Search
  • Follow NativePlanet
Share
» »ತಮಿಳು ನಾಡಿನಲ್ಲಿದೆ ಒಂದು ದೊಡ್ಡ ಬೆಟ್ಟ......

ತಮಿಳು ನಾಡಿನಲ್ಲಿದೆ ಒಂದು ದೊಡ್ಡ ಬೆಟ್ಟ......

ತಮಿಳು ನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ತಮಿಳುನಾಡಿನಲ್ಲಿ "ದೊಡ್ಡ ಬೆಟ್ಟ" ಎಂಬ ಹೆಸರಿನ ಸುಂದರವಾದ ಶಿಖರವಿದೆ ಎಂಬುದು ನಿಮಗೆ ಗೊತ್ತ? ಹೌದು ಈ ರೀತಿಯ ಹೆಸರಿನ ಒಂದು ಸುಂದರವಾದ ಪ್ರೇಕ್ಷಣೀಯ ಸ್ಥಳ ಇರುವುದು ತಮಿಳುನಾಡು ಜಿಲ

ತಮಿಳು ನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ತಮಿಳುನಾಡಿನಲ್ಲಿ "ದೊಡ್ಡ ಬೆಟ್ಟ" ಎಂಬ ಹೆಸರಿನ ಸುಂದರವಾದ ಶಿಖರವಿದೆ ಎಂಬುದು ನಿಮಗೆ ಗೊತ್ತ? ಹೌದು ಈ ರೀತಿಯ ಹೆಸರಿನ ಒಂದು ಸುಂದರವಾದ ಪ್ರೇಕ್ಷಣೀಯ ಸ್ಥಳ ಇರುವುದು ತಮಿಳುನಾಡು ಜಿಲ್ಲೆಯಲ್ಲಿ. ಇದೊಂದು ಸುಂದರ ಹಾಗು ಮನಮೋಹಕವಾದ ಪ್ರವಾಸಿ ತಾಣವಾಗಿದೆ. ಈ ಮನಮೋಹಕವಾದ ಸ್ಥಳಕ್ಕೆ ಏಪ್ರಿಲ್ ತಿಂಗಳು ಹಾಗು ಮೇ ತಿಂಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ.

ಇದು ಛತ್ರಪತಿ ಶಿವಾಜಿಯ ಭ್ಯವ ಕೋಟೆ.....ಇದು ಛತ್ರಪತಿ ಶಿವಾಜಿಯ ಭ್ಯವ ಕೋಟೆ.....

ದೊಡ್ಡ ಬೆಟ್ಟದ ವೈಶಿಷ್ಟತೆ ಏನು ಗೊತ್ತ? ಇದೊಂದು ಗಿರಿಧಾಮಗಳ ರಾಣಿ ಎಂದು ಗುರುತಿಸಿಕೊಂಡಿರುವ ಊಟಿಯಿಂದ ಕೇವಲ 9 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಹಲವಾರು ಬಾಡಿಗೆ ವಾಹನಗಳು, ಬಸ್ಸುಗಳು ಊಟಿಯಿಂದ ದೊರೆಯುತ್ತವೆ. ಈ ಬೆಟ್ಟಕ್ಕೆ ಟ್ರೆಕ್ಕಿಂಗ್ ಕೂಡ ಮಾಡಬಹುದಾಗಿರುತ್ತದೆ.

ಹಾಗಾದರೆ ಲೇಖನದಲ್ಲಿ ಈ ತಾಣದ ಕುರಿತು ಕೆಲವು ಪ್ರಾಕೃತಿಕ ನೋಟವನ್ನು ತಿಳಿಯೋಣ.

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ದೊಡ್ಡ ಬೆಟ್ಟ ತಮಿಳುನಾಡಿನ ಒಂದು ಸುಂದರವಾದ ಪ್ರವಾಸಿ ತಾಣವಾಗಿದ್ದು, ಇದೊಂದು ಬೆಟ್ಟ ಪ್ರದೇಶವಾಗಿದೆ. ಈ ಬೆಟ್ಟದ ತುದಿಯವರೆವಿಗೂ ತಲುಪಲು ಉತ್ತಮವಾದ ರಸ್ತೆ ಮಾರ್ಗವಿದೆ. ಈ ತುದಿಯಿಂದ ತಮಿಳುನಾಡಿನ ಸುಂದರವಾದ ಪ್ರಕೃತಿಯನ್ನು ಅಸ್ವಾಧಿಸಬಹುದಾಗಿದೆ.

Pratheept2000

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ಇಲ್ಲಿ ಯಥೇಚ್ಚವಾಗಿ ನೀಲಗಿರಿ ಮರಗಳನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿಯೇ ಆನಮುಡಿ ಎಂಬ ಬೆಟ್ಟದ ನಂತರ ಅತ್ಯಂತ ಎತ್ತರವಾದ ಬೆಟ್ಟ ಪ್ರದೇಶ ಈ ದೊಡ್ಡ ಬೆಟ್ಟವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಈ ಬೆಟ್ಟದ ತುದಿಯಿಂದ ಚಾಮುಂಡಿ ಬೆಟ್ಟದ ನೋಟವನ್ನು ದೂರದಿಂದ ಕಂಡು ಭಕ್ತಿಯಿಂದ ನಮಸ್ಕರಿಸಬಹುದಾಗಿದೆ.

Girish Gopi

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ದೊಡ್ಡ ಬೆಟ್ಟವು ಒಟ್ಟು 3 ಶಿಖರ ಶೃಂಗಗಳಿಂದ ಆವೃತ್ತವಾಗಿದೆ. ಅವು ಯಾವುವು ಎಂದರೆ ಹೆಕುಬ, ಕಟ್ಟದಾದು ಹಾಗು ಕುಲ್ಕುಡಿಗಳಾಗಿವೆ. ಇದರ ಕೆಳಭಾಗದಲ್ಲಿ ದಟ್ಟವಾದ ಕಾಡುಗಳಿಂದ ಅವೃತ್ತಗೊಂಡಿದ್ದು, ಪ್ರಾಕೃತಿಕ ಸೌಂದರ್ಯವನ್ನು ಸವಿಯಬಹುದು.

Edukeralam

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ದೊಡ್ಡ ಬೆಟ್ಟದ ಕಾಡಿನಲ್ಲಿ ಹೆಚ್ಚಾಗಿ ರೋಡೋಡೆಂಡ್ರಾನ್ ಎಂಬ ಮರಗಳಿಂದ ಅವೃತ್ತವಾಗಿರುವುದನ್ನು ಗಮನಿಸಬಹುದು. ಇದೊಂದು ಶೋಲಾ ಹುಲ್ಲುಗಾವಲು ಆಗಿದೆ.


Swaminathan

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ಇನ್ನು ಬೆಟ್ಟದ ತುದಿಯಲ್ಲಿ ವಿಧ ವಿಧವಾದ ಸಸ್ಯ, ಬಳ್ಳಿ, ಹೂವುಗಳನ್ನು ಕಾಣಬಹುದು. ಇದೊಂದು ಪ್ರಕೃತಿ ಸೃಷ್ಟಿ ಮಾಡಿಕೊಂಡ ಸ್ವರ್ಗದಂತೆ ಕಾಣುತ್ತದೆ. ಈ ಸುಂದರವಾದ ಹೂವು ಬಳ್ಳಿಗಳನ್ನು ನೋಡುವುದೇ ಒಂದು ಸಂತಸದ ಅನುಭವವನ್ನು ಉಂಟು ಮಾಡುತ್ತದೆ.


Keshav Mukund Kandhadai

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ಯಾವುದೇ ಶಿಖರದ ಕೊನೆಯ ಯುದಿಗೆ ತಲುಪಿದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಆ ಸಂತಸವನ್ನು ವರ್ಣಿಸಲು ಅಸಾಧ್ಯವಾದಂತುಹುದು. ಹಾಗೆಯೇ ಈ ಬೆಟ್ಟದ ಮೇಲೆ ನಿಂತು ನೋಡಿದರೆ ಪ್ರಕೃತಿಯನ್ನೇ ತನ್ನಲ್ಲಿ ಸೆರೆ ಮಾಡಿಕೊಂಡಂತೆ ಅನುಭವವಾಗುತ್ತದೆ.


Edukeralam

 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ಇದರ ಅನುಭವವನ್ನು ಪಡೆಯಲು ಪ್ರವಾಸಿ ಇಲಾಖೆಯು 2 ದೂರದರ್ಶಕಗಳನ್ನು ಇಲ್ಲಿ ಆಳವಡಿಸಿದ್ದಾರೆ. ಪ್ರವಾಸಿಗರು ಇದರ ಮೂಲಕ ದೂರದ ಪ್ರಕೃತಿ ದೃಶ್ಯವನ್ನು ಸಹ ಇಲ್ಲಿ ಕಂಡು ಆನಂದಿಸಬಹುದಾಗಿದೆ.

David Brossard


 ದೊಡ್ಡ ಬೆಟ್ಟ

ದೊಡ್ಡ ಬೆಟ್ಟ

ಈ ಬೆಟ್ಟವು ಪ್ರಸಿದ್ಧ ತಾಣವಾದ ಊಟಿಯಿಂದ ಕೇವಲ 9 ಕಿ.ಮೀ ದೂರದಲ್ಲಿದ್ದು, 8,650 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಹಲವಾರು ಪಕ್ಷಿ ಸಂಕುಲವನ್ನು ಕಂಡು ಆನಂದಿಸಬಹುದಾಗಿದೆ. ಅದರಲ್ಲು ಇಲ್ಲಿ ಕೆಂಪು ಬಣ್ಣದ ಬುಲ್ ಬುಲ್ ಪಕ್ಷಿ ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X