• Follow NativePlanet
Share
» »ಕುಂತಿ ಬೆಟ್ಟದ ರಾತ್ರಿ ಟ್ರೆಕ್ಕಿಂಗ್ ಮರೆಯಲಾಗದ ಅನುಭಗಳು

ಕುಂತಿ ಬೆಟ್ಟದ ರಾತ್ರಿ ಟ್ರೆಕ್ಕಿಂಗ್ ಮರೆಯಲಾಗದ ಅನುಭಗಳು

Posted By: Manjula Balaraj Tantry

ಕಡುಬೇಸಿಗೆಯಿಂದ ತಪ್ಪಿಸಿಕೊಳ್ಳಲು ತಂಪಾದ ಸ್ಥಳದಕ್ಕೆ ಹೋಗಲು ಬಯಸುತ್ತಿದ್ದೆ. ಅದೇ ಸಮಯದಲ್ಲಿ, ಉತ್ತರಾಖಂಡದ ಹೂವುಗಳ ಕಣಿವೆಗೆ ಅದ್ಭುತವಾದ ಚಾರಣಮಾಡಿ ಸ್ವಲ್ಪ ಸಮಯವಾಗಿತ್ತು. ಒಂದು ರಾತ್ರಿ ಟ್ರೆಕ್ ಮಾಡಬೇಕೆಂದು ನನ್ನ ಮನಸ್ಸಿನಲ್ಲಿತ್ತು ಮತ್ತು ಅದನ್ನು ಕಾರ್ಯಗತಗೊಳಿಸಲು ಸಮಯ ಬಂದಿದೆ ಎಂದು ಅಂದುಕೊಂಡೆ.

ಬೇಸಿಗೆಯಲ್ಲಿ ಹೊಸ ಆವಿಷ್ಕಾರ ಮಾಡಲು ಮನಸ್ಸಿರಲಿಲ್ಲ. ಒಂದೆರಡು ಸ್ನೇಹಿತರನ್ನು ಮತ್ತು ಹತ್ತಿರದ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶ ಇದ್ದಿದ್ದರಿಂದ ಕುಂತಿ ಬೆಟ್ಟಕ್ಕೆ ಹೋಗಲು ನಿರ್ಧರಿಸಿದೆ. ಕುಂತಿ ಬೆಟ್ಟಕ್ಕೆ ಹೋಗಲು ಕಾರಣವೇನಂದರೆ, ಎ. ನನಗೆ ರಾತ್ರಿ ಚಾರಣ ಮೊದಲ ಅನುಭವ, ಬಿ - ಬೆಂಗಳೂರಿಗೆ ಸಾಧ್ಯವಾದಷ್ಟು ಹತ್ತಿರದ ಪ್ರದೇಶವಾಗಿರಬೇಕು, ಈ ಎರಡೂ ನನ್ನ ಬೇಡಿಕೆಗಳು ಕುಂತಿ ಬೆಟ್ಟ ಆಯ್ಕೆಮಾಡಲು ಕಾರಣ. ಈ ಬಗ್ಗೆ ಮತ್ತೆ ಆಲೋಚಿಸದೆ ಚಾರಣಕ್ಕೆ ಹೋಗಲು ನೊಂದಾಯಿಸಿಕೊಂಡೆ.

How to get to Kundi Hill

PC: Aditya Patawari

ಬೆಂಗಳೂರಿನಿಂದ 130 ಕಿ.ಮೀ ದೂರದಲ್ಲಿರುವ ಅವಳಿ ಬೆಟ್ಟ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿದೆ. ಕಡಿದಾದ ಬಂಡೆಗಳಿಂದ ಕೂಡಿರುವ ಈ ಬೆಟ್ಟವು ಸಮುದ್ರ ಮಟ್ಟದಿಂದ 2882 ಮೀಟರ್ ಎತ್ತರದಲ್ಲಿದೆ. ಪಾಂಡವಪುರ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಐದು ಪಾಂಡವ ಸಹೋದರರು ಮತ್ತು ಅವರ ತಾಯಿ ಕುಂತಿ ಗಡೀಪಾರಾದಾಗ ಇಲ್ಲಿ ನೆಲೆಸಿದ್ದರು.

ಕುಂತಿ ಮತ್ತು ಪಾಂಡವರು ಬೆಟ್ಟದ ಬಗ್ಗೆ ವಿಶೇಷ ಉತ್ಸಾಹವನ್ನು ಬೆಳೆಸಿಕೊಂಡಿದ್ದರು ಹಾಗಾಗಿ, ಬೆಟ್ಟಗಳಿಗೆ ಕುಂತಿ ಹೆಸರನ್ನು ಇಡಲಾಗಿದೆ ಜೊತೆಗೆ ಪಾಂಡವರ ಹೆಸರನ್ನೂ ಇಡಲಾಗಿದೆ ಎಂದು ಹೇಳಲಾಗುತ್ತದೆ. ಬೆಟ್ಟದ ತುದಿಯಲ್ಲಿ ದೇವಸ್ಥಾನವೊಂದಿದ್ದು ಇದೊಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.

ಕುಂತಿಬೆಟ್ಟಕ್ಕೆ ಹೋಗುವುದು ಹೇಗೆ

ಚಾರಣ ಆಯೋಜಕರು ಶನಿವಾರ ರಾತ್ರಿ ಒಂಬತ್ತು ಗಂಟೆಗೆ ಎಂ ಜಿ ರಸ್ತೆಯಿಂದ ಬಸ್ ವ್ಯವಸ್ಥೆ ಮಾಡಿದ್ದರು. ಬೆಂಗಳೂರಿನಿಂದ ಕುಂತಿಬೆಟ್ಟಕ್ಕೆ 130 ಕಿ.ಮೀ ದೂರವಿದ್ದು, ಇದನ್ನು ನಾಲ್ಕು ಗಂಟೆಯ ಅವಧಿಯಲ್ಲಿ ತಲುಪಿದೆವು. ತಡರಾತ್ರಿಯಲ್ಲಿ ನಡೆಯಬೇಕಾಗಿರುವುದರಿಂದ, ಚೈತನ್ಯದಿಂದಿರಲು ಶಕ್ತಿದಾಯಕ ಪಾನೀಯಗಳನ್ನು ತೆಗೆದುಕೊಂಡು ಹೋಗಿದ್ದೆ.

ನನ್ನ ಚಾರಣ ರೆಕಾರ್ಡ್ ಆಗಲೆಂದು ಜಿಪಿಎಸ್ ಆನ್ ಮಾಡಿದ್ದೆ. ಎಸ್.ಹೆಚ್ -17ರ ಮೂಲಕ ವಯಾ ಬೆಂಗಳೂರು - ಬಿಡದಿ - ರಾಮನಗರ - ಮಂಡ್ಯ - ಪಾಂಡವಪುರ- ಕುಂತಿ ಬೆಟ್ಟ ಮಾರ್ಗ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮಧ್ಯರಾತ್ರಿ ಒಂದು ಗಂಟೆಗೆ ಬಸ್ಸಿನಿಂದ ಇಳಿಸಲಾಯಿತು, ಅಲ್ಲಿ ಚಾರಣದ ಬಗ್ಗೆ ವಿವರಿಸಲಾಯಿತು, ನನ್ನ ಜೊತೆ ಬಂದಿದ್ದ ಇತರ ಚಾರಣಿಗರ ಜೊತೆ ನಾನೂ ಹೋಗಿ, ಸ್ವಲ್ಪ ತಿಳಿದುಕೊಂಡೆ.

ಚಾರಣಕ್ಕೆ ಹೋಗಲು ಏನೇನು ಇರಬೇಕು

ಉತ್ತಮ ಬೆನ್ನಿನ ಸಹಾಯ ಮತ್ತು ಭುಜದ ಬೆಂಬಲಕ್ಕಾಗಿ ಗಟ್ಟಿಮುಟ್ಟಾದ ಬೆನ್ನುಹೊರೆಯನ್ನು ಒಯ್ಯಿರಿ. ಹೆಚ್ಚುವರಿ ಬಟ್ಟೆ, ಒಂದು ಬೆಳಕಿನ ಜಾಕೆಟ್, ಪ್ಯಾಕ್ ಮಾಡಲಾದ ಆಹಾರ, ನೀರಿನ ಬಾಟಲ್, ಮೂಲ / ವೈಯಕ್ತಿಕ ಔಷಧಿಗಳು ಮತ್ತು ಟಾಯ್ಲೆಟ್ ಕಿಟ್ ಗಳು, ಮಲಗುವ ಚೀಲ ಮತ್ತು ಟಾರ್ಚ್ ಅನ್ನು ಪ್ಯಾಕ್ ಮಾಡಿ.

ಭೇಟಿ ನೀಡಲು ಸೂಕ್ತ ಸಮಯ

How to get to Kundi Hill

PC: Aditya Patawari

ಬೆಂಗಳೂರಿಗೆ ಸಮೀಪದ ಚಾರಣ ಪ್ರದೇಶಗಳು

ಮಾರ್ಚ್ ತಿಂಗಳಲ್ಲಿ ಕುಂತಿಬೆಟ್ಟಕ್ಕೆ ಭೇಟಿ ನೀಡಿದ್ದೆ. ಆದರೂ, ಚಳಿಗಾಲದ ಸಮಯವಾದ ಸೆಪ್ಟಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಮಳೆಗಾಲದ ಸಮಯದಲ್ಲಿ ಬೆಟ್ಟಗಳು ಜಾರುವುದರಿಂದ ಈ ಸಮಯದಲ್ಲಿ ಚಾರಣ ಸೂಕ್ತವಲ್ಲ. ಬೇಸಿಗೆಕಾಲದಲ್ಲೂ ಕುಂತಿಬೆಟ್ಟಕ್ಕೆ ಹೋಗುವುದು ಸೂಕ್ತವಲ್ಲ, ರಾತ್ರಿ ವೇಳೆ ಬೆಟ್ಟಹತ್ತುವಂತಿದ್ದರೆ ಹೋಗಬಹುದು. ಬೇಸಿಗೆಕಾಲ ಮತ್ತು ಎಲ್ಲಾ ಕಾಲದ ರಾತ್ರಿಯ ಹೊತ್ತು ಇಲ್ಲಿ ಉಲ್ಲಾಸಕರ ವಾತಾವರಣವಿರುತ್ತದೆ.

ರಾತ್ರಿ ಟ್ರೆಕ್ಕಿಂಗ್

ಚಂದ್ರನಿಗೆ ವ್ಯಾಕ್ಸ್ ಹಚ್ಚಿದಂತೆ ಅತ್ಯಂತ ಪ್ರಕಾಶಮಾನವಾದ ರಾತ್ರಿಯಾಗಿತ್ತು, ಟ್ರೆಕ್ಕಿಂಗ್ ಉಸ್ತುವಾರಿಯ ಆದೇಶದಂತೆ ಜೊತೆಗೆ ಟಾರ್ಚ್ ಬೆಳಕಿನ ಜೊತೆಗೆ ಚಾರಣ ಸಾಗಿತು. ಚಾರಣದ ಮೊದಲ ಹಂತ ಯಾವುದೇ ಅಡ್ಡಿಆತಂಕಗಳಿಲ್ಲದೇ ಕಳೆಯಿತು.

ಭೂಪ್ರದೇಶದ ಬದಲಾಗಿದೆ ಮತ್ತು ನಾವು ಕ್ರಮೇಣ ಬೆಟ್ಟ ಹತ್ತಲಾರಂಭಿಸಿದೆವು. ರಾತ್ರಿ ಬೆಳಕು ಸಾಲದೇ ಇದಿದ್ದರಿಂದ, ಚಾರಣದ ಎಲ್ಲಾ ಪ್ರದೇಶವು ಭಯಂಕರ ಬಂಡೆಕಲ್ಲಿನಿಂದ ಆವೃತವಾದಂತೆ ಕಾಣಿಸುತ್ತಿತ್ತು. ಚಾರಣದ ಒಂದು ಸ್ಥಳದಲ್ಲಂತೂ, ತೀವ್ರ ಆಯಕಟ್ಟಿನ ಜಾಗದಂತೆ ಕಂಡು, ಭಾರೀ ಬಂಡೆಯನ್ನು ಕ್ರಮಿಸಬೇಕಾಯಿತು. ಈ ಚಾರಣದ ವೇಳೆ ನಮ್ಮ ಬೆನ್ನಿಗೆ ಹಾಕಿದ್ದ ಬ್ಯಾಗ್ ಗಳನ್ನು ಮೇಲೆ ಹಾಕಿ ಹತ್ತವಂತಹ ಪರಿಸ್ಥಿತಿಯಿತ್ತು.

How to get to Kundi Hill

PC: Aditya Patawari

ಬೆಂಗಳೂರಿಗೆ ಸಮೀಪದ ಟ್ರೆಕ್ಕಿಂಗ್ ಸ್ಥಳಗಳು

ಕೆಲವೊಂದು ಮಾರ್ಗಗಳನ್ನು ಹೊರತು ಪಡಿಸಿ ಚಾರಣ ಸುಂದರ ಮತ್ತು ಸರಳವಾಗಿತ್ತು, ಜೊತೆಗೆ ದಾರಿಯೂ ಸುಗಮವಾಗಿತ್ತು. ನಾನಂತೂ ವಿಶೇಷ ಜಾಗೃತೆಯಿಂದ ನಡೆದಿದ್ದಾಗಿತ್ತು. ಒಟ್ಟಾರೆ ಬೆಟ್ಟಹತ್ತಲು ನಿಧಾನವಾಗಿ ಸಾಗಿದ್ದರಿಂದ ಎರಡು ಗಂಟೆ ತಗುಲಿತು. ರಾತ್ರಿ ಹೊತ್ತು ಬೆಟ್ಟಹತ್ತಿದ್ದು ನನಗೆ ವಿಶೇಷ ಮುದನೀಡಿತು. ಕೆಲವೊಮ್ಮೆ ತುಂತುರು ಮಳೆಯೂ ಆಗುತ್ತಿತ್ತು, ಇದು ವಾತಾವರಣವನ್ನು ಇನ್ನಷ್ಟು ತಂಪಾಗಿಸಿತು.

ಚಾರಣದ ದೂರ

ತಡರಾತ್ರಿ 2:30ರ ಸುಮಾರಿಗೆ ಎಲ್ಲರೂ ಎರಡು ಕಿಲೊಮೀಟರ್ ಟ್ರೆಕ್ಕಿಂಗ್ ಮಾಡಲು ಶಕ್ತರಾದರು. ಇದು ಸಂಪೂರ್ಣವಾಗಿ ಬೆಟ್ಟ, ಬಂಡೆಯನ್ನು ಆವರಿಸಿತ್ತು. ಆದರೂ, ತಳವಾದ ಮತ್ತು ಅಲ್ಲಲ್ಲಿ ಸೂಕ್ತವಾದ ಇಳಿಜಾರನ್ನು ಹೊಂದಿತ್ತು. ಬೆಟ್ಟದ ತುತ್ತತುದಿಯಲ್ಲಿ ಭಾರೀ ಗಾತ್ರದ ಬಂಡೆಯೊಂದು ಎದುರಾಯಿತು, ಇದು ರಾತ್ರಿ ಹೊತ್ತು ಸ್ವಲ್ಪಹೊತ್ತು ಕಳೆಯಲು ನಮ್ಮ ತಂಗುಪ್ರದೇಶವಾಗಿತ್ತು. ಇನ್ನೂ ಸ್ವಲ್ಪದೂರ ಕ್ರಮಿಸಿದೆವು. ಆಗ ಬೆಳಕು ಹತ್ತಿಸಿದ್ದರಿಂದ ನಾವೆಲ್ಲಾ ಅಲ್ಲಿ ಸುತ್ತುವರಿದೆವು.

ಅಲ್ಲಿ ಸ್ವಲ್ಪಹೊತ್ತು ಕಳೆದ ನಂತರ, ನನ್ನ ಸ್ಲೀಪಿಂಗ್ ಬ್ಯಾಗ್ ಕಡೆ ನನ್ನ ಗಮನಹೋಯಿತು. ರಾತ್ರಿ ಆಕಾಶ ಮತ್ತು ಚಂದ್ರನತ್ತ ನೋಡಿ, ಮಲಗುವ ಚೀಲಕ್ಕೆ ನಾನು ಜಾರಿದೆ. ಕೆಲವು ಗಂಟೆಗಳ ಒಳಗೆ, ಮುಂಜಾನೆ ಮುರಿಯಿತು ಮತ್ತು ಸುತ್ತಮುತ್ತಲಿನ ಪ್ರದೇಶವು ಒಂದು ಸುಂದರ ಭೂದೃಶ್ಯವಾಗಿ ಮಾರ್ಪಟ್ಟಿತು.

ಕಲ್ಲಿನ ಕಂಬವು ವಾಸ್ತವವಾಗಿ ತೊನ್ನೂರು ಸರೋವರ ಎಂದೂ ಕರೆಯಲ್ಪಡುವ ಪಾಂಡವಪುರ ಸರೋವರದ ವಿಶಾಲ ನೋಟವನ್ನು ಒದಗಿಸಿದ ದೃಷ್ಟಿಕೋನವಾಗಿತ್ತು ಜೊತೆಗೆ ಸುತ್ತಲಿನ ಜಾಗ ಕೂಡಾ. ಸೂರ್ಯೋದಯವು ಒಂದು ಸುಂದರ ನೋಟವಾಗಿದ್ದು, ಸ್ಥಳದ ಘನತೆಯನ್ನು ಇನ್ನಸೇರಿಸುತ್ತದೆ.

How to get to Kundi Hill

PC: Yogini

ಬೆಳಿಗ್ಗೆ ಬೆಟ್ಟದಿಂದ ಅವರೋಹಣ ಮಾಡುತ್ತಿದ್ದಾಗ ಮಾತ್ರ ಮಾರ್ಗ ಎಷ್ಟು ಸುಂದರವಾಗಿದೆ ಎಂದು ಗಮನಿಸಿದೆ. ಬೆಟ್ಟದ ಮುಖಗ ದಿಗ್ಭ್ರಮೆ ಮೂಡಿಸುವಂತಿತ್ತು. ಮೊದಲು ಕತ್ತಲಲ್ಲಿ ನಾವು ಹಾದು ಹೋದ ಬಂಡೆಗಳು ಜ್ವಾಲಾಮುಖಿ ಗ್ರಾನೈಟ್ ಶಿಲೆಗಳು ಮತ್ತು ಬಂಡೆಗಳಾಗಿದ್ದವು ಮತ್ತು ನಿಜವಾಗಿಯೂ ಬೃಹತ್ ಗಾತ್ರದಲ್ಲಿದ್ದವು. ಬಂಡೆಗಳು ಮತ್ತು ಬಂಡೆಗಳ ವಿವಿಧ ಆಕಾರಗಳು ಅನೇಕವೇಳೆ ಗುರುತುಗಳಾಗಿ ಬಳಸಲ್ಪಡುತ್ತವೆ.

ಕೆಳಗಿರುವ ದೇವಾಲಯಕ್ಕೆ ಭೇಟಿ ನೀಡಿದೆವು. ಪಾರ್ಕಿಂಗ್ ಜಾಗದಲ್ಲಿ ಸಣ್ಣದಾದ ಹೊಟೇಲ್ ಇತ್ತು, ಅಲ್ಲಿ ಮುಖತೊಳೆದು ಫ್ರೆಷ್ ಆದೆವು. ಅಲ್ಲೇ ತಿಂಡಿ ತಿಂದು ಬೆಂಗಳೂರಿಗೆ ವಾಪಸ್ ಹೊರಟೆವು.

Read more about: ಇತಿಹಾಸ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ