Search
  • Follow NativePlanet
Share
» »ರಾಜಸ್ಥಾನದ ಈ ದೇವಾಲಯದಲ್ಲಿ 1000 ಕೆ.ಜಿ ಚಿನ್ನ ಬಳಕೆ!!

ರಾಜಸ್ಥಾನದ ಈ ದೇವಾಲಯದಲ್ಲಿ 1000 ಕೆ.ಜಿ ಚಿನ್ನ ಬಳಕೆ!!

ಚಿನ್ನ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಈಗಂತೂ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ. ಬಡವರಿಂದ ಶ್ರೀಮಂತರವರೆವಿಗೂ ಚಿನ್ನದ ಹುಚ್ಚು ಹೆಚ್ಚಾಗಿಯೇ ಇದೆ ಎಂದು ಹೇಳಬಹುದು. ಸಾಮಾನ್ಯವಾಗಿ ನಮ್ಮ ಭಾರತ ದೇಶದ ದೇವಾಲಯಗಳಲ್ಲಿ ಹೆಚ್ಚಾಗಿ ಚಿನ್ನವನ್ನು ಕಾಣಬಹುದು. ದೇವರಿಗೆ ಚಿನ್ನದ ಆಭರಣಗಳನ್ನು ಉಡುಗೂರೆಯಾಗಿ ನೀಡುತ್ತಾರೆ.

ದಕ್ಷಿಣ ಭಾರತದ ಗೋಲ್ಡ್‍ನ್ ಟೆಂಪಲ್ ಚಿನ್ನಕ್ಕೆ ಒಂದು ಉತ್ತಮವಾದ ಉದಾಹರಣೆ ನೀಡುವ ದೇವಾಲಯವೆಂದೇ ಹೇಳಬಹುದು. ಇಲ್ಲಿನ ಚಿನ್ನದ ದೇವಾಲಯವನ್ನು ವರ್ಣಿಸಲಾಗದಂತಹ ವೈಭವದಿಂದ ಕೂಡಿದೆ. ಹಾಗಾದರೆ 1000 ಕೆ.ಜಿ ಬಳಸಿ ದೇವಾಲಯವನ್ನು ನಿರ್ಮಿಸುತ್ತಿರುವುದು ಆಶ್ಚರ್ಯವೇ ಸರಿ. ಏನು 1000 ಕೆ.ಜಿ ? ಎಂದು ಉದ್ಗಾರ ತೆಗೆಯಬೇಡಿ ಇದು ನಿಜವಾಗಿಯೂ ಸತ್ಯ.

ಪ್ರಸ್ತುತ ಲೇಖನದ ಮೂಲಕ 1000 ಕೆ.ಜಿ ಬಳಸಿ ದೇವಾಲಯದ ನಿರ್ಮಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆಯೋಣ.

ಎಲ್ಲಿದೆ?

ಎಲ್ಲಿದೆ?

1000 ಕೆ.ಜಿ ಬಳಸಿ ನಿರ್ಮಿಸಿದ ದೇವಾಲಯವು ರಾಜಸ್ಥಾನದ ಅಜ್ಮೇರದಲ್ಲಿದೆ. ಇದೊಂದು ಜೈನ ಧರ್ಮಿಯರಿಗೆ ಪವಿತ್ರವಾದ ದೇವಾಲಯವಾಗಿದೆ. ಈ ಸುಂದರವಾದ ದೇವಾಲಯವನ್ನು 19 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.

PC:Ramesh Lalwani

ವಾಸ್ತುಶಿಲ್ಪ

ವಾಸ್ತುಶಿಲ್ಪ

ಈ ಜೈನ ಮಂದಿರವು ಅತ್ಯಂತ ಸುಂದರವಾಗಿದ್ದು, ವೈಭವೋಪೇತವಾಗಿದೆ. ನಿಜ ಹೇಳಬೇಕಾದರೆ ಈ ದೇವಾಲಯದ ವಾಸ್ತು ಶಿಲ್ಪಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ಸೋನಿಜೀ ಕೀ ನಾಶಿಯಾನ್ ಎಂದೂ ಸಹ ಕರೆಯುತ್ತಾರೆ.

PC:Vaibhavsoni1

ಸಿಟಿ ಆಫ್ ಗೋಲ್ಡ್

ಸಿಟಿ ಆಫ್ ಗೋಲ್ಡ್

ಸ್ವರ್ಣ ನಗರಿ " ಸಿಟಿ ಆಫ್ ಗೋಲ್ಡ್" ಎಂದು ಕರೆಯಲ್ಪಡುವ ಮುಖ್ಯ ಚೇಂಬರ್ ಇದಾಗಿದೆ. ಈ ದೇವಾಲಯದಲ್ಲಿ ಹಲವಾರು ಚಿನ್ನದ ಲೇಪಿತ, ಮರದ ಅಂಕಿಗಳನ್ನು ಹೊಂದಿದೆ. ಇಲ್ಲಿ ಜೈನ ಧರ್ಮದಲ್ಲಿನ ಹಲವಾರು ಪ್ರಮುಖ ವ್ಯಕ್ತಿಗಳನ್ನು ಚಿತ್ರಿಸುತ್ತದೆ. ಈ ದೇವಾಲಯವು ಆಯೋಧ್ಯೆಯ ಚಿತ್ರಣವನ್ನು ರೂಪಿಸಲು 1000 ಕೆ.ಜಿ ಚಿನ್ನವನ್ನು ಬಳಸುತ್ತಿದೆ.

PC:Vaibhavsoni1

ವೃಷಭನಾಥ

ವೃಷಭನಾಥ

ಈ ಜೈನ ದೇವಾಲಯದಲ್ಲಿ ವೃಷಭನಾಥನನ್ನು ಆರಾಧಿಸಲಾಗುತ್ತದೆ. ಈ ಮಂದಿರವನ್ನು ಸಂಪೂರ್ಣವಾಗಿ ಕೆಂಪು ಮರಳು ಕಲ್ಲಿನಿಂದ 1865 ರಲ್ಲಿ ನಿರ್ಮಾಣ ಮಾಡಲಾಯಿತು. ಆದರೆ 1870 ರಿಂದ 1895ರವೆಗೆ ಅಂದರೆ ಸುಮಾರು 25 ವರ್ಷಗಳ ಕಾಲ ಕುಶಲಕರ್ಮಿಗಳು ಈ ದೇವಾಲಯವನ್ನು ವಿನ್ಯಾಸಗೊಳಿಸಿದರು.

PC:Vaibhavsoni1

ನಿರ್ಮಾಣ ಮಾಡಿದವರು?

ನಿರ್ಮಾಣ ಮಾಡಿದವರು?

ಈ ದೇವಾಲಯವನ್ನು ನಿರ್ಮಾಣ ಮಾಡಿದವರು ಆಜ್ಮೇರದ ಸೋನಿ ಕುಟುಂಬದವರು. ಪ್ರಸ್ತುತದಲ್ಲಿಯೂ ಕೂಡ ಈ ದೇವಾಲವನ್ನು ಈ ಸೋನಿ ಕುಟುಂಬದವರೆ ನಿರ್ವಹಣೆ ಮಾಡುತ್ತಿದ್ದಾರೆ.

PC:Vaibhavsoni1

ದಿಗಂಬರ

ದಿಗಂಬರ

ಸಾಮಾನ್ಯವಾಗಿ ಜೈನರಲ್ಲಿ 2 ಪಂಥ ಅವುಗಳಲ್ಲಿ ಶ್ವೇತಾಂಬರರು ಹಾಗು ದಿಗಂಬರರು. ಶ್ವೇತಾಂಬರರು ಶ್ವೇತ ವರ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ದಿಗಂಬರರು ಯಾವುದೇ ರೀತಿ ಬಟ್ಟೆಗಳಿಂದಲೂ ಕೂಡ ತಮ್ಮ ದೇಹವನ್ನು ಮುಚ್ಚಿಕೊಳ್ಳುವುದಿಲ್ಲ. ವಿಷಯಕ್ಕೆ ಬಂದರೆ ಈ ದೇವಾಲಯವು ದಿಗಂಬರರಿಗೆ ಸೇರಿದ ದೇವಾಲಯವಾಗಿದೆ.

PC:aibhavsoni1

ಸಿದ್ಧಕುಟ್ ಚೈತ್ಯಲಯ

ಸಿದ್ಧಕುಟ್ ಚೈತ್ಯಲಯ

ಈ ದೇವಾಲಯವನ್ನು ಸೋನಿಜೀ ಕೀ ನಾಶಿಯಾನ್ ಎಂದೇ ಅಲ್ಲದೇ ಸಿದ್ಧಕುಟ್ ಚೈತ್ಯಲಯ, ಕೆಂಪು ದೇವಾಸ್ಥಾನ ಎಂದು ಸಹ ಕರೆಯುತ್ತಾರೆ. ಏಕೆಂದರೆ ಈ ದೇವಾಲಯವನ್ನು ಕೆಂಪು ಮರಳಿನಿಂದ ನಿರ್ಮಾಣ ಮಾಡಲಾಗಿದೆ.

PC:Aibhavsoni1

ಮಾನಸ್ತಂಭ

ಮಾನಸ್ತಂಭ

ಈ ಐತಿಹಾಸಿಕ ದೇವಾಲಯದೊಳಗೆ ಪ್ರವೇಶಿಸಿದಾಗ ಸುಂದರವಾಗಿ ಮತ್ತು ಕಲಾತ್ಮಕವಾಗಿರುವ ಸುಮಾರು 82 ಅಡಿ ಎತ್ತರವಿರುವ ಮಾನಸ್ತಂಭದ ವಿನ್ಯಾಸವನ್ನು ಕಾಣಬಹುದಾಗಿದೆ. ಈ ಸ್ತಂಭವನ್ನು ಆರ್. ಬಿ.ಸೇಥ್ ಭಗಚಂದ್ ಸೋನಿ ನಿರ್ಮಿಸಿದರು.

PC:Vaibhavsoni1

ಭೇಟಿಗೆ ಸೂಕ್ತವಾದ ಸಮಯ

ಭೇಟಿಗೆ ಸೂಕ್ತವಾದ ಸಮಯ

ಈ ದೇವಾಲಯಕ್ಕೆ ವಾರ್ಷಿಕವಾಗಿ ಆನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಾರತ ದೇಶದ ರಾಜೇಂದ್ರ ಪ್ರಸಾದ್, ಜವಹರಲಾಲ್ ನೆಹರು, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಇನ್ನೂ ಹಲವಾರು ರಾಜಕಾರಣಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

PC:Vaibhavsoni1

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಈ ಭವ್ಯವಾದ ದೇವಾಲಯಕ್ಕೆ ತೆರಳಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಅಜ್ಮೇರ ವಿಮಾನ ನಿಲ್ದಾಣವಾಗಿದೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more