Search
  • Follow NativePlanet
Share
» »ಮಹಾರಾಷ್ಟ್ರದ ಅಲಿಬಾಗ್ ನಲ್ಲೊಂದು "ವಾಕ್"

ಮಹಾರಾಷ್ಟ್ರದ ಅಲಿಬಾಗ್ ನಲ್ಲೊಂದು "ವಾಕ್"

By Vijay

ಭಾರತದ ಎರಡನೆ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಮಹಾರಾಷ್ಟ್ರ ರಾಜ್ಯವು ಬಾನೆತ್ತರಕ್ಕೆ ಚಾಚಿರುವ ಪರ್ವತಗಳು, ವಿಹಂಗಮ ಕಡಲ ತೀರಗಳು, ಮೂಕವಿಸ್ಮಿತರನ್ನಾಗಿಸುವ ಸಿನಿಮೀಯ ದೃಶ್ಯಾವಳಿಗಳು, ಅಗಾಧ ಸಂಖ್ಯೆಯಲ್ಲಿರುವ ಸಂಗ್ರಹಾಲಯಗಳು ಮತ್ತು ಐತಿಹಾಸಿಕ ಕೋಟೆಗಳಿಂದ ತನ್ನನ್ನು ತಾನು ಗುರುತಿಸಿಕೊಂಡಿದ್ದು, ಭಾರತದ ಶ್ರೀಮಂತ ಐತಿಹಾಸಿಕ ಹಿನ್ನಿಲೆಗೆ ಅಪಾರವಾದ ಕೊಡುಗೆ ನೀಡಿದೆ.

ವಾರಾಂತ್ಯ ಕೊಡುಗೆ : ಮೇಕ್ ಮೈ ಟ್ರಿಪ್ ನಿಂದ 40% ರವರೆಗೆ ಕಡಿತ

ಮಹಾರಾಷ್ಟ್ರವು ತನ್ನ ಒಡಲಲ್ಲಿ ನಿಬ್ಬೆರಗಾಗಿಸುವಂತಹ ವೈವಿಧ್ಯತೆಗಳನ್ನು ಹೊತ್ತಿದ್ದು, ಮಂಜಿನಿಂದ ಕೂಡಿರುವ ಪರ್ವತಗಳಾಗಲಿ, ಥಳಥಳಿಸುವ ದಟ್ಟ ಕಾಡುಗಳಾಗಲಿ, ಹುಬ್ಬೇರಿಸುವ ಬೃಹದಾಕಾರದ ಕೋಟೆಗಳಾಗಲಿ, ಪವಿತ್ರ ಯಾತ್ರಾ ಕ್ಷೇತ್ರಗಳಾಗಲಿ ಇಲ್ಲವೆ ಅದ್ಭುತ ಕಡಲ ತೀರಗಳಾಗಲಿ, ಎಲ್ಲವೂ ಈ ರಾಜ್ಯದಲ್ಲಿ ಸಮೃದ್ಧಿಯಾಗಿ ಕಂಡುಬರುವುದರಲ್ಲಿ ಯಾವುದೆ ಅನುಮಾನವಿಲ್ಲ.

ವಿಶೇಷ ಲೇಖನ : ಲೋಣಾವಲಾ ಕಂಡೀರಾ?

ಮಹಾರಾಷ್ಟ್ರದ ಕೆಲವು ವಿಶಿಷ್ಟ ಪ್ರವಾಸಿ ತಾಣಗಳನ್ನು ಅರಸುತ್ತ ಹೋದಾಗ ಕಂಡುಬರುವ ಒಂದು ಸುಂದರ ಸ್ಥಳವೆ ಅಲಿಬಾಗ್. ಮಹಾರಾಷ್ಟ್ರದ ಪಶ್ಚಿಮ ಕರಾವಳಿಯ ರಾಯಗಡ್ ಜಿಲ್ಲೆಯಲ್ಲಿರುವ ಕಡಲ ಕುಡಿ ಅಲಿಬಾಗ್ ನ ಬೀಚ್ ಅನ್ನು ಇಷ್ಟಪಡದವರೆ ಇಲ್ಲ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೆ ಅದ್ಭುತ ಅನುಭವವನ್ನು ಪಡೆಯುತ್ತಾರೆ. ಇಂತಹ ಮಾಯಾನಗರಿ ಅಲಿಬಾಗ್ ಪಟ್ಟಣದ ಬಗ್ಗೆ ಸಂಕ್ಷಿಪ್ತ ವಿವರವೆ ಈ ಲೇಖನ.

ವಿಶೇಷ ಲೇಖನ : ಪಂಚಗಣಿ ಹಾಗೂ ಮಬಳೇಶ್ವರ ಅವಳಿ ಸುಂದರಿಯರು

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಮಹಾರಾಷ್ಟ್ರದ ಪಶ್ಚಿಮ ಕರಾವಳಿಯ ಒಂದು ಸಣ್ಣ ಪಟ್ಟಣ ಅಲಿಬಾಗ್. ಕೊಂಕಣ ಪ್ರದೇಶದಲ್ಲಿರುವ ಅಲಿಬಾಗ್ ರಾಯಗಡ್ ಜಿಲ್ಲಾ ವ್ಯಾಪ್ತಿಯಲ್ಲಿದೆ. ಇದು ಪ್ರಸಿದ್ಧ ಮುಂಬೈ ಮೆಟ್ರೋ ಕ್ಕೆ ಹತ್ತಿರದಲ್ಲಿದೆ. ಅಲಿ ಉದ್ಯಾನದ ನಂತರ ಈ ನಗರಕ್ಕೆ ಅಲಿಬಾಗ ಎಂದು ಹೆಸರಿಡಲಾಯಿತು. ಅಲಿ ಉದ್ಯಾನದಲ್ಲಿ ಸಾಕಷ್ಟು ಮಾವಿನ ಹಾಗೂ ತೆಂಗಿನ ಮರಗಳಿವೆ.

ಚಿತ್ರಕೃಪೆ: Tomas Belcik

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಈ ಸ್ಥಳವು 17 ನೇ ಶತಮಾನದ ಹಿಂದೆ ಶಿವಾಜಿ ಮಹಾರಾಜನಿಂದ ಅಭಿವೃದ್ಧಿ ಹೊಂದಿದ ಮೊದಲ ಸ್ಥಳ. ಇಲ್ಲಿರುವ ಕುಲಾಬಾ(ಕೊಲಾಬಾ) ಕೋಟೆಯು, ಈ ಹಿಂದೆ ಮರಾಠರು ಭಾರತದ ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ. ಶಿಥಿಲ ಸ್ಥಿತಿಯಲ್ಲಿರುವ ಕುಲಾಬಾ ಕೋಟೆಯು ಅಲಿಬಾಗ್ ಬೀಚ್ ನಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಸಮುದ್ರದ ಅಲೆಗಳು ಕಡಿಮೆ ಇರುವ ಸಂದರ್ಭದಲ್ಲಿ ಕೋಟೆಗೆ ಭೇಟಿ ನೀಡಬಹುದು.

ಚಿತ್ರಕೃಪೆ: Rakesh Ayilliath

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ನಾಲ್ಕು ದಿಕ್ಕುಗಳಲ್ಲಿ ಮೂರು ದಿಕ್ಕುಗಳೂ ನೀರಿನಿಂದ ಆವೃತವಾಗಿರುವ ಅಲಿಬಾಗ ಹಲವಾರು ಸುಂದರವಾದ ಬೀಚ್ ಗಳ ತಾಣವಾಗಿದೆ. ಈ ಎಲ್ಲಾ ಬೀಚ್ ಗಳೂ ಮನಮೋಹಕವಾದ ತೆಂಗಿನ ಮರಗಳು ಹಾಗೂ ಅಡಿಕೆ ಮರಗಳಿಂದ (ತೆಂಗು-ಕಂಗು) ಸುತ್ತುವರಿದಿದ್ದು ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿವೆ.

ಚಿತ್ರಕೃಪೆ: Sankarshan Mukhopadhyay

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಇಲ್ಲಿನ ಪ್ರಕೃತಿ ಅತ್ಯುತ್ತಮವಾಗಿದೆ. ಆಧುನಿಕತೆಗೆ ಒಳಗಾಗದ ಮತ್ತು ಪರಿಶುದ್ಧವಾದ ಇಲ್ಲಿನ ಕಡಲ ಕಿನಾರೆಗಳಿಂದಾಗಿ ಇಲ್ಲಿನ ನಿಸರ್ಗ ಅತ್ಯಂತ ಸುಂದರವಾಗಿದೆ ಮತ್ತು ಅತ್ಯದ್ಭುತವಾಗಿದೆ. ಇಲ್ಲಿನ ಉಸಿರಾಡುವ ಗಾಳಿ ಪರಿಶುದ್ಧ ಹಾಗೂ ತಾಜಾತನದಿಂದ ಕೂಡಿರುತ್ತದೆ. ಈ ಬೀಚ್ ಗಳಲ್ಲಿನ ವಿಲಕ್ಷಣ/ ಅದ್ಭುತ ದೃಶ್ಯಾವಳಿಗಳು ಸ್ವರ್ಗಕಿಂತ ಕಡಿಮೆಯೇನಿಲ್ಲ! ಅಲೆಗಳ ಏರಿಳಿತ ಕಡಿಮೆಯಿದ್ದ ಸಂದರ್ಭದಲ್ಲಿ ಸಮುದ್ರದ ನೀರು ಬಹುತೇಕವಾಗಿ ಒಂದು ಕಿ.ಮೀ ವರೆಗೂ ಒಳಹೋಗಿರುತ್ತದೆ. ಈ ಸಂದರ್ಭದಲ್ಲಿ ಸಮುದ್ರ ತಳವು ಪ್ರತ್ಯಕ್ಷವಾಗಿ ಕೆಲ ವಿಧದ ಜಲಚರಗಳು ಸುಲಭವಾಗಿ ಗೋಚರಿಸುತ್ತವೆ.

ಚಿತ್ರಕೃಪೆ: Alosh Bennett

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಕಪ್ಪು ಮರಳಿನ ಅಕ್ಷಿ ಬೀಚ್ ಇಲ್ಲಿನ ನೋಡಲೆ ಬೇಕಾದ ಇನ್ನೊಂದು ಪ್ರಮುಖ ಬೀಚ್! ಹಲವಾರು ಜಾಹೀರಾತು, ಧಾರವಾಹಿ ಹಾಗೂ ಸಿನಿಮಾಗಳನ್ನು ಅಲಿಬಾಗ್ ನ ಈ ಬೀಚ್ ಗಳಲ್ಲಿಯೆ ಚಿತ್ರೀಕರಣ ಮಾಡಲಾಗಿದೆ. ಅನೇಕ ಬಾಲಿವುಡ್ ಸಿನಿಮಾ ತಾರೆಯರ ಬಂಗಲೆಗಳು, ತೋಟದ ಮನೆಗಳು( farmhouses ) ಗಳು ಇಲ್ಲಿದ್ದು ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ ಇವುಗಳೊಂದರಲ್ಲಿ ಹೋಗಲು ನಿಮಗೆ ಅವಕಾಶ ದೊರೆಯಬಹುದು.

ಚಿತ್ರಕೃಪೆ: Rakesh Ayilliath

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಅಲಿಬಾಗ್ ಕಡಲ ತೀರ, ಅಲಿಬಾಗಿಗೆ ಭೇಟಿ ನೀಡಿದರೆ ನೋಡಲೆ ಬೇಕಾದಂತಹ ಸ್ಥಳ ಈ ಕಡಲ ತೀರ. ಇಲ್ಲಿಂದ ಕೊಲಾಬಾ ಕೋಟೆಯನ್ನು ಸುಲಭವಾಗಿ ನೋಡಬಹುದು. ಇಲ್ಲಿ ಅಪಾರವಾಗಿ ಕಪ್ಪು ಮರಳನ್ನು ಕಾಣಬಹುದು. ಇತರ ಬೀಚ್ ಗಳಂತೆಯೆ ಇಲ್ಲಿಯೂ ಆಹಾರ ಮಳಿಗೆಗಳಿದ್ದು ಪ್ರವಾಸಿಗರು ಬಯಸುವ ಸ್ಥಳೀಯ ತ್ವರಿತ ತಿನಿಸುಗಳು ಇಲ್ಲಿ ಲಭ್ಯ. ಅಲ್ಲದೆ ಇಲ್ಲಿನ ವಿಶೇಷವಾದ ಎಳೆನೀರು (ತೆಂಗಿನ ನೀರು) ಸೂರ್ಯಾಸ್ತವನ್ನು ನೋಡುತ್ತಾ ಸೇವಿಸುತ್ತಿದ್ದರೆ ಆ ಅನುಭವವೇ ಬೇರೆ !

ಚಿತ್ರಕೃಪೆ: Rakesh Ayilliath

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಕುಲಾಬಾ ಅಥವಾ ಕೊಲಾಬಾ ಕೋಟೆಯು ಅಲಿಬಾಗ್ ತೀರದಿಂದ ಸುಮಾರು ಒಂದುವರೆ ಕಿ.ಮೀ ಗಳಷ್ಟು ದೂರದಲ್ಲಿ ಸಮುದ್ರದಲ್ಲೆ ಸ್ಥಿತವಿದೆ. ಬಹುತೇಕವಾಗಿ ಈ ಸ್ಥಳದಲ್ಲಿ ಸಮುದ್ರದ ಆಳ ಅತಿ ಕಡಿಮೆ ಇರುವುದರಿಂದ ಮತ್ತು ತಳವು ಸಮತಟ್ಟಾಗಿರುವುದರಿಂದ ನಡೆದುಕೊಂಡು ಇಲ್ಲವೆ ಕುದುರೆಗಾಡಿಯ ಸವಾರಿಯ ಮೂಲಕ ತಲುಪಬಹುದು. ಇದು ಒಂದು ವಿಶಿಷ್ಟ ಅನುಭವ ನೀಡುತ್ತದೆ.

ಚಿತ್ರಕೃಪೆ: Vikas Rana

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಖಂದೇರಿ, ಉಮ್ದೇರಿ ದ್ವೀಪ ಕೋಟೆಗಳು ಅಲಿಬಾಗ್ ಬಳಿಯಿರುವ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಇದು ಸದೃಡವಾದ ಕೋಟೆಯ ಗೋಡೆಗಲಿಂದ ಸುತ್ತುವರೆದಿದ್ದು, ಇದು ಛತ್ರಪತಿ ಶಿವಾಜಿ ಮಹಾರಾಜನಿಂದ ನಿರ್ಮಿತವಾಗಿದೆ.

ಚಿತ್ರಕೃಪೆ: RameshSharma1

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ನಂದಗಾಂವ್ ಅಲಿಬಾಗ್ ಬಳಿಯಿರುವ ಮತ್ತೊಂದು ಕರಾವಳಿ ಹಳ್ಳಿ. ಇದು ತನ್ನಲ್ಲಿರುವ ನಂದಗಾಂವ್ ಕಡಲ ತೀರ ಹಾಗೂ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Tomas Belcik

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಅಲಿಬಾಗ್ ನಿಂದ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿರುವ ಚೌಲ್ ಅಲಿಬಾಗ್ ಎಂಬಲ್ಲಿರುವ ಕಂಕೇಶ್ವರವು ಶಿವನ ದೇವಸ್ಥಾನಕ್ಕೆ ಪ್ರಖ್ಯಾತವಾದ ತಾಣವಾಗಿದೆ. ಪ್ರಮುಖವಾಗಿ ಈ ದೇವಸ್ಥಾನವು 900 ಅಡಿಗಳಷ್ಟು ಎತ್ತರದ ಒಂದು ಬೆಟ್ಟದ ಮೇಲೆ ನಿರ್ಮಿತವಾಗಿದ್ದು ಇಲ್ಲಿಗೆ ತಲುಪಲು ಮೆಟ್ಟಿಲುಗಳ ಮೂಲಕ ಸಾಗಿದರೆ ಏನೀಲ್ಲವೆಂದರೂ ಒಂದು ಘಂಟೆಯಷ್ಟಾದರೂ ಸಮಯ ಬೇಕಾಗುತ್ತದೆ. ಇಲ್ಲಿರುವ ಪ್ರಮುಖ ಆಕರ್ಷಣೆ ಪುರಾತನ ಸಿಹಿ ನೀರಿನ ಬಾವಿ. ದೇವಾಲಯದ ಎತ್ತರ ಸುಮಾರು 54 ಅಡಿಗಳು.

ಚಿತ್ರಕೃಪೆ: KuwarOnline

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಚೌಲ್ ಅಲಿಬಾಗ್ ನಲ್ಲಿರುವ ಮತ್ತೊಂದು ಧಾರ್ಮಿಕ ಸ್ಥಳವೆಂದರೆ ದತ್ತ ಮಂದಿರ. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದತ್ತನ ದರುಶನ ಕೋರಿ ಬರುತ್ತಾರೆ.

ಚಿತ್ರಕೃಪೆ: Rjshinde

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಕಾಶಿದ್ ಕಡಲ ತೀರ ಅಲಿಬಾಗ್ ನಿಂದ 35 ಕಿ.ಮೀ ದೂರದಲ್ಲಿರುವ ಸುಂದರ ಬೀಚ್. ಬಹುಶಃ ಈ ಭಾಗದಲ್ಲಿ ಕಂಡು ಬರುವ ಅತಿ ಸ್ವಚ್ಛ ಕಡಲ ತೀರವೆಂದರೆ ಇದೇ ಆಗಿರಬಹುದು. ಸಾಕಷ್ಟು ಪ್ರವಾಸಿ ಚಟುವಟಿಕೆಯಿರುವ ಈ ಕಡಲ ತೀರದಲ್ಲಿ ಕಾಟೇಜುಗಳು ಬಾಡಿಗೆಗೆ ಲಭಿಸುತ್ತವೆ. ಒಂದು ವಿಷಯ ಗಮದಲ್ಲಿಡಬೇಕಾದುದೆಂದರೆ ಇಲ್ಲಿನ ಕಡಲ ತೀರವು ಕುಖ್ಯಾತಿ ಪಡೆದಿದ್ದು ಉಬ್ಬರದ ಅಲೆಗಳ ಸಮಯದಲ್ಲಿ ಸಾಕಷ್ಟು ಜಾಗರೂಕರಾಗಿರಬೇಕು. ಹಿಂದೆ ಕೆಲ ಜೀವಾಪಾಯದ ಅವಘಡಗಳು ಇಲ್ಲಿ ಜರುಗಿವೆ.

ಚಿತ್ರಕೃಪೆ: Ashish Sharma

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಅಲಿಬಾಗ್ ಕಡಲ ತೀರದಲ್ಲಿರುವ ಕೊಲಾಬಾ ಕೋಟೆಯ ಒಂದು ಹತ್ತಿರದ ನೋಟ.

ಚಿತ್ರಕೃಪೆ: Abhiram Katta

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಅಲಿಬಾಗ್ ಕಡಲ ತೀರದಲ್ಲಿ ಇನ್ನೂ ಬಳಕೆಯಲ್ಲಿರುವ ಎತ್ತಿನ ಬಂಡಿಗಳು. ವಿಶೇಷವೆಂದರೆ ವಿದೇಶಿ ಪ್ರವಾಸಿಗರಲ್ಲಿ ಇವು ಬಹು ಜನಪ್ರೀಯವಾಗಿವೆ.

ಚಿತ್ರಕೃಪೆ: Ninad Chaudhari

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಸಮಯಾವಕಾಶವಿದ್ದಾಗ ಹಾಯಾಗಿ ಕುಳಿತು ಪ್ರಶಾಂತ ಸಮುದ್ರ ವಿಶ್ರಾಂತ ವಾತಾವರಣವನ್ನು ಅನುಭವಿಸಲು ನಿರ್ಮಿಸಲಾದ ಪಾದಚಾರಿ ಮಾರ್ಗ ಹಾಗೂ ಬೆಂಚುಗಳು.

ಚಿತ್ರಕೃಪೆ: Nagesh Kamath

ವಿಶಿಷ್ಟ ಕಡಲ ತೀರದ ಅಲಿಬಾಗ್:

ವಿಶಿಷ್ಟ ಕಡಲ ತೀರದ ಅಲಿಬಾಗ್:

ಕುದುರೆ ರಥವನ್ನೇರಿ ಹುರುಪಿನಿಂದ ವಿಹರಿಸುತ್ತಿರುವ ಕರಾವಳಿ ಹೈದ. ಹಿನ್ನಿಲೆಯಲ್ಲಿ ವೈಭವಯುತವಾಗಿ ಹೆಮ್ಮೆಯಿಂದ ನಿಂತಿರುವ ಕೊಲಾಬಾ ಕೋಟೆ.

ಚಿತ್ರಕೃಪೆ: Nagesh Kamath

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X