• Follow NativePlanet
Share
Menu
» »ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕಾಗಿರುವ ಸ್ಥಳವಿದು........

ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕಾಗಿರುವ ಸ್ಥಳವಿದು........

Written By:

ಕೇರಳವನ್ನು ಗಾಡ್ಸ್ ಓನ್ ಕಂಟ್ರಿ ಎಂದು ಕರೆಯುತ್ತಾರೆ. ಕೇರಳ ತನ್ನ ಶ್ರೀಮಂತವಾದ ತಾಣವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ದೇಶದಲ್ಲಿಯೇ ಅಲ್ಲದೇ ವಿದೇಶದಲ್ಲಿಯೂ ಕೂಡ ಪ್ರವಾಸಿಗರ ಗಮನ ಸೆಳೆದಿರುವ ಅದ್ಭುತವಾದ ತಾಣವನ್ನು ಕೇರಳ ಹೊಂದಿದೆ. ಇಲ್ಲಿ ಎತ್ತರವಾದ ಪರ್ವತಗಳು, ವಾಣಿಜ್ಯ ನಗರಗಳು, ಬೀಚ್‍ಗಳನ್ನು ಕಂಡು ಆನಂದಿಸಬಹುದಾಗಿದೆ. ಕೇರಳದ ಸಮೃದ್ಧವಾದ ಸಂಸ್ಕøತಿ ಮತು ಪರಂಪರೆಯು ಪ್ರಪಂಚದಾದ್ಯಂತ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.

ಕೇರಳದ ಶ್ರೀಮಂತವಾದ ಪ್ರವಾಸಿ ತಾಣಗಳನ್ನು ತಿಳಿದುಕೊಳ್ಳಬೇಕಾದರೆ, ಪ್ರಸ್ತುತ ಲೇಖನದ ಮೂಲಕ ತಿಳಿದುಕೊಳ್ಳಿ.

ಅಲ್ಲೆಪ್ಪಿ

ಅಲ್ಲೆಪ್ಪಿ

ಕೇರಳದ ಅತ್ಯುತ್ತಮವಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಲೆಪ್ಪಿ ಕೂಡ ಒಂದು. ಇದರ ಹಿನ್ನೀರಿನ ಪ್ರವಾಸಗಳು, ದೋಣಿಮನೆ ತಂಗುವಿಕೆಗಳು ಮತ್ತು ಪ್ರಶಾಂತವಾದ ವಾತಾವರಣ ಇವೆಲ್ಲವೂ ಅಲ್ಲೆಪ್ಪಿಯ ಸೌಂದರ್ಯವಾಗಿದೆ. ನೀರಿನಿಂದ ತುಂಬಿತುಳುಕುತ್ತಿರುವ ಈ ಪ್ರದೇಶದಲ್ಲಿ ಭೇಟಿ ನೀಡಿ, ದೋಣಿ ವಿಹಾರ ಮಾಡಬೇಕು ಎಂದು ಅನ್ನಿಸದೇ ಇರದು.


PC: The.chhayachitrakar

ಅಲ್ಲೆಪ್ಪಿ

ಅಲ್ಲೆಪ್ಪಿ

ಈ ಅದ್ಭುತವಾದ ಸ್ಥಳದಲ್ಲಿ ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳ ಮರ-ಗಿಡಗಳನ್ನು ಕಂಡು ಆನಂದಿಸಬಹುದು. ಇಲ್ಲಿನ ಆಹಾರ ಪದ್ಧತಿಯೇ ಅತ್ಯಂತ ವಿಭಿನ್ನವಾದುದು ಹಾಗು ಸ್ವಾಧಿಷ್ಟವಾದುದು. ಈ ಅಲ್ಲೆಪ್ಪಿ ಸಮೀಪದಲ್ಲಿನ ಉತ್ತಮವಾದ ಪ್ರವಾಸಿ ತಾಣಗಳು ಎಂದರೆ ಅಲಪುಳ ಬೀಚ್, ಕೃಷ್ಣಪುರಂ ಅರಮನೆ, ಮರಾರಿ ಬೀಚ್ ಇನ್ನು ಹಲವಾರು. ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಸೆಪ್ಟೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ.

ಸಮೀಪದ ವಿಮಾನ ನಿಲ್ದಾಣ: ಕೊಚ್ಚಿ ವಿಮಾನ ನಿಲ್ದಾಣ. ಇದು ನಗರದಿಂದ ಸುಮಾರು 53 ಕಿ.ಮೀ ದೂರದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣ: ಅಲ್ಲೆಪ್ಪಿ ರೈಲ್ವೆ ನಿಲ್ದಾಣ


PC:Sravanbaddi

ಮನ್ನಾರ್

ಮನ್ನಾರ್

ಕೇರಳದ ಗಿರಿಧಾಮಗಳಲ್ಲಿ ಅತ್ಯಂತ ಜನಪ್ರಿಯವಾದ ತಾಣವೆಂದರೆ ಅದು ಮುನ್ನಾರ್. ಕೇರಳಗೆ ಭೇಟಿ ಅತಿ ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ಹೆಚ್ಚಾಗಿ ಚಹಾದ ಎಸ್ಟೇಟ್‍ಗಳನ್ನು ಕಣ್ಣುತುಂಬಿಕೊಳ್ಳಬಹುದು. ಸುಮಾರು 80,000 ಕಿ.ಮೀ ದೂರದಷ್ಟು ಚಹಾ ತೋಟ ಇಲ್ಲಿದೆ. ಇಲ್ಲಿ ಹೆಚ್ಚಾಗಿ ನವ ದಂಪತಿಗಳು ಭೇಟಿ ನೀಡುತ್ತಾರೆ.


PC:Aruna

ಮನ್ನಾರ್

ಮನ್ನಾರ್

ಅದ್ಭುತವಾದ ಬಂಗಲೆಗಳು, ತಂಪಾದ ಗಾಳಿ, ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ವಾತಾವರಣ ಮನಸ್ಸಿಗೆ ಸಂತೋಷವನ್ನು ಉಂಟು ಮಾಡುತ್ತದೆ. ಇಲ್ಲಿನ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆ ಎಂದರೆ ಅದು ಟಾಟಾ ಟೀ ಮ್ಯೂಸಿಯಂ, ಅಟಕುಲ್ ಜಲಪಾತ, ಟಾಪ್ ಸ್ಟೇಷನ್, ಕುಂಡಲ ಕೆರೆ, ಅನಾಮುಡಿ ಮತ್ತು ಎರಾವಿಕುಲಂ ನ್ಯಾಷನಲ್ ಪಾರ್ಕ್ ಇನ್ನು ಹಲವಾರು, ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸ್ಥಳವೆಂದರೆ ಅಕ್ಟೋಬರ್‍ನಿಂದ ಮಾರ್ಚ್ ತಿಂಗಳವರೆಗೆ.

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಕೊಚ್ಚಿ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ಸುಮಾರು 143 ಕಿ.ಮೀ ದೂರದಲ್ಲಿ ಮುನ್ನಾರ್ ಇದೆ.

ಸಮೀಪದ ರೈಲ್ವೆ ನಿಲ್ದಾಣ: ಮನ್ನಾರ್‍ನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಅಲುವಾ ರೈಲು ನಿಲ್ದಾಣ ಅತ್ಯಂತ ಸಮೀಪವಾದುದು.

PC:Aruna

ಕುಮರಕೊಮ್

ಕುಮರಕೊಮ್

ಕೇರಳದಲ್ಲಿನ ಅತ್ಯಂತ ಪ್ರಶಾಂತವಾದ ಸ್ಥಳಗಳಲ್ಲಿ ಈ ಕುಮರಕೊಮ್ ಕೂಡ ಒಂದು. ಈ ತಾಣವು ತಂಪಾದ ಹವಮಾನ, ಮುಗಿಲ್ಲೆತ್ತರದ ವೃಕ್ಷಗಳು, ಆಗಾಧವಾದ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೊಂದಿದೆ. ಇಲ್ಲಿ ಬೋಟಿಂಗ್, ಕ್ರೂಸಿಂಗ್, ದೋಣೆಮನೆಯಲ್ಲಿ ಉಳಿದುಕೊಳ್ಳುವಿಕೆ, ಮೀನುಗಾರಿಕೆಯಂತಹ ಅಪೂರ್ವವಾದ ಅನುಭವವನ್ನು ಪಡೆಯಬಹುದು.

PC:Manjithkaini

ಕುಮರಕೊಮ್

ಕುಮರಕೊಮ್

ಕೇರಳದ ದೃಶ್ಯಗಳ ವೈಭವಗಳಲ್ಲಿ ಈ ತಾಣವು ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇಲ್ಲಿನ ಜನಪ್ರಿಯವಾದ ಆಕರ್ಷಣೆಗಳು ಯಾವುವು ಎಂದರೆ, ಕುಮಾರಕೋಂ ಪಕ್ಷಿಧಾಮ, ಅರುವಿಕ್ಕುಳಿ ಜಲಪಾತ, ಜುಮಾ ಮಸೀದಿ, ತಿರುನಕ್ಕರ ಮಹಾದೇವ ದೇವಾಲಯ, ವೆಂಬನಾಡ್ ಸರೋವರ ಇನ್ನು ಹಲವಾರು. ಈ ತಾಣಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಅದು ಸೆಪ್ಟೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ.

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಕೊಚ್ಚಿ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಕುಮಾರಕೊಮ್‍ಗೆ ಸುಮಾರು 85 ಕಿ.ಮೀ ದೂರದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಕೊಟ್ಟಾಯಂ ರೈಲ್ವೆ ನಿಲ್ದಾಣವಾಗಿದೆ. ಇದು 16 ಕಿ.ಮೀ ದೂರದಲ್ಲಿದೆ.

PC:Ashwin Kumar

ವಯನಾಡ್

ವಯನಾಡ್

ವಯನಾಡ್ ಎಂದರೆ ಮಲಯಾಳಂನಲ್ಲಿ "ಭತ್ತದ ಭೂಮಿ" ಎಂದೇ ಆಗಿದೆ. ಕೇರಳಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ವಯನಾಡ್ ಕೂಡ ಒಂದಾಗಿದೆ. ಇಲ್ಲಿನ ಧಾರ್ಮಿಕ ಸೌಂದರ್ಯ, ಪ್ರಶಾಂತವಾದ ವಾತಾವರಣ ಮತ್ತು ಶ್ರೀಮಂತವಾದ ಸಂಸ್ಕøತಿಯಿಂದ ಈ ವಯನಾಡ್ ಸಮೃದ್ಧವಾಗಿದೆ. ಅಷ್ಟೇ ಅಲ್ಲದೇ ಈ ಸ್ಥಳವು ತನ್ನದೇ ಆದ ಸಂಸ್ಕøತಿ, ಸಂಪ್ರದಾಯ ಮತ್ತು ಬುಡಕಟ್ಟು ಪರಂಪರೆಯಲ್ಲಿ ಅದರ ಶ್ರೀಮಂತಿಕೆಗೆ ಪ್ರಸಿದ್ಧವಾಗಿದೆ.

PC:Stalinsunnykvj

ವಯನಾಡ್

ವಯನಾಡ್

ಇಲ್ಲಿನ ಜನಪ್ರಿಯವಾದ ಆಕರ್ಷಣೆಗಳು ಎಂದರೆ ಅದು ತುಶರಗಿರಿ ಜಲಪಾತ, ತಿರುನೆಲ್ಲಿ ದೇವಾಲಯ, ಕಬಿನಿ, ಪಾಪನಾಶಿನಿ ನದಿ, ಪಿಲಿಯಾರ್‍ಮಾಲ ಜೈನ ದೇವಾಲಯ, ಬನಸುರ ಬೆಟ್ಟ, ಲಕ್ಕಿಡಿ ವ್ಯೂ ಪಾಯಿಂಟ್ ಇನ್ನು ಹಲವಾರು. ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸ್ಥಳ ಯಾವುದೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳವರೆಗೆ.

ಸಮೀಪದ ವಿಮಾನ ನಿಲ್ದಾಣವೆಂದರೆ ಕ್ಯಾಲಿಕಟ್‍ನಿಂದ ಕರಿಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಕೇವಲ 95 ಕಿ.ಮೀ ದೂರದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣವೆಂದರೆ ವಯನಾಡಿನಿಂದ ಸುಮಾರು 72 ಕಿ.ಮೀ ದೂರದಲ್ಲಿರುವ ಕೋಳಿಕ್ಕೋಡ್ ರೈಲ್ವೆ ನಿಲ್ದಾಣ.


PC:Irvin calicut

ವರ್ಕಲಾ

ವರ್ಕಲಾ

ಈ ವರ್ಕಲಾ ಕೇರಳದ ಅತ್ಯಂತ ಸುಂದರವಾದ ಸಮುದ್ರ ತೀರಗಳಲ್ಲಿ ಒಂದಾಗಿದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ನೀರಿನಲ್ಲಿ ಸಾಹಸ ಮಾಡುವ ಉತ್ಸಾಹಿಗಳಿಗೆ ಈ ಬೀಚ್ ಸೂಕ್ತವಾದುದು. ಇಲ್ಲಿ ದೋಣಿ ಸವಾರಿ, ಸರ್ಫಿಂಗ್, ಪ್ಯಾರಾಸೈಲಿಂಗ್, ಜೆಟ್ಟಿಂಗ್, ಕುದುರೆ ಸವಾರಿಯಂತಹ ಚಟುವಟಿಕೆಗಳನ್ನು ಆನಂದಿಸಬಹುದು.


PC:Henryk Kotowski

ವರ್ಕಲಾ

ವರ್ಕಲಾ

ಸೂರ್ಯಾಸ್ತ ಹಾಗು ಸೂರ್ಯೋದಯದ ಸಮಯದಲ್ಲಿ ಪ್ರವಾಸಿಗರಿಗೆ ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ. ಇಷ್ಟೇ ಅಲ್ಲದೇ ವರ್ಕಲಾ ಹಿಂದೂ ಸಂಸ್ಕøತಿಯಲ್ಲಿ ಪ್ರಮುಖವಾದ ಧಾರ್ಮಿಕವಾದ ಸ್ಥಳವಾಗಿದೆ. ಇಲ್ಲಿ ಆನೇಕ ಹಿಂದೂ ದೇವಾಲಯವನ್ನು ಕೂಡ ಕಾಣಬಹುದು. ಇಲ್ಲಿನ ಪ್ರಸಿದ್ಧ ಆಕರ್ಷಣೆಯೆಂದರೆ ಅದು ಪಾಪನಾಶ ಬೀಚ್, ಜನಾರ್ಧನ ಸ್ವಾಮಿ ದೇವಾಲಯ, ವಿಷ್ಣು ದೇವಾಲಯ, ವರ್ಕಲಾ ಸುರಂಗ ಇನ್ನು ಹಲವಾರು.

ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಅದು ಆಗಸ್ಟ್ ತಿಂಗಳಿನಿಂದ ಮೇ ತಿಂಗಳವರೆಗೆ.

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಈ ಬೀಚ್‍ಗೆ ಸುಮಾರು 53 ಕಿ.ಮೀ ದೂರದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ವರ್ಕಲಾ ಶಿವಗಿರಿ ರೈಲ್ವೆ ನಿಲ್ದಾಣವು ಅತ್ಯಂತ ಸಮೀಪವಾದುದಾಗಿದೆ.


PC:Lukas Vacovsky

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ