Search
  • Follow NativePlanet
Share
» »ಒಂದು ಆಹ್ಲಾದಕರ ಪ್ರಯಾಣ ಮುಂಬೈ ನಿಂದ ಮಾಲ್ಶೇಜ್ ಘಾಟ್ ಕಡೆಗೆ

ಒಂದು ಆಹ್ಲಾದಕರ ಪ್ರಯಾಣ ಮುಂಬೈ ನಿಂದ ಮಾಲ್ಶೇಜ್ ಘಾಟ್ ಕಡೆಗೆ

By Manjula Balaraj Tantry

ಪಶ್ಚಿಮ ಘಟ್ಟಗಳ ಎತ್ತರದ ಪರ್ವತ ಶ್ರೇಣಿಗಳಲ್ಲಿ ಇರುವ ಈ ಮಲ್ಶೇಜ್ ಘಾಟ್ಸ್ ಮುಂಬೈನಿಂದ ಕೇವಲ 130 ಕಿ.ಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಶ್ರೇಣಿಗಳಿಂದ ಆವೃತಗೊಂಡಿರುವುದಲ್ಲದೆ ಇದು ಪ್ರಕೃತಿ ಸೌಂದರ್ಯತೆಯ ಮಡಿಲಿಗೆ ನಿಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿಗೆ ಹೋಗುವ ಮಾರ್ಗಗಳಲ್ಲಿ ಥಾಣೆ, ಭಿವಂಡಿ, ಕಲ್ಯಾಣ್ ಮತ್ತು ಇನ್ನೂ ಹೆಚ್ಚಿನ ಸುಂದರವಾದ ಸ್ಥಳಗಳಿಗೆ ಭೇಟಿ ಮಾಡಿ.

ಕಾಂಕ್ರೀಟ್ ನಗರದಲ್ಲಿ ಜೀವನ ಮಾಡಿ ಅಸ್ತವ್ಯಸ್ತಗೊಂಡಿರುವ ನಮ್ಮ ಜೀವನಕ್ಕೆ ಕೆಲವೊಮ್ಮೆ ಒಂದು ವಿರಾಮ ಖಂಡಿತ ಬೇಕಾಗುತ್ತದೆ. ನಮ್ಮ ಸುತ್ತಮುತ್ತ ಪರ್ವತಗಳು ಮತ್ತು ಮರಗಳಿಂದ ತಾಜಾ ಗಾಳಿಯು ನಮ್ಮ ಉಸಿರಾಟಕ್ಕೆ ಮತ್ತು ನಮ್ಮ ದಿನ ನಿತ್ಯದ ಆಯಾಸ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಇಂತಹ ಒಂದು ಆಹ್ಲಾದಕರ ವಾತಾವರಣವನ್ನು ನೀಡುವ ಒಂದು ಜಾಗವಿದೆ ಅದುವೇ ಮುಂಬೈನಿಂದ 130 ಕಿ.ಮಿ ದೂರದಲ್ಲಿರುವ ಮಲ್ಶೇಜ್ ಘಾಟ್.

ಪಶ್ಚಿಮ ಘಟ್ಟಗಳ ಎತ್ತರದ ಪರ್ವತ ಶ್ರೇಣಿಗಳಲ್ಲಿ ಈ ಮಲ್ಶೇಜ್ ಘಾಟ್ಸ್ ಇದೆ. ಇದು ಕ್ವೈಲ್ಸ್, ಫ್ಲೆಮಿಂಗೋಗಳು, ಕುಕೂಸ್ ಗಳಂತಹ ಕೆಲವು ಅಪರೂಪದ ಪಕ್ಷಿಗಳಿಗೆ ನೆಲೆಯಾಗಿದೆ, ಇವುಗಳು ಆ ಪ್ರದೇಶದ ವೈವಿಧ್ಯಮಯ ಸಸ್ಯಗಳಿವೆ ಮತ್ತು ಕೆಲವು ಪ್ರಾಣಿಗಳು ಓಡಾಡುತ್ತಿರುತ್ತದೆ.

ಸುಂದರವಾದ ಭೂದೃಶ್ಯ ಮತ್ತು ಭೂಪ್ರದೇಶದೊಂದಿಗೆ, ಸಾಹಸ ಮಾಡುವವರಿಗೆ ಮಲ್ಶೇಜ್ ಘಾಟ್ ಒಂದು ಸ್ವರ್ಗವೇ ಸರಿ. ಆದುದರಿಂದ ಈ ಪ್ರದೇಶವು ಟ್ರಕ್ಕಿಂಗ್ ಮಾಡುವವರಿಗೆ ಮತ್ತು ಕ್ಯಾಂಪ್ ಪ್ರಿಯರಿಗೆ ಸೂಕ್ತವಾಗಿರುವುದರಿಂದ ಹೆಚ್ಚು ಬೇಡಿಕೆಯುಳ್ಳ ಸ್ಥಳವಾಗಿದೆ. ಇದಲ್ಲದೆ, ಇದು ಪುಣೆ, ಮುಂಬೈ ಮತ್ತು ಥಾಣೆಯ ವಿಶೇಷವಾಗಿ ಯುವಜನರಿಗೆ ಅನುಕೂಲಕರ ತಾಣವಾಗಿದೆ.

ಮಲ್ಶೇಜ್ ಘಾಟ್ ಗೆ ಭೇಟಿ ನೀಡಲು ಉತ್ತಮ ಸಮಯ

ಮಲ್ಶೇಜ್ ಘಾಟ್ ಗೆ ಭೇಟಿ ನೀಡಲು ಉತ್ತಮ ಸಮಯ

PC: Akshay N

ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನಲ್ಲಿ ಮಲ್ಶೇಜ್ ಘಾಟ್ ಸುತ್ತಲೂ ಇರುವ ಸ್ಥಳಗಳನ್ನು ಭೇಟಿ ಮಾಡಲು ಸೂಕ್ತವಾಗಿದೆ. ಏಕೆಂದರೆ ಈ ಸಮಯದಲ್ಲಿ ಹವಾಮಾನವು ತಂಪಾಗಿದ್ದು ಆಹ್ಲಾದಕರವಾಗಿರುತ್ತದೆ. ನೀವು ಇಲ್ಲಿಯ ಜಲಪಾತವು ಧುಮ್ಮಿಕ್ಕಿ ಹರಿಯುವುದನ್ನು ನೋಡಬೇಕೆಂದಲ್ಲಿ ಮುಂಗಾರು ಮಳೆಯ ಸಮಯದಲ್ಲಿ ಹೋಗುವುದು ಉತ್ತಮ.

ಮಲ್ಶೇಜ್ ಘಾಟ್ ಗೆ ಮುಂಬೈ ಯಿಂದ ಇರುವ ಮಾರ್ಗಗಳು.

ಮಲ್ಶೇಜ್ ಘಾಟ್ ಗೆ ಮುಂಬೈ ಯಿಂದ ಇರುವ ಮಾರ್ಗಗಳು.

ಮಾರ್ಗ 1: ಸಿ.ಎಸ್.ಟಿ ರಸ್ತೆಯಲ್ಲಿ ಆಗ್ನೇಯ - ಎ.ಎಚ್ ವಾಡಿಯಾ ಮಾರ್ಗ್ - ಬೆಂಗಳೂರು-ಮುಂಬೈ ಹೆದ್ದಾರಿ - ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ - ರಾ. ಹೆ -160 - ರಾ. ಹೆ 61 - ಮಲ್ಶೇಜ್ ಘಾಟ್ (127 ಕಿ - 3 ಗಂ)

ಮಾರ್ಗ 2 :ಚೆಡ್ಡಾ ನಗರ - ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ - ಮುಲುಂದ್ ಏರೋಲಿ ರಸ್ತೆ. ನಹೂರ್ ಈಸ್ಟ್ನಲ್ಲಿ - ಥಾಣೆ ಬೆಲಾಪುರ ರಸ್ತೆ. - ಶಿಲ್ ಫಾಟಾ-ಮಹಾಪೆ ರಸ್ತೆ. - ಥಾಣೆನಲ್ಲಿ ಶಿಲ್ ಫಾಟಾ - ಬಾರ್ವಿ ಡ್ಯಾಮ್ ರಸ್ತೆ. - ರಾ.ಹೆ 61 - ಮಲ್ಶೇಜ್ ಘಾಟ್ (134 ಕಿ.ಮೀ - 3 ಗ 15 ನಿಮಿಷ)

ಮಾರ್ಗ 3: ಚೆಡ್ಡ ನಗರ - ಜೀಜಾಬಾಯಿ ಭೋಸ್ಲೇ ಮಾರ್ಗ - ಬೆಂಗಳೂರು-ಮುಂಬೈ ಹೆದ್ದಾರಿ - ನವಾಡೆಯ ಎಂಐಡಿಸಿ ರಸ್ತೆ, ನವೀ ಮುಂಬಯಿ - ಖೋನಿ ತಾಲೋಜಾ ರಸ್ತೆ - ಪೈಪ್ಲೈನ್ ​​ರಸ್ತೆ - ಬರ್ವಿ ಅಣೆಕಟ್ಟು ರಸ್ತೆ - ರಾ.ಹೆ 61 - ಮಲ್ಶೇಜ್ ಘಾಟ್ (144 ಕಿಮೀ 3 ಗ 30 ನಿಮಿಷ)

ಮೂರರಲ್ಲಿ ಯಾವುದೇ ಮಾರ್ಗಗಳಲ್ಲಿ ಚಲಿಸಿದರೂ ಒಂದೇ ಸಮಯ ಹಿಡಿಸುತ್ತದೆ ಆದರೂ ಮಾರ್ಗ 1 ಅನ್ನು ಸೂಚಿಸುತ್ತೇವೆ ಯಾಕೆಂದರೆ ಈ ಮಾರ್ಗದಿಂದ ಕ್ರಮಿಸುವ ದೂರವು ಸ್ವಲ್ಪ ಕಡಿಮೆಯಾಗುವುದು.

ಥಾಣೆ

ಥಾಣೆ

PC: Verma a k

ಮಹಾನಗರ ನಗರ ಥಾಣೆ ಮುಂಬೈನಿಂದ 22 ಕಿ.ಮೀ ದೂರದಲ್ಲಿದೆ ಮತ್ತು ಇದು ಮಲ್ಶೇಜ್ ಘಾಟ್ ಗೆ ಹೋಗುವ ದಾರಿಯಲ್ಲಿದೆ. ಮಹಾರಾಷ್ಟ್ರದ ಅತೀ ದೊಡ್ಡ ಬೀಚ್ ಗಳಲ್ಲಿ ಒಂದಾದ ಕೆಲ್ವಾ ಬೀಚ್ ಥಾಣೆಯಲ್ಲಿದೆ.

ಇದಲ್ಲದೆ ಥಾಣೆಯಲ್ಲಿ ಅನೇಕ ಸರೋವರಳು ನಗರದ ತುಂಬಾ ಕಂಡುಬರುತ್ತದೆ. ಅದರಲ್ಲಿ ಉಪವನ ಸರೋವರವು ತುಂಬಾ ಪ್ರಸಿದ್ದವಾದುದಾಗಿದೆ. ವರ್ಧಮಾನ ಉದ್ಯಾನವನ, ಬಾಸೈನ್ ಕೋಟೆ ಮತ್ತು ಅಂಬರ್ ನಾಥ ದೇವಾಲಯ ಇತ್ಯಾದಿಗಳು ಥಾಣೆಯಲ್ಲಿ ಭೇಟಿ ನೀಡಬಹುದಾದ ಸ್ಥಳಗಳು.

ಭಿವಂಡಿ

ಭಿವಂಡಿ

PC: Yashboura303

ಥಾಣೆದಿಂದ 12 ಕಿ.ಮೀ ಮತ್ತು ಮುಖ್ಯ ಮಾರ್ಗದಿಂದ 5 ಕಿ.ಮೀ ದೂರದಲ್ಲಿ ಭಿವಂಡಿ ಕೈಗಾರಿಕಾ ನಗರವಿದೆ. ಈ ನಗರದಲ್ಲಿ ಅನೇಕ ಸರೋವರಗಳಿವೆ. ಅವುಗಳಲ್ಲಿ ಶೇರ್ಲಾರ್ ಸರೋವರ, ವರಳದೇವಿ ಸರೋವರ, ಮುಲ್ಗಿ ಸರೋವರ, ಪ್ರಮುಖವಾದುದು.

ಇಲ್ಲಿಯ ಸರೋವರಗಳಲ್ಲದೆ, ಇಲ್ಲಿರುವ ದೊಡ್ಡ ಕಾರ್ಖಾನೆಗಳು ನಗರಕ್ಕೆ ಪ್ರಸಿದ್ದಿಯನ್ನು ತಂದು ಕೊಟ್ಟಿವೆ. ಭಿವಂಡಿಯಲ್ಲಿರುವ ವಜ್ರೇಶ್ವರಿ ದೇವಾಲಯವು ಹೆಸರುವಾಸಿಯಾಗಿದೆ. ಇದು ಹಿಂದುಗಳ ಪ್ರಮುಖ ಯಾತ್ರಾಸ್ಥಳವು ಆಗಿದೆ. ದೇವಾಲಯದ ಹತ್ತಿರದಲ್ಲಿ ನೈಸರ್ಗಿಕ ಬಿಸಿ ನೀರಿನ ಕಾರಂಜಿಯಿದೆ. ಈ ನೀರು ವೈದ್ಯಕೀಯ ಗುಣ ಹೊಂದಿದ್ದು ಚರ್ಮ ರೋಗ ವಾಸಿ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಕಲ್ಯಾಣ್

ಕಲ್ಯಾಣ್

PC: Udaykumar PR

ಕಲ್ಯಾಣ್ ಎಂಬುದು ಮರಾಠಿ ಪದವಾಗಿದ್ದು ಇದರ ಅರ್ಥ "ಕಲ್ಯಾಣ" ಎಂಬುದಾಗಿದೆ. ಇದು ಭಿವಂಡಿಯಿಂದ 13 ಕಿ.ಮೀ ದೂರದಲ್ಲಿದೆ. ಇಲ್ಲಿರುವ ದುರ್ಗಾದಿ ಕೋಟೆ ಮತ್ತು ಕಾಲಾ ತಲಾವೊ ಸರೋವರವು ಮುಖ್ಯವಾದ ಪ್ರವಾಸಿ ಆಕರ್ಷಣೆಯಾಗಿದೆ.

ದುರ್ಗಾದಿ ಎಂಬ ಪದವು ಎರಡು ಮರಾಠಿ ಪದಗಳ ವಿಭಾಗವಾಗಿದ್ದು ದುರ್ಗಾ (ಹಿಂದೂ ದೇವತೆ) ಮತ್ತು ಗಾಡ್ (ಕೋಟೆ) ಎಂಬುದಾಗಿದೆ. ಇದನ್ನು ಶಿವಾಜಿ ಮಹಾರಾಜನು 1654 ರಲ್ಲಿ ರಾಜ ಆದಿಲ್ ಶಹಾ ನಿಂದ ಕಲ್ಯಾಣ್ ಮತ್ತು ಭಿವಂಡಿ ವಶಪಡಿಸಿಕೊಂಡ ನಂತರ ನಿರ್ಮಿಸಿದನು.

ಕಾಲಾ ತಾಲಾವೋ ಒಂದು ಸುಂದರವಾದ ಸರೋವರವಾಗಿದ್ದು ಇದು ಇಲ್ಲಿಯ ಇನ್ನೊಂದು ಪ್ರವಾಸಿ ತಾಣವಾಗಿದೆ. ಇಲ್ಲಿ ದೋಣಿವಿಹಾರವಿದೆ. ಈ ಕೊಳಗಳ ಸುತ್ತ ಜಾಗಿಂಗ್ ಮಾಡುತ್ತಾರೆ. ಇದು ನಗರಕ್ಕೆ ಹತ್ತಿರವಿರುವುದರಿಂದ ರಜಾದಿನಗಳನ್ನು ಕಳೆಯಲು ಇಲ್ಲಿಗೆ ವಾರಾಂತ್ಯದಲ್ಲಿ ಜನರು ಬರುತ್ತಾರೆ.

ಹಳ್ಳಿಯಲ್ಲಿರುವ ವಿಸ್ಟಾಗಳು

ಹಳ್ಳಿಯಲ್ಲಿರುವ ವಿಸ್ಟಾಗಳು

PC: pangalactic gargleblaster

ಕಲ್ಯಾಣ್ ಇಂದ ಮಲ್ಶೇಜ್ ಘಾಟ್ ಗೆ ಹೋಗುವ ಸುಮಾರು 84 ಕಿ.ಮೀ ಉದ್ದಕ್ಕೂ ಸಣ್ಣ ಸಣ್ಣ ಪ್ರಶಾಂತವಾದ ಮತ್ತು ಸುಂದರವಾದ ಪಟ್ಟಣಗಳು ​​ಮತ್ತು ಹಳ್ಳಿಗಳು ಕಾಣ ಸಿಗುತ್ತವೆ. ಇವುಗಳು ಹಸಿರಿನಿಂದ ಆವೃತ್ತಗೊಂಡಿದ್ದು ನೋಡಲು ನಯನ ಮನೋಹರವಾಗಿದೆ. ನೀವು ಅದೃಷ್ಟವಂತರಾಗಿದ್ದರೆ ಇಲ್ಲಿಯ ಕೆಲವು ಒಂಟಿ ಜಲಪಾತಗಳೂ ಕೂಡ ಕೆಲವೊಮ್ಮೆ ಕಾಣಸಿಗುತ್ತವೆ.

ರಯಾಟೆ ಬಾಪ್ಸಾಯಿ, ಮಾಮ್ನೊಲಿ, ಧನಿವಲಿ ಇಲ್ಲಿಯ ಕೆಲವು ಸುಂದರವಾದ ಹಳ್ಳಿಗಳು ಇವುಗಳು ರಾ.ಹೆ 61 ಮಾರ್ಗದಲ್ಲಿ ಕಾಣಸಿಗುತ್ತವೆ. ನಿಮ್ಮ ವಾಹನದಿಂದ ಕೆಳಗಿಳಿದು ಈ ಹಳ್ಳಿಗಳೊಂದಕ್ಕೆ ಭೇಟಿ ನೀಡಿ ಸ್ವಲ್ಪ ಸಮಯ ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು.

ಇದರ ನಂತರ ಬರುವುದೇ ಮಲ್ಶೇಜ್ ಘಾಟ್! ಇಲ್ಲಿ ಕೆಲವು ಮಾಡಬಹುದಾದಂತಹ ಮತ್ತು ನೋಡಬಹುದಾದಂತಹ ವಿಷಯಗಳಿವೆ.

ಹರಿಶ್ಚಂದ್ರಗಡ್ ಕೋಟೆ ಯಲ್ಲಿ ಟ್ರಕ್ಕಿಂಗ್

ಹರಿಶ್ಚಂದ್ರಗಡ್ ಕೋಟೆ ಯಲ್ಲಿ ಟ್ರಕ್ಕಿಂಗ್

PC: Tokendra

ಮಾಲ್ಶೇಜ್ ಘಾಟ್ ಗುಡ್ಡದ ಮೇಲಿರುವ ಈ ಕೋಟೆ ಯು 4670 ಅಡಿ ಎತ್ತರದಲ್ಲಿದೆ. ಈ ಕೋಟೆಯು ಕ್ರಿ.ಪೂ 6 ನೇ ಶತಮಾನದಷ್ಟು ಹಿಂದಿನದಾಗಿದೆ ಮತ್ತು ಇದು ಮಾಲ್ಷೇಜ್ ಘಾಟಿನಲ್ಲಿ ಜನಪ್ರಿಯ ಟ್ರೆಕ್ಕಿಂಗ್ ಜಾಗವಾಗಿದೆ. ಇದರ ಆಸುಪಾಸಿನಲ್ಲಿ ವಿಷ್ಣು ಮತ್ತು ಗಣೇಶ ದೇವರನ್ನು ಪೂಜಿಸಲ್ಪಡುವ ಅನೇಕ ದೇವಾಲಯಗಳನ್ನು ಕಾಣಬಹುದಾಗಿದೆ.

ತಾರಾಮತಿ ಪರ್ವತ ಶ್ರೇಣಿಯು ಅತ್ಯಂತ ಎತ್ತರವಾದುದಾಗಿದೆ. ಇಲ್ಲಿ ಹಸಿರಿನಿಂದ ಕೂಡಿದ ಪರಿಸರವು ನಯನ ಮನೋಹರವಾಗಿದ್ದು ಈ ಜಾಗವನ್ನು ಇನ್ನೂ ಅತ್ಯುತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಪಿಂಪಾಲ್ಗಾನ್ ಜೋಗಾ ಡಾಮ್ ನ ಪಕ್ಷಿಗಳು

ಪಿಂಪಾಲ್ಗಾನ್ ಜೋಗಾ ಡಾಮ್ ನ ಪಕ್ಷಿಗಳು

PC: I For Detail

ನೀವು ಪಕ್ಷಿ ವೀಕ್ಷಣೆಯ ಆನಂದ ಪಡೆಯಬೇಕಾದರೆ ನಿಮ್ಮ ಜೊತೆ ಬೈನಾಕ್ಯೂಲರ್ ನ್ನು ಒಯ್ಯಲು ಮರೆಯದಿರಿ. ಪಿಂಪಾಲ್ಗಾನ್ ಅಣೆಕಟ್ಟು ಪುಶ್ಪಾವತಿ ನದಿಗೆ ಅಡ್ಡಲಾಗಿ ಕಟ್ಟಿರುವುದರಿಂದ ಇದು ಅನೇಕ ವಿಧದ ಪಕ್ಷಿಗಳ ವಾಸ ಸ್ಥಾನವಾಗಿದೆ.

ಬೆಟ್ಟಗಳ ಹಿನ್ನೆಲೆಯಿರುವ ಹಿಂಬಾಗದಲ್ಲಿ ನಿಮಗೆ ಅನೇಕ ರೀತಿಯ ಪಕ್ಷಿಗಳು ಕಾಣ ಸಿಗುತ್ತವೆ. ವಿಸ್ಲಿಂಗ್ ಥ್ರಷ್, ಕ್ವೈಲ್, ಪೈಡ್ ಕ್ರಸ್ಟ್ಡ್ ಕುಕ್ಕೊ, ಪಿಂಕ್ ಫ್ಲೆಮಿಂಗೊ, ಮುಂತಾದುವುಗಳನ್ನು ಹೆಸರಿಸಬಹುದು. ಈ ಅಣೆಕಟ್ಟು 5 ಕಿ.ಮೀ ಉದ್ದವಿದ್ದು ಮಲ್ಶಾಜೆ ಘಾಟ್ ನ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದೆ.

ಜಲಪಾತಗಳು ಮತ್ತು ಇತರ ಕೋಟೆಗಳು

ಜಲಪಾತಗಳು ಮತ್ತು ಇತರ ಕೋಟೆಗಳು

PC: Aditya Patawari

ಮಲ್ಶೇಜ್ ಘಾಟ್ ಕಲ್ಲಿನ ಭೂಪ್ರದೇಶದ ಮೂಲಕ ಹಾದುಹೋಗುವ ಜಲಪಾತವನ್ನು ಹೊಂದಿದೆ, ಹೀಗೆ ಹಾದುಹೋಗುವಾಗ ಹಲವಾರು ಸಣ್ಣ ಜಲಪಾತಗಳು ರೂಪುಗೊಂಡಿದೆ. ಇದು ಮುಂಗಾರು ಮಳೆಯ ಸಮಯದಲ್ಲಿ ಕಾಣಸಿಗುತ್ತದೆ. ಹರಿಶ್ಚಂದ್ರ ಕೋಟೆಯಲ್ಲದೆ ಅಜೋಬಾ ಪರ್ವತದಲ್ಲಿರುವ ಕೋಟೆಯು ಟ್ರಕ್ಕಿಂಗ್ ಮಾಡಲು ಅನುಕೂಲವಾದ ಇನ್ನೊಂದು ಸ್ಥಳವಾಗಿದೆ.

ಇಲ್ಲಿ ಟ್ರಕ್ಕಿಂಗ್ ಮತ್ತು ಬಂಡೆ ಹತ್ತುವುದು ಮುಂತಾದುವುಗಳನ್ನು ಮಾಡುತ್ತಾರೆ. ಮಲ್ಶೇಜ್ ಘಾಟ್ ಪರ್ವತದ ಹಾದಿಯಾಗಿರುವುದರಿಂದ ಈ ಪ್ರದೇಶದ ಸುತ್ತಲೂ ಟ್ರೆಕ್ಕಿಂಗ್ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X