Search
  • Follow NativePlanet
Share
» »ಅಹಮದಾಬಾದ್ ನಿಂದ ಮೊದೇರಾಗೆ- ಸೂರ್ಯದೇವಾಲಯಕ್ಕೆ ಒಂದು ಐತಿಹಾಸಿಕ ಪ್ರವಾಸ

ಅಹಮದಾಬಾದ್ ನಿಂದ ಮೊದೇರಾಗೆ- ಸೂರ್ಯದೇವಾಲಯಕ್ಕೆ ಒಂದು ಐತಿಹಾಸಿಕ ಪ್ರವಾಸ

ಗುಜರಾತಿನ ರಾಜ್ಯದ ಐತಿಹಾಸಿಕ ನಗರವೆನಿಸಿರುವ ಮೊದೇರ ಇನ್ನೂ ಅನ್ವೇಷಣೆಗೊಳಬೇಕಾಗಿದೆ. ಮೊದೇರಾದ ಪ್ರಾಚೀನ ಐತಿಹಾಸಿಕ್ ಬೀದಿಗಳಲ್ಲಿ ನಿಮ್ಮನ್ನು ನೀವು ಕಂಡುಕೊಂಡರೆ ಹೇಗಿರಬಹುದು.

By Manjula Balaraj Tantry

ಮೊದೇರ ಪುರಾತನ ಪಟ್ಟಣವಾಗಿದ್ದು, ರಾಮದೇವರ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಪ್ರಸಿದ್ದ ಸೂರ್ಯದೇವಾಲಯ ಮತ್ತು ಐತಿಹಾಸಿಕ ಕೇಂದ್ರಗಳನ್ನೊಳಗೊಂಡ ಮೊದೇರ ಭಾರತದ ಕಡಿಮೆ ಅನ್ವೇಷಣೆಗೊಳಪಟ್ಟ ಐತಿಹಾಸಿಕ ತಾಣಗಳಲ್ಲೊಂದಾಗಿದೆ. ಮೊದೇರದ ಕಳೆದು ಹೋದ ಪರಿಸರದಲ್ಲಿ ಭೇಟಿ ನೀಡಿ ಇದರ ಪರಿಸರದಲ್ಲಿ ಏಕೆ ಬೆರೆಯಬಾರದು?

ನೀವು ಗುಜರಾತ್ ರಾಜ್ಯದಲ್ಲಿದ್ದು ಇಲ್ಲಿನ ಜನಸಂದಣಿ ಮತ್ತು ನಗರ ಜೀವನದ ಅಡಚಣೆಯಿಂದ ತಪ್ಪಿಸಿಕೊಳ್ಳಲು ನೋಡುತಿದ್ದಲ್ಲಿ ಮೊದೇರ ನೀವು ಭೇಟಿ ನೀಡಲೇ ಬೇಕಾದ ಸ್ಥಳವಾಗಿದೆ. ಇಲ್ಲಿಯ ಚದುರಿಕೊಂಡಿರುವ ಹಸಿರು ಪರಿಸಿರದ ಹೊರತಾಗಿಯೂ ಇಲ್ಲಿ ಅನೇಕ ಐತಿಹಾಸಿಕ ತಾಣಗಳನ್ನು ನೋಡಬಹುದಾಗಿದೆ.

ಪ್ರಮುಖವಾಗಿ, ಚಾಲುಕ್ಯ ವಂಶದ ಸಮಯದಲ್ಲಿ ನಿರ್ಮಿಸಲಾದ 11ನೇ ಶತಮಾನದ ಸೂರ್ಯ ದೇವಾಲಯಕ್ಕೆ ಪ್ರಸಿದ್ಧವಾದ ಮೊದೇರ ಖಂಡಿತವಾಗಿಯೂ ಅಹಮದಾಬಾದ್ ನಿಂದ ವಾರಾಂತ್ಯದ ರಜಾದಿನಗಳನ್ನು ಅವುಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಅನ್ವೇಷಿಸುವಲ್ಲಿ ಖ್ಯಾತಿ ಪಡೆದಿದೆ.

ಮೊದೇರಗೆ ಭೇಟಿ ನೀಡಲು ಸೂಕ್ತ ಸಮಯ

ಮೊದೇರಗೆ ಭೇಟಿ ನೀಡಲು ಸೂಕ್ತ ಸಮಯ

PC- Uday Parmar

ಮೊದೇರ ಪ್ರದೇಶವು ಅರೆಶುಷ್ಕ ವಾತಾವರಣವನ್ನು ಅನುಭವಿಸುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಕೊನೆಯವರೆಗೆ ಮೊದೇರವನ್ನು ಭೇಟಿ ಮಾಡಲು ಸೂಕ್ತ ಸಮಯವಾಗಿದೆ ಈ ಸಮಯದಲ್ಲಿ ತಾಪಮಾನದ ಪರಿಸ್ಥಿತಿಗಳು ಗರಿಷ್ಟ ಮತ್ತು ಅನುಕೂಲಕರವಾಗಿರುತ್ತದೆ. ನೀವು ಈ ಪಟ್ಟಣವನ್ನು ಆಹ್ಲಾದಕರವಾಗಿ ಅನ್ವೇಷಿಸಲು ಬಯಸಿದರೆ ಬೇಸಿಗೆ ಕಾಲದಲ್ಲಿ ಭೇಟಿ ನೀಡುವುದನ್ನು ತಪ್ಪಿಸಿ.

ಅಹಮದಾಬಾದಿನಿಂದ ಮೊದೇರಾಗೆ ಹೋಗುವುದು ಹೇಗೆ

ಅಹಮದಾಬಾದಿನಿಂದ ಮೊದೇರಾಗೆ ಹೋಗುವುದು ಹೇಗೆ

PC- Maps

ವಾಯುಮಾರ್ಗ: ನೀವು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ವಿಮಾನವನದಲ್ಲಿ ಪ್ರಯಾಣಿಸಬಹುದು ಮತ್ತು ಅಲ್ಲಿಂದ ನೀವು ಮೊದೇರಗೆ ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಂಡು ಆ ಮೂಲಕ ಪ್ರಯಾಣಿಸಬಹುದು.

ರೈಲು ಮಾರ್ಗ: ಮೊಹೇರಾದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಅಹಮದಾಬಾದ್ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ.

ರಸ್ತೆಯ ಮೂಲಕ: ಅಹಮದಾಬಾದ್ ಮತ್ತು ಇತರ ನಗರಗಳಿಂದ ರಸ್ತೆಯ ಮೂಲಕ ಮೊದೇರವನ್ನು ಸುಲಭವಾಗಿ ತಲುಪಬಹುದು. ನೀವು ಅಹಮದಾಬಾದ್ ನಿಂದ ಮೊದೇರಾಕ್ಕೆ ಕ್ಯಾಬ್ ತೆಗೆದುಕೊಳ್ಳಬಹುದು ಅಥವಾ ಬಸ್ ಹಿಡಿಯಬಹುದು.

ನಿಮ್ಮ ಸ್ವಂತ ವಾಹನದ ಮೂಲಕ ಪ್ರಯಾಣಿಸುವುದಾದಲ್ಲಿ ನೀವ್ ಕಲೋಲ್ ಮಾರ್ಗದ ಮೂಲಕ ಪ್ರಯಾಣಿಸಬಹುದಾಗಿದೆ.

ಮಾರ್ಗ 1: ಅಹಮದಾಬಾದ್ - ಕಲೋಲ್ - ಮೊದೇರಾಗೆ ಅಹಮದಾಬಾದ್ ಗೆ ಹೋಗುವ ಮಾರ್ಗದಲ್ಲಿ ನೀವು ಕಲೋಲ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು ಮತ್ತು ಇಲ್ಲಿ ನೀವು ವಿಶ್ರಾಂತಿ ಪಡೆಯುತ್ತೀರಿ

ಕಲೋಲ್

ಕಲೋಲ್

PC- Jigneshgohel

ಗುಜರಾತಿನ ಗಾಂಧೀನಗರ ಜಿಲ್ಲೆಯಲ್ಲಿರುವ ಐತಿಹಾಸಿಕ ಪಟ್ಟಣವಾದ ಕಲೋಲ್ ಇದರ ನೈಸರ್ಗಿಕ ವಿಸ್ಮಯತೆಗಳನ್ನು ಪಕ್ಷಿಗಳ ರೂಪದಲ್ಲಿ ಹೊಂದಿರುವುದಕ್ಕೆ ಕೂಡಾ ಹೆಸರುವಾಸಿಯಾಗಿದೆ.ಕಲೋಲ್ ತನ್ನಲ್ಲಿರುವ ಥೋಲ್ ಸರೋವರಕ್ಕೆ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.

ಇದು ಹಲವಾರು ಫ್ಲೆಮಿಂಗೋಗಳು ಮತ್ತು ಸರಸ್ ಜಾತಿಯ ಕೊಕ್ಕರೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ಸರೋವರ ಮತ್ತು ಪಕ್ಷಿಧಾಮಗಳಲ್ಲಿ ಆನಂದಿಸುವುದರ ಹೊರತಾಗಿಯೂ ಕಲೋಲ್ ನಿಂದ 10 ಕಿ.ಮೀ ದೂರದಲ್ಲಿ ಐತಿಹಾಸಿಕ ಸ್ಮಾರಕವಾದ ಆದಲಾಜ್ ಸ್ಟೆಪ್ ವೆಲ್ ಕೂಡಾ ಭೇಟಿ ಕೊಡಬಹುದು.

ಆದುದರಿಂದ ಕಲೋಲ್ ನ ಈ ಪರಿಸರದ ಮಧ್ಯದಲ್ಲಿ ಮತ್ತು ಸುಂದರವಾದ ಥೋಲ್ ನ ಸರೋವರದ ಪರಿಸರ ಮತ್ತು ಅದಲಾಜ್ ನ ಸ್ಟೆಪ್ ವೆಲ್ ನ ಈ ಸ್ಮಾರಕಗಳಿಗೆ ಭೇಟಿ ಕೊಟ್ಟು ವಿಶ್ರಾಂತಿ ಏಕೆ ಪಡೆಯಬಾರದು?

ಮೊದೆರಾದಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು

ಮೊದೆರಾದಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು

PC- Uday Parmar

ಪಾರ್ಮಾರ್ ಗುಜರಾತಿನ ಮೆಹ್ಸಾನ ಜಿಲ್ಲೆಯಲ್ಲಿದ್ದು ಮೊದೇರಾ ಇಲ್ಲಿಯ ಸ್ಥಳೀಯರಲ್ಲಿ ಮತ್ತು ಪ್ರವಾಸಿಗರಲ್ಲಿ ಇದರ ಇತಿಹಾಸ, ಸಂಸ್ಕೃತಿ ಮತ್ತು ನಿಸ್ಸಂಶಯವಾಗಿ ಇಲ್ಲಿಯ ಸೂರ್ಯದೇವಾಲಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ದೇಶದ ಎಲ್ಲಾ ಕಡೆಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.ದೇವಾಲಯದ ಪೌರಾಣಿಕ ಕೆಲಸ ಮತ್ತು ಅದ್ಭುತವಾದ ಆಕರ್ಷಿಸುವ ವಾಸ್ತುಶೈಲಿಯನ್ನು ನೋಡಿ.

ಸೂರ್ಯ ದೇವಾಲಯ

ಸೂರ್ಯ ದೇವಾಲಯ

PC- Uday Parmar

ಮಾಧೇರದಲ್ಲಿರುವ ಸೂರ್ಯ ದೇವಾಲಯವು ವರ್ಷದುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳವಾಗಿದೆ. ಪುಷ್ಪಾವತಿ ನದಿಯ ದಡದಲ್ಲಿರುವ ಮೊದೇರಾವು ಪ್ರಾಚೀನ ಅದ್ಬುತಗಳ ಸಾಲಿನಲ್ಲಿ ಈ ದೇವಾಲಯ, ಟ್ಯಾಂಕ್ ಗಳು, ಮತ್ತು ಕಂಬಗಳು ಇಂದಿಗೂ ಬಲವಾಗಿಯೂ ನಿಂತಿದೆ. ಇದು ಚಾಲುಕ್ಯ ರಾಜವಂಶದ ಕಾಲದ ಪ್ರಗತಿ ಮತ್ತು ಸಮೃದ್ಧಿಯನ್ನು ಪ್ರದರ್ಶಿಸುತ್ತದೆ.

ಮರಳುಗಲ್ಲಿನಿಂದ ನಿರ್ಮಾಣಗೊಂಡ ಸೂರ್ಯ ದೇವಾಲಯವು ಕಲ್ಮಶ ರಹಿತ ವಾಸ್ತುಶಿಲ್ಪ ಮತ್ತು ದೋಷರಹಿತವಾಗಿ ಕೆತ್ತಲ್ಪಟ್ಟ ಕಂಬಗಳು ಮತ್ತು ಗೋಡೆಗಳು ಇದಕ್ಕೆ ಸಾಕ್ಷಿಯಾಗಿದೆ. ದೇವಾಲಯದ ಮುಂದೆ, ಸೂರ್ಯಕುಂಡ ಎಂಬ ಜಲಾಶಯವೂ ಸಹ ಇದೆ.

ಸೂರ್ಯದೇವರಿಗೆ ಸಮರ್ಪಿತವಾದ ಈ ದೇವಾಲಯವು ಸಾವಿರಾರು ಹಿಂದೂ ಭಕ್ತರನ್ನು ಪ್ರತಿವರ್ಷ ಆಕರ್ಷಿಸುತ್ತದೆ. ಇಲ್ಲಿಯ ಗೋಡೆಗಳು, ಕಂಬಗಳು ಮತ್ತು ಮೇಲ್ಚಾವಣಿಗಳಲ್ಲಿರುವ ವಿನ್ಯಾಸಗಳ ಮಾದರಿಗಳನ್ನು ವಾಸ್ತುಶಿಲ್ಪಿಗಳು ಇದರ ಸಂಕೀರ್ಣತೆಯ ಪರಿಶೀಲನೆ ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X