Search
  • Follow NativePlanet
Share
» »ಹೈದ್ರಾಬಾದ್ ಟಾಪ್ 5 ಪ್ರವಾಸಿ ಸ್ಥಳಗಳು

ಹೈದ್ರಾಬಾದ್ ಟಾಪ್ 5 ಪ್ರವಾಸಿ ಸ್ಥಳಗಳು

ಹೈದ್ರಾಬಾದ್ ತೆಲಂಗಾಣದ ರಾಜ್ಯದ ರಾಜಧಾನಿಯಾಗಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ವಾರಾಂತ್ಯದಲ್ಲಿ ಪ್ರವಾಸ ಮಾಡಬೇಕು ಎಂದು ನಿಮ್ಮ ಯೋಜನೆಯಾಗಿದ್ದರೆ ಒಮ್ಮೆ ಹೈದ್ರಾಬಾದ್‍ನಲ್ಲಿರುವ ಪ್ರವಾಸಿ ತಾಣಗಳಿಗೆ ಒಮ್ಮೆ ಭೇಟಿ ನೀಡಿ.

ಇಲ್ಲಿ ಹಿಂದಿನ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಸಹ ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಐತಿಹಾಸಿಕವಾದ ಸ್ಮಾರಕಗಳು, ಕಟ್ಟಡಗಳು, ಪ್ರಸಿದ್ಧವಾದ ಕೋಟೆಗಳು, ಮ್ಯೂಸಿಯಂ, ಕುತುಬ್ ಶಾಹಿ ಟಂಬ್ಸ್, ಹುಸೇನ್ ಸಾಗರ ಸರೋವರ, ಬಿರ್ಲಾ ಮಂದಿರ, ರಾಮೋಜಿ ಫೆಲ್ಮಿ ಸಿಟಿ, ನೆಹರು ಪಾರ್ಕ್ ಇನ್ನೂ ಹಲವಾರು ತಾಣಗಳನ್ನು ಒಂದೇ ತಾಣದಲ್ಲಿ ಕಾಣಬಹುದಾಗಿದೆ.

ಚಾರ್ಮಿನಾರ್

ಚಾರ್ಮಿನಾರ್

ಹೈದ್ರಾಬಾದ್ ಎಂದ ತಕ್ಷಣ ನಮ್ಮಗೆ ನೆನಪಾಗುವುದೇ ಚಾರ್ಮಿನಾರ್. ಇದು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಕಟ್ಟಡವು 1591 ರಲ್ಲಿ ಮೊಹಮ್ಮದ್ ಅಲಿ ಖುಲಿ ಖುತುಬ್ ಷಾ ನಿರ್ಮಾಣ ಮಾಡಿದರು. ಚಾರ್ಮಿನಾರ್ ವಾಸ್ತುಶಿಲ್ಪವು ಕಾಜಿಯ ಶೈಲಿಯಲ್ಲಿದೆ.

PC:Ramakrishna Reddy Y

ಚಾರ್ಮಿನಾರ್

ಚಾರ್ಮಿನಾರ್

ಈ ಸುಂದರವಾದ ಕಟ್ಟಡವು 48.7 ಮೀಟರ್ ಎತ್ತರ ಹೊಂದಿದೆ. ಚಾರ್ಮಿನಾರ್‍ನಲ್ಲಿ ಮಸೀದಿ ಮತ್ತು 45 ಪಾರ್ಥನಾ ಸ್ಥಳಗಳು ಇವೆ. ಸ್ಮಾರಕದ ಸುತ್ತಮುತ್ತಲಿನ ಶಾಪಿಂಗ್ ಪ್ರದೇಶವು ಅಗ್ಗದ ದರಗಳಲ್ಲಿ ಉತ್ಪನ್ನಗಳನ್ನು ಒದಗಿಸುತ್ತದೆ. ಈ ಅದ್ಭುತವಾದ ಸ್ಮಾರಕವನ್ನು ಕಾಣಲು ಪ್ರವೇಶ ಸಮಯವೆಂದರೆ ಬೆಳಗ್ಗೆ 9:30 ರಿಂದ ಸಂಜೆ 5:30 ರವರೆಗೆ.


PC:Aditya Kavoor

ಗೋಲ್ಕೊಂಡ ಕೋಟೆ

ಗೋಲ್ಕೊಂಡ ಕೋಟೆ

ಹೈದ್ರಾಬಾದ್ ಮತ್ತೊಂದು ಅದ್ಭುತವಾದ ಪ್ರವಾಸಿ ತಾಣಗಳಲ್ಲಿ ಗೋಲ್ಕೊಂಡ ಕೋಟೆ ಕೂಡ ಒಂದಾಗಿದೆ. ಹೈದ್ರಾಬಾದ್‍ಗೆ ತೆರಳಿದಾಗ ತಪ್ಪದೇ ಈ ತಾಣಕ್ಕೆ ಭೇಟಿ ನೀಡಲೇಬೇಕು, ಇಲ್ಲವಾದರೆ ನಿಮ್ಮ ಹೈದ್ರಾಬಾದ್ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಗೋಲ್ಕೊಂಡ ಎಂಬ ಹೆಸರು "ಗೊಲ್ಲಾ ಕೊಂಡ" ಇದು ಅದರ ಮೂಲ ಹೆಸರಾಗಿದೆ.

PC:Jamin Gray

ಗೋಲ್ಕೊಂಡ ಕೋಟೆ

ಗೋಲ್ಕೊಂಡ ಕೋಟೆ

ಈ ಅದ್ಭುತವಾದ ಕೋಟೆಯನ್ನು ಯಾದವ ರಾಜವಂಶದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ನಂತರ ಆನೇಕ ರಾಜವಂಶಗಳ ನಿಯಂತ್ರಣದಲ್ಲಿ ಕೂಡ ಈ ಕೋಟೆ ಇತ್ತು. ಅವುಗಳೆಂದರೆ ಕಾಕತೀಯ ರಾಜವಂಶ, ಬಹುಮನಿ ರಾಜವಂಶ, ಮೊಗಲ್ ರಾಜವಂಶ ಇನ್ನೂ ಹಲವಾರು. ಈ ಕೋಟೆಯನ್ನು 13 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಬೆಳಗ್ಗೆ 9:30 ರಿಂದ ಸಂಜೆ 5:30 ರವರೆಗೆ ಪ್ರವಾಸಿಗರಿಗೆ ಪ್ರವೇಶದ ಅನುಮತಿಯನ್ನು ನೀಡಲಾಗುತ್ತದೆ.


PC:Low Jianwei

ಹುಸೇನ್ ಸಾಗರ್ ಸರೋವರ

ಹುಸೇನ್ ಸಾಗರ್ ಸರೋವರ

ಹೈದ್ರಾಬಾದ್‍ನಲ್ಲಿ ಮತ್ತೊಂದು ಪ್ರಸಿದ್ಧವಾದ ಪ್ರವಾಸಿ ತಾಣವೆಂದರೆ ಅದು ಹುಸೇನ್ ಸಾಗರ್ ಸರೋವರವಾಗಿದೆ. ಈ ಸರೋವರವು ಏಷ್ಯಾದ ಅತಿ ದೊಡ್ಡ ಕೃತಕ ಸರೋವರವಾಗಿದೆ. ಇದು ಹೈದ್ರಾಬಾದ್ ಹಾಗು ಸಿಕಿಂದರಬಾದ್ ಎರಡು ನಗರಗಳನ್ನು ಸಂಪರ್ಕಿಸುತ್ತದೆ.

PC:Saikrishna Parnapalli

ಹುಸೇನ್ ಸಾಗರ್ ಸರೋವರ

ಹುಸೇನ್ ಸಾಗರ್ ಸರೋವರ

ಈ ಸರೋವರದ ಮಧ್ಯೆ ಭಾಗದಲ್ಲಿ ಬುದ್ಧನ ಪ್ರತಿಮೆ ಇದೆ. ಇದು ಸುಮಾರು 16 ಮೀಟರ್ ಎತ್ತರವಿದೆ. ಇಲ್ಲಿ ನಿಮ್ಮ ಸಂಗಾತಿಯೊಂದಿಗೆ ದೋಣಿ ವಿಹಾರ ಕೂಡ ಮಾಡಬಾಹುದಾಗಿದೆ. ಬೋಟಿಂಗ್, ಸ್ಕೀಯಿಂಗ್, ಕ್ರೂಸಿಂಗ್ ಮತ್ತು ಪ್ಯಾರಾ ಸೈಲಿಂಗ್ ಸೌಲಭ್ಯ ಇಲ್ಲಿ ಲಭ್ಯವಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕೂಡ ನೀವು ಆನಂದಿಸಿಬಹುದು.


PC:arunpnair

ಬಿರ್ಲಾ ಮಂದಿರ

ಬಿರ್ಲಾ ಮಂದಿರ

ಈ ಬಿರ್ಲಾ ಮಂದಿರವು ಹುಸೇನ್ ಸಾಗರದ ದಕ್ಷಿಣ ತುದಿಯ ಬೆಟ್ಟದ ತುದಿಯಲ್ಲಿದೆ. ಇದೊಂದು ಸುಂದರವಾದ ದೇವಾಲಯವಾಗಿದೆ. ಬಳಿ ಅಮೃತ ಶಿಲೆಯನ್ನು ಬಳಸಿ ನಿರ್ಮಾಣ ಮಾಡಲಾದ ಅದ್ಭುತವಾದ ದೇವಾಲಯವಾಗಿದೆ. ಈ ಕಟ್ಟಡವು ದಕ್ಷಿಣ ಭಾರತೀಯ ಮತ್ತು ಒರಿಯಾ ದೇವಾಲಯಗಳ ವಾಸ್ತುಶಿಲ್ಪವನ್ನು ಹೋಲುತ್ತದೆ.


PC:ambrett

ಬಿರ್ಲಾ ಮಂದಿರ

ಬಿರ್ಲಾ ಮಂದಿರ

ಅದ್ಭುತವಾದ ನಿರ್ಮಾಣವು ಈ ಸ್ಥಳವನ್ನು ಮರುಸೃಷ್ಟಿಸಲು ಬಯಸುತ್ತದೆ. ನೀವು ಬಿರ್ಲಾ ಮಂದಿರಕ್ಕೆ ಭೇಟಿ ನೀಡಿದರೆ ಮಾತ್ರ ಹೈದ್ರಾಬಾದ್‍ನ ಪ್ರವಾಸ ಪೂರ್ಣವಾಗುತ್ತದೆ. ದೇವಾಲಯದ ಪ್ರವೇಶದ ಸಮಯವೆಂದರೆ ಅದು ಬೆಳಗ್ಗೆ 7 ಗಂಟೆಯಿಂದ 12 ಗಂಟೆ ಹಾಗು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

PC:DAN

ನೆಹರೂ ಝೂವಲಾಜಿಕಲ್ ಪಾರ್ಕ್

ನೆಹರೂ ಝೂವಲಾಜಿಕಲ್ ಪಾರ್ಕ್

ಹೈದ್ರಾಬಾದ್‍ನ ಪ್ರಮುಖವಾದ ಪಾರ್ಕ್‍ಗಳಲ್ಲಿ ಇದು ಒಂದು. ಇದೊಂದು ಆಕರ್ಷಣಿಯ ಅಭಯಾರಣ್ಯವಾಗಿದೆ. ಇಲ್ಲಿ ಸುಮಾರು 1500 ವನ್ಯಜೀವಿಗಳನ್ನು ನೀವು ಕಾಣಬಹುದಾಗಿದೆ. ಈ ನೆಹರೂ ಝೂವಲಾಜಿಕಲ್ ಪಾರ್ಕ್‍ನ್ನು 1959 ರಲ್ಲಿ ಸ್ಥಾಪಿಸಲಾಯಿತು ಹಾಗು 1963 ರಲ್ಲಿ ಉದ್ಘಾಟಿಸಲಾಯಿತು.


PC:Ramesh NG

ನೆಹರೂ ಝೂವಲಾಜಿಕಲ್ ಪಾರ್ಕ್

ನೆಹರೂ ಝೂವಲಾಜಿಕಲ್ ಪಾರ್ಕ್

ಇಲ್ಲಿ ನೀವು ಸಿಂಹ, ರಾಯಲ್ ಬೆಂಗಾಲ್ ಹುಲಿ, ಬಿಳಿ ಹುಲಿ, ಖಡ್ಗಮೃಗ, ಒರಾಂಗುಟನ್ ಇನ್ನೂ ಹಲವಾರು ವನ್ಯ ಜೀವಿಗಳನ್ನು ಇಲ್ಲಿ ಕಾಣಬಹುದಾಗಿದೆ. ಭಾರತೀಯ ಕೋಬ್ರಾ, ಸ್ಟಾರ್ ಆಮೆಗಳು ಮತ್ತು ದೈತ್ಯ ಆಮೆಗಳನ್ನು ಕಾಣಬಹುದಾಗಿದೆ. ಇಲ್ಲಿನ ಸೊಂಪಾದ ಹಸಿರನ್ನು ಆನಂದಿಸಲು ಆನೆ ಸವಾರಿಗಳು ಕೂಡ ಲಭ್ಯವಿದೆ.

PC:Manu Manohar

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ಹೈದ್ರಾಬಾದ್‍ಗೆ ಸುಮಾರು 569 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಹೈದ್ರಾಬಾದ್ ವಿಮಾನ ನಿಲ್ದಾಣವಾಗಿದೆ. ರೈಲ್ವೆ ಮಾರ್ಗವಾಗಿ ಹೋಗಬೇಕಾದರೆ ಬೆಂಗಳೂರಿನಿಂದ ಸಾಕಷ್ಟು ರೈಲುಗಳಿವೆ. ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಸುಮಾರು 569 ಕಿ.ಮೀ ದೂರದಲ್ಲಿ ತೆರಳಬಹುದಾಗಿದೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more