Search
  • Follow NativePlanet
Share
» »ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಅಸ್ಸಾಂ ನಮ್ಮ ಭಾರತದೇಶದಲ್ಲಿನ ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಸ್ಸಾಂ ರಾಜ್ಯ ಮುಖ್ಯವಾಗಿ ರೇಷ್ಮೆಗಾಗಿ, ಏಕಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧವಾಗಿದೆ. ಅಷ್ಟೇ ಅಲ್ಲ ಇಲ್ಲ

ಅಸ್ಸಾಂ ನಮ್ಮ ಭಾರತದೇಶದಲ್ಲಿನ ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಸ್ಸಾಂ ರಾಜ್ಯ ಮುಖ್ಯವಾಗಿ ರೇಷ್ಮೆಗಾಗಿ, ಏಕಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧವಾಗಿದೆ. ಅಷ್ಟೇ ಅಲ್ಲ ಇಲ್ಲಿನ ಆಚಾರ, ವಿಚಾರ, ಸಂಸ್ಕøತಿ ವಿಭಿನ್ನವಾಗಿದ್ದು, ನಮ್ಮ ಭಾರತದ ದೇಶದ ಸಂಸ್ಕøತಿಗೆ ಮತ್ತಷ್ಟು ಮೆರುಗನ್ನು ನೀಡಿದೆ.

ಇಲ್ಲಿ ಆನೆಗಳ ವನ್ಯಧಾಮ ಕೂಡ ಇದೆ. ಸಮೃದ್ಧ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅಸ್ಸಾಂ ರಜಾ ದಿನಗಳಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಇಂಥಹ ಸುಂದರವಾದ ಪರಿಸರಕ್ಕೆ ಭೇಟಿ ನೀಡಲು ಹಲವಾರು ಪ್ರವಾಸಿಗರು ಇಷ್ಟ ಪಡುತ್ತಾರೆ. ಅಸ್ಸಾಂನಲ್ಲಿ ಚಹಾ ತುಂಬ ಪ್ರಸಿದ್ಧವಾದುದು. ಅಸ್ಸಾಂಗೆ ಭೇಟಿ ನೀಡಿದಾಗ ತಪ್ಪದೇ ಚಹವನ್ನು ಸೇವಿಸಿ...

ಅಸ್ಸಾಂನಲ್ಲಿ ಮನಸೊರೆಗೊಳ್ಳುವ ಸುಂದರ 4 ಗಿರಿಧಾಮಗಳು ಇವೆ. ಪ್ರಸ್ತುತ ಲೇಖನದಲ್ಲಿ ಅಂಥಹ ಅದ್ಭುತವಾದ ಗಿರಿಧಾಮಗಳ ಬಗ್ಗೆ ಮಾಹಿತಿ ಪಡೆಯೋಣ.

ಮೈಗಾಂಬ್

ಮೈಗಾಂಬ್

ಈ ಸುಂದರವಾದ ಅಸ್ಸಾಂನ ಮೈಗಾಂಬ್ ಗಿರಿಧಾಮವು ಕ್ರಿ.ಪೂ 1536 ರಲ್ಲಿ ದಿಮಾಸಾ ಕಛಾರಿ ಎಂಬ ರಾಜಮನೆತನದ ರಾಜಧಾನಿಯಾಗಿತ್ತು. ಅವರ ಕಾಲಾವಧಿಯಲ್ಲಿ ಮೈಗಾಂಬ್ ಒಂದು ಪ್ರದೇಶದಲ್ಲಿ ಕಲ್ಲಿನ ಮನೆಯನ್ನು ನಿರ್ಮಾಣ ಮಾಡಿದರು. ಇದು ಈಗ ಜನಪ್ರಿಯವಾದ ಪ್ರವಾಸಿ ತಾಣವಾಗಿದ್ದು, ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಈ ಕಲ್ಲಿನಮನೆಗೆ ಒಂದು ಸ್ವಾರಸ್ಯಕರವಾದ ದಂತಕಥೆಯಿದೆ. ಕೆಲವು ದಾಳಿಗಳಿಂದ ವಶವಾಗಿದ್ದ ಸಾಮ್ರಾಜ್ಯವನ್ನು ಹಿಂಪಡೆಯಬೇಕಾದರೆ ಒಂದೇ ರಾತ್ರಿಯಲ್ಲಿ ಏಕಶಿಲೆ ಮನೆಯನ್ನು ನಿರ್ಮಾಣ ಮಾಡಬೇಕು ಎಂದು ರಾಜನ ಕನಸ್ಸಿನಲ್ಲಿ ದೇವತೆಯು ತಿಳಿಸಿದಳು.


PC: Dimaraja

ದಿಫು

ದಿಫು

ಈ ದಿಫು ರಾಜಧಾನಿ ದಿಸ್ಪೂರ್‍ನಿಂದ ಸುಮಾರು 43 ಕಿ.ಮೀ ದೂರದಲ್ಲಿ ಹಾಗು ಗುವಾಹಟಿಯಲ್ಲಿ 240 ಕಿ.ಮೀಗಳಷ್ಟು ದೂರದಲ್ಲಿದೆ. ಇದೊಂದು ಅದ್ಭುತವಾದ ಗಿರಿಧಾಮವಾಗಿದೆ. ಈ ತಾಣ ಮಾತ್ರ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿಗೂ ಕೂಡ ಭೇಟಿ ನೀಡಬಹುದಾಗಿದೆ. ಇಲ್ಲಿ ಸಸ್ಯಕಾಶಿಯು ಕೂಡ ಇದೆ. ಅರಣ್ಯ ಇಲಾಖೆ ಉಸ್ತುವಾರಿಯವರು ಈ ಸ್ಥಳವನ್ನು ನಿರ್ವಹಣೆ ಮಾಡುತ್ತಿದ್ದಾರೆ.


PC: Akarsh Simha

ಉಮ್ರಾಂಗ್ಸೊ

ಉಮ್ರಾಂಗ್ಸೊ

ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಗಡಿಭಾಗದಲ್ಲಿರುವ ಉಮ್ರಾಂಗ್ಸೊ ಬೆಟ್ಟಗಳು, ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿಯಿಂದ ಅವೃತ್ತಗೊಂಡಿದೆ. ಇದೊಂದು ಸುಂದರವಾದ ಪಟ್ಟಣವಾಗಿದೆ. ಅಸ್ಸಾಂನ ಸ್ವಾಧಿಷ್ಟವಾದ ಆಹಾರವನ್ನು ಸೇವಿಸಲು ಈ ಸ್ಥಳ ಹೇಳಿ ಮಾಡಿದ ಹಾಗೆ ಇರುತ್ತದೆ. ಸಮುದ್ರ ತಿನಿಸುಗಳ ಪ್ರೇಮಿಗಳಿಗೆ ಮಾತ್ರ ಈ ಸ್ಥಳ ಸ್ವರ್ಗ. ಇಲ್ಲಿ ವಿಶೇಷವಾಗಿ ಬಿಸಿನೀರಿನ ಬುಗ್ಗೆಗಳನ್ನು ಕಾಣಬಹುದಾಗಿದೆ.

PC: Xorg27

ಹಾಫ್ಲೊಂಗ್

ಹಾಫ್ಲೊಂಗ್

ಮೇಲಿನ ಎಲ್ಲಾ ತಾಣಗಳ ಪೈಕಿ ಹಾಫ್ಲೊಂಗ್, ಅಸ್ಸಾಂ ಅತ್ಯಂತ ಜನಪ್ರಿಯವಾದ ಗಿರಿಧಾಮವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 2,230 ಅಡಿಗಳಷ್ಟು ಎತ್ತರದಲ್ಲಿದೆ. ಬೆಟ್ಟ ಪ್ರದೇಶದಿಂದ ಆವೃತ್ತವಾಗಿರುವ ಈ ಸ್ಥಳವು ಅತ್ಯಂತ ಸುಂದರವಾಗಿದೆ. ಈ ಅದ್ಭುತ ಸ್ಥಳಕ್ಕೆ ಭೇಟಿ ನೀಡಲು ಅಸ್ಸಾಂನ ಗುವಾಹಟಿಯಿಂದ 310 ಕಿ.ಮೀಗಳಷ್ಟು ದೂರದಲ್ಲಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.


PC: PhBasumata

ಭೇಟಿಗೆ ಉತ್ತಮ ಕಾಲಾವಧಿ

ಭೇಟಿಗೆ ಉತ್ತಮ ಕಾಲಾವಧಿ

ಈ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ಅದು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ. ಅಸ್ಸಾಂಗೆ ಚಳಿಗಾಲದ ಅವಧಿಯಲ್ಲಿಯೂ ಭೇಟಿ ನೀಡಬಹುದಾಗಿದೆ. ಮಳೆಗಾಲದ ಅವಧಿಯಲ್ಲಿ ಪ್ರವಾಸಕ್ಕೆ ಅಷ್ಟು ಯೋಗ್ಯವಲ್ಲ.

PC: pankaj

ಅಸ್ಸಾಂಗೆ ತಲುಪುವ ಬಗೆ ಹೇಗೆ?

ಅಸ್ಸಾಂಗೆ ತಲುಪುವ ಬಗೆ ಹೇಗೆ?

ವಾಯುಮಾರ್ಗದ ಮೂಲಕ: ಈ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಗುವಾಹಾಟಿಯಲ್ಲಿರುವ ಲೋಕಪ್ರಿಯ ಬೋರ್ದೊಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ರೈಲ್ವೆ ಮಾರ್ಗದ ಮೂಲಕ: ಗುವಾಹಟಿ ರೈಲ್ವೆ ನಿಲ್ದಾಣವು ಅಸ್ಸಾಂ ರಾಜ್ಯದ ಅತೀ ದೊಡ್ಡ ರೈಲ್ವೆ ನಿಲ್ದಾಣವಾಗಿದೆ. ಇದು ಭಾರತದ ಹಲವಾರು ನಗರಗಳ ಸಂಪರ್ಕವನ್ನು ಹೊಂದಿದೆ.


PC: utpal

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X