» »ಅಘೋರಿಗಳು ಪೂಜೆಗಳನ್ನು ಮಾಡುವ ರಹಸ್ಯವಾದ ದೇವಾಲಗಳಿವು!

ಅಘೋರಿಗಳು ಪೂಜೆಗಳನ್ನು ಮಾಡುವ ರಹಸ್ಯವಾದ ದೇವಾಲಗಳಿವು!

Written By:

ಅಘೋರಿಗಳ ಜೀವನವೇ ಸಾಮಾನ್ಯ ಮಾನವರ ಜೀವನಕ್ಕಿಂತ ವಿಭಿನ್ನವಾದುದು. ವಿಚಿತ್ರವಾದ ರೂಪ, ಮೈಯಲ್ಲಾ ಬೂದಿಯನ್ನು ಬಳಿದುಕೊಂಡು ದಿಗಂಬರವಾಗಿ ಇರುವುದು, ಭಂಗಿಯನ್ನು ಉಪಯೋಗಿಸುವುದು ಇನ್ನೂ ಹೀಗೆ ಹಲವಾರು ವಿವಿಧ ವಿಭಿನ್ನವಾದ ಚಟುವಟಿಕೆಗಳು. ಇವರನ್ನು ಸಾಧುಗಳು ಹಾಗೂ ಅಘೋರಿಗಳು ಎಂದು ಕರೆಯುತ್ತಾರೆ.

ಇವರು ಸಾಮಾನ್ಯವಾದಿ ಸ್ಮಶಾನ ರುದ್ರ ಶಿವನ ಆರಾಧಕರು. ಇವರಲ್ಲಿ ಹಲವಾರು ಶಕ್ತಿಗಳನ್ನು ಇರುವುದರಿಂದ ಭಾರತೀಯ ಹಿಂದೂತ್ವದ ಪ್ರಕಾರ ಅಘೋರಿಗಳನ್ನು ಗೌರವಿಸುತ್ತೇವೆ. ಇವರು ವಿಶೇಷವಾಗಿ ನರಮಾಂಸದ ಭಕ್ಷಣೆಯನ್ನು ಮಾಡುವವರು, ಶವಗಳನ್ನು ಪ್ರೇಮಿಸುವವರು ಹೀಗೆ ಭಯಂಕರವಾದ ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದಾರೆ.

ಇಂತಹ ಅಘೋರಿಗಳನ್ನು ಕಂಡರೆ ಒಂದು ರೀತಿಯ ಭಯವು ಅವರಿಸುತ್ತದೆ. ಇವರು ಮಾಂಸ, ಮಧ್ಯವನ್ನು ಕುಡಿಯುವವರು ಹಾಗೆಯೇ ಪ್ರತಿ ವಿಷಯದ ಹಿಂದೆ ದೇವರು ಇರುತ್ತಾನೆ ಎಂದು ನಂಬಿಕೆ ಇಟ್ಟವರು. ಅದ್ದರಿಂದಲೇ ಇವರು ಮಲ ಹಾಗು ಮನುಷ್ಯರ ದ್ರವ, ದೇಹವನ್ನು ಸೇವಿಸುತ್ತಾರೆ.

ಆದರೆ ಇವರ ಭಯಂಕರವಾದ ರೂಪವನ್ನು ಕಂಡು ಭಯಪಡುತ್ತೇವೆ. ಇವರು ಆರಾಧಿಸುವ ದೇವಾಲಯ ಎಲ್ಲಿದೆ ಎಂದು ಯಾರಿಗೂ ತಿಳಿಯದು. ಆದರೆ ಅಘೋರಿಗಳು ರಹಸ್ಯವಾಗಿ ಪೂಜೆಗಳನ್ನು ನಿರ್ವಹಿಸುವ ಸಿಕ್ರೆಟ್ ದೇವಾಲಯದ ಬಗ್ಗೆ ತಿಳಿಯಿರಿ.

ಅಘೋರಿಗಳು ಯಾರು?

ಅಘೋರಿಗಳು ಯಾರು?

ಅಂತ್ಯಕ್ರಿಯೆ ನಡೆದ ನಂತರ ಆ ಹೆಣದ ಬೂದಿಯನ್ನು ಶರೀರವೆಲ್ಲಾ ಬಳಿದುಕೊಳ್ಳುತ್ತಾರೆ. ಇವರು ಶಿವನ ಆರಾಧಕರು ಆಯಸ್ಸನ್ನು ಅನುಸರಿಸುತ್ತಾ ಇರುವವರು. ಇವರು ತಮ್ಮ ಸಮಯವನ್ನು ಹೆಚ್ಚಾಗಿ ತಪಸ್ಸು, ಧ್ಯಾನ ಮಾಡುವುದಕ್ಕೆ ಬಳಸುತ್ತಾರೆ.

ಕಾಳಿ ಮಾತಾ ಸೇವಕರು

ಕಾಳಿ ಮಾತಾ ಸೇವಕರು

ಇವರು ಕಾಳಿ ಮಾತಾ ಸೇವಕರು ಅಥವಾ ಶಿವನ ಅವತಾರಕ್ಕೆ ಭಕ್ತರಾಗಿ ಅಘೋರರಿಗೆ ಕರೆಯುತ್ತಾರೆ. ಈ ಅಘೋರಿಗಳು ಮನುಷ್ಯರ ಅಂತ್ಯಕ್ರಿಯೆಯ ನಂತರ ಅವರ ಮೂಳೆಗಳಿಂದ ಕಪಾಲ ಮಾಡಿಕೊಂಡು ಉಪಯೋಗಿಸುತ್ತಾರೆ.

ಮೋಕ್ಷ

ಮೋಕ್ಷ

ಅದ್ವೀಯ ಜೀವನದಿಂದಾಗಿ ಮೋಕ್ಷವನ್ನು ಹೊಂದಿ ಪುನರ್ ಜನ್ಮ ಪಡೆಯಬಹುದು ಎಂದು ಅಘೋರಿಗಳ ನಂಬಿಕೆಯಾಗಿದೆ. ಇವರು ಕೇವಲ ಶಿವರಾತ್ರಿ ಹಾಗೂ ಕುಂಭಮೇಳದ ಸಮಯದಲ್ಲಿ ಮಾತ್ರ ಬೆಳಕಿನ ಸಮಯದಲ್ಲಿ ಹೊರಗೆ ಬರುತ್ತಾರೆ.

ಹಿಂದೂ ದೇವರು

ಹಿಂದೂ ದೇವರು

ಅಘೋರಿಗಳು ಇತರ ಹಿಂದೂ ದೇವರನ್ನು ಹಾಗೂ ದೇವತೆಗಳನ್ನು ಪೂಜಿಸುವುದು ಎಂದಿಗೂ ನಂಬುವುದಿಲ್ಲ. ಕೇವಲ ಶಿವನನ್ನು ಮಾತ್ರವೇ ಅತ್ಯಂತ ಶಕ್ತಿವಂತ ದೇವರು ಎಂದು ನಂಬುತ್ತಾರೆ. ಇದರಿಂದಾಗಿ ಶಿವನು ಮೋಕ್ಷವನ್ನು ನೀಡುತ್ತಾನೆ ಎಂದು ಇವರ ನಂಬಿಕೆಯಾಗಿದೆ.

ಸತ್ತ ದೇಹ

ಸತ್ತ ದೇಹ

ಮರಣಕ್ಕೆ, ಮರಣಿಸಿದ ಮಾನವರಿಗೆ ಸ್ವಲ್ಪವೂ ಭಯವನ್ನು ಪಡುವುದಿಲ್ಲ. ಕೆಲವು ಬಾರಿ ಅಘೋರಿಗಳು ಸತ್ತ ದೇಹವನ್ನು ತಿನ್ನುತ್ತಾರೆ. ಶವಗಳ ಜೊತೆ ಲೈಂಗಿಕವಾದ ಕ್ರಿಯೆ ಕೂಡ ಮಾಡುತ್ತಾರೆ. ಇವರು ಕಾಶಿಯಲ್ಲಿ ಮೊದಲು ಜನಿಸಿದರು. ನಂತರ ಆನೇಕ ದೇವಾಲಯಗಳಲ್ಲಿ ಪ್ರಸ್ತುತ ಕಾಣಿಸುತ್ತಾರೆ.

ನೇಪಾಳದ ಕುಟಿ

ನೇಪಾಳದ ಕುಟಿ

ನೇಪಾಳದಲ್ಲಿ ಕಟ್ಮಂಡುವಿನ ಒಂದು ಕುಟಿ ಎಂಬ ದೇವಾಲಯವಿದೆ. ಆ ದೇವಾಲಯವನ್ನು ಬಾಬಾ ಸಿಂಗ್ ಷಾವಕ್ ನಿರ್ಮಿಸಿದನಂತೆ. ಈತನು ಶ್ರೀರಾಮ ಭಕ್ತನಾಗಿದ್ದನು.

ದುರ್ಗ

ದುರ್ಗ

ಪರ್ವತಿ ದೇವಿ ದುರ್ಗ ಅವತಾರದಲ್ಲಿ ಮಹಿಷಾಸುರನನ್ನು ಸಂಹರಿಸಿದ ನಂತರ.. ವಿಧ್ಯಾಂಚಲದಲ್ಲಿಯೇ ಇದ್ದಾಳೆ ಎಂಬ ನಂಬಿಕೆ ಇವರದು. ಆ ದೇವಾಲಯದ ಸುತ್ತಲೂ ಅನೇಕ ಗುಹೆಗಳಿವೆ. ಈ ಗುಹೆಗಳಲ್ಲಿಯೇ ಅಘೋರಿಗಳು ಧ್ಯಾನವನ್ನು ಮಾಡುತ್ತಾರೆ.

ಕಾಳಿ ಮಾತಾ

ಕಾಳಿ ಮಾತಾ

ಶಕ್ತಿಪೀಠಗಳಲ್ಲಿ ಒಂದಾದ ಕಾಳಿ ಮಾತ ದೇವಾಲಯ. ಗುಪ್ತ ಕಾಶಿಗೆ ಸಮೀಪದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಕೇದಾರನಾಥ್, ಉತ್ತರಖಂಡ ಸುತ್ತಮುತ್ತ ಇದನ್ನು ನಿರ್ಮಿಸಿದರು. ದೇಶವೆಲ್ಲಾ ತಿರುಗಿದ ನಂತರ ಅಘೋರಿಗಳು ಈ ಸ್ಥಳದಲ್ಲಿ ಜೀವನವೆಲ್ಲಾ ಜೀವಿಸುತ್ತಾರಂತೆ.

ತಾರಾ ಪೀಠ

ತಾರಾ ಪೀಠ

ಪಶ್ಚಿಮ ಬಂಗಾಳದಲ್ಲಿನ ರಾಂಪುರ್ ಹಟ್ ಎನ್ನವ ಚಿಕ್ಕ ಚಿಕ್ಕ ದೇವಾಲಯಗಳಿವೆ. ಈ ದೇವಾಲಯದ ಗೋಡೆಯ ಸುತ್ತಲೂ ಅಂತ್ಯಕ್ರಿಯೆ ನಡೆಯುತ್ತ ಇರುತ್ತವೆ. ಈ ದೇವಾಲಯವನ್ನು ತಾಂತ್ರಿಕ ದೇವಾಲಯವೆಂದು ಕರೆಯುತ್ತಾರೆ. ಸತಿ ದೇವಿ ತಾತಾದೇವಿಯಾಗಿ ಪೂಜಿಸುತ್ತಾರೆ. ಅದ್ದರಿಂದಲೇ ಈ ಅಂತ್ಯಕ್ರಿಯೆ ನಡೆಯುವ ಪ್ರದೇಶವನ್ನು ಅಘೋರರು ತಮ್ಮ ಮಂತ್ರ ಹಾಗೂ ತಂತ್ರವಿದ್ಯೆಗೆ ಬಳಸುತ್ತಿರುತ್ತಾರೆ.

ಕಪಾಲೀಶ್ವರ, ಮಧುರೈ

ಕಪಾಲೀಶ್ವರ, ಮಧುರೈ

ಈ ದೇವಾಲಯ ಅಘೋರಿಗಳಿಗೆ ಪ್ರತ್ಯೇಕವಾದುದು ಎಂದು ಹೇಳುತ್ತಾರೆ. ಈ ದೇವಾಲಯದ ಸಮೀಪ ಆಶ್ರಮವಿದೆ. ಆನೇಕ ಸಮಾಧಿಗಳು ಇವೆ. ಇವುಗಳ ಮಧ್ಯೆ ಅಘೋರಿಗಳು ತಮ್ಮ ತಂತ್ರಮಂತ್ರವನ್ನು ಮಾಡುತ್ತಾ ಇರುತ್ತಾರೆ.

ಕಾಳಿ ದೇವಾಲಯ, ಕೋಲ್ಕತ್ತ

ಕಾಳಿ ದೇವಾಲಯ, ಕೋಲ್ಕತ್ತ

ದಕ್ಷಿಣೇಶ್ವರ ಕಾಳಿ ದೇವಾಲಯ ಧಕ್ಷಿಣೇಶ್ವರಕ್ಕೆ ಸಮೀಪದಲ್ಲಿದೆ. ಇಲ್ಲಿ ಕಾಳಿ ಮಾತಳಿಗೆ ಪ್ರತ್ಯೇಕವಾದ ದೇವಾಲಯವಿದೆ. ಕಾಳಿಯ ಎಡಗಾಲಿನ ನಾಲ್ಕು ಬೆರಳುಗಳು ಇಲ್ಲಿ ಬಿದ್ದವಂತೆ ಹಾಗಾಗಿ ಆ ತಾಯಿ ಇಲ್ಲಿಯೇ ನೆಲೆಸಿದ್ದಾಳೆ ಎಂದು ಆನೇಕ ಮಂದಿಯ ನಂಬಿಕೆಯಾಗಿದೆ. ಅಘೋರಿಗಳು ಇಲ್ಲಿ ತಂತ್ರ ಹಾಗೂ ಧ್ಯಾನ ಮಾಡುತ್ತಾರೆ.