Search
  • Follow NativePlanet
Share
» »ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಬೀಚ್ ಎಂದರೆನೇ ಪ್ರಕೃತಿಯೊಂದಿಗಿನ ಸಂಬಂಧ ಎಂದೇ ಹೇಳಬಹುದು. ಮಾನವನು ತನ್ನ ಜೀವನದಲ್ಲಿ ಆಗುವ ಆನಂದವನ್ನು, ಆಹ್ಲಾದಕರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯವಾದುದೇ. ಅನೇಕ ಮಂದಿ ಪ್ರವಾಸಿಗರು ಪ್ರಕೃತಿಯನ್ನು ಆರಾಧಿಸುವವರು ಇದ್ದಾ

ಬೀಚ್ ಎಂದರೆನೇ ಪ್ರಕೃತಿಯೊಂದಿಗಿನ ಸಂಬಂಧ ಎಂದೇ ಹೇಳಬಹುದು. ಮಾನವನು ತನ್ನ ಜೀವನದಲ್ಲಿ ಆಗುವ ಆನಂದವನ್ನು, ಆಹ್ಲಾದಕರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯವಾದುದೇ. ಅನೇಕ ಮಂದಿ ಪ್ರವಾಸಿಗರು ಪ್ರಕೃತಿಯನ್ನು ಆರಾಧಿಸುವವರು ಇದ್ದಾ0ರೆ. ತಂಪಾದ ಹಾಗು ಶಾಂತವಾದ ವಾತಾರಣವನ್ನು ಆನಂದಿಸಬೇಕು ಎನ್ನುವವರು ಬೀಚ್‍ನಲ್ಲಿ ಕಾಲ ಕಳೆಯಬೇಕು ಎಂದು ಅಂದುಕೊಳ್ಳುವುದುಂಟು.

ನಮ್ಮ ಭಾರತ ದೇಶವು ವಿದೇಶಗಳಿಗೆನೂ ಕಡಿಮೆ ಏನು ಇಲ್ಲ. ಇಲ್ಲಿನ ಅಂದ-ಚಂದವನ್ನು ಕಾಣಲು ವಿದೇಶಿಗಳೇ ನಮ್ಮ ದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ರೋಮಾಂಚನಕಾರಿ ಅನುಭೂತಿಯನ್ನು ಉಂಟು ಮಾಡುವ ಹಲವಾರು ಬೀಚ್‍ಗಳು ಇವೆ. ಆ ಬೀಚ್‍ಗಳು ಯಾವುವು? ಆ ಬೀಚ್‍ಗಳ ಪ್ರಮುಖ್ಯತೆ ಏನು? ಎಂಬ ಹಲವಾರು ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಬಂಗಾರದ ಬೀಚ್
ಇದನ್ನು ಹನಿಮೂನ್‍ಗೆ ಭೇಟಿ ನೀಡಲು ಪ್ರಶ್ಯಸ್ತವಾದ ಬೀಚ್ ಎಂದೇ ಕರೆಯುತ್ತಾರೆ. ಇದನ್ನು ನವದಂಪತಿಗಳಿಗೆ ಸ್ವರ್ಗ ಎಂದೇ ಹೆಸರುವಾಸಿಯಾಗಿದೆ. ಈ ಬೀಚ್‍ನಲ್ಲಿ ಆನೇಕ ಆಟಗಳನ್ನು ಆಡಬಹುದಾಗಿದೆ. ಬೀಚ್ ಸುಂದರವಾದ ಹಚ್ಚ ಹಸಿರಿನ ಪ್ರದೇಶವನ್ನು ಹೊಂದಿದ್ದು, ಮೊಗಿಲೆತ್ತರದ ಕೊಬ್ಬರಿ ತೋಟಗಳು ಪ್ರವಾಸಿಗರನ್ನು ಆತ್ಯಾಕರ್ಷಿಸುತ್ತದೆ. ಇವುಗಳ ವಿಸ್ತೀರ್ಣ ಸುಮಾರು 120 ಎಕರೆಗಳಷ್ಟಿರುತ್ತದೆ. ಸಮೀಪದಲ್ಲಿಯೇ ರುಚಿಕರವಾದ ಆಹಾರಗಳು ದೊರೆಯುತ್ತವೆ. ಈ ಪ್ರದೇಶವು ಎಷ್ಟೊ ವಿಧದ ಪಕ್ಷಿಗಳು, ಗಿಳಿಗಳು, ಮುಳ್ಳು ಹಂದಿಗಳು ಕೂಡ ಕಾಣಬಹುದಾಗಿದೆ.

Photo Courtesy: Binu K S

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಜುಹು ಬೀಚ್
ಮುಂಬೈಗೆ ತೆರಳಿದರೆ ತಪ್ಪದೇ ಭೇಟಿ ನೀಡಬೇಕಾದ ಬೀಚ್ ಎಂದರೆ ಅದು ಜುಹು ಬೀಚ್. ಇದೊಂದು ಮುಂಬೈನಲ್ಲಿ ಪ್ರಖ್ಯಾತಿ ಪಡೆದಿರುವ ಬೀಚ್ ಆಗಿದೆ. ಇಲ್ಲಿ ಪ್ರಕೃತಿ ಪ್ರೇಮಿಗಳಿಗೆ ಎಷ್ಟೋ ಆಹ್ಲಾದವನ್ನು ಉಂಟು ಮಾಡುತ್ತದೆ. ಮುಂಬೈನ ಮೂಲೆ ಮೂಲೆಗಳಿಂದ ಭೇಟಿ ನೀಡುವ ಈ ಸ್ಥಳವೂ ಒಂದು ರೋಮಾಂಚನಕಾರಿ ಅನುಭೂತಿಯನ್ನು ಉಂಟು ಮಾಡುತ್ತದೆ. ಇದೊಂದು ಅದ್ಭುತವಾದ ಬೀಚ್ ಆಗಿದ್ದು, ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯೋದಯದ ಸಮಯದಲ್ಲಿ ಅತ್ಯುತ್ತಮವಾದ ನೋಟವನ್ನು ಬೀರುತ್ತದೆ. ಇಲ್ಲಿ ಸಂಜೆಯ ಸಮಯದಲ್ಲಿ ಬೇಲ್ ಪೂರಿ, ಪಾನಿ ಪೂರಿಯಂತಹ ರುಚಿಕರವಾದ ಆಹಾರಗಳನ್ನು ಸವಿಯಬಹುದಾಗಿದೆ.

Photo Courtesy: Rajkiran

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಕನ್ಯಾಕುಮಾರಿ ಬೀಚ್
ಕನ್ಯಾಕುಮಾರಿ ಬೀಚ್ ಒಂದು ಸುಂದರವಾದ ಹಾಗು ಆಹ್ಲಾದಕರವಾದ ಪ್ರಕೃತಿ ಪ್ರದೇಶವಾಗಿದೆ. ಈ ಪ್ರದೇಶವು ಕೇವಲ ಬೀಚ್‍ಗೆ ಅಲ್ಲ ಭಕ್ತಿ ಭಾವಕ್ಕೂ ಪುಣ್ಯ ಭೂಮಿಯಾಗಿದೆ. ಕನ್ಯಾಕುಮಾರಿಯ ಬೀಚ್‍ನಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಮುಖ್ಯವಾಗಿ ಕಾಣಲು ಏಪ್ರಿಲ್ ತಿಂಗಳ ಪೌರ್ಣಮಿಯ ದಿನದಂದು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಮೂರು ನದಿಗಳು ಸೇರುತ್ತದೆ. ಅವುಗಳೆಂದರೆ ಬಂಗಾಳಕೊಲ್ಲಿ ಸಮುದ್ರ, ಅರೇಬಿಯಾ ಸಮುದ್ರ ಮತ್ತು ಹಿಂದೂ ಮಹಾ ಸಮುದ್ರವಾಗಿದೆ. ಹಾಗಾಗಿಯೇ ಇದನ್ನು ತ್ರೀವೇಣಿ ಸಂಗಮ ಕ್ಷೇತ್ರವೆಂದೇ ಪ್ರಸಿದ್ಧಿಯನ್ನು ಪಡೆದಿದೆ.

Photo Courtesy: shadow of d


ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಕಪು ಬೀಚ್
ಕಪು ಬೀಚ್ ಕರ್ನಾಟಕ ರಾಜ್ಯದ ಉಡುಪಿ ಪ್ರದೇಶದಲ್ಲಿದೆ. ಈ ಬೀಚ್ ತನ್ನ ಪ್ರಾಕೃತಿಕ ವಾತಾವರಣಕ್ಕೆ ಮತ್ತು ಆಹ್ಲಾದಕರವಾದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅನೇಕ ಪ್ರವಾಸಿಗರು ಈ ಬೀಚ್‍ಗೆ ಭೇಟಿ ನೀಡಿ ಇಲ್ಲಿ ಅದ್ಭುತವಾದ ಸೌಂದರ್ಯವನ್ನು ಅಸ್ವಾಧಿಸುತ್ತಿರುತ್ತಾರೆ. ಇಲ್ಲಿ ಸ್ವಿಮ್ಮಿಂಗ್ ಮತ್ತು ಸೂರ್ಯಸ್ನಾನಗಳು ಮಾಡುತ್ತಾ ಇರುತ್ತಾರೆ. ನೀವು ಈ ಪ್ರದೇಶವನ್ನು ಪಿಕ್ನಿಕ್ ಎಂದು ಹಾರಿಸಿಕೊಳ್ಳಬಹುದು. ಕುಟುಂಬದವರೊಂದಿಗೆ ಹಾಗು ನವದಂಪತಿಗಳು ತಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಸೂಕ್ತವಾದ ಬೀಚ್ ಎಂದೇ ಹೇಳಬಹುದು.

Photo Courtesy: Subhashish Panigrahi


ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಮಹಾಬಲೀಪುರಂ ಬೀಚ್
ಮಹಾಬಳಿಪುರಂ ಬೀಚ್ ಬಂಗಾಳಕೊಲ್ಲಿ ತೀರದಲ್ಲಿದೆ. ಈ ಬೀಚ್ ಚೆನ್ನೈಗೆ ದಕ್ಷಿಣ ದಿಕ್ಕಿಗೆ ಸುಮಾರು 58 ಕಿ.ಮೀ ದೂರದಲ್ಲಿದೆ. ಮಹಾಬಲೀಪುರಂ ಬೀಚ್ ಸುಮಾರು 20 ಕಿ.ಮಿ ವಿಸ್ತರಿಸಿದೆ. ಈ ಬೀಚ್ 20 ನೇ ಶತಮಾನದಲ್ಲಿ ಬೆಳಕಿಗೆ ಬಂದಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಈ ಬೀಚ್ ಪ್ರವಾಸಿಗರನ್ನು ಆಕರ್ಷಿಸುವುರಲ್ಲಿ 2 ಮಾತೇ ಇಲ್ಲ. ಸುಂದರವಾದ ಈ ಬೀಚ್‍ನ ಹಿಂದೆ ಅನೇಕ ವಿಧದ ಸ್ಮಾರಕಗಳು, ಕಲ್ಲಿನ ಕಟ್ಟಡಗಳು ಕಾಣಿಸುತ್ತವೆ.

Photo Courtesy: SM14

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X