Search
  • Follow NativePlanet
Share
» »ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

By Vijay

ನಿಜಕ್ಕೂ ಈ ಸ್ಮಾರಕ ಶಿಲಾ ಬಂಡೆಯು ಸಮುದ್ರದಲ್ಲಿ ಗಂಭೀರವಾಗಿ ಹಾಗೂ ಅಷ್ಟೆ ಆಕರ್ಷಕವಾಗಿ ನಿಂತಿರುವುದನ್ನು ನೋಡಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ. ಭಾರತದ ಯುವ ಶಕ್ತಿಯ ನೇತಾರ ಹಾಗೂ ಯುವ ಸಂತರಾದ ಸ್ವಾಮಿ ವಿವೇಕಾನಂದರಿಗೆ ಮುಡಿಪಾದ ಈ ಸ್ಮಾರಕ ಒಂದು ಪ್ರೇಕ್ಷಣೀಯ ಸ್ಥಳವೂ ಹೌದು.

ಭಾರತದ ಹೆಮ್ಮೆಯ ಸ್ಮಾರಕಗಳು

ಸಮುದ್ರದಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ಬೃಹತ್ ಶಿಲಾ ಬಂಡೆಯೊಂದರ ಮೇಲೆ ಆಕರ್ಷಕವಾಗಿ ನಿರ್ಮಿಸಲಾಗಿರುವ ಈ ಶಿಲಾ ಸ್ಮಾರಕವು ಇರುವುದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ. ಅದರಲ್ಲೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಕನ್ಯಾಕುಮಾರಿಯ ವಾವತುರೈ ಎಂಬ ಗ್ರಾಮದ ಕಡಲ ತೀರದಲ್ಲಿ ಈ ಸ್ಮಾರಕವನ್ನು ಕಾಣಬಹುದು.

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ಚಿತ್ರಕೃಪೆ: Bhawani Gautam

ವಾವತುರೈನ ಕಡಲ ತೀರದಿಂದ ಪೂರ್ವಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಎರಡು ಬಂಡೆಗಳ ಪೈಕಿ ಒಂದರ ಮೇಲೆ ನಿರ್ಮಿಸಲಾಗಿರುವ ಈ ಸ್ಮಾರಕವು ಭಾರತದ ದಕ್ಷಿಣದ ತುತ್ತತುದಿಯನ್ನು ಪ್ರತಿನಿಧಿಸುತ್ತದೆ. 1970 ರಲ್ಲಿ ಈ ಬಂಡೆ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಈ ಬಂಡೆಯ ಮೇಲೆಯೆ ಸ್ವಾಮಿ ವಿವೇಕಾನಂದರು ಜ್ಞಾನೋದಯ ಹೊಂದಿದರು ಎಂದು ನಂಬಲಾಗಿದೆ.

ಸ್ಥಳೀಯವಾಗಿ ಈ ಒಂದು ಬಂಡೆಯ ಮೇಲೆಯೆ ಕನ್ಯಾಕುಮಾರಿಯ ಕುಮಾರಿಯು ಅತಿ ಕಠಿಣವಾದ ತಪಸ್ಸನ್ನಾಚರಿಸಿದ್ದಳೆನ್ನಲಾಗುತ್ತದೆ. ಹೀಗಾಗಿ ಈ ಬಂಡೆ ಸ್ಮಾರಕವು ಕೇವಲ ಸುಂದರ ಪ್ರವಾಸಿ ಆಕರ್ಷಣೆಯಾಗಿರದೆ ಧಾರ್ಮಿಕ ಮಹತ್ವ ಪಡೆದಿರುವ ಸ್ಮಾರಕವಾಗಿಯೂ, ಕೇಂದ್ರವಾಗಿಯೂ ಗಮನ ಸೆಳೆದಿದೆ.

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ಚಿತ್ರಕೃಪೆ: Nikhil B

ಬಂಡೆಯ ಮೇಲೆ ನಿರ್ಮಿಸಲಾಗಿರುವ ಸ್ಮಾರಕವು ಧ್ಯಾನ ಕೇಂದ್ರವನ್ನೂ ಸಹ ಹೊಂದಿದ್ದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಇಷ್ಟವಿದ್ದಲ್ಲಿ ಇಲ್ಲಿ ಕೆಲ ಹೊತ್ತು ಧ್ಯಾನವನ್ನೂ ಸಹ ಮಾಡಬಹುದು. ಸ್ಮಾರಕವನ್ನು ಅದ್ಭುತವಾದ ಭಾರತದೆಲ್ಲೆಡೆ ಕಂಡುಬರುವ ವಿವಿಧ ರೀತಿಯ ವಾಸ್ತುಶೈಲಿಗಳನ್ನು ಬಳಸಿ ನಿರ್ಮಿಸಲಾಗಿದೆ. ವಿವೇಕಾನಂದರ ಪ್ರತಿಮೆಯನ್ನೂ ಇಲ್ಲಿ ಕಾಣಬಹುದು.

ಈ ಸ್ಮಾರಕವು ಮುಖ್ಯವಾಗಿ ಎರಡು ರಚನೆಗಳನ್ನು ಹೊಂದಿದೆ. ಒಂದು ವಿವೇಕಾನಂದ ಮಂಟಪವಾದರೆ ಇನ್ನೊಂದು ಶ್ರೀಪಾದ ಮಂಟಪಂ. ಇದಕ್ಕೂ ಮೊದಲು ಈ ಸ್ಮಾರಕ ನಿರ್ಮಾಣದ ಕಥೆಯೆ ಅತಿ ರೋಚಕವಾಗಿದೆ. 1962 ಜನವರಿ ಸಂದರ್ಭದಲ್ಲಿ ವಿವೇಕಾನಂದ ಭಕ್ತರ ಗುಂಪೊಂದು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕನ್ಯಾಕುಮಾರಿ ಸಮೀತಿ ರಚಿಸಿ ಬಂಡೆಯ ಮೇಲೆ ಸ್ಮಾರಕ ರಚಿಸಲು ಯೋಜಿಸಿದರು.

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ಚಿತ್ರಕೃಪೆ: Nomad Tales

ಆದರೆ ಈ ಸಂಗತಿಯು ಅಲ್ಲಿದ್ದ ಕ್ರೈಸ್ತ ಸಮುದಾಯದವರಿಗೆ ರುಚಿಸಲಿಲ್ಲ. ಅವರು ಅದು ಸಂತ ಕ್ಸೇವಿಯರನ ಬಂಡೆ ಎಂದು ತಿರುಗಿ ಬಿದ್ದು ಆ ಬಂಡೆಯ ಮೇಲೆ ತೀರದಿಂದ ಸ್ಪಷ್ಟವಾಗಿ ಕಾಣುವಂತೆ ಶಿಲುಭೆಯನ್ನು ನೆಟ್ಟುಬಿಟ್ಟರು. ನಂತರ ಈ ಸ್ಥಳದ ಕುರಿತು ವಿವಾದವೆದ್ದು ಈ ಸ್ಥಳವು ನಿಷೇಧಿಸಲ್ಪಟ್ಟಿತು.

ನಂತರ ಸಮಯ ಕಳೆದಂತೆ ಇದು ವಿವೆಕಾನಂದರ ಬಂಡೆ ಎಂಬ ಕೂಗು ಪ್ರಬಲವಾಗೆದ್ದು ಕೇವಲ ಒಂದು ಚಿಕ್ಕ ಸ್ಮಾರಕವಷ್ಟನ್ನೆ ನಿರ್ಮಿಸಬೇಕೆಂತಾದರೂ, ಏಕನಾಥ ರಾನಡೆ ಎಂಬುವವರು ಹಗಲಿರುಳು ಪಟ್ಟ ಶ್ರಮದಿಂದ ಕಾಲ ಉರುಳಿದಂತೆ ಇಲ್ಲಿ ವಿವೇಕಾನಂದರ ಸ್ಮಾರಕದ ಸ್ಥಾಪನೆಗೆ ಒಪ್ಪಿಗೆ ಸಿಕ್ಕು ಕೊನೆಯದಾಗಿ 1970 ರಲ್ಲಿ ಸ್ಮಾರಕ ರಚನೆಯಾಗಿ ಲೋಕಾರ್ಪಣೆಗೊಂಡಿತು.

ಕನ್ಯಾಕುಮಾರಿಗೆ ತಲುಪುವ ಬಗೆ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more