Search
  • Follow NativePlanet
Share
» »ಐಹೊಳೆ-ವಾಸ್ತುಶಿಲ್ಪದ ತೊಟ್ಟಿಲು

ಐಹೊಳೆ-ವಾಸ್ತುಶಿಲ್ಪದ ತೊಟ್ಟಿಲು

ಐಹೊಳೆಯಲ್ಲಿನ ಕಲ್ಲಿನ ವಾಸ್ತುಶಿಲ್ಪವು ಧಾರ್ಮಿಕ ಮತ್ತು ಪುರಾತತ್ತ್ವ ಶಾಸ್ತ್ರ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಪಟ್ಟಣವು ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಹಲವಾರು ದೇವಾಲಯಗಳನ್ನು ಹೊಂದಿದೆ. ವಾಸ್ತವವಾಗಿ, ಐಹೊಳೆಯ ದೇವಾಲಯಗಳು ಚಾಲುಕ್ಯ ರಾಜರ ವಿಸೃತ ಶೈಲಿಗಳಿಗೆ ಸಾಕ್ಷಿಯಾಗಿದ್ದು, ಚಾಲುಕ್ಯರ ವಾಸ್ತುಶಿಲ್ಪದ ಭವ್ಯ ಪರಂಪರೆಯನ್ನು ಪ್ರದರ್ಶಿಸುತ್ತದೆ.

aihole temple

ಈ ಸ್ಥಳದ ಹೆಸರಿನ ಹಿಂದಿರುವ ದಂತಕಥೆ

ಮಲಪ್ರಭಾ ನದಿಯ ದಂಡೆಯಲ್ಲಿ ನೆಲೆಸಿರುವ ಐಹೊಳೆಯು ಮೊದಲು ಚಾಲುಕ್ಯರ ರಾಜಧಾನಿಯಾಗಿದ್ದು, ಈ ಪಟ್ಟಣವು ಅದಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳನ್ನು ಹೊಂದಿದೆ.ದಂತಕಥೆಯೊಂದರ ಪ್ರಕಾರ ಯೋಧ-ಬ್ರಾಹ್ಮಣನಾದ ಪರಶುರಾಮನು ಇಲ್ಲಿ ವಾಸಿಸುತ್ತಿದ್ದನೆಂದು ಹೇಳಲಾಗುತ್ತದೆ. ಅನೇಕ ಪ್ರಮುಖ ಕ್ಷತ್ರಿಯರನ್ನು ವಧಿಸಿದ ನಂತರ, ಪರಶುರಾಮನು ಇಲ್ಲಿಗೆ ಹಿಂತಿರುಗಿದನು ಮತ್ತು ಮಲಪ್ರಭಾ ನದಿಯಲ್ಲಿ ತನ್ನ ರಕ್ತಸಿಕ್ತ ಕೊಡಲಿಯನ್ನು ತೊಳೆದನು ಎಂದು ಹೇಳಲಾಗುತ್ತದೆ. ಕೊಡಲಿಯ ರಕ್ತದಿಂದ ತೊಯ್ದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿತು. ಇದರ ಅರ್ಥ "ಎಂಥಹ ನದಿ!" ಎಂಬುದಾಗಿದ್ದು,ಇದು ಈ ಪ್ರದೇಶಕ್ಕೆ ಐಹೊಳೆ ಎಂಬ ಹೆಸರನ್ನು ನೀಡಿತು.

aihole inside structures

ಐಹೊಳೆ ಯಾವುದಕ್ಕಾಗಿ ಹೆಸರುವಾಸಿಯಾಗಿದೆ ನೋಡೋಣ

ಐಹೊಳೆಯಲ್ಲಿ ಸುಮಾರು 125 ಚಾಲುಕ್ಯ ದೇವಾಲಯಗಳಿವೆ ಮತ್ತು 5 ನೇ ಶತಮಾನದಷ್ಟು ಹಳೆಯದಾದ ಲಾಡ್ ಖಾನ್ ದೇವಾಲಯವಿದೆ. ಇಲ್ಲಿರುವ ಇತರ ಪ್ರಸಿದ್ಧ ದೇವಾಲಯಗಳೆಂದರೆ ಗೌಡ ದೇವಾಲಯ, ಸೂರ್ಯನಾರಾಯಣ ದೇವಾಲಯ ಮತ್ತು ದುರ್ಗಾ ದೇವಾಲಯ. ರಾವಣ ಫಾಡಿ ಗುಹೆಯು ಅತ್ಯಂತ ಹಳೆಯದಾದ ಬಂಡೆಯಿಂದ ಕತ್ತರಿಸಿದ ಗುಹೆ ದೇವಾಲಯಗಳಲ್ಲಿ ಒಂದಾಗಿದೆ. ಐಹೊಳೆ ಹಳೆಯ ಕಾಲದ ಇತಿಹಾಸವನ್ನು ವಿವರಿಸುವ ಶಾಸನಕ್ಕೆ ಸಹ ಪ್ರಸಿದ್ಧವಾಗಿದೆ.

ಈ ಸ್ಥಳವು ಬೆಂಗಳೂರಿನಿಂದ 483ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದಿಂದ ಉತ್ತಮವಾದ ಸಂಪರ್ಕವಿದೆ. ಇಲ್ಲಿಗೆ ಹತ್ತಿರವಿರುವ ರೈಲ್ವೇ ನಿಲ್ದಾಣವೆಂದರೆ ಅನ್ದು ಬಾದಾಮಿ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X