• Follow NativePlanet
Share
» »ವಜ್ರದ ನಗರಕ್ಕೆ ಒಂದು ಪಯಣ...

ವಜ್ರದ ನಗರಕ್ಕೆ ಒಂದು ಪಯಣ...

Posted By: Manjula Balaraj Tantry

ಗುಜರಾತ್ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಸೂರತ್ ವಜ್ರ ಕತ್ತರಿಸುವ ವ್ಯವಹಾರ ಮತ್ತು ಜವಳಿ ಕೈಗಾರಿಕೆಗಳಿಗೆ ಅತ್ಯಂತ ಜನಪ್ರಿಯವಾಗಿದೆ. ಇದು ಅಹಮ್ಮದಾಬಾದಿನಿಂದ 270 ಕಿ.ಮೀ ಅಂತರದಲ್ಲಿ ನೆಲೆಸಿದೆ. ನೀವು ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕ ಸೌಂದರ್ಯದ ಸಮ್ಮಿಲನವನ್ನು ಆನಂದಿಸಲು ಬಯಸುತ್ತಿರುವಿರಾದಲ್ಲಿ ಸೂರತ್ ನಿಮಗೆ ಒಂದು ಸೂಕ್ತವಾದ ತಾಣವಾಗಿದೆ. ವಾಣಿಜ್ಯೀಕರಣದ ಹೊರತಾಗಿಯೂ, ನಗರದ ನೈಸರ್ಗಿಕ ಸೌಂದರ್ಯ ಇನ್ನೂ ಅಸ್ಥಿತ್ವದಲ್ಲಿದೆ ಮತ್ತು ನಗರದ ಮತ್ತು ಸುತ್ತಮುತ್ತಲಿನ ತೋಟಗಳು ಮತ್ತು ಕಡಲತೀರಗಳು ನೈಜತೆಯನ್ನು ಪ್ರತಿಬಿಂಬಸುತ್ತದೆ. ಅಹಮದಾಬಾದ್ ನಿಂದ ಸೂರತ್ ಗೆ ಇಲ್ಲಿಯ ತಪತಿ ನದಿ ಮತ್ತು ದುಮಾಸ್ ಬೀಚ್ ನ ಅದ್ಬುತಗಳನ್ನು ಆನಂದಿಸಲು ಯಾರು ತಾನೇ ಬಯಸುವುದಿಲ್ಲ?

1ಸೂರತ್ ಭೇಟಿ ಕೊಡಲು ಸೂಕ್ತ ಸಮಯ

1ಸೂರತ್ ಭೇಟಿ ಕೊಡಲು ಸೂಕ್ತ ಸಮಯ

PC- Rahul Bhadane

ಸೂರತ್ ಉಷ್ಣವಲಯದ ಸವನ್ನಾ ಹವಾಗುಣವನ್ನು ಅನುಭವಿಸುತ್ತದೆ ಮತ್ತು ಇಲ್ಲಿ ಬೇಸಿಗೆಯಲ್ಲಿ ಬಿಸಿಯಾಗಿರುತ್ತದೆ. ಆದುದರಿಂದ ಅಕ್ಟೋಬರ್ ನಿಂದ ಮಾರ್ಚ್ ಕೊನೆಯವರೆಗೆ ಸೂರತ್ ಅನ್ನು ಭೇಟಿ ಕೊಡುವುದು ಜಾಣತನವೆನ್ನಬಹುದು. ಈ ಸಮಯದಲ್ಲಿ ಇಲ್ಲಿಯ ತಾಪಮಾನ ಮತ್ತು ಹವಾಮಾನ ಸ್ಥಿತಿಗಳು ಆಹ್ಲಾದಕರ ಮತ್ತು ತಂಪಾಗಿರುವುದರಿಂದ ಈ ಗಡಿಗಳನ್ನು ಅನ್ವೇಷಣೆ ಮಾಡಲು ಸುಲಭವಾಗುತ್ತದೆ.

2.ಅಹಮದಾಬಾದ್ ನಿಂದ ಸೂರತ್ ತಲುಪುವುದು ಹೇಗೆ?

2.ಅಹಮದಾಬಾದ್ ನಿಂದ ಸೂರತ್ ತಲುಪುವುದು ಹೇಗೆ?

ವಾಯುಮಾರ್ಗ: ಅಹಮದಾಬಾದ್ ನಿಂದ ಸೂರತ್ ಗೆ ನೇರವಾಗಿ ವಿಮಾನಗಳಿವೆ.

ರೈಲ್ವೆ ಮೂಲಕ: ಸೂರತ್ ಅಹಮ್ಮದಾಬಾದಿಗೆ ಮತ್ತು ಹತ್ತಿರದ ನಗರಗಳಿಗೆ ರೈಲಿನ ಮೂಲಕ ಸಂಪರ್ಕ ಹೊಂದಿದೆ. ನೀವು ಅಹಮದಾಬಾದ್ ರೈಲ್ವೇ ನಿಲ್ದಾಣದಿಂದ ಸೂರತ್ ಜಂಕ್ಷನ್ ವರೆಗೆ ರೈಲು ಹಿಡಿಯಬಹುದು.

ರಸ್ತೆಯ ಮೂಲಕ: 270 ಕಿ.ಮೀ ದೂರದಲ್ಲಿರುವ , ಸೂರತ್ ಅನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದು.
ನೀವು ಸೂರತ್ ನಿಂದ ಅಹಮ್ಮದಾಬಾದಿಗೆ ಬಸ್ಸು ಅಥವಾ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದಾಗಿದೆ.

ಮಾರ್ಗ 1: ಅಹಮದಾಬಾದ್ - ವಡೋದರಾ - ಭರೂಚ್ - ಸೂರತ್ ಅಹಮದಾಬಾದ್ ನಿಂದ ಸೂರತ್ ಗೆ ಹೋಗುವ ಸಂದರ್ಭದಲ್ಲಿ, ನೀವು ಈ ಕೆಳಗಿನ ಸ್ಥಳಗಳಲ್ಲಿ ವಿರಾಮ ತೆಗೆದುಕೊಳ್ಳಬಹುದು.

3 ವಡೋದರ

3 ವಡೋದರ

PC-Tanay Bhatt

ನೀವು ಐತಿಹಾಸಿಕ ಸ್ಥಳಗಳ ಸುತ್ತಲೂ ಸುತ್ತುವುದು ಮತ್ತು ಅವರ ರಹಸ್ಯಗಳನ್ನು ಹುಡುಕುವಲ್ಲಿ ಆಸಕ್ತರಾಗಿದ್ದಲ್ಲಿ ವಡೋದರಾ ನೀವು ಹೋಗುವ ಮೊದಲ ತಾಣವಾಗಿದೆ. ಇದು ಸಾಂಸ್ಕೃತಿಕ ನಗರವೆಂದೂ ಕರೆಯಲ್ಪಡುತ್ತದೆ. ವಡೋದರವು ಅನೇಕ ಭವ್ಯವಾದ ಅರಮನೆಗಳು, ತೋಟಗಳು, ಸಮಾಧಿ ಮತ್ತು ಕೊಳಗಳಿಗೆ ನೆಲೆಯಾಗಿದೆ. ಇಂತಹ ನೈಸರ್ಗಿಕ ಸೌಂದರ್ಯ ಮತ್ತು ಇತಿಹಾಸದ ಸಾರವಿರುವ ಸ್ಥಳವನ್ನು ಯಾರೊಬ್ಬರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಡೋದರದಲ್ಲಿರುವ ಅನೇಕ ಸ್ಥಳಗಳು ಸಾವಿರಾರು ಪ್ರವಾಸಿಗರನ್ನು ದಿನಂಪ್ರತಿ ಆಕರ್ಷಿಸುತ್ತದೆ. ಅವುಗಳಲ್ಲಿ ಲಕ್ಷ್ಮಿ ವಿಲಾಸ ಅರಮನೆಗಳು, ಸುರ್ ಸಾಗರ್ ಸರೋವರ, ಹಝೀರಾ ಮಕ್ಬರಾ ಮತ್ತು ಬರೋಡಾ ಮ್ಯೂಸಿಯಂ. ಮುಂತಾದುವುಗಳು ಸೇರಿವೆ.

4 ಭರೂಚ್

4 ಭರೂಚ್

PC- Flyingdream

ಸೂರತ್ ನ ದಾರಿಯಲ್ಲಿ ಸಿಗುವ ಇನ್ನೊಂದು ಪಟ್ಟಣವೆಂದರೆ ಅದು ಭರೂಚ್ ಆಗಿದ್ದು, ಇದು ಕ್ರಿಸ್ತನ ಮುಂಚಿನ ಯುಗದ ಹಿಂದಿನ ಇತಿಹಾಸದೊಂದಿಗೆ ಇದನ್ನು ಗುಜರಾತಿನ ಅತ್ಯಂತ ಪ್ರಾಚೀನ ನಗರವೆಂದು ನಂಬಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಭರೂಚ್ ಲಕ್ಷ್ಮೀ ದೇವಿಯ ವಾಸಸ್ಥಾನವೆಂದು ನಂಬಲಾಗುತ್ತದೆ. ಭರೂಚ್ ಇಲ್ಲಿಯ ರಾಸಾಯನಿಕ ಕಾರ್ಖಾನೆ. ಮತ್ತು ಕಡಲೆಕಾಯಿಗಳ ದೊಡ್ಡ ಉತ್ಪಾದನೆಗೆ ಹೆಸರುವಾಸಿಯಾಗಿದೆ.

5 ಸೂರತ್

5 ಸೂರತ್

ಜವಳಿ ನಗರವಾದ ಸೂರತ್ ನಲ್ಲಿ ಅನೇಕ ಆಸಕ್ತಿದಾಯಕ ಸ್ಥಳಗಳಿವೆ. ಆದುದರಿಂದ ಈ ಕೆಳಗಿನ ಕೆಲವು ಸ್ಥಳಗಳು ಪ್ರವಾಸಿಗರು ಈ ಗುಜರಾತಿನ ಸುಂದರ ನಗರದಲ್ಲಿರುವಾಗ ಭೇಟಿ ಮಾಡಲು ತಪ್ಪಿಸಲೇಬಾರದಂತಹ ತಾಣಗಳಾಗಿವೆ.

6 ದಮಾಸ್ ಬೀಚ್

6 ದಮಾಸ್ ಬೀಚ್

ನಿಸ್ಸಂದೇಹವಾಗಿ, ಈ ಕಡಲತೀರದ ನಗರವು ಹೆಚ್ಚು ಭೇಟಿ ನೀಡುವ ಸ್ಥಳವಾಗಿದೆ ಮತ್ತು ಸೂರತ್ ಕೇಂದ್ರದಿಂದ 20 ಕಿ.ಮೀ ದೂರದಲ್ಲಿದೆ. ಡಮಸ್ ಬೀಚ್ ಸೂರತ್ ನಿಂದ ಸುಮಾರು 20 ಕಿ.ಮೀ ಅಂತರದಲ್ಲಿದೆ. ಇಲ್ಲಿಯ ಹೊಳೆಯುವ ಮರಳುಗಳ ಮೇಲೆ ಜನರು ಕುಳಿತು ಅರಬ್ಬೀ ಸಮುದ್ರದ ಸುಂದರ ಅಲೆಗಳನ್ನು ನೋಡಿಕೊಂಡು ಆನಂದಿಸುವುದನ್ನು ಕಾಣಬಹುದಾಗಿದೆ. ಈ ನಗರದ ಸ್ಥಳೀಯ ಆಹಾರವನ್ನೂ ಕೂಡಾ ಸವಿಯಬಹುದಾಗಿದೆ. ಸೂರ್ಯನು ದಿಗಂತದಲ್ಲಿ ಅಸ್ತವಾಗುವ ನಯನ ಮನೋಹರ ದೃಶ್ಯವನ್ನು ನೀವು ತಪ್ಪಿಸಲೇಬಾರದು.

7 ಡಚ್ ಗಾರ್ಡನ್ (ಉದ್ಯಾನವನ)

7 ಡಚ್ ಗಾರ್ಡನ್ (ಉದ್ಯಾನವನ)

ಸೂರತ್ ನ ಇನ್ನೊಂದು ಪ್ರವಾಸಿ ತಾಣ ಡಚ್ ಡಚ್ ಗಾರ್ಡನ್ ಆಗಿದೆ ಮತ್ತು ಇದು ಡಚ್ಚರ ಸ್ಮಶಾನದ ಭಾಗವಾಗಿದೆ. ವರ್ಣರಂಜಿತ ಹೂವುಗಳು ಮತ್ತು ಸೊಂಪಾದ ಹಸಿರು ಮರಗಳಿಂದ ಅಲಂಕರಿಸಲ್ಪಟ್ಟಿದೆ, ಡಚ್ ಉದ್ಯಾನವನವು ಜಾಗಿಂಗ್ ಮಾಡುವವರು ಮತ್ತು ವಾಕಿಂಗ್ ಮಾಡುವವರಿಗೆ ಸಂಜೆಯ ತಾಣವಾಗಿದೆ. ಇಲ್ಲಿಯ ಇತಿಹಾಸವನ್ನು ಅನ್ವೇಷಿಸಲು ಬರುವ ಅನೇಕ ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ ಮತ್ತು ಇಲ್ಲಿ ಡಚ್ಚರ ಹಿಂದಿನ ವಸಾಹತುಗಳೂ ಕೂಡ ಇಲ್ಲಿಗೆ ಬರುವವರನ್ನು ಆಕರ್ಷಿಸುತ್ತದೆ.

8 ವಿಜ್ಞಾನ ಕೇಂದ್ರ

8 ವಿಜ್ಞಾನ ಕೇಂದ್ರ

ವಿಜ್ಞಾನ ಕೇಂದ್ರವು ಸೂರತ್ ನಲ್ಲಿ ಅತೀ ಹೆಚ್ಚು ಭೇಟಿ ನೀಡಬಹುದಾದ ಸ್ಥಳಗಳಲ್ಲೊಂದಾಗಿದೆ. ಸೂರತ್ ಎಲ್ಲಾ ವಯಸ್ಸಿನವರನ್ನು ಆಕರ್ಷಿಸುವ ಸ್ಥಳಗಳಲ್ಲೊಂದಾಗಿದೆ. ಇದು ಮಕ್ಕಳಿಗೆ ಪ್ರಮುಖವಾದ ಆಕರ್ಷಣೆಯ ಕೇಂದ್ರವಾಗಿದ್ದರೂ ನೀವು ಇಲ್ಲಿ ವಯಸ್ಕರೂ ಕೂಡ ಇಲ್ಲಿಯ ವಿಜ್ಞಾನ ಸಂಕೀರ್ಣದ ಸುಧಾರಿತ ಸೌಂದರ್ಯ ಆನಂದಿಸುವುದನ್ನು ಕಾಣಬಹುದಾಗಿದೆ. ತಾರಾಲಯದಿಂದ ಕಲಾ ಗ್ಯಾಲರಿ ಮತ್ತು ವಿಜ್ಞಾನ ವಸ್ತುಸಂಗ್ರಹಾಲಯದಿಂದ ಒಂದು ಆಂಫಿಥಿಯೆಟರ್ ವರೆಗೆ, ಇದು ವಿಜ್ಞಾನದ ವಿಕಸನಕ್ಕೆ ಸಂಬಂಧಿಸಿದ ಎಲ್ಲವನ್ನೂ ಒಳಗೊಂಡಿದೆ.ಗುಜರಾತ್ ಇತಿಹಾಸವನ್ನು ಅನ್ವೇಷಿಸಲು ಆಕರ್ಷಕ ವಸ್ತು ಸಂಗ್ರಹಾಲಯಗಳು ಸಹಕಾರಿಯಾಗಿದೆ.

9 ಗೇವಿಯರ್ ಸರೋವರ

9 ಗೇವಿಯರ್ ಸರೋವರ

ಸೂರತ್ ನ ಗೇವಿಯರ್ ಸರೋವರವು ಭೇಟಿ ನೀಡಲೇ ಬೇಕಾದ ತಾಣವಾಗಿದೆ. ನೀವು ವಲಸೆ ಬಂದ ಹಾಗೂ ಅಳಿವಂಚಿನಲ್ಲಿರುವ ಹಕ್ಕಿಗಳ ಸೌಂದರ್ಯತೆಯನ್ನು ಸೆರೆಹಿಡಿಯ ಬಯಸಿದಲ್ಲಿ ಈ ಸರೋವರವು ನಿಮಗೆ ಸೂಕ್ತವಾದ ಸ್ಥಳವಾಗಿದೆ. ಅನೇಕ ಸಮಯದಿಂದಲೂ ಇದು ಪಕ್ಷಿ ವೀಕ್ಷಕರಿಗೆ ಒಂದು ಸ್ವರ್ಗದಂತಿದೆ. ಇಂಡಿಯನ್ ಪೀಫೌಲ್ನಿಂದ ಪರ್ಪಲ್ ಸನ್ ಬರ್ಡ್ ವರಗೆ ಸರೋವರದ ಸುತ್ತಲೂ ವಾಸಿಸುವ ಅನೇಕ ವೈವಿಧ್ಯಮಯ ವರ್ಣರಂಜಿತ ಪಕ್ಷಿಗಳಿವೆ.

ನೀವು ಸ್ವಾಮಿನಾರಾಯಣ ದೇವಸ್ಥಾನ, ಜಗದೀಶ್ ಚಂದ್ರ ಬೋಸ್ ಅಕ್ವೇರಿಯಂ ಮತ್ತು ಸೂರತ್ ಕೋಟೆಗಳನ್ನು ಸಹ ಭೇಟಿ ಮಾಡಬಹುದು. ನೀವು ಹಣಕಾಸಿನ ನಗರದಲ್ಲಿ ಹೊಸದನ್ನು ಅನ್ವೇಷಿಸಲು ಬಯಸಿದರೆ, ಸೂರತ್ ಗೆ ಭೇಟಿ ನೀಡಿ. ಅಹಮದಾಬಾದ್ ನಿಂದ ಸೂರತ್ ಗೆ ಪ್ರವಾಸವು ಖಂಡಿತವಾಗಿಯೂ ಒಂದು ಸಂತೋಷದಾಯಕವಾಗಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ