟೆಯನ್ನು ಕಟ್ಟಲು ಪ್ರೇರೇಪಿಸಲ್ಪಟ್ಟನು ಎಂದು ಹೇಳಲಾಗುತ್ತದೆ. ಈ ಕೋಟೆಯನ್ನು ತಲುಪಲು 1876 ಮೆಟ್ಟಿಲುಗಳಿದ್ದು ಈ ಮೆಟ್ಟಿಲುಗಳು ಗ್ರಾನೈಟ್ ಬೆಟ್ಟಗಳಿಂದ ಕೆತ್ತಲಾಗಿದೆ. ಈ ಕೋಟೆಯು ಇಂದು ಹದಗೆಟ್ಟ ಸ್ಥಿತಿಯಲ್ಲಿದೆಯಾದರೂ, ಕೋಟೆಯ ಹಲವು ಅವಶೇಷಗಳು ಇನ್ನೂ ಪರಿಶೋಧಿಸಬಹುದಾಗಿದೆ. ಜಮಾಲಾಬಾದ್ ಕೋಟೆಯು ಸಣ್ಣ ತೊಟ್ಟಿಯನ್ನು ಹೊಂದಿದೆ ಮತ್ತು ಅದರೊಳಗೆ ಫಿರಂಗಿ ಅವಶೇಷಗಳು ಇನ್ನೂ ಪ್ರವಾಸಿಗರನ್ನು ಮತ್ತು ಪ್ರಯಾಣಿಗರನ್ನು ತನ್ನ ಕಡೆಗೆ ಆಕರ್ಷಿಸುತ್ತವೆ. 1799 ರಲ್ಲಿ, 4 ನೆಯ ಯುದ್ಧದ ನಂತರ, ಈ ಸುಂದರ ಕೋಟೆಯನ್ನು ಬ್ರಿಟಿಷ್ ಸೇನೆಯು ವಶಪಡಿಸಿಕೊಂಡಿತು. ಇಂದು, ಜಮಾಲಾಬಾದ್ ಕೋಟೆಯ ನಾಶವಾದ ರಚನೆಯನ್ನು ಮಾತ್ರ ನೀವು ಕಾಣಬಹುದು.

ಜಮಾಲಾಬಾದ್ ಕೋಟೆಯ ಒಳಗೆ ಮತ್ತು ಸುತ್ತಲೂ ಮಾಡಬೇಕಾದ ವಿಷಯಗಳು

ಜಮಾಲಾಬಾದ್ ಕೋಟೆಯ ಒಳಗೆ ಮತ್ತು ಸುತ್ತಲೂ ಮಾಡಬೇಕಾದ ವಿಷಯಗಳು

ಈ ಕೋಟೆಯ ಅನ್ವೇಷಣೆ ಮತ್ತು ಪ್ರಸಿದ್ದಿಯು ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. 1700 ಅಡಿ ಎತ್ತರವಿರುವ ಇದು ಒಂದು ಪರಿಪೂರ್ಣ ಚಾರಣ ತಾಣವಾಗಿದೆ. ಜಮಾಲಾಬಾದ್ ಕೋಟೆಯ ವಿಶೇಷತೆಯು ಅದರ ಪರಿಸರದಲ್ಲಿ ಅಡಗಿದೆ. ಇದು ಚಾರುಣಿಗರನ್ನು ಮತ್ತು ಪ್ರಕೃತಿ ಪ್ರೀಯರನ್ನು ಇದರ ಪರಿಸರದಲ್ಲಿರುವ ಸಸ್ಯವರ್ಗಗಳಿಂದ ಆಕರ್ಷಿಸುತ್ತದೆ. ಕುದುರೆಮುಖ ಶ್ರೇಣಿಯ ಶ್ರೀಮಂತ ಭಾಗದಲ್ಲಿರುವ ಜಮಾಲಾಬಾದ್ ಇಲ್ಲಿಗೆ ಸಂದರ್ಶಿಸುವವರಿಗೆ ಇಲ್ಲಿಯ ಭೂದೃಶ್ಯವು ಉತ್ತಮವಾದ ನೋಟವನ್ನು ನೀಡುತ್ತದೆ. ಒಮ್ಮೆ ನೀವು ಬೆಟ್ಟದ ಮೇಲೆ ತಲುಪಿದಲ್ಲಿ ನೀವು ಇಲ್ಲಿಂದ ಅದರ ಹಸಿರು ಪರಿಸರದ ವಿಹಂಗಮ ನೋಟವನ್ನು ಸ್ಪಷ್ಟವಾಗಿ ನೋಡಬಹುದು. ಕಾಲಾನಂತರದಲ್ಲಿ, ಇಲ್ಲಿಗೆ ಬಂದು ಅದರ ಪರಿಸರದ ತಾಜಾತನವನ್ನು ಆನಂದಿಸಿ ಅದರ ಭವ್ಯ ಸೌಂದರ್ಯವನ್ನು ಸೆರೆಹಿಡಿಯುವ ಛಾಯಾಗ್ರಾಹಕರು ಮತ್ತು ಪ್ರಕೃತಿ ಪ್ರಿಯರಿಗೆ ವಾರಾಂತ್ಯದ ತಾಣವಾಗಿ ಇದು ಮಾರ್ಪಟ್ಟಿದೆ.

ಜಮಾಲಾಬಾದ್ ಕೋಟೆಯನ್ನು ತಲುಪುವುದು ಹೇಗೆ?

ಜಮಾಲಾಬಾದ್ ಕೋಟೆಯನ್ನು ತಲುಪುವುದು ಹೇಗೆ?

ಮಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಜಮಾಲಾಬಾದ್ ಕೋಟೆಯನ್ನು ಮಂಗಳೂರಿನ ಮತ್ತು ಹತ್ತಿರದ ನಗರಗಳಿಂದ ಸುಲಭವಾಗಿ ತಲುಪಬಹುದು. ಜಮಾಲಾಬಾದ್ ಗೆ ಹತ್ತಿರದ ಮಂಗಳೂರಿನಲ್ಲಿ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣ ಕೂಡ ಇದ್ದು ಮತ್ತು ಅಲ್ಲಿಂದ ನೀವು ಜಮಾಲಾಬಾದ್ ಕೋಟೆಗೆ ಬಸ್ ಅಥವಾ ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X