Search
  • Follow NativePlanet
Share
» »ಮದುವೆ ಮಾಡೋದಾ ಬೇಡ್ವಾ ಅಂತಾ ಗಣೇಶನಿಗೆ ಚೀಟಿ ಹಾಕಿ ಕೇಳ್ತಾರಂತೆ!

ಮದುವೆ ಮಾಡೋದಾ ಬೇಡ್ವಾ ಅಂತಾ ಗಣೇಶನಿಗೆ ಚೀಟಿ ಹಾಕಿ ಕೇಳ್ತಾರಂತೆ!

ಗಣೇಶನನ್ನು ವಿಘ್ನನಿವಾರಕ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅನೇಕ ಗಣೇಶನ ದೇವಾಲಯಗಳಿವೆ. ಅವುಗಳಲ್ಲಿ ಇಡಗುಂಜಿ ಗಣಪತಿಯೂ ಬಹಳ ಪ್ರಸಿದ್ಧವಾದ ಪುರಾತನ ಗಣೇಶನ ದೇವಾಲಯವಾಗಿದೆ. ಈ ವಿಗ್ರಹವು ಎರಡು ಸಾವಿರ ವರ್ಷ ಪುರಾತನವಾದದ್ದು ಮತ್ತು ಇದಕ್ಕೆ ಎರಡು ದಂತಗಳಿವೆ.

ನಿಮ್ಮ ಮದುವೆ ಎಲ್ಲರಿಗಿಂತಲೂ ಡಿಫರೆಂಡ್ ಆಗಿ ಆಗಬೇಕಾ...ಹಾಗಾದ್ರೆ ಇಲ್ಲಿದೆ ಬೆಸ್ಟ್ ಐಡಿಯಾ.ನಿಮ್ಮ ಮದುವೆ ಎಲ್ಲರಿಗಿಂತಲೂ ಡಿಫರೆಂಡ್ ಆಗಿ ಆಗಬೇಕಾ...ಹಾಗಾದ್ರೆ ಇಲ್ಲಿದೆ ಬೆಸ್ಟ್ ಐಡಿಯಾ.

ಎಲ್ಲಿದೆ ಈ ದೇವಸ್ಥಾನ ?

ಎಲ್ಲಿದೆ ಈ ದೇವಸ್ಥಾನ ?

PC: Brunda Nagaraj

ಹೊನ್ನಾವರ ತಾಲೂಕಿನಿಂದ ಕೇವಲ 14 ಕಿ.ಮೀ ಅಂತರದಲ್ಲಿ ಶರಾವತಿ ನದಿಯ ತಟದಲ್ಲಿ ಈ ಗಣೇಶನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಈ ದೇವಾಲಯದ ಎರಡು ಹಸ್ತದ ಆರಾಧ್ಯ ದೈವ ಗಣಪತಿಯು ಒಂದು ಕೈಯಲ್ಲಿ ಪದ್ಮ (ಕಮಲ) ಮತ್ತು ಇನ್ನೊಂದರಲ್ಲಿ ಮೋದಕ ವನ್ನು ಹೊಂದಿದೆ.

ಎರಡು ದಂತಗಳಿರುವ ಗಣೇಶ

ಎರಡು ದಂತಗಳಿರುವ ಗಣೇಶ

PC: Brunda Nagaraj
ಈ ವಿಗ್ರಹವು ಎರಡು ಸಾವಿರ ವರ್ಷ ಪುರಾತನವಾದದ್ದು. ಸಾಮಾನ್ಯವಾಗಿ ಗಣೇಶನಿಗೆ ಒಂದು ದಂತವಿರುತ್ತದೆ ಹಾಗಾಗಿ ಆತನನ್ನು ಏಕದಂತ ಎಂದು ಕರೆಯುತ್ತಾರೆ. ಆದರೆ ಇಡಗುಂಜಿಯ ಗಣೇಶನಿಗೆ ಎರಡು ದಂತಗಳಿವೆ. ಇಲ್ಲಿ ಬರುವ ಸಾವಿರಾರು ಆರಾಧಕರ ಇಚ್ಛೆಗಳು ಸತತವಾಗಿ ನಿಜವಾಗುತ್ತಾ ಬಂದಿದೆ ಎನ್ನುವುದು ಸತ್ಯ.

ಗೋಕರ್ಣ ಗಣಪತಿ ಪ್ರತಿಮೆಗೆ ಹೋಲಿಕೆ

ಗೋಕರ್ಣ ಗಣಪತಿ ಪ್ರತಿಮೆಗೆ ಹೋಲಿಕೆ

PC: Brunda Nagaraj
ಇಡಗುಂಜಿಯ ಗಣಪತಿ ಪ್ರತಿಮೆಯು ಗೋಕರ್ಣದಲ್ಲಿನ ಗಣಪತಿ ಪ್ರತಿಮೆಗೆ ಸ್ಪಷ್ಟ ಹೋಲಿಕೆಯನ್ನು ಹೊಂದಿದೆ. ಇಲ್ಲಿನ ಗಣೇಶನ ದೇವಸ್ಥಾನವನ್ನು ವೀಕ್ಷಿಸಲು ವಾರ್ಷಿಕ ಆಧಾರದ ಮೇಲೆ 1 ದಶಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ. ಜನಪ್ರಿಯ ಜಾನಪದದ ಪ್ರಕಾರ, ಗಣಪತಿಯು ಇದು ಕುಂಜಾರಣ್ಯ ಎಂದು ಕರೆಯಲ್ಪಡುತ್ತಿದ್ದಾಗ ಇಲ್ಲಿ ವಾಸವಾಗಿದ್ದನೆಂಬುದು ನಂಬಿಕೆ.

ಪೌರಾಣಿಕ ಹಿನ್ನೆಲೆ

ಪೌರಾಣಿಕ ಹಿನ್ನೆಲೆ

PC: Brunda Nagaraj
ಕಲಿಯುಗದ ಆರಂಭದಲ್ಲಿ ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ ಬಂದರು. ಸಾಧು ಸಂತರಿಗೆ ಅವರ ಯಜ್ಞ ಯಾಗಕ್ಕೆ ಸಹಾಯವಾಗಲೆಂದು ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು ಹೊಂಡಗಳನ್ನು ನಿರ್ಮಿಸಿದ್ದರು. ಕೆಲ ಕಾಲದ ನಂತರ ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡರು. ಆಗ ನಾರದರು ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು ಭೂಲೋಕಕ್ಕೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಗಣೇಶನನ್ನು ಕರೆತಂದು ಮುನಿಗಳ ಮುಖಾಂತರ ಈ ಕ್ಷೇತ್ರದಲ್ಲಿ ನಂತರ ಗಣೇಶನ ಆಶೀರ್ವಾದದಿಂದ ವಾಲಖೀಲ್ಯ ಮುನಿಗಳು ಇಲ್ಲಿ ತಪ್ಪಸ್ಸಾಚರಿಸಿ ಸಿದ್ಧಿ ಪಡೆದುಕೊಂಡರು ಎನ್ನುತ್ತದೆ ಪುರಾಣ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Happyshopper

ರಸ್ತೆ ಮಾರ್ಗ: ಭಟ್ಕಳ ಮತ್ತು ಹೊನ್ನಾವರ ದಿಂದ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ 32 ಕಿ.ಮೀ ಹಾಗೂ ಹೊನ್ನಾವರದಿಂದ 15 ಕಿ.ಮೀ ದೂರ.
ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ (ಕೊಂಕಣ ರೈಲ್ವೆ ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ ).
ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

Read more about: temple ganesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X