» »ಇಲ್ಲಿನ ಪ್ರತೀ ಮನೆಯಲ್ಲಿದೆ ನಾಗನಿಗೆ ದೇವಸ್ಥಾನ... ಹಾವುಗಳ ಜೊತೆಗೆ ಜನರ ಓಡಾಟ

ಇಲ್ಲಿನ ಪ್ರತೀ ಮನೆಯಲ್ಲಿದೆ ನಾಗನಿಗೆ ದೇವಸ್ಥಾನ... ಹಾವುಗಳ ಜೊತೆಗೆ ಜನರ ಓಡಾಟ

Written By: Rajatha

ಬಹಳ ಪುರಾತನ ಕಾಲದಿಂದಲೂ ಭಾರತದಲ್ಲಿ ಹಾವನ್ನು ವಿಶೇಷವಾಗಿ ನಾಗರಹಾವನ್ನು ಪೂಜಿಸಲಾಗುತ್ತಿದೆ. ದೇವರ ರೂಪದಲ್ಲಿ ನಾಗದೇವರನ್ನು ಆರಾಧಿಸಲಾಗುತ್ತಿದೆ. ರಾಮಾಯಣದಲ್ಲಿ ನಾಗಲೋಕ ಎನ್ನುವ ಸ್ಥಳವಿತ್ತು. ಅಲ್ಲಿ ಹಾವುಗಳೇ ಇದ್ದವು. ಭಾರತೀಯರು ನಾಗರ ಪಂಚಮಿಯಂದು ಹಾವಿಗೆ ಹಾಲೆರೆಯುತ್ತಾರೆ. ಪೂಜಿಸುತ್ತಾರೆ. ಆಶೀರ್ವಾದವನ್ನು ಪಡೆಯುತ್ತಾರೆ.

ಗಾಳಿಯಲ್ಲಿ ತೇಲುವ ಈ ಕಂಬದಲ್ಲಿದೆ ರಹಸ್ಯ... ಬೇಡಿಕೆ ಈಡೇರಲು ಇಲ್ಲಿಗೆ ಹೋಗ್ತಾರಂತೆ ಜನ

ಪ್ರತಿದಿನ ಮಾಡ್ತಾರೆ ಹಾವಿಗೆ ಪೂಜೆ

ಪ್ರತಿದಿನ ಮಾಡ್ತಾರೆ ಹಾವಿಗೆ ಪೂಜೆ

ನೀವು ಈ ವರೆಗೂ ನಾಗದೇವರ ಪೂಜೆಯನ್ನೆಲ್ಲಾ ಕೇಳಿರಬಹುದು. ಅವೆಲ್ಲವೂ ಯಾವಾಗಲಾದರೂ ಅಪರೂಪಕ್ಕೆ ನಡೆಸಲಾಗುವುದು. ಆದರೆ ದಿನವಿಡೀ ಹಾವು ನಿಮ್ಮ ಜೊತೆಗೆ ಇದ್ದರೆ, ಪ್ರತಿದಿನ ಅದಕ್ಕೆ ಪೂಜೆ ಮಾಡುವಂತಿದ್ದರೆ ಹೇಗಿರುತ್ತಿತ್ತು ಒಮ್ಮ ಯೋಚಿಸಿ. ಕೇಳಲು ವಿಚಿತ್ರವೆನಿಸಬಹುದು, ಆದರೆ ಅದು ನಿಜ.

ಈ ಊರು ಎಲ್ಲಿದೆ?

ಈ ಊರು ಎಲ್ಲಿದೆ?

ಇಂತಹ ಒಂದು ಚಿತ್ರಣ ಕಾಣ ಸಿಗುವುದು ಶೆಟ್ಪಾಲ್ ಎನ್ನು ದೂರದ ಊರಿನಲ್ಲಿ. ಇದು ಮಹಾರಾಷ್ಟ್ರದ ಶೋಲಾಪುರ್ ಜಿಲ್ಲೆಯ ಮೊಹೋಲ್ ತಾಲೂಕಿನಲ್ಲಿ ಇದೆ. ಸುಮಾರು2650 ಜನಸಂಖ್ಯೆಯನ್ನು ಹೊಂದಿರುವ ಪ್ರದೇಶ ಇದಾಗಿದೆ. ಇದು ಪುಣೆಯಿಂದ ಸುಮಾರು 200 ಕಿ.ಮೀ ದೂರದಲ್ಲಿದೆ.

ಮನಸ್ಸಿನಲ್ಲೂ ಮನೆಯಲ್ಲೂ ಸ್ಥಾನ

ಮನಸ್ಸಿನಲ್ಲೂ ಮನೆಯಲ್ಲೂ ಸ್ಥಾನ

ಹಾವುಗಳನ್ನು ಪೂಜಿಸುತ್ತಿರುವ ಈ ಸಂಪ್ರದಾಯ ಯಾವತ್ತಿನಿಂದ ಪ್ರಾರಂಭವಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ. ಇಲ್ಲಿನ ಜನರ ಮನಸ್ಸಲ್ಲಿ ಮಾತ್ರವಲ್ಲ ಮನೆಯಲ್ಲೂ ನಾಗರಹಾವಿಗಿದೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರ ನಂಬಿಕೆಯು ಬಹಳ ಗಾಢವಾಗಿದೆ.

ಪ್ರತಿ ಮನೆಯಲ್ಲಿದೆ ದೇವಸ್ಥಾನ

ಪ್ರತಿ ಮನೆಯಲ್ಲಿದೆ ದೇವಸ್ಥಾನ

ಇಲ್ಲಿ ಸಣ್ಣ ಫ್ಯಾಮಿಲಿ ಕೂಡಾ ಮನೆಯಲ್ಲಿ ಕೂಡಾ ಹಾವಿಗಾಗಿ ವಿಶೇಷವಾದ ಸ್ಥಳವಿದೆ. ಪ್ರತಿಯೊಂದು ಮನೆಯಲ್ಲೂ ದೇವಸ್ಥಾನವಿದೆ. ಹಾವು ಮನೆಗೆ ಬಂದು ವಿರಮಿಸಿ ಕುಟುಂಬವನ್ನು ಹರಸಲು ಇದನ್ನು ಮಾಡಲಾಗಿದೆ. ಪ್ರತಿಯೊಂದು ಮನೆಯಲ್ಲೂ ಮೇಲ್ಚಾವಣಿಯ ಮೇಲೆ ಟೊಳ್ಳಾದ ಜಾಗದಲ್ಲಿ ವಾಸಸ್ಥಳವನ್ನಾಗಿಸುತ್ತವೆ. ಈ ಊರಿನಲ್ಲಿ ಹಾವುಗಳು ಮುಕ್ತವಾಗಿ ಸಂಚರಿಸುತ್ತದೆ. ಇದನ್ನು ನೋಡಿ ಯಾರೂ ಕಿರುಚುವುದಿಲ್ಲ. ಭಯಪಡುವುದಿಲ್ಲ.

ಹಾವಿನೊಂದಿಗೆ ಆಡ್ತಾರೆ ಇಲ್ಲಿನ ಮಕ್ಕಳು

ಹಾವಿನೊಂದಿಗೆ ಆಡ್ತಾರೆ ಇಲ್ಲಿನ ಮಕ್ಕಳು

ಈ ಹಳ್ಳಿಯ ಮಕ್ಕಳು ಕೆಲವೊಮ್ಮೆ ನಾಗರಹಾವಿನ ಜೊತೆ ಆಟವಾಡುತ್ತಾ ಇರುತ್ತವೆ. ಇಲ್ಲಿನ ಜನರು ನಾಗರಹಾವನ್ನು ಪೂಜಿಸುವುದು ಮಾತ್ರವಲ್ಲ. ಅವುಗಳನ್ನು ಪ್ರೀತಿಸುತ್ತಾರೆ ಕೂಡ. ಹಾವುಗಳ ಜೊತೆ ನಿರ್ಭೀತಿಯಿಂದ ಓಡಾಡುತ್ತಾರೆ. ಮನೆಯ ಕೋಣೆಯೊಳಗೆ ಹಾವು ಕಾಣಿಸುವುದು ಪ್ರತಿದಿನದ ಕಾಯಕವಾಗಿದೆ. ಕೆಲವೊಮ್ಮೆ ಶಾಲೆಯ ತರಗತಿಯೊಳಗೂ ಹಾವು ಬರುತ್ತದೆ.

ಹೊಸ ಮನೆ ಕಟ್ಟುವವರು ನಿರ್ಮಿಸಬೇಕು ಹಾವಿಗಾಗಿ ದೇವಸ್ಥಾನ

ಹೊಸ ಮನೆ ಕಟ್ಟುವವರು ನಿರ್ಮಿಸಬೇಕು ಹಾವಿಗಾಗಿ ದೇವಸ್ಥಾನ

ಈ ಊರಿನಲ್ಲಿ ಹೊಸ ಮನೆ ಕಟ್ಟುವವರು ಹಾವಿನ ದೇವಸ್ಥಾನ ಸರಿಯಾದ ರೀತಿಯಲ್ಲಿ ನಿರ್ಮಿಸಲಾಗಿದೆಯೇ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾವು ಸರಿಯಾಗಿ ಆರಾಮವಾಗಿರಲು ಬೇಕಾಗುವಷ್ಟು ಸ್ಥಳ ಇದೆಯೋ ಎನ್ನುವುದನ್ನು ನೋಡಿಕೊಳ್ಳಬೇಕು.

ಹಾವು ಕಚ್ಚಿರುವ ಪ್ರಕರಣಗಳೇ ಇಲ್ಲ

ಹಾವು ಕಚ್ಚಿರುವ ಪ್ರಕರಣಗಳೇ ಇಲ್ಲ

ಹಾವು ಇಷ್ಟೊಂದು ಆರಾಮವಾಗಿ ಜನರ ಮಧ್ಯೆ ಓಡಾಡುತ್ತಿರುವಾಗ ಜನರು ಇದನ್ನೆಲ್ಲಾ ನೋಡಿಯೂ ಸುಮ್ಮನಿದ್ದಾರಲ್ಲ ಎನ್ನುವ ಪ್ರಶ್ನೆ ಮೂಡಬಹುದು. ಹಾಗಾದರೆ ಇಲ್ಲಿ ಹಾವು ಕಚ್ಚಿರುವ ಪ್ರಕರಣಗಳು ಸಾಕಷ್ಟು ಇರಬಹುದು ಅನಿಸಬಹುದು. ಆಶ್ಚರ್ಯವೆಂದರೆ ಈ ಊರಿನಲ್ಲಿ ಈ ವರೆಗೂ ಹಾವು ಕಚ್ಚಿರುವ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಈ ಊರಿನಲ್ಲಿ ಜನರು ಹಾವಿನ ಓಡಾಟಕ್ಕೆ ಅಡ್ಡಿ ಬರುವುದಿಲ್ಲ. ಹಾಗೆಯೇ ಹಾವುಗಳು ಜನರ ಜೀವನಶೈಲಿಗೆ ಅಡ್ಡಿಯನ್ನು ಉಂಟು ಮಾಡುವುದಿಲ್ಲ.