Search
  • Follow NativePlanet
Share
» »ಮುಂಬೈ ಬಳಿ ತಂಡದೊಂದಿಗೆ ಪ್ರವಾಸ ಮಾಡಬಹುದಾದ 5 ಅದ್ಬುತ ತಾಣಗಳು

ಮುಂಬೈ ಬಳಿ ತಂಡದೊಂದಿಗೆ ಪ್ರವಾಸ ಮಾಡಬಹುದಾದ 5 ಅದ್ಬುತ ತಾಣಗಳು

ಮುಂಬಯಿ ಬಳಿ ಕಾರ್ಪೊರೇಟ್ ತಂಡ ಪ್ರವಾಸಗಳ ಬಗ್ಗೆ ಓದಿ. ಲೋನಾವಾಲ ದೃಶ್ಯವೀಕ್ಷಣೆಯ ಬಗ್ಗೆ, ಲವಾಸಾ ಪ್ರವಾಸೋದ್ಯಮ, ಮಥೆರಾನ್ ಆಸಕ್ತಿಗಳ ಬಗ್ಗೆ ಮತ್ತು ಇನ್ನಷ್ಟು ತಿಳಿದುಕೊಳ್ಳಿ.

By Manjula Balaraj Tantry

ಮುಂಬೈಯನ್ನು ಪ್ರೀತಿಯಿಂದ " ಕನಸುಗಳ ನಗರ" ವೆಂದು ಕರೆಯುತ್ತಾರೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಜವೂ ಹೌದು. ಇದು ಭಾರತದಲ್ಲಿ ಉತ್ತಮ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಗರಗಳಲ್ಲೊಂದಾಗಿದೆ. ನೀವು ಕಾರ್ಪೊರೇಟ್ ಉದ್ಯಮದಲ್ಲಿ ಕೆಲಸ ಮಾಡುವರರಾಗಿರಿ ಅಥವಾ ಬಾಲಿವುಡ್ ನಂತಹ ಸಂಸ್ಥೆಗಳಲ್ಲಿಯೇ ಆಗಿರಲಿ ಇಲ್ಲಿ ಎಲ್ಲಾ ರೀತಿಯ ಉದ್ಯೋಗಗಳಿಗೂ ಅವಕಾಶವಿದೆ. ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಜನ ಇಲ್ಲಿಗೆ ದೇಶದ ವಿವಿಧ ಭಾಗಗಳಿಂದ ಸುಂದರವಾದ ಜೀವನವನ್ನು ಪ್ರಾರಂಭಿಸುವ ಉದ್ದೇಶದಿಂದ ಬರುತ್ತಾರೆ.

ಖಂಡಿತವಾಗಿಯೂ ಕಾರ್ಮಿಕ ವರ್ಗದ ಜನರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಮುಂಬೈ ನಗರದಲ್ಲಿ ಕಾಣಸಿಗುತ್ತದೆ. ಕಾಂಕ್ರೀಟ್ ಕಾಡಿನಲ್ಲಿ ಮತ್ತು ಕಿಕ್ಕಿರಿದ ಜನರಿಂದ ಕೂಡಿದ ಜಾಗಗಳಿಂದ ಕೂಡಿದ್ದು ಇಲ್ಲಿ ಅನ್ವೇಷಿಸುವಂತಹುದು ಬಹಳಷ್ಟಿದೆ. ಮತ್ತು ಇಲ್ಲಿಯ ದಿನಚರಿಯ ಕೆಲಸದ ಜೀವನದಿಂದ ಬಳಲುವುದೂ ಸಹಜ. ಈ ತೊಂದರೆಯಿಂದ ವಿಶ್ರಾಂತಿ ಪಡೆಯಲು ಯಾವಾಗಲಾದರೊಮ್ಮೆ ಒಂದು ತಂಡ ಮಾಡಿಕೊಂಡು ಇಲ್ಲಿಯ ಸಮೀಪದ ತಾಣಗಳಿಗೆ ಸಹೋದ್ಯೋಗಿಗಳೊಂದಿಗೆ ಪ್ರವಾಸ ಮಾಡಲು ಆಯೋಜಿಸಿ ಇದರಿಂದ ಒಬ್ಬರನ್ನೊಬ್ಬರು ಅರಿಯಲೂ ಕೂಡ ಸಹಾಯವಾಗುತ್ತದೆ.

ಇದನ್ನೂ ಓದಿ: ನೀವು ಮುಂಬೈಯಲ್ಲಿದ್ದು ಮುಂಬೈ ಬಗ್ಗೆ ಆಸಕ್ತಿದಾಯಕ ಸಂಗತಿಗಳ ಬಗ್ಗೆ ನಿಮಗೆ ತಿಳಿದಿಲ್ಲ ಎಂದಾದರೆ ಮತ್ತು ತ್ವರಿತ ತಂಡ ಪ್ರವಾಸಕ್ಕಾಗಿ ಎಲ್ಲಿಗೆ ಹೋಗಬೇಕೆಂದು ಆಶ್ಚರ್ಯಪಡುತ್ತಿದ್ದರೆ, ನೀವು ಭೇಟಿ ನೀಡುವ ಪ್ರಮುಖ 5 ಸ್ಥಳಗಳು ಇಲ್ಲಿವೆ.

ಮಾಥೆರಾನ್

ಮಾಥೆರಾನ್

ಸುಂದರವಾದ ಗಿರಿಧಾಮವಾದ ಮಾಥೆರಾನ್ ಮುಂಬೈನಿಂದ ಕೇವಲ 80 ಕಿ.ಮೀ ದೂರದಲ್ಲಿದೆ, ಇದು 2-3 ಗಂಟೆಗಳ ಪ್ರಯಾಣ ಆಗಿದೆ. 2600 ಅಡಿ ಎತ್ತರದಲ್ಲಿರುವ ಮಾಥೆರಾನ್ ಅಕ್ಷರಶಃ "ಹಣೆಯ ಮೇಲಿರುವ ಕಾಡು" ಎಂದು ಅರ್ಥೈಸುವಂತಿದೆ. ಇದು ಭವ್ಯವಾದ ಪಶ್ಚಿಮ ಘಟ್ಟಗಳ ಮೇಲ್ಭಾಗದಲ್ಲಿರುವುದರಿಂದ ಈ ರೀತಿ ಉಲ್ಲೇಖಿಸಲ್ಪಟ್ಟಿದೆ.

ಮಾಥೆರಾನಿಗೆ 40ವ್ಯೂ ಪಾಯಿಂಟ್ ಗಳಿದ್ದು , ಅದು ಇಡೀ ಗಿರಿಧಾಮದ ಅದ್ಭುತ ನೋಟವನ್ನು ನೀಡುತ್ತದೆ.ಇಡೀ ತಂಡವು ಈ ಜಾಗಗಳಲ್ಲಿ ಟ್ರಕ್ಕಿಂಗ್ ನಂತಹ ಸಾಹಸಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಅಲ್ಲದೆ ಕಾರ್ಪೊರೇಟ್ ತಂಡಗಳಿಗೆಂದೇ ಮೀಸಲಾಗಿರುವ ಸಾಹಸಿ ಶಿಬಿರಗಳಲ್ಲೂ ಉಳಿದುಕೊಳ್ಳಬಹುದು.

PC: Travel Miles With Smiles

ಕಾಶಿದ್

ಕಾಶಿದ್

ಮುಂಬೈನಿಂದ 168 ಕಿ.ಮೀ ದೂರದಲ್ಲಿರುವ ಕಾಶಿದ್ ಸುಂದರವಾದ ಮತ್ತು ಪ್ರಶಾಂತವಾದ ಸಮುದ್ರ ತೀರದ ಪಟ್ಟಣವಾಗಿದೆ.ಇದು ಕಡಿಮೆ ಪ್ರಸಿದ್ದಿಯನ್ನು ಪಡೆದ ಸ್ಥಳವಾಗಿರುವುದರಿಂದ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ ಆದುದರಿಂದ ಯಾರಾದರೂ ಒಂದು ಪ್ರಶಾಂತವಾದ ಸ್ಥಳಕ್ಕೆ ಹೋಗಲು ಬಯಸಿದಲ್ಲಿ ಈ ಜಾಗವು ಸೂಕ್ತವಾದ ಸ್ಥಳವಾಗಿದೆ. ಈ ಜಾಗದ ಹತ್ತಿರ ಹೋಗುವುದು ಲಾಭದಾಯಕವಾಗಿದೆ.

ಕಾಶಿದ್ ನ ತೀರಗಳಲ್ಲಿ ಒಂದೋ ಕ್ಯಾಂಪ್ ಹೂಡಬಹುದು ಅಥವಾ ಇಲ್ಲಿಯ ರೆಸಾರ್ಟ್ಸ್ ಗಳು ಅಥವಾ ಹೋಮ್ ಸ್ಟೇ ಗಳಲ್ಲಿ ತಂಗಬಹುದು. ಕಾಶಿದ್ ನಲ್ಲಿರುವಾಗ ಭೇಟಿ ಕೊಡಬಹುದಾದಂತಹ ಸ್ಥಳಗಳೆಂದರೆ ರೇವದಾಂದ ಕೋಟೆ. ಕೊರಲಾಯ್ ಕೋಟೆ ಅಥವಾ ಫನ್ಸಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ಪಕ್ಷಿ ವೀಕ್ಷಣೆ.

PC: Sakshimandhane

ಲೋನಾವಾಲ

ಲೋನಾವಾಲ

ಲೋನಾವಾಲವು ಹಿಲ್ ಸ್ಟೇಷನ್ ನಂತರದ ಅತ್ಯಂತ ಬೇಡಿಕೆಯಲ್ಲಿರುವ ಸ್ಥಳವಾಗಿದೆ ಏಕೆಂದರೆ ಇದು ಮುಂಬೈ ಮತ್ತು ಪುಣೆ ಎರಡಕ್ಕೂ ಹತ್ತಿರದಲ್ಲಿದೆ ಅಷ್ಟೆ ಅಲ್ಲದೆ ಪ್ರಕೃತಿಯ ಕೊಡುಗೆಯೂ ಇಲ್ಲಿ ಹೇರಳವಾಗಿದೆ.ಪರ್ವತದ ದಟ್ಟವಾದ ಹಸಿರು ಕಾಡುಗಳ ಮಧ್ಯೆ ಗುಹೆಗಳನ್ನು ನೋಡಬಹುದು ಅಲ್ಲದೆ ಕೊಳಗಳು, ಜಲಪಾತಗಳು ಗುಡ್ದದ ಮಧ್ಯೆ ಇಳಿಜಾರುಗಳ ಮೂಲಕ ಹಾದು ಹೋಗುವುದನ್ನು ಲೋನಾವಾಲಗೆ ಭೇಟಿಯ ಸಮಯದಲ್ಲಿ ಕಾಣಬಹುದು.

ಈ ಪ್ರಕೃತಿ ದತ್ತವಾದ ಹಳ್ಳಿಯು ಮುಂಬೈಯಿಂದ ಕೇವಲ 83 ಕಿ.ಮೀ ದೂರದಲ್ಲಿದ್ದು ಇಲ್ಲಿಗೆ ತಲುಪಲು ಸುಮಾರು 2 ತಾಸು ಬೇಕಾಗುವುದು. ಇಲ್ಲಿಯ ಕಾರ್ಲಾ ಗುಹೆಗಳನ್ನು ಕಾಣಿರಿ, ಕುನೆ ಜಲಪಾತದಲ್ಲಿ ರಾಪೆಲ್ಲಿಂಗ್ ಪ್ರಯತ್ನಿಸಿ ಅಥವಾ ರಾಜ್ಮಾಚಿ ಕೋಟೆ ಅಥವಾ ಹುಲಿಗಳ ಹಾದಿಗಳ ಕಡೆಗೆ ಗಿರಿಧಾಮಗಳ ಬೆರಗುಗೊಳಿಸುವ ನೋಟವನ್ನು ನೋಡಲು ಚಾರಣ ಮಾಡಿ.

PC: Ramakrishna Reddy Y

ಅಡ್ ಲ್ಯಾಬ್ ಇಮ್ಯಾಜಿಕ

ಅಡ್ ಲ್ಯಾಬ್ ಇಮ್ಯಾಜಿಕ

ಅಡ್ಲಾಬ್ಸ್ ಇಮ್ಯಾಜಿಕ ಒಂದು ಉತ್ತೇಜಕ ಥೀಮ್ ಪಾರ್ಕ್ ಆಗಿದ್ದು ಇದು ಮುಂಬೈನಿಂದ 71 ಕಿ.ಮೀ ದೂರದಲ್ಲಿದೆ. ಥೀಮ್ ಪಾರ್ಕ್, ಆಟಗಳು, ಭೂ ಸವಾರಿಗಳು ಮತ್ತು ಎಲ್ಲಾ ವಯಸ್ಸಿನ ಜನರಿಗೆ ವಿನೋದವಾಗಿರುವ ನೀರಿನ ಸವಾರಿಗಳಿಂದ ಇತ್ಯಾದಿಗಳಿಂದ ತುಂಬಿರುವುದರಿಂದ ಇದು ಅತ್ಯಂತ ವೇಗವಾದ ಮತ್ತು ಅತ್ಯಂತ ಮೋಜಿನ ತುಂಬಿದ ಸ್ಥಳವಾಗಿದೆ.

ಈ ಥೀಮ್ ಪಾರ್ಕ್ ನಲ್ಲಿ ಹೊಟೇಲ್ ಇದ್ದು ಇಲ್ಲಿ ವಿಶ್ರಾಂತಿ ಪಡೆದು ಹೆಚ್ಚಿನ ಮೋಜಿಗಾಗಿ ಪುನಃ ಹೋಗಬಹುದು. ನಿಮ್ಮ ತಂಡವು ಹೋಗುವಾಗ ಅವರ ಕುಟುಂಬದವರನ್ನೂ ಸೇರಿಸಿಕೊಂಡರೆ ಇನ್ನೂ ಹೆಚ್ಚಿನ ಹಾಗೂ ಉಲ್ಲಾಸಮಯವಾದ ಪ್ರವಾಸದ ಅನುಭವವನ್ನು ಹೊಂದುವಂತೆ ಮಾಡಬಹುದು.

PC: Adlabs Imagica

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X