Search
  • Follow NativePlanet
Share
» »ಈ ರಸ್ತೆಗಳಲ್ಲಿ ಸ್ವಲ್ಪ ಎಡವಿದರೂ ನೇರವಾಗಿ ಶಿವನ ಪಾದಕ್ಕೆ ಸೇರುವುದಂತು ಖಂಡಿತ!!!

ಈ ರಸ್ತೆಗಳಲ್ಲಿ ಸ್ವಲ್ಪ ಎಡವಿದರೂ ನೇರವಾಗಿ ಶಿವನ ಪಾದಕ್ಕೆ ಸೇರುವುದಂತು ಖಂಡಿತ!!!

ಸಾಮಾನ್ಯವಾಗಿ ರಸ್ತೆಗಳ ಪ್ರಯಾಣ ಮಾಡುತ್ತಿರುತ್ತೇವೆ ಅದರಲ್ಲೇನು? ಎಂದು ಕೇಳುತ್ತಿದ್ದೀರಾ? ಇವು ನೀವು ಊಹಿಸಿಕೊಂಡಿರುವಂತಹ ರಸ್ತೆಗಳಲ್ಲ ಬದಲಾಗಿ ಮೃತ್ಯುವೇ ಆ ಸ್ಥಳದಲ್ಲಿ ಅಡಗಿಕೊಂಡಿರುವಂತಹ ಸ್ಥಳವಾಗಿದೆ. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಕೂಡ ಪ್

ಸಾಮಾನ್ಯವಾಗಿ ರಸ್ತೆಗಳ ಪ್ರಯಾಣ ಮಾಡುತ್ತಿರುತ್ತೇವೆ ಅದರಲ್ಲೇನು? ಎಂದು ಕೇಳುತ್ತಿದ್ದೀರಾ? ಇವು ನೀವು ಊಹಿಸಿಕೊಂಡಿರುವಂತಹ ರಸ್ತೆಗಳಲ್ಲ ಬದಲಾಗಿ ಮೃತ್ಯುವೇ ಆ ಸ್ಥಳದಲ್ಲಿ ಅಡಗಿಕೊಂಡಿರುವಂತಹ ಸ್ಥಳವಾಗಿದೆ. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಕೂಡ ಪ್ರಾಣ ಪಕ್ಷಿ ಹಾರಿಹೋಗುತ್ತದೆ.

ಹೌದು ಜಗತ್ತಿನಲ್ಲಿ ಅಪಾಯಕಾರಿ ಎನ್ನಬಹುದುದಾದ ಕೆಲವು ರಸ್ತೆ ಮಾರ್ಗಗಳು ಇವೆ. ಅಂತಹ ಸ್ಥಳಗಳಲ್ಲಿ ನಮ್ಮ ಯುವಜನ ಸಾಹಸಗಾರರು ರೈಡ್ ಮಾಡಿ ಸಾಹಸಿ ಎಂದು ಕರೆಸಿಕೊಳ್ಳಬೇಕು ಎಂದು ಬಯಸುತ್ತಿರುತ್ತಾರೆ. ಮುಂಜಾಗ್ರತೆ ಇಲ್ಲದೇ ಹೋದಲ್ಲಿ ಅಪಾಯವಾಗುವ ಎಲ್ಲಾ ಸಾಧ್ಯತೆಗಳು ಈ ರಸ್ತೆಗಳಲ್ಲಿ ಇರುತ್ತವೆ. ಹಾಗಾದರೆ ಆ ಸ್ಥಳಗಳು ಯಾವುವು? ಅವುಗಳು ಎಲ್ಲಿವೆ? ಎಂಬ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಲೇಖನದಲ್ಲಿನ ರಸ್ತೆಗಳು ಅತ್ಯಂತ ಭಯಾನಕವಾದ ಮಾರ್ಗಗಳಾಗಿವೆ. ಈ ಮಾರ್ಗಗಳಲ್ಲಿ ಸ್ವಲ್ಪ ಆಯ ತಪ್ಪಿದರೂ ಕೂಡ ನೇರವಾಗಿ ಕೈಲಾಸಕ್ಕೆ ಸೇರುವುದಂತು ಖಂಡಿತ. ಧೈರ್ಯವಿದ್ದವರು ಕೂಡ ಜಾಗರೂಕತೆಯಿಂದ ಪ್ರಯಾಣ ಮಾಡಬೇಕಾಗಿರುತ್ತದೆ. ನೀವು ನೋಡುತ್ತಿರುವ ಈ ಮಾರ್ಗವು ಲಡಾಖ್ ಪ್ರದೇಶದ ಲೇಹ್‍ನಿಂದ ಮನಾಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವಾಗಿದೆ.


PC:Simon Matzinger


ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಈ ಸುಂದರವಾದ ರಸ್ತೆ ಮಾರ್ಗವಿರುವುದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಝನ್ಸ್ಕಾರ್ ಕಣಿವೆಯ ಬಳಿಯ ಪೆಂಜಿಲಾ ಪರ್ವತವಾಗಿದೆ. ಚಿತ್ರದಲ್ಲಿ ರಸ್ತೆಯು ಸುಂದರವಾಗಿ ಕಂಡರೂ ಕೂಡ ಅದರ ಮೇಲೆ ನಡೆದಾಡುವುದು ಅಷ್ಟು ಸುಲಭವಲ್ಲ.


PC:sandeepachetan.com travel photography

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಕೆಳಗೆ ಪಾತಾಳ, ಮೇಲೆ ಮೈ ನಡುಗುವ ಕೈಲಾಸ, ಮಧ್ಯದಲ್ಲಿ ಕೆಟ್ಟು ನಿಂತ ನನ್ಗಾಡಿ...ಯಪ್ಪಾ ದೇವರೆ ನೀನೆ ದಾರಿ..ಅಂದುಕೊಳ್ಳುತ್ತಿರಬಹುದೆ? ಈ ರೀತಿಯ ಕೆಲವು ದುರ್ಗಮ ಪ್ರಸಂಗಗಳು ಜಮ್ಮು ಕಾಶ್ಮೀರದ ಕೆಲವು ಪರ್ವತ ದಾರಿಗಳಲ್ಲಿ ಕಂಡುಬರುವುದು ಸಾಮಾನ್ಯ. ರೋಹ್ತಂಗ್ ಪಾಸ್ ಗೆ ಹೋಗುವ ಮಾರ್ಗದಲ್ಲಿ.


PC:Rajarshi MITRA

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಕಾಶ್ಮೀರದ ಹಸಿರು ಕಣಿವೆಗಳಿಂದ ಮೈಕೊರೆಯುವಷ್ಟು ಚಳಿಯಿರುವ ಲಡಾಖ್ ಭೂಮಿಗೆ ಸಮ್ಪರ್ಕ ಕಲ್ಪಿಸುವ ರಹದಾರಿ ಜೋಜಿ ಲಾ ಬಳಿ.

PC:sandeepachetan.com travel photography

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಮೈ ಜುಮ್ಮೆನಿಸುವಂತಹ ರಸ್ತೆ ಮಾರ್ಗ, ಒಂದೆಡೆ ಎತ್ತರದ ಪರ್ವತಗಳಾದರೆ ಇನ್ನೊಂದು ಬದಿಯಲ್ಲಿ ಸಹಸ್ರಾರು ಅಡಿಗಳಷ್ಟು ಆಳದಲ್ಲಿರುವ ಪ್ರಪಾತ. ಚಿಕ್ಕದಾದ ರಸ್ತೆ, ರೋಹ್ತಂಗ್ ಟಾಪ್.

PC:Woudloper

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಹಿಮಾಲಯದ ನಿಬ್ಬೆರಗುಗೊಳಿಸುವ, ಮೈನಡುಗಿಸುವ ಪರ್ವತ ರಹದಾರಿಯ ಮಧ್ಯದಲ್ಲಿ. ಪ್ರತಿಯೊಂದು ತಿರುವಿನಲ್ಲೂ ಚಾಲಕರು ಮೈಯೆಲ್ಲಾ ಕಣ್ಣಾಗಿರಲೇಬೇಕು.

PC:Mani Babbar Photography

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಜಮ್ಮು ಮತ್ತು ಕಾಶ್ಮೀರ ಲಡಾಖ್ ಬಳಿಯ ಖರ್ದುಂಗ್ ಲಾ ಪಾಸ್ ಗೆ ತೆರಳುವ ಮಾರ್ಗ.

PC:Prabhu B Doss

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಹಾವಿನಂತೆ ಸುರುಳಿಯಾಗಿ ಚಲಿಸಿ, ಕೆಲ ನಿಮಿಷಗಳಲ್ಲೆ ಅಗಾಧ ಎತ್ತರದಿಂದ ಕೆಳಗಿಳಿಯಿರಿ. ಆದರೆ ಚಾಲನೆ ಜಾಗರೂಕತೆಯಿಂದ ಕೂಡಿರಲಿ. ಮನಾಲಿ-ಲೇಹ್ ಮಾರ್ಗ.

PC:Mani Babbar Photography

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಲಡಾಖ್ ಸುತ್ತಮುತ್ತಲಿನ ಪರ್ವತ ಪ್ರಾಂತ್ಯಗಳಲ್ಲಿರುವ ಒಂದು ರಹದಾರಿ.

PC:lingeringcoldness

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಕಾಶ್ಮೀರದ ಶ್ರೀನಗರ ಬಳಿಯಿರುವ ಸೋನಾಮಾರ್ಗದ ಒಂದು ಪರ್ವತ ರಹದಾರಿ.

PC:: Soumyadeep Paul

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ನಡೆದರೂ ಅಷ್ಟೆ, ವಾಹನ ಚಲಾಯಿಸಿದರೂ ಅಷ್ಟೆ, ಸುಂದರ ಪರ್ವತ ದೃಶ್ಯಾವಳಿಗಳ ಜೊತೆ ಜಾಗರೂಕತೆಯೂ ಅವಶ್ಯ.

PC:Yann Pinczon du Sel

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಕಾಶ್ಮೀರದ ಸ್ಪಿತಿಗೆ ಹೋಗುವ ಮಾರ್ಗದಲ್ಲಿ ಬರುವ ಖಾಬ್ ಪಾಸ್. ನಾಟಕೀಯವಾಗಿ ರೂಪಿಸಿದಂತಿದೆ ಈ ರಹದಾರಿ, ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

PC:nevil zaveri

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಮಾರಣಾಂತಿಕ ರೋಹ್ತಂಗ್ ಪಾಸ್. ಪ್ರತಿ ವರ್ಷವೂ ಕೆಲ ಜನರು ಈ ರಸ್ತೆಯಲ್ಲಿ ಜರುಗುವ ಅಪಘಾತಗಳಿಂದ ಸಾಯುತ್ತಲೆ ಇರುತ್ತಾರಂತೆ. ಆದರೂ ಇದು ದೆಹಲಿ, ಪಂಜಾಬ್, ಲಡಾಖ್ ಪ್ರದೇಶಗಳನ್ನು ಒಂದಕ್ಕೊಂದು ಬೆಸೆಯುವ ಪ್ರಮುಖ ಪರ್ವತ ದಾರಿಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

PC:: alan jones

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಕಾರ್ಗಿಲ್ ಹಾಗೂ ಸೊನಾಮಾರ್ಗವನ್ನು ಬೆಸೆಯುವ ಪರ್ವತದ ಸುರುಳಿಯಾಕಾರದ ಅಪಾಯಕಾರಿ ರಹದಾರಿ. ಇದು ಏಷ್ಟು ರೋಮಾಂಚನವಾಗಿದೆಯೋ ಅಷ್ಟೆ ಅಪಾಯಕಾರಿಯೂ ಹೌದು.

PC:zuki

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆ ಮಾರ್ಗಗಳು

ಭಾರತದ ಭಯಾನಕ ರಸ್ತೆಗಳು: ಹಿಮಾಚಲ ಪ್ರದೇಶದ ಕೌರಿಕ್ ಗೆ ಹೋಗುವ ಮಾರ್ಗದಲ್ಲಿ...ನಿಜಕ್ಕೂ ಭಯಾನವಾಗಿದೆ ಈ ರಸ್ತೆ ಮಾರ್ಗ.

PC:Mani Babbar Photography

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X