Search
  • Follow NativePlanet
Share
» »ಚಿಕ್ಕಮಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಸಿದ್ಧವಾದ ತಾಣಗಳಿವು

ಚಿಕ್ಕಮಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಸಿದ್ಧವಾದ ತಾಣಗಳಿವು

ನಮ್ಮ ಕರ್ನಾಟಕದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಅವುಗಳಲ್ಲಿ ಚಿಕ್ಕಮಗಳೂರು ಕೂಡ ಒಂದಾಗಿದೆ. ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಪ್ರಶಾಂತವಾದ ಮತ್ತು ಆಕರ್ಷಕವಾದ ತಾಣಗಳನ್ನು ಹೊಂದಿದೆ. ಇಲ್ಲಿನ ಹವಾಮಾನವು ಪ್ರಶ್ಯಸ್ತವಾಗಿದ್ದು ಎಲ್ಲಾ ಪ್ರವಾಸಿಗರಿಗೂ ಇಷ್ಟವಾಗುವಂತಹ ವಾತಾವರಣವಿರುತ್ತದೆ.

ಸುಮಾರು 3400 ಅಡಿ ಎತ್ತರದಲ್ಲಿರುವ ಚಿಕ್ಕಮಗಳೂರು ಅತ್ಯಂತ ಎತ್ತರದ ಗಿರಿಧಾಮಗಳಿದ್ದು, ಇಲ್ಲಿಗೆ ಭೇಟಿ ನೀಡಲು ಹಲವಾರು ಪ್ರವಾಸಿತಾಣಗಳಿವೆ. ಪ್ರಸ್ತುತ ಲೇಖನದಲ್ಲಿ ಚಿಕ್ಕಮಗಳೂರಿನಲ್ಲಿನ ಪ್ರಸಿದ್ಧವಾದ ಪ್ರವಾಸ ತಾಣಗಳ ಬಗ್ಗೆ ತಿಳಿಯೋಣ.

ಬಾಬಾ ಬುಡನ್ ಗಿರಿ (ದತ್ತ ಪೀಠ)

ಬಾಬಾ ಬುಡನ್ ಗಿರಿ (ದತ್ತ ಪೀಠ)

ಚಂದ್ರ ದ್ರಾಣ ಪರ್ವತ ಎಂದೂ ಕರೆಯಲ್ಪಡುವ ದತ್ತ ಪೀಠವನ್ನು ಕೆಲವು ಉನ್ನತ ಪರ್ವತಗಳಲ್ಲಿ ಒಂದಾಗಿದೆ. ಇದು ಬಾಬಾ ಬುಡನ್ ಗಿರಿಯ ವ್ಯಾಪಿಯಲ್ಲಿನ ಜನಪ್ರಿಯವಾದ ತಾಣವಾಗಿದೆ. ಈ ಪರ್ವತಕ್ಕೆ ಮುಸ್ಲಿಂ ಸಂತ ಬಾಬಾ ಬುಡನ್ ಗಿರಿ ಹೆಸರನ್ನು ಇಡಲಾಗಿದೆ. ಇಲ್ಲಿ ಮೂರು ಗುಹೆಗಳಿವೆ. ಇವುಗಳನ್ನು ಅನ್ವೇಷಿಸಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

PC:Dinesh Valke

ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ

ಈ ಗಿರಿಧಾಮವು ತರೀಕೆರೆ ತಾಲ್ಲೂಕಿನಲ್ಲಿದೆ. ಸಮಾರು 1400 ಮೀಟರ್ ಎತ್ತರದಲ್ಲಿ ಈ ಗಿರಿಧಾಮವಿದೆ. ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಎಂದೂ ಕರೆಯಲ್ಪಡುವ ಕೆಮ್ಮನಗುಂಡಿಯನ್ನು ಬೇಸಿಗೆ ಕಾಲದಲ್ಲಿ ಶ್ರೀ ಕೃಷ್ಣರಾಜೇಂದ್ರರವರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರಂತೆ. ಪ್ರಸ್ತುತ ಕೆಮ್ಮಣ್ಣುಗುಂಡಿಯನ್ನು ತೋಟಗಾರಿಕೆ ಇಲಾಖೆ ನಿರ್ವಹಿಸುತ್ತಿದೆ. ಕೆಮ್ಮಣ್ಣುಗುಂಡಿ ಒಂದು ಸುಂದರವಾದ ಮತ್ತು ಅತ್ಯುತ್ತಮವಾದ ಗಿರಿಧಾಮವಾಗಿದೆ.

PC:Elroy Serrao

ಜೆಡ್ ಪಾಯಿಂಟ್

ಜೆಡ್ ಪಾಯಿಂಟ್

ಮತ್ತೊಂದು ಸುಂದರವಾದ ಸ್ಥಳವೆಂದರೆ ಅದು ಜೆಡ್ ಪಾಯಿಂಟ್ ಆಗಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಇದು ಒಂದು ಉತ್ತಮವಾದ ಸ್ಥಳವಾಗಿದೆ. ಹಾಗಾಗಿ ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಗೆ ಟ್ರೆಕ್ಕಿಂಗ್ ಮಾಡಲು ಉತ್ತಮವಾದ ಸ್ಥಳವು ಕೂಡ ಆಗಿದೆ.

ಹೆಬ್ಬೆ ಫಾಲ್ಸ್

ಹೆಬ್ಬೆ ಫಾಲ್ಸ್

ನಿಮ್ಮ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿ ಪಡೆಯಬೇಕಾದರೆ ಒಮ್ಮೆ ಹೆಬ್ಬೆ ಫಾಲ್ಸ್‍ಗೆ ಭೇಟಿ ನೀಡಿ. ಈ ಜಲಪಾತವು ರಾಜ್ ಭವನದಿಂದ 8 ಕಿ.ಮೀ ದೂರದಲ್ಲಿದೆ. ವಿಶೇಷವೆನೆಂದರೆ ಈ ಜಲಪಾತಕ್ಕೆ ಎರಡು-ಶ್ರೇಣಿಗಳಿವೆ. 150 ಮೀಟರ್ ಎತ್ತರದಿಂದ ಜಾರುವ ಈ ಜಲಪಾತವು ಹಾಲಿನ ನೊರೆಯು ಭೋರ್ಗರೆಯುವಂತೆ ಕಾಣುತ್ತದೆ.

PC:Ashwin Kumar

ಬಳ್ಳಾಲರಾಯನ ದುರ್ಗದ ಬೆಟ್ಟ

ಬಳ್ಳಾಲರಾಯನ ದುರ್ಗದ ಬೆಟ್ಟ

ಬಳ್ಳಾಲರಾಯನ ದುರ್ಗದ ಬೆಟ್ಟ ಚಿಕ್ಕಮಗಳೂರಿನ ಮತ್ತೊಂದು ಸುಂದರವಾದ ಪ್ರವಾಸಿ ತಾಣವಾಗಿದೆ. ಈ ಬಳ್ಳಾಲರಾಯನ ದುರ್ಗದ ಬೆಟ್ಟ ಸುಂದರವಾದ ಎಸ್ಟೇಟ್‍ಗಳಿಂದ ಆವೃತ್ತವಾಗಿದೆ. ಇದು ದೇಶಿಯ ಹಾಗು ವಿದೇಶಿಯ ಪ್ರವಾಸಿಗರಿಗೆ ಉತ್ತಮವಾದ ಸಾಹಸದ ಬೆಟ್ಟ ಎಂದೇ ಹೇಳಬಹುದಾಗಿದೆ.

ಪರಂಪರೆಯ ತಂಗುವತಾಣ,ಮುಡಿಗೆರೆ

ಪರಂಪರೆಯ ತಂಗುವತಾಣ,ಮುಡಿಗೆರೆ

ಮೈಸೂರಿನ ಮುಡಿಗೆರೆ ಬಳಿ ಜಲದರ್ಶಿನಿ ಇದೆ. ಇಲ್ಲಿ ಆರಾಮದಾಯಕವಾದ ಹಾಗು ಘಮ ಘಮಗಿಸುವ ಕಾಫಿಯ ತೋಟಗಳನ್ನು ಕಾಣಬಹುದಾಗಿದೆ. ಎಲ್ಲಾ ಪ್ರವಾಸಿ ತಾಣಗಳಿಗೆ ಒಮ್ಮೆ ಭೇಟಿ ನೀಡಿ ತಂಗುವ ತಾಣದ ಹುಡುಕಾಟದಲ್ಲಿದ್ದರೆ ಈ ಮುಡಿಗೆರೆ ತಂಗುವತಾಣ ಅತ್ಯಂತ ಸೂಕ್ತವಾದುದು. ಹಚ್ಚ ಹಸಿರಿನ ಕಾಡಿನಲ್ಲಿ ಕೆಲವು ದಿನಗಳನ್ನು ಇಲ್ಲಿ ನೀವು ಕುಟುಂಬ ಸಮೇತರಾಗಿ ಅನಂದಮಯವಾಗಿ ಕಳೆಯಬಹುದಾಗಿದೆ.

ತಲುಪುವ ಬಗೆ?

ತಲುಪುವ ಬಗೆ?

ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸುಮಾರು 242 ಕಿ.ಮೀ ದೂರದಲ್ಲಿದೆ. ಹಾಗಾಗಿ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಚಿಕ್ಕಮಗಳೂರು ವಿಮಾನ ನಿಲ್ದಾಣವಾಗಿದೆ.

ರೈಲ್ವೆ ಮಾರ್ಗವಾಗಿ: ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ನೇರವಾದ ರೈಲ್ವೆ ಸಂಪರ್ಕವಿದ್ದು, ಇದು ಕರ್ನಾಟಕದ ಮುಖ್ಯ ನಗರದ ಮೂಲಕ ಹಾದು ಹೋಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more