India
Search
  • Follow NativePlanet
Share
» »ಹಂಪಿಗೆ ಹೋಗಿ ಇದನ್ನೆಲ್ಲಾ ಮಾಡಿಲ್ಲಾಂದ್ರೆ ಹೇಗೆ?

ಹಂಪಿಗೆ ಹೋಗಿ ಇದನ್ನೆಲ್ಲಾ ಮಾಡಿಲ್ಲಾಂದ್ರೆ ಹೇಗೆ?

By Manjula Balaraj Tantry

ಹಂಪಿಯು ಪ್ರಾಯಶಃ ಭಾರತದ ಅತೀ ಕಡಿಮೆ ಅನ್ವೇಷಿತ ಮತ್ತು ಹೆಚ್ಚಾಗಿ ಗುರುತಿಸದ ದಕ್ಷಿಣ ಭಾರತದ ಸ್ಥಳಗಳಲ್ಲಿ ಒಂದಾಗಿದೆ. ಆದರೂ ಕೆಲವರು ಸಾಹಸಕ್ಕಾಗಿ ಕೇರಳ ಅಥವಾ ಗೋವಾಕ್ಕಾಗಿ ಹೋಗುತ್ತಾರೆ ಆದರೆ ಹಂಪೆಯೂ ಕೂಡ ಒಂದು ಐತಿಹಾಸಿಕ ಸ್ಥಳ.

ಇಲ್ಲಿಗೆ ಬರುವ ಪ್ರತೀ ಪ್ರವಾಸಿಗರಿಗೂ ಒಂದಲ್ಲ ಒಂದು ಕೊಡುಗೆಯನ್ನು ನೀಡುವ ಹಂಪಿಯು ಒಂದು ವಿಭಿನ್ನತೆಯನ್ನು ಹೊಂದಿದೆ. ಇಲ್ಲಿ ಸಾಹಸಮಯ ಚಟುವಟಿಕೆಗಳಿಂದ ಹಿಡಿದು , ನಿಧಾನ ಗತಿಯ ಚಟುವಟಿಕೆಗಳವರೆಗೆ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಎಲ್ಲವನ್ನೂ ಹೊಂದಿದೆ. ಆದುದರಿಂದ ಈ ಸಲ ನಾವು ಹಂಪಿಯಲ್ಲಿ ಮಾಡಬಹುದಾದ ಸೌಮ್ಯಯುತ 6 ಚಟುವಟಿಕೆಗಳ ಪಟ್ಟಿ ಮಾಡಿದ್ದೇವೆ. ಈ ಕೆಳಗೆ ಗಮನಿಸಿ ...

1. ಮೋಟಾರು ಬೈಕ್ ಸವಾರಿ ಮಾಡಿ

1. ಮೋಟಾರು ಬೈಕ್ ಸವಾರಿ ಮಾಡಿ

PC: Fran Luiz

ಹಂಪಿಯು ಒಂದು ಸಣ್ಣ ಹಳ್ಳಿಯಾದುದರಿಂದ ನೀವು ಇದನ್ನು ನಡಿಗೆಯ ಮೂಲಕವೂ ಪ್ರವಾಸವನ್ನು ಪೂರ್ಣಗೊಳಿಸಬಹುದಾಗಿದೆ ಅಲ್ಲದೆ ಇಲ್ಲಿಯ ಸುತ್ತ ಮುತ್ತಲಿನ ಹಳ್ಳಿಗಳ ಪ್ರಶಾಂತತೆ ಮತ್ತು ನೆಮ್ಮದಿಯುಕ್ತ ವಾತಾವರಣವನ್ನು ಜಗತ್ತಿನಲ್ಲಿ ಎಲ್ಲಿಯೂ ಕಾಣುವುದು ಕಷ್ಟವೇ ಸರಿ. ಆದರೆ ನೀವು ಹಂಪಿಯ ಮೂಲೆ ಮೂಲೆಗಳ ಅನ್ವೇಷಣೆ ಮಾಡಬೇಕೆಂದಿರುವಲ್ಲಿ ನೀವು ಇಲ್ಲಿ ಒಂದು ಬಾಡಿಗೆ ಮೋಟಾರು ವಾಹನವನ್ನು ಪಡೆಯುವುದು ಉತ್ತಮ ಅದರ ಬಾಡಿಗೆಯು ದಿನಕ್ಕೆ ಹೆಚ್ಚೆಂದರೆ ದಿನಕ್ಕೆ 100-200 ರವರೆಗೆ ಇರಬಹುದು.

ಮೋಟಾರು ಬೈಕ್ ನಲ್ಲಿ ಸವಾರಿ ಮಾಡಿಕೊಂಡು ಹೋದಲ್ಲಿ ಹಂಪಿಯಲ್ಲಿ ನೀವು ನಿಮಗೆ ಬೇಕಾದ ಸ್ಥಳಕ್ಕೆ ಹೋಗಬಹುದು. ಅಲ್ಲದೆ ಹಂಪಿಯಿಂದ ಹೊರಗೂ ಹೋಗಬಹುದಾಗಿದ್ದು ಇಲ್ಲಿಯ ಸುಂದರವಾದ ಹಳ್ಳಿಗಳು ಮತ್ತು ನಿಮಗೆ ದಾರಿಯಲ್ಲಿ ಕೈಬೀಸಿ ಹಾರೈಸುವ ಜನರನ್ನು ಕೂಡಾ ಕಾಣಬಹುದು. ಅದಕ್ಕಿಂತ ಹೆಚ್ಚಾಗಿ ನಿಮಗೆ ಇಲ್ಲಿಯ ಬಂಡೆಗಳನ್ನು ಹತ್ತುವ ಯೋಜನೆ ಇಲ್ಲವಾದಲ್ಲಿ ನೀವು ಇಲ್ಲಿಯ ದೇವಾಲಯಗಳು ಮತ್ತು ಮಾರುಕಟ್ಟೆಗಳನ್ನು ವೀಕ್ಷಿಸುವುದನ್ನು ಒಂದೇ ದಿನದಲ್ಲಿ ಮುಗಿಸಬಹುದು.

2. ಮೇಲ್ಛಾವಣಿ ಕೆಫೆಗಳಲ್ಲಿ ತಿನ್ನಿರಿ

2. ಮೇಲ್ಛಾವಣಿ ಕೆಫೆಗಳಲ್ಲಿ ತಿನ್ನಿರಿ

ದೇಶದ ಈ ಭಾಗಕ್ಕೆ ಇಸ್ರೇಲಿನ ಪ್ರವಾಸಿಗರು ಬರುವುದರಿಂದ ಹಂಪೆಯು ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಹಂಪೆಯು ತನ್ನದೇ ಆದಂತಹ ಸ್ಥಳ ವಿಶೇಷತೆಯನ್ನು ಹೊಂದಿದ್ದರೂ, ಗೋವಾದ ಬೀಚ್ ಅಥವಾ ಕೇರಳದ ದೋಣಿ ವಿಹಾರಗಳಿಗಿಂತ ಕಡಿಮೆ ಪ್ರಸಿದ್ದಿಯನ್ನು ಪಡೆದಿದೆ. ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದರ ಕಾರಣದಿಂದಾಗಿ ಹಂಪೆಯಲ್ಲಿ ಅನೇಕ ಕೆಫೆಗಳು ತಲೆ ಎತ್ತಿವೆ. ಅವುಗಳಲ್ಲಿ ಇಟಲಿಯ ಕಾಂಟಿನೆಂಟಲಿನಿಂದ ಲೆಬನಾನಿನವರೆಗಿನ ಪಾಕಪದ್ಧತಿಯೊಂದಿಗೆ.ಕೆಲವು ಕೆಫೆಗಳು ಭಾರತೀಯರಲ್ಲಿ ಜನಪ್ರಿಯವಾಗಿವೆ ಆದರೆ ಮೇಲ್ಛಾವಣಿ ಕೆಫೆಗಳು ಹೆಚ್ಚು ಯುರೋಪಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಎರಡು ಮೇಲ್ಛಾವಣಿಯ ಕೆಫೆಗಳು ಮಾತ್ರ ಇವೆ ಮತ್ತು ಇಲ್ಲಿ ಅತ್ಯಂತ ರುಚಿಯಾದ ಹಮ್ಮುಸ್ ಪಿಟಾ ಮತ್ತು ಹಣ್ಣು ಸಲಾಡ್ ಸೇವೆಯನ್ನು ಒದಗಿಸುತ್ತದೆ.ಕೆಫೆಗಳು ತಮ್ಮ ನಿಧಾನ ಗತಿಯ ರಜಾದಿನದ ವಿಹಾರ ಸ್ಥಳವನ್ನು ಹೊಂದಿವೆ. ನೀವು ಸ್ನೇಹಿತರನ್ನು ಮಾಡಲು ಬಯಸಿದರೆ, ಈ ಮೇಲ್ಛಾವಣಿ ಕೆಫೆಗಳಲ್ಲಿ ಒಂದಕ್ಕೆ ಭೇಟಿ ಕೊಡಿ.

3. ದೇವಾಲಯಗಳನ್ನು ಅನ್ವೇಷಿಸಿ

3. ದೇವಾಲಯಗಳನ್ನು ಅನ್ವೇಷಿಸಿ

ಈ ಪಟ್ಟಣದ ಆಕರ್ಷಣೆಯ ಕೇಂದ್ರವು ಇನ್ನೂ ಶತಮಾನದಷ್ಟು ಹಳೆಯದಾದ ದೇವಾಲಯಗಳಾಗಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ, ಇಲ್ಲಿಯ ವಾಸ್ತುಶಿಲ್ಪವು ಕೇವಲ ಕಟ್ಟಡವೆಂದಷ್ಟೆ ಪರಿಗಣಿಸಲಾಗದೆ ಇದು ಕಲಾ ವೈಶಾಲ್ಯತೆಯ ಅದ್ಬುತವಾಗಿದ್ದು ವಿಶೇಷತೆಗಳು ಕೆಲವು ದೇವಾಲಗಳಿಂದ ಬಲವಾಗಿ ಹೊರಹೊಮ್ಮಿದೆ. ಸುಂದರವಾಗಿ ಕೆತ್ತಿದ ಕಲ್ಲುಗಳು, ಅವರು ಕಲ್ಲಿನಿಂದ ಮಾಡಲ್ಪಟ್ಟ ದೇವತೆಗಳ ವಿಗ್ರಹಗಳು ಮತ್ತು ದೇವಾಲಯಗಳ ಕಲ್ಲಿನ ಮಹಡಿಗಳು ವಿಜಯನಗರ ಯುಗದ ಜೀವನ ಶೈಲಿಯ ಬಗ್ಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಈ ದೇವಾಲಯಗಳು ಎಷ್ಟು ಚೆನ್ನಾಗಿ ಇದ್ದವು ಎಂಬುದನ್ನು ನೋಡುವುದೇ ಆಶ್ಚರ್ಯ! ರಾಜ್ಯವು ಹೋದರೂ, ಅದರ ನೆನಪುಗಳ ಸೆಳೆತವು ಇನ್ನೂ ಇದೆ. ಇಲ್ಲಿ ನಗರದ ಮಧ್ಯದಲ್ಲಿ ಒಂದು ದೇವಸ್ಥಾನವಿದೆ. ನೀವೇನಾದರು ಸಾಹಸ ಮಾಡಲು ಯೋಜಿಸಿದ್ದಲ್ಲಿ, ಪೊಲೀಸ್ ಠಾಣೆಗೆ ಸಮೀಪವಿರುವ ಆವೆನ್ಯೂಗೆ ಹೋಗಿ ನೀವು ವಿಜಯನಗರ ಸಾಮ್ರಾಜ್ಯದ ಅದ್ಭುತಗಳನ್ನು ಕಂಡುಕೊಳ್ಳಬಹುದು.

ಈ ದೇವಾಲಯಗಳನ್ನು ಅನ್ವೇಷಿಸಲು ನೀವು ಮೂರು ದಿನಗಳನ್ನು ಮೀಸಲಿಡಬೇಕು ಎಂದು ಸಲಹೆ ನೀಡಲಾಗಿದೆ.ನೀವು ಎಲ್ಲಾ ದೇವಸ್ಥಾನಗಳನ್ನು ಅನ್ವೇಷಿಸಬೇಕು ಎಂದು ನೀವು ಭಾವಿಸಿದಾಗ, ಹಂಪಿ ಬಿಟ್ಟು ನೀವು ಮತ್ತೊಮ್ಮೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ದೇವಸ್ಥಾನವು ಹಂಪಿಯಲ್ಲಿ ವಿಜಯ ವಿಠ್ಠಲ ದೇವಾಲಯ, ವಿರೂಪಾಕ್ಷ ದೇವಸ್ಥಾನ, ಮಂಕಿ ದೇವಾಲಯ (ಹನುಮಾನ್ ದೇವಸ್ಥಾನ) ಮತ್ತು ಅಚ್ಯುತಾರಾಯ ದೇವಸ್ಥಾನ ಮುಂತಾದುವುಗಳಿಗೆ ಭೇಟಿ ನೀಡುವುದು ಮರೆಯಬಾರದು.

4. ಬಂಡೆಗಳ ಮೇಲೆ ಏರಿ

4. ಬಂಡೆಗಳ ಮೇಲೆ ಏರಿ

ಬಂಡೆಗಳನ್ನು ಹತ್ತುವುದು ಹಂಪೆಯ ಒಂದು ಅತ್ಯಂತ ಸಾಹಸಮಯ ಮತ್ತು ರೋಮಾಂಚಕ ವಿಷಯವಾಗಿದೆ. ಇಲ್ಲಿ ಹತ್ತುವಾಗ ಕೆಳಗೆ ಬೀಳದೇ ಇರುವುದಾಕ್ಕಾಗಿ ಕೆಲವು ಹಗ್ಗಗಳನ್ನು ಕೆಲವು ಧರಿಸುವ ಸರಂಜಾಮುಗಳನ್ನು ಒದಗಿಸುವ ವೃತ್ತಿ ಪರ ಪರಿಣತರಿದ್ದು ಇವರು ದುಬಾರಿ ಶುಲ್ಕವನ್ನು ವಿಧಿಸುತ್ತಾರೆ. ನೀವು ಸ್ವತಃ ವಾಗಿ ಹತ್ತಲು ಪ್ರಯತ್ನಿಸುವುದು ಉತ್ತಮ. ನೀವು ಇಲ್ಲಿ ಬಂಡೆಗಳನ್ನು ಹತ್ತಲು ಬರುವಾಗ ಅನ್ವೇಷಿಸುವಂತಹದು ಬಹಳಷ್ಟಿದೆ.

ನಗರದ ಇನ್ನೊಂದು ಭಾಗದಲ್ಲಿರುವ ನದಿಯ ಕಡೆಗೆ ಹೋದರೆ ಅಲ್ಲಿ ಅನೇಕ ಹತ್ತುವ ಬಂಡೆಗಳನ್ನು ಕಾಣಬಹುದು . ಅಲ್ಲದೆ ಇಲ್ಲಿ ಅತ್ಯಂತ ಸುಂದರವಾದ ದೃಶ್ಯಗಳನ್ನೂ ವೀಕ್ಷಿಸಬಹುದಾಗಿದೆ. ಸೂರ್ಯ ಮೇಲೆ ಏರುತ್ತಿದ್ದಂತೆಯೇ ಇಲ್ಲಿ ನಿಮ್ಮ ಶಕ್ತಿಯು ಕುಗ್ಗುವುದರಿಂದ ನೀವು ನಿಮ್ಮೊಂದಿಗೆ ನೀರನ್ನು ಒಯ್ಯುವುದು ಉತ್ತಮ ಇಲ್ಲಿ ಬಂಡೆ ಹತ್ತುವಾಗ ನೀರಿನ ಅಗತ್ಯವಿರುತ್ತದೆ.

5. ಕಾರಾಕಲ್ ಬೋಟ್ ಸವಾರಿ

5. ಕಾರಾಕಲ್ ಬೋಟ್ ಸವಾರಿ

PC: Dey.sandip

ಇದು ಹಂಪಿಯಲ್ಲಿ ಮಾಡಬಹುದಾದ ಅತ್ಯಂತ ಜನಪ್ರಿಯ ವಸ್ತುಗಳಲ್ಲಿ ಒಂದಾಗಿದೆ. ನೀವು ದೋಣಿಗಳು ಸವಾರಿ ಮಾಡಿರಬಹುದು ಮತ್ತು ಕ್ರೂಸಸ್ ನಲ್ಲಿ ಹೋಗಬಹುದು ಆದರೆ ನೀವು ಕೊರಾಕಲ್ ಬೋಟಿನಲ್ಲಿ ಸವಾರಿ ಮಾಡಿರಲಿಕ್ಕಿಲ್ಲ.

ಈ ದೋಣಿಯು ವೃತ್ತಾಕಾರದಲ್ಲಿದ್ದು ಮರದಿಂದ ಮಾಡಲಾಗಿದೆ. ಈ ದೋಣಿಯಲ್ಲಿ ಒಮ್ಮೆಗೆ 5 ಜನರು ಕುಳಿತುಕೊಳ್ಳಬಹುದಾಗಿದೆ. ಈ ದೋಣಿಯಲ್ಲಿ ಯಾವುದೇ ಯಂತ್ರಗಳನ್ನು ಬಳಸಲಾಗಿರುವುದಿಲ್ಲ. ಇದನ್ನು ಒಯ್ಯಲು ಮತ್ತು ನೂಕಲು ದೊಡ್ಡ ಕೋಲಿನ ಸಹಾಯವನ್ನು ಬಳಸಲಾಗುತ್ತದೆ. ಹೌದು ಹಿಂದಿನ ಕಾಲದಂತೆ.

ಈ ದೋಣಿಯಲ್ಲಿ ಪ್ರಯಾಣಿಸಲು 70-80 ರಷ್ಟು ಶುಲ್ಕ ವಿಧಿಸುತ್ತಾರೆ ಅದು ಸಾಯಂಕಾಲದ ಹೊತ್ತಿನಲ್ಲಿ ಯಾವುದೇ ಕಾರಣವಿಲ್ಲದೆ ಇನ್ನೂ ಜಾಸ್ತಿ ದರವನ್ನು ಏರಿಸುತ್ತಾರೆ. ಯಾವುದೇ ಹಣಕ್ಕಿಂತಲೂ ಈ ದೋಣಿಯಲ್ಲಿ ವಿಹಾರ ಮಾಡುವುದೇ ಒಂದು ಅದ್ಬುತವಾದ ಅನುಭವವಾಗಿದೆ. ಈ ದೋಣಿಯಲ್ಲಿ ಪ್ರಯಾಣಿಸುವಾಗ ನಿಮಗೆ ಬೀಳುವಂತೆ ಅನುಭವವಾದರೂ ಇದರ ರಚನೆಯು ತುಂಬಾ ಪ್ರಭಲವಾಗಿರುವುದರಿಂದ ನೀವು ಇದರಲ್ಲಿ ಯಾವುದೇ ಭಯವಿಲ್ಲದೆ ಪ್ರಯಾಣ ಮಾಡಬಹುದು.

6. ಮೊಸಳೆ ನದಿಯ ಹತ್ತಿರ ಧ್ಯಾನ ಮಾಡಿ

6. ಮೊಸಳೆ ನದಿಯ ಹತ್ತಿರ ಧ್ಯಾನ ಮಾಡಿ

PC: Suvadip Sanyal

ಬಂಡೆ ಹತ್ತುವುದು, ಸವಾರಿ ಮತ್ತು ಅನ್ವೇಷಣೆ ಎಲ್ಲವೂ ಮಾಡಿದ ನಂತರ ನೀವು ಕೆಲ ಕ್ಷಣ ಶಾಂತಿಯುತವಾಗಿ ಮತ್ತು ಪ್ರಶಾಂತವಾಗಿರಲು ಬಯಸುವಿರಿ. ಅದಕ್ಕಾಗಿ ನೀವು ಮೊಸಳೆ ನದಿಯ ಹತ್ತಿರ ಹೋಗಲು ನಾವು ಶಿಫಾರಸು ಮಾಡುತ್ತೇವೆ. ಮತ್ತು ಇಲ್ಲಿ ನೀವು ಸಂತರ ಜೊತೆಗೆ ಧ್ಯಾನ ಮಾಡಿಕೊಂಡು ವಿಶ್ರಾಂತಿ ಪಡೆಯಬಹುದಾಗಿದೆ. ಈ ನದಿಯಲ್ಲಿ ಅನೇಕ ಮೊಸಳೆಗಳು ವಾಸಿಸುತ್ತವೆ ಎಂದು ಜನರು ನಂಬುತ್ತಾರೆ ಆದುದರಿಂದ ಇದನ್ನು ಮೊಸಳೆ ನದಿ ಎಂದು ಕರೆಯಲಾಗುತ್ತದೆ.

ಇಲ್ಲಿ ಮೊಸಳೆಗಳಿವೆ ಎಂದು ಹೇಳಲಾಗುತ್ತದೆಯೇ ಹೊರತು ಯಾರು ನೋಡಿದವರಿಲ್ಲ. ಅವು ಮನುಷ್ಯರ ತೊಂದರೆಗಳಿಂದ ತಪ್ಪಿಸಿಕೊಳ್ಳಲು ನದಿ ದಡದಿಂದ ಅತ್ಯಂತ ದೂರದಲ್ಲಿರುತ್ತವೆ. ನದಿಯ ಹಿನ್ನೆಲೆಯು ಛಾಯಾ ಚಿತ್ರ ತೆಗೆಯಲು ಸುಂದರವಾದ ದೃಶ್ಯವನ್ನು ಒದಗಿಸಿಕೊಡುತ್ತದೆ. ನೀವು ಅಲ್ಲಿಂದ 4ಕ್ಕೆ ತಲುಪಬಹುದು ಮತ್ತು ಸೂರ್ಯಾಸ್ತದ ತನಕ ಅಲ್ಲಿಯೇ ಉಳಿಯಬಹುದು, ನೀವು ಎಂದಾದರೂ ಸಾಕ್ಷಿಯಾಗುವ ಅತ್ಯಂತ ಸುಂದರವಾದ ವಸ್ತುಗಳಲ್ಲಿ ಒಂದಾಗಿದೆ.

7. ಭೇಟಿ ನೀಡಲು ಉತ್ತಮ ಸಮಯ

7. ಭೇಟಿ ನೀಡಲು ಉತ್ತಮ ಸಮಯ

PC: Dey.sandip

ಮಳೆಗಾಲದ ಸಮಯದಲ್ಲಿ, ಜುಲೈ ಮಧ್ಯದಿಂದ ಸೆಪ್ಟೆಂಬರ್ ವರೆಗೆ ಅಥವಾ ಚಳಿಗಾಲದಲ್ಲಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ನೀವು ಹಂಪಿಗೆ ಭೇಟಿ ನೀಡಬಹುದು.ಉಳಿದ ವರ್ಷವು ಬೆಚ್ಚಗಿನ ವಾತಾವರಣವನ್ನು ಒದಗಿಸಿಕೊಡುತ್ತದೆ.

ಹಂಪಿ ತಲುಪುವುದು ಹೇಗೆ?
ಹಂಪಿ ನಗರ ಕೇಂದ್ರದಿಂದ 13 ಕಿ.ಮೀ ದೂರದಲ್ಲಿರುವ ಹೋಸ್ಪೆಟ್ ಹತ್ತಿರದ ರೈಲು ನಿಲ್ದಾಣವನ್ನು ಹೊಂದಿದೆ.ವಿಮಾನದಿಂದ ಪ್ರಯಾಣ ಮಾಡಬೇಕೆಂದಿದ್ದಲ್ಲಿ, ಸಮೀಪದ ಸುಸಜ್ಜಿತ ವಿಮಾನ ನಿಲ್ದಾಣವು ಹುಬ್ಬಳ್ಳಿಯಲ್ಲಿದೆ, ಇದು 144 ಕಿ.ಮೀ ದೂರದಲ್ಲಿದೆ. ನೀವು ರಸ್ತೆ ಪ್ರಯಾಣ ಮಾಡಬೇಕೆಂದಿದ್ದರೆ ನೀವು ಭಾರತದ ಪ್ರಮುಖ ನಗರಗಳಿಂದ ಬಸ್ ಮೂಲಕ ಹಂಪಿಗೆ ಪ್ರಯಾಣ ಮಾಡಬಹುದಾಗಿದೆ.

Read more about: hampi india travel ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X