Search
  • Follow NativePlanet
Share
» »ದೇವ ಮಾನವ ಶಿರಿಡಿ ಸಾಯಿಬಾಬನ ಬಗ್ಗೆ ನಿಮಗೆ ತಿಳಿಯದ ಕೆಲವು ಸತ್ಯಗಳು.

ದೇವ ಮಾನವ ಶಿರಿಡಿ ಸಾಯಿಬಾಬನ ಬಗ್ಗೆ ನಿಮಗೆ ತಿಳಿಯದ ಕೆಲವು ಸತ್ಯಗಳು.

ಶಿರಿಡಿಯು ಪ್ರಸ್ತುತ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಶಿರಿಡಿಸಾಯಿ ಬಾಬಾ ದೇವಾಲಯ ಮಹಾರಾಷ್ಟ್ರದ ಅತಿ ದೊಡ್ಡ ತೀರ್ಥಕ್ಷೇತ್ರವಾಗಿದೆ. ಕೆಲವು ವರ್ಷಗಳಿಂದ ಈ ದೇವ ಮಾನವನ ಭಕ್ತರು ಹೆಚ್ಚಾಗುತ್ತಲೇ ಇದೆ. ಬಾಬಾ ಹಲವಾರು ಪವಾಡಗಳಿಂದ ಜನರನ್ನು ತನ್ನ ಹತ್ತಿರಕ್ಕೆ ಬರಮಾಡಿಕೊಂಡಿದ್ದಾನೆ ಹಾಗಾಗಿ ಈತನ ದರ್ಶನಕ್ಕಾಗಿ ಲಕ್ಷಾಂತರ ಭಕ್ತಾದಿಗಳು ದೇಶ ವಿದೇಶಗಳಿಂದ ಪವಾಡ ಪುರುಷನ ದೇವಾಲಯಕ್ಕೆ ಬರುತ್ತಾರೆ.ಶಿರಿಡಿ ಬಾಬಾ 19 ನೇ ಶತಮಾನದ ಸಂತ. ಶಿರಿಡಿಯಲ್ಲಿ ಅಂದಿನ ಜನರಲ್ಲಿದ್ದ ಅಜ್ಞಾನ ಹಾಗೂ ಅಂಧಕಾರವನ್ನು ಹೋಗಲಾಡಿಸಿದ ಮಹಾನ್ ಸಾಧು. ಈ ಸಾಧು ಸಾಹಿ ಬಾಬ ನೆಲೆಸಿರುವ ಈ ಕ್ಷೇತ್ರದಲ್ಲಿ ಸುಮಾರು 36.000 ಜನರು ವಾಸಿಸುತ್ತಿದ್ದಾರೆ. ಪ್ರಸುತ್ತ ಲೇಖನದಲ್ಲಿ ಸತ್ಯ ಸಾಹಿ ಭಾಗವಾನ್‍ನ ಕುರಿತು ಈ ಲೇಖನದಲ್ಲಿ ಬಾಬಾನ ಬಗ್ಗೆ ತಿಳಿಯೋಣ.

ಶಿರಿಡಿಗೆ ಭಕ್ತರು

ಶಿರಿಡಿಗೆ ಭಕ್ತರು

ಶಿರಿಡಿಯ ಭಕ್ತ ಸಮೂಹ ದಿನದಂದ ದಿನಕ್ಕೆ ಏರುತ್ತಲೇ ಇದೆ. ದಿನನಿತ್ಯ ಬಾಬಾನ ದರ್ಶನಕ್ಕೆ ಬರುವ ಭಕ್ತದಿಗಳ ಸಂಖ್ಯೆ ಸುಮಾರು 100,000 ವಾಗಿದ್ದರೆ ವಾರಾಂತ್ಯದಲ್ಲಿ ಭಕ್ತದಿಗಳ ಸಂಖ್ಯೆ 500,000 ಕ್ಕೂ ಹೆಚ್ಚಾಗಿರುತ್ತದೆ. ಗುರು ಪೌರ್ಣಿಮ ಹಾಗೂ ರಾಮನವಮೀಯ ದಿನ ಸಾಯಿ ಬಾಬಾನ ದರ್ಶನಕ್ಕೆ ಬರುವ ಜನರು ಇನ್ನೂ ಅಧಿಕವಾಗಿರುತ್ತಾರೆ.

PC:Andreas Viklund

ಬಾಬಾನ ಪಾತ್ರಧಾರಿ ಸುಧೀರ್ ದಳವಾಯಿ

ಬಾಬಾನ ಪಾತ್ರಧಾರಿ ಸುಧೀರ್ ದಳವಾಯಿ

ನಿಮಗೆ ತಿಳಿದಿರುವಂತೆ ಬಾಬಾ ಒಬ್ಬ ಪವಾಡ ಪುರುಷ ಈ ದೇವ ಮಾನವನ ಬಗ್ಗೆ ಹಲವಾರು ಭಾಷೆಗಳಲ್ಲಿ ಚಲನಚಿತ್ರಗಳನ್ನು ನೀವು ನೋಡಿರುತ್ತಿರಾ ಆದರೆ ಆ ಪಾತ್ರಕ್ಕೆ ಸರಿಯಾಗಿ ಜೀವ ತುಂಬಿದ ವ್ಯಕ್ತಿಯೆಂದರೆ ಅದು ಸುಧೀರ್ ದಳವಾಯಿ. 1977 ರಲ್ಲಿ ಶಿರಿಡಿ ಕೆ ಸಾಯಿ ಬಾಬಾ ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಾಬಾನ ಪಾತ್ರ ಮಾಡಿದ ವ್ಯಕ್ತಿ. ಜನರು ಈ ನಟನನ್ನು ಕಂಡಾಗ ಸ್ವತಃ ಶಿರಿಡಿ ಬಾಬಾನೇ ಬಂದಿದ್ದಾರೆ ಎಂದು ಕಾಲಿಗೆ ಬಿದ್ದು ನಮಸ್ಕರ ಮಾಡುತ್ತಿದ್ದರಂತೆ ಅಷ್ಟರ ಮಟ್ಟಿಗೆ ಈ ಪವಾಡ ಪುರುಷ ಬಾಬಾ ಜನರಗಳ ಮೆಚ್ಚುಗೆಗೆ ಪಾತ್ರನಾಗಿದ್ದ ಎಂದು ಹೇಳಬಹುದು.

PC:selians Follow

ಜಾಕಿ ಷಾರಫ್ ಬಾಬಾ ಅವತಾರದಲ್ಲಿ ಮಿಂಚಿದ ಮತ್ತೋಬ್ಬ ನಟ

ಜಾಕಿ ಷಾರಫ್ ಬಾಬಾ ಅವತಾರದಲ್ಲಿ ಮಿಂಚಿದ ಮತ್ತೋಬ್ಬ ನಟ

ಬಾಬಾನ ವೇಶದಲ್ಲಿ ಹಿಂದಿಯ ಪ್ರಖ್ಯಾತ ನಟ ಶಿರಿಡಿ ಬಾಬಾನ ಪಾತ್ರ ನಿರ್ವಹಿಸುವಾಗ ಕುಡಿತ ಮತ್ತು ಧೂಮಪಾನವನ್ನು ನಿಷೇದಿಸಿದ್ದರಂತೆ. ಜಾಕಿ ಷಾರಫ್ ನಟಿಸಿದ ಚಲನಚಿತ್ರವು 2010 ರಲ್ಲಿ ಮಾಲೀಕ್ ಏಕ್ ಎಂಬ ಹೆಸರಿನಿಂದ ಬಿಡುಗಡೆಯಾಯಿತು.

ಶಿರಿಡಿಯಲ್ಲಿ ವಿಮಾನ ನಿಲ್ದಾಣ

ಶಿರಿಡಿಯಲ್ಲಿ ವಿಮಾನ ನಿಲ್ದಾಣ

ಮಲೇಷಿಯ ಸರ್ಕಾರವು ಮಹಾರಾಷ್ಟ್ರದ ಶಿರಿಡಿಯಲ್ಲಿ ವಿಮಾನ ನಿಲ್ದಾಣಕ್ಕೆ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ವಿಮಾನ ನಿಲ್ದಾಣವನ್ನು ಸರಾಸರಿ 1500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಲೇಷಿಯ ಸರ್ಕಾರವು ಮುಂದಾಗಿದೆ.

PC:Brunda Nagaraj

ಒಡಿಸ್ಸಾದಿಂದ ಶಿರಿಡಿಗೆ ಸುಗಮ ಪ್ರಯಾಣ

ಒಡಿಸ್ಸಾದಿಂದ ಶಿರಿಡಿಗೆ ಸುಗಮ ಪ್ರಯಾಣ

ಒಡಿಸ್ಸಾದಿಂದ ಶಿರಿಡಿಗೆ ನೇರವಾಗಿ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರವು ಯೋಜನೆ ಮಾಡುತ್ತಿರುವುಂದರಿಂದ ಸುಗಮವಾಗಿ ಶಿರಿಡಿ ಪ್ರಯಾಣ ಮಾಡಬಹುದಾಗಿದೆ.

PC:selians

ಶಿರಿಡಿಯಲ್ಲಿ ಅಕ್ಷರಸ್ಥರ ಸಂಖ್ಯೆಯಲ್ಲಿ ಏರಿಕೆ.

ಶಿರಿಡಿಯಲ್ಲಿ ಅಕ್ಷರಸ್ಥರ ಸಂಖ್ಯೆಯಲ್ಲಿ ಏರಿಕೆ.

ಭಾರತದ ಅಕ್ಷರಸ್ಥರ ಅನುಪಾತ ಶೇಕಡ 59.5 ಇದ್ದರೆ. ಶಿರಿಡಿಯ ಅಕ್ಷರಸ್ಥರ ಅನುಪಾತ ಶೇ 70 ರಷ್ಟಿದೆ. ಗಂಡಸರಲ್ಲಿ ಅಕ್ಷರಸ್ಥರು ಶೇ 76 ಹಾಗೂ ಮಹಿಳೆಯರಲ್ಲಿ ಅಕ್ಷರಸ್ಥರು ಶೇ 62 ರಷ್ಟು ಇರುವುದನ್ನು ಕಾಣಬಹುದು.

PC:JaiBholeGroup Follow

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X