Search
  • Follow NativePlanet
Share
» »ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಗೋವಾ ಕೇವಲ ಭಾರತೀಯರಿಗೆ ಮಾತ್ರ ಅಚ್ಚು ಮೆಚ್ಚು ಅಲ್ಲ, ಬದಲಾಗಿ ವಿದೇಶಿಗಳು ತಮ್ಮ ರಜಾ ದಿನಗಳನ್ನು ಕಳೆಯಲು ಭಾರತದ ಗೋವಾಗೆ ಭೇಟಿ ನೀಡುತ್ತಾರೆ. ಈ ಗೋವಾದ ಪ್ರಕೃತಿಯ ಸೌಂದರ್ಯ ಮಧ

ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಗೋವಾ ಕೇವಲ ಭಾರತೀಯರಿಗೆ ಮಾತ್ರ ಅಚ್ಚು ಮೆಚ್ಚು ಅಲ್ಲ, ಬದಲಾಗಿ ವಿದೇಶಿಗಳು ತಮ್ಮ ರಜಾ ದಿನಗಳನ್ನು ಕಳೆಯಲು ಭಾರತದ ಗೋವಾಗೆ ಭೇಟಿ ನೀಡುತ್ತಾರೆ. ಈ ಗೋವಾದ ಪ್ರಕೃತಿಯ ಸೌಂದರ್ಯ ಮಧ್ಯೆ ಕೆಲವು ಕಾಲ ಕಳೆಯಲು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?

ಗೋವಾ ಮುಖ್ಯವಾಗಿ ತನ್ನ ಬೀಚ್‍ಗಳಿಂದ ಪ್ರಸಿದ್ಧಿ ಪಡೆದಿದೆ. ಗೋವಾ ಕೇವಲ ಬೀಚ್‍ಗಳಿಗೆ ಅಲ್ಲ, ಅದ್ಭುತವಾದ ಕೋಟೆಗಳಿಗೂ ಪ್ರಖ್ಯಾತಿಯನ್ನು ಪಡೆದಿದೆ. ಗೋವಾಗೆ ತೆರಳಿದ್ದ ಪ್ರತಿಯೊಬ್ಬರು ಈ ಸುಂದರವಾದ 7 ಕೋಟೆಗಳಿಗೆ ಭೇಟಿ ನೀಡಲೇಬೇಕಾಗಿರುತ್ತದೆ. ಇಲ್ಲಿನ ಮನೋಹರವಾದ ವಾತಾವರಣ, ಭವ್ಯವಾದ ದೇವಾಲಯಗಳು, ಚರ್ಚುಗಳು, ಬೆಟ್ಟಗಳು, ಜಲಪಾತಗಳನ್ನು ಇಲ್ಲಿ ಕಣ್ಣು ತುಂಬಿಕೊಳ್ಳಬಹುದಾಗಿದೆ. ವಿಶೇಷ ಏನೆಂದರೆ ಇವೆಲ್ಲಾ ನೂರಾರೂ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಅದ್ಭುತವಾದ ಪ್ರವಾಸಿ ತಾಣಗಳು.

ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!

ಇಲ್ಲಿ ಮೊಗಲರು ಮತ್ತು ಪೋರ್ಚುಗೀಸರು ನಿರ್ಮಾಣ ಮಾಡಿರುವ ಈ ಕೋಟೆಗಳನ್ನು ಕೂಡ ಕಾಣಬಹುದಾಗಿದೆ. ಇದೊಂದು ಐತಿಹಾಸಿಕ ಪರಂಪರೆಯ ಶ್ರೇಷ್ಟವಾದ ಸಂಕೇತವಾಗಿದೆ. ಇದರ ಇತಿಹಾಸ, ವಾಸ್ತುಶಿಲ್ಪ ಮತ್ತು ಭೂದೃಶ್ಯದ ಕಾರಣದಿಂದಾಗಿ ಗೋವಾದಲ್ಲಿ 7 ಭವ್ಯವಾದ ಕೋಟೆಗಳು ಪ್ರಸಿದ್ಧಿಯನ್ನು ಪಡೆದಿದೆ.

ಕಡಿಮೆ ಬೆಲೆಯಲ್ಲಿ ನಿಮ್ಮನ್ನು ಆರ್ಕಷಿಸುವ ಗೋವಾದ ಶಾಪಿಂಗ್ ಮಾರ್ಕೆಟ್‍ಗಳಿವು....ಕಡಿಮೆ ಬೆಲೆಯಲ್ಲಿ ನಿಮ್ಮನ್ನು ಆರ್ಕಷಿಸುವ ಗೋವಾದ ಶಾಪಿಂಗ್ ಮಾರ್ಕೆಟ್‍ಗಳಿವು....

ಅಗುಡಾ ಕೋಟೆ

ಅಗುಡಾ ಕೋಟೆ

ಈ ಪುರಾತನವಾದ ಕೋಟೆಯನ್ನು ಪೋರ್ಚುಗೀಸರು ನಿರ್ಮಾಣ ಮಾಡಿದರು. ಈ ಅಗುಡಾ ಕೋಟೆಯನ್ನು ಪ್ರಸ್ತುತ ಜೈಲಾಗಿ ಮಾರ್ಪಾಟಾಗಿದೆ. ಕೋಟೆಯ ಒಳಗೆ ಅದ್ಭುತವಾದ ಲೈಟ್ ಹೌಸ್ ಇದೆ. ಇದನ್ನು 19 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು ಎನ್ನಲಾಗಿದೆ. ಇದನ್ನು ಅಗುಡಾ ಕೋಟೆ ಎಂದು ಕರೆಯಲಾಗುತ್ತಿತ್ತು. ಇದರ ಅರ್ಥ ನೀರಿನಲ್ಲಿನ ತಾಜಾ ಬುಗ್ಗೆಗಳು ಎಂಬ ಅರ್ಥವಾಗಿದೆ.

ಇಲ್ಲಿ ನೀವು ಪೋರ್ಚುಗೀಸರ ಸುಂದರವಾದ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಕೋಟೆಯ ಅರ್ಧ ಭಾಗದಷ್ಟು ಜೈಲು ಆಗಿದ್ದರೆ, ಉಳಿದ ಅರ್ಥ ಉತ್ತಮ ಸ್ಥಿತಿಯಲ್ಲಿದೆ. ಇದು ಗೋವಾದಲ್ಲಿಯೇ ಅತಿ ದೊಡ್ಡ ಜೈಲು..

PC:AaronC's

ಕಾರ್ಜುಮ್ ಕೋಟೆ

ಕಾರ್ಜುಮ್ ಕೋಟೆ

ಕಾರ್ಜುಮ್ ಕೋಟೆ ಗೋವಾ ರಾಜ್ಯದ ಅಲ್ಡೋನಾ ಗ್ರಾಮದಲ್ಲಿ ಮ್ಯಾಪುಸಾ ಎಂಬ ನದಿಯ ಬಳಿ ಇದೆ. ಪೋರ್ಚುಗೀಸರು ನಿರ್ಮಾಣ ಮಾಡಿದ ಕೋಟೆಗಳಲ್ಲಿ ಈ ಕೋಟೆಯು ಕೂಡ ಒಂದಾಗಿದೆ. ಇದನ್ನು 1705 ರಲ್ಲಿ ನಿರ್ಮಾಣ ಮಾಡಲಾಗಿದೆ.

ಇದು ಪೋಂಬುರ್ಪಾದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇದು ಒಳನಾಡಿನಲ್ಲಿ ಉಳಿದುಕೊಂಡಿರುವ ಕೋಟೆಗಳಲ್ಲಿ ಇದು ಕೂಡ ಒಂದಾಗಿದೆ. ಪ್ರವಾಸಿಗರು ಈ ಕೋಟೆಯ ಸುತ್ತ ಇರುವ ಸುಂದರವಾದ ನೋಟವನ್ನು ಆಸ್ವಾಧಿಸಬಹುದಾಗಿದೆ. ಇದೊಂದು ಸಣ್ಣದಾದ ಕೋಟೆಯಾಗಿದ್ದರೂ ಕೂಡ ಇದೊಂದು ಅದ್ಭುತವಾದ ಕೋಟೆಯಾಗಿದೆ.

PC:Elroy Serrao

ಥೆರೆಕೋಲ್ ಕೋಟೆ

ಥೆರೆಕೋಲ್ ಕೋಟೆ

ಈ ಕೋಟೆಯನ್ನು ಮುಖ್ಯವಾಗಿ ಸಾವಂತವಾಡಿ ಆಡಳಿತಗಾರರಿಂದ ನಿರ್ಮಾಣ ಮಾಡಿದ್ದರೂ ಕೂಡ 1746 ರಲ್ಲಿ ಸಾವಂತವಾಡಿ ಮಹಾರಾಜನಾದ ಖೇಮ್ ಸಾವಂತ ಭೋನ್ಸಲೇ ಅವರಿಂದ ಪೋರ್ಚುಗೀಸರು ಥೆರೆಕೋಲ್ ಕೋಟೆಯನ್ನು ವಶಪಡಿಸಿಕೊಂಡರು. ಈ ಐತಿಹಾಸಿಕವಾದ ಕೋಟೆಯು ಪೋರ್ಚುಗೀಸರ ವಿರುದ್ಧ ದಂಗೆಯೇಳುವ ಸ್ಥಳವಾಗಿ ಪ್ರಸಿದ್ಧವಾಗಿದೆ.

ಪೋರ್ಚುಗೀಸರು ಈ ಕೋಟೆಯನ್ನು ವಶಪಡಿಸಿಕೊಂಡು ಮರುನಿರ್ಮಾಣ ಮಾಡಿದರು. ಇದನ್ನು ಹೊರಗಿನಿಂದ ನೋಡಬಹುದಾಗಿದೆ.

PC:Goaholidayhomes

ಚಾಪೋರ ಕೋಟೆ

ಚಾಪೋರ ಕೋಟೆ

ಈ ಕೋಟೆಯನ್ನು ಬಿಜಾಪುರದ ಆದಿಷಾಹಿಗಳು ನಿರ್ಮಾಣ ಮಾಡಿದ್ದರೂ ಕೂಡ ಪೋರ್ಚುಗೀಸರು 1617ರಲ್ಲಿ ಕೋಟೆಯನ್ನು ಪುನಃ ನಿರ್ಮಾಣ ಮಾಡಿದರು. ಇದನ್ನು ಕೆಂಪು ಲ್ಯಾಟೆರೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ.

ಈ ಕೋಟೆಯು ಪಣಜಿಯಿಂದ ಸುಮಾರು 22 ಕಿ.ಮೀ ದೂರದಲ್ಲಿದೆ. ಕೋಟೆಯ ಪ್ರಮುಖವಾದ ಆಕರ್ಷಣೆ ಏನೆಂದರೆ ನೆಲದಡಿಯಲ್ಲಿ ನಿರ್ಮಾಣ ಮಾಡಿರುವ ಸುರಂಗಗಳು. ಇದು ಆಕ್ರಮಣದ ಸಂದರ್ಭದಲ್ಲಿ ಅಡಗಿಸಿಕೊಳ್ಳುವ ಸ್ಥಳವಾಗಿತ್ತು.

PC:Kumars

ರೆಯಿಸ್ ಮ್ಯಾಗೋಸ್ ಕೋಟೆ

ರೆಯಿಸ್ ಮ್ಯಾಗೋಸ್ ಕೋಟೆ

ಈ ಸುಂದರವಾದ ಕೋಟೆಯು ಮಂಡವಿ ನದಿಯ ಬಲ ದಂಡೆಯ ಮೇಲೆ ನೆಲೆಸಿದೆ. ಇದನ್ನು 1551 ರಲ್ಲಿ ಪೋರ್ಚುಗೀಸರು ಶತ್ರು ಸೈನ್ಯದಿಂದ ಕಾಪಾಡಿಕೊಳ್ಳಲು ಈ ಭದ್ರವಾದ ಕೋಟೆಯನ್ನು ನಿರ್ಮಾಣ ಮಾಡಿದರು. ಕೋಟೆಯ ಒಳಭಾಗದಲ್ಲಿ ಒಂದು ಚರ್ಚ್ ಇದೆ. ಇದನ್ನು ಒಂದು ಕಾಲದಲ್ಲಿ ರಕ್ಷಣಾ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿತ್ತು. ತದ ನಂತರ ಈಗ ಇದು ಜೈಲಾಗಿ ಪರಿರ್ವತನೆಗೊಂಡಿದೆ.

PC:Ashwin Kumar

ಕಾಬೊ ಕೋಟೆ

ಕಾಬೊ ಕೋಟೆ

ಕಾಬೊ ಕೋಟೆಯು ಗೋವಾದ ದಕ್ಷಿಣ ಕರಾವಳಿಯಲ್ಲಿದೆ. ಈ ಸ್ಥಳಕ್ಕೆ ರಾಮಾಯಣದ ಒಂದು ಸ್ಥಳ ಪುರಾಣವು ಕೂಡ ಇದೆ. ಈ ಸ್ಥಳದಲ್ಲಿ ವನವಾಸದ ಸಮಯದಲ್ಲಿ ರಾಮ, ಲಕ್ಷ್ಮಣ, ಸೀತೆ ಇವರು ಕೆಲವು ದಿನಗಳ ಕಾಲ ನೆಲೆಸಿದ್ದರು ಎನ್ನಲಾಗಿದೆ. ಈ ಕೋಟೆಯನ್ನು 1540 ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಂಬಲಾಗಿದೆ. ಇದು ಇಂದಿಗೂ ಅದ್ಭುತವಾಗಿರುವುದರಿಂದ ಪ್ರವಾಸಿಗರು ಅತಿ ಹೆಚ್ಚಾಗಿ ಭೇಟಿ ನೀಡುತ್ತಾರೆ.

PC:Michael Scalet

ಮಾರ್ಮುಗೋವ್ ಕೋಟೆ

ಮಾರ್ಮುಗೋವ್ ಕೋಟೆ

ಇದೊಂದು ಗೋವಾದ ಪ್ರಮುಖವಾದ ಕೋಟೆಗಳಲ್ಲಿ ಒಂದಾಗಿದೆ. ಇದನ್ನು ಮೂಖ್ಯವಾಗಿ ಮಾರ್ಮುಗೋ ಎಂಬ ಬಂದರನ್ನು ರಕ್ಷಿಸುವ ದೃಷ್ಟಿಯಿಂದ ನಿರ್ಮಾಣ ಮಾಡಲಾಗಿದೆ. ಕೋಟೆಯ ಒಳಭಾಗದಲ್ಲಿ 20 ನಿಯತಕಾಲಿಕೆಗಳು, 20 ಬುರುಜುಗಳು, ಗಾರ್ಡ್‍ಗಳ ನಿವಾಸ ಮತ್ತು 5 ಜೈಲುಗಳನ್ನು ಕಾಣಬಹುದಾಗಿದೆ. ಈ ಕೋಟೆಯನ್ನು ಚೆನ್ನಾಗಿ ಸಂರಕ್ಷಿಸಲ್ಪಟ್ಟಿದೆ. ಈ ಕೋಟೆಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X