Search
  • Follow NativePlanet
Share
» »ಬೈಲಕುಪ್ಪೆಯಿಂದ ನಾಗರಹೊಳೆಗೆ 3 ದಿನದ ರಸ್ತೆಯ ಮೂಲಕ ಪ್ರವಾಸದ ಅನುಭವ ಹೇಗಿರಬಹುದು?

ಬೈಲಕುಪ್ಪೆಯಿಂದ ನಾಗರಹೊಳೆಗೆ 3 ದಿನದ ರಸ್ತೆಯ ಮೂಲಕ ಪ್ರವಾಸದ ಅನುಭವ ಹೇಗಿರಬಹುದು?

ಕರ್ನಾಟಕದಲ್ಲಿಯ ಈ ಸ್ಥಳಕ್ಕೆ ರಸ್ತೆಯ ಮೂಲಕ ಪ್ರವಾಸವನ್ನು ಕೈಗೊಂಡು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದ ನೆನಪನ್ನು ಜೀವನ ಪರ್ಯಂತ ಉಳಿಸಿಕೊಳ್ಳಿ! ಒಂದು ಸುಂದರ ಸಲಹೆ ಏನೆಂದರೆ ನಿಮ್ಮ ಪ್ರಯಾಣವನ್ನು ನಿಧಾನವಾಗಿ ಚಲಿಸಿ ಮತ್ತು ಪ್ರವಾಸದ ಸಣ್ಣ ಸಣ್ಣ ಕ್ಷಣಗಳನ್ನು ಮತ್ತು ಮನಮೋಹಕ ಸೌಂದರ್ಯತೆಗಳನ್ನು ಪ್ರಯಾಣದುದ್ದಕ್ಕೂ ಅನುಭವಿಸಿ ಮತ್ತು ಆನಂದಿಸಿ.

3 ದಿನಗಳಲ್ಲಿ ಬೈಲಕುಪ್ಪೆಯಿಂದ ನಾಗರಹೊಳೆಗೆ ರಸ್ತೆ ಮೂಲಕ ಪ್ರಯಾಣಕ್ಕಾಗಿ ಬೇಕಾದ ವಿವರ ಇಲ್ಲಿದೆ.

ಮೊದಲನೇ ದಿನ

ಮೊದಲನೇ ದಿನ

ಬೈಲಕುಪ್ಪೆ

ಬೆಂಗಳೂರಿನಿಂದ 230ಕಿ,ಮೀ ಮತ್ತು ಮೈಸೂರು ನಗರದಿಂದ ಸುಮಾರು 80 ಕಿ.ಮೀ ಅಂತರದಲ್ಲಿರುವ ಬೈಲಕುಪ್ಪೆ ಒಂದು ಪ್ರಕೃತಿಯ ಅಡಗಿರುವ ರತ್ನವೆಂದರೆ ತಪ್ಪಾಗಲಾರದು. ಬೈಲಕುಪ್ಪೆಯಲ್ಲಿ ಸಮಯ ಕಳೆಯುವುದೆಂದರೆ ಒಂದು ವರವೇ ಸರಿ. ಕರ್ನಾಟಕದ ಮೂಲೆಯಲ್ಲಿ ಅಡಗಿರುವ ಈ ಸ್ಥಳವನ್ನು ನಿಮಗೆ ಯಾವಾಗ ತಾಜಾ ಅನುಭವವನ್ನು ಪಡೆಯಬೇಕೆಂದು ಮನಸ್ಸಾದಲ್ಲಿ ಭೇಟಿ ಕೊಡಬಹುದಾಗಿದೆ.

ಇಲ್ಲಿಯ ಶಾಂತಯುತವಾದ ಹಾಗೂ ಬೆಚ್ಚನೆಯ ಅದ್ಬುತವಾದ ಅನುಭವವು ನಿಮ್ಮನ್ನು ಈ ಸ್ಥಳಕ್ಕೆ ಪದೇ ಪದೆ ಬರಲು ಪ್ರೇರೇಪಿಸುತ್ತದೆ. ಬೈಲಕುಪ್ಪೆಯ ಮಠಗಳು ನಿಮ್ಮನ್ನು ಕಲೆ ಮತ್ತು ವಿನ್ಯಾಸದ ಸಂಪೂರ್ಣವಾಗಿ ವಿಭಿನ್ನ ಜಗತ್ತಿಗೆ ಕರೆದೊಯ್ಯುತ್ತವೆ. ಇದು ಒಂದು ಸಣ್ಣ ಪಟ್ಟಣವಾಗಿದ್ದರೂ, ಇಲ್ಲಿ ಹೋಟೆಲ್‌ಗಳು, ಶಾಲೆಗಳು, ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳು ಮತ್ತು ಟಿಬೆಟಿಯನ್ ನಾಗರಿಕತೆಯ ಹಲವಾರು ಗುರುತುಗಳನ್ನು ಹೊಂದಿದೆ.

ನೀವು ಇಲ್ಲಿಗೆ ಭೇಟಿ ಕೊಡುವಾಗ ಒಂದು ಕ್ಷಣಕ್ಕೆ ನೀವು ಟಿಬೆಟ್ ನಲ್ಲಿ ಇರುವ ಅನುಭವವನ್ನು ನೀಡುತ್ತದೆ. ಗೋಲ್ಡನ್ ಟೆಂಪಲ್ ಇಲ್ಲಿಯ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಸನ್ಯಾಸಿನಿಯರು ಮತ್ತು ಸನ್ಯಾಸಿಗಳನ್ನು ಕಾಣಬಹುದಾಗಿದೆ. ಇಲ್ಲಿ ಬುದ್ದನ , ಪದ್ಮಸಂಭವ ಮತ್ತು ಅಮಿತಾಯುಸ್ ಎಂಬ ಮೂರು ಬಂಗಾರದ ಪ್ರತಿಮೆಗಳನ್ನು ಕಾಣಬಹುದಾಗಿದ್ದು ನಿಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ.

ನಿಸರ್ಗಧಾಮ ಮತ್ತು ದುಬಾರೆ ಆನೆಗಳ ಶಿಬಿರ(ಎಲಿಫೆಂಟ್ ಕ್ಯಾಂಪ್)

ನಿಸರ್ಗಧಾಮ ಮತ್ತು ದುಬಾರೆ ಆನೆಗಳ ಶಿಬಿರ(ಎಲಿಫೆಂಟ್ ಕ್ಯಾಂಪ್)

ದಿನದ ಹೊತ್ತಿನಲ್ಲಿ ಹತ್ತಿರದ ಪ್ರವಾಸ ಮಾಡಲು ಇಚ್ಚಿಸುವವರಿಗೆ ನಿಸರ್ಗಧಾಮ ಅರಣ್ಯ ಒಂದು ಉತ್ತಮವಾದ ಆಯ್ಕೆ ಎನ್ನಬಹುದು. ಬೈಲಕುಪ್ಪೆಯಿಂದ ಈ ಸ್ಥಳಕ್ಕೆ 30 ನಿಮಿಷಗಳ ಒಳಗೆ ತಲುಪಬಹುದಾಗಿದೆ. ನಿಸರ್ಗಧಾಮವು ಸುಂದರವಾದ ಸ್ಥಳವಾಗಿದ್ದು ನಿಮ್ಮನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತದೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯಲ್ಲಿ ಪ್ರಯಾಣ ಮಾಡಲು ತುಂಬಾ ಸಂತೋಷವನ್ನು ನೀಡುವಂತಹುದಾಗಿದೆ. ಅಲ್ಲದೆ ನದಿಯ ದಡದಲ್ಲಿಯೂ ಕೂಡ ಆರಾಮವಾಗಿ ಸಮಯವನ್ನು ಕಳೆಯಬಹುದಾಗಿದೆ. ಉದ್ಯಾನವನದಲ್ಲಿ ಪ್ರಾಣಿಗಳನ್ನು ನೋಡುತ್ತಾ, ದೋಣಿ ವಿಹಾರ ಅಥವಾ ಸುತ್ತಮುತ್ತಲಿನ ಸೌಂದರ್ಯತೆಯನ್ನು ಸವಿಯುತ್ತಾ ಇಲ್ಲಿ ಆನಂದದಾಯಕವಾಗಿ ಸಮಯವನ್ನು ಕಳೆಯಬಹುದಾಗಿದೆ.

ಈ ಸ್ಥಳಕ್ಕೆ ನೀವು ಭೇಟಿ ಕೊಟ್ಟಾಗ ದುಬಾರೆ ಎಲಿಫೆಂಟ್ ಕ್ಯಾಂಪ್ ಗೆ(ಆನೆಗಳ ಶಿಬಿರ) ಭೇಟಿ ಕೊಡಲು ತಪ್ಪಿಸಲು ಸಾಧ್ಯವಿಲ್ಲ. ನಿಸರ್ಗಧಾಮ ಅರಣ್ಯದಿಂದ ಇದು ಸುಮಾರು 12 ಕಿ.ಮೀ (25 ನಿಮಿಷಗಳ ಪ್ರಯಾಣ) ದೂರದಲ್ಲಿದೆ. ಆನೆಗಳ ಜೊತೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಇಲ್ಲಿ ಪ್ರವಾಸಿಗರು ಸಂತೋಷಗೊಳ್ಳಬಹುದಾಗಿದೆ. ಆದರೆ ಇಲ್ಲಿ ಆನೆಗಳಿಗಿಂತ ಹೆಚ್ಚಾಗಿ ಪ್ರಕೃತಿ ವೀಕ್ಷಣೆಯೂ ಕೂಡ ಮಾಡಬಹುದಾಗಿದೆ. ಇಲ್ಲಿ ಪ್ರವಾಸಿಗರು,ಚಾರಣ, ಮೀನು ಹಿಡಿಯುವುದು, ಮತ್ತು ರಾಫ್ಟಿಂಗ್ ನಂತಹ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಈ ಕ್ಯಾಂಪ್ ನಲ್ಲಿ ಅನೇಕ ಕಾಟೇಜ್ ಗಳಿದ್ದು ಇಲ್ಲಿ ಪ್ರವಾಸಿಗರಿಗೆ ತಂಗುವ ವ್ಯವಸ್ಥೆ ಇರುವುದರಿಂದ ಆರಾಮವಾಗಿ ಇಲ್ಲಿಯ ಸೌಂದರ್ಯತೆಯ ವೀಕ್ಷಣೆ ಮಾಡಬಹುದಾಗಿದೆ.

ಎರಡನೇ ದಿನ

ಎರಡನೇ ದಿನ

ಮಂಡಾಲಪಟ್ಟಿ

ಸುಂದರವಾದ ಪ್ರಕೃತಿಯ ಮುಂಜಾನೆ ಮತ್ತು ಮುಸ್ಸಂಜೆಯ ಮಾಂತ್ರಿಕ ಸೌಂದರ್ಯತೆಯನ್ನು ಸವಿಯಬೇಕೆಂದಿದ್ದಲ್ಲಿ ಮಂಡಾಲಪಟ್ಟಿಯು ಸೂಕ್ತವಾದ ಸ್ಥಳವಾಗಿದೆ. ಇದು ಮಡಿಕೇರಿಯ ಎರಡನೇ ದೊಡ್ಡ ಶಿಖರವಾಗಿದೆ. ಈ ರಸ್ತೆಯಲ್ಲಿಯಲ್ಲಿ ತಲುಪಬಹುದಾದ ಸ್ಥಳವನ್ನು ಜೀಪ್ ಅಥವಾ ಎಯುವಿ ಯ ಮೂಲಕ ಪ್ರಯಾಣ ಮಾಡಿ ತಲುಪಬಹುದಾಗಿದೆ. ಇಲ್ಲಿಯ ಸ್ಥಳೀಯ ಜೀಪ್ ನಲ್ಲಿ ಪ್ರಯಾಣಿಸುವುದು ಹೆಚ್ಚು ಸೂಕ್ತವಾಗಿದೆ. ಇಲ್ಲಿನ ರಸ್ತೆಗಳಿಂದ ಮೇಲೆ ತಲುಪಲು ತುಂಬಾ ಏರು ತಗ್ಗುಗಳಿರುವುದರಿಂದ ನೀವು ನಿಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುವುದು ಹೆಚ್ಚು ಸೂಕ್ತವಲ್ಲ ಎಂದು ಹೇಳಬಹುದು.

ಮಂಡಲಪಟ್ಟಿಯಲ್ಲಿ ಸುಂದರವಾದ ಸಮಯವನ್ನು ಕಳೆಯಲು ಸುಮಾರು 2 ರಿಂದ 3 ಗಂಟೆಗಳ ಸಮಯ ಬೇಕಾಗುವುದು. ಇಲ್ಲಿಯ ರಸ್ತೆಗಳ ಉಬ್ಬು ತಗ್ಗುಗಳಿಂದ ಹೃದಯಕ್ಕೆ ಹಾನಿಯುಂಟಾಗಬಹುದೆಂಬ ಕಾರಣದಿಂದ ವಯಸ್ಸಾದವರಿಗೆ ಈ ಸ್ಥಳಕ್ಕೆ ಭೇಟಿ ಕೊಡಲು ಶಿಫಾರಸು ಮಾಡುವುದಿಲ್ಲ.

ಅಬ್ಬೆ ಜಲಪಾತ

ಅಬ್ಬೆ ಜಲಪಾತ

ಹಸಿರುಮಯ ದಟ್ಟ ಕಾಡುಗಳು ಮತ್ತು ಕಲ್ಲುಬಂಡೆಗಳ ನಡುವಿನಿಂದ ಧುಮುಕುವ ಅಬ್ಬೇ ಜಲಪಾತವು ನಯನ ಮನೋಹರ ನೋಟವನ್ನು ನೀಡುತ್ತದೆ. ಪ್ರಕೃತಿಯ ಸೌಂದರ್ಯದ ಜೊತೆಗೆ ನಿಮ್ಮ ಭಾವಚಿತ್ರವನ್ನು ತೆಗೆದುಕೊಳ್ಳಲು ಇದು ಒಂದು ಸೂಕ್ತವಾದ ಸ್ಥಳವಾಗಿದೆ, ಮಂಡಾಲಪಟ್ಟಿಯಿಂದ ಅಬ್ಬೆ ಜಲಪಾತಕ್ಕೆ ಸುಮಾರು 9 ಕಿ.ಮೀ ಅಂತರವಿದ್ದು ಇದನ್ನು ಸುಮಾರು 20 ನಿಮಿಷಗಳ ಪ್ರಯಾಣದ ಮೂಲಕ ತಲುಪಬಹುದಾಗಿದೆ.

ಮಡಿಕೇರಿ

ಮಡಿಕೇರಿ

ಚಹಾ ಮತ್ತು ಕಾಫೀ ಎಸ್ಟೇಟ್ ಗಳ ಮಧ್ಯೆ ಇರುವ ಮಡಿಕೇರಿ ಒಂದು ಹೆಸರಾಂತ ಗಿರಿಧಾಮವಾಗಿದೆ. ಇದು ಅಬ್ಬೇ ಜಲಪಾತದಿಂದ ಕೇವಲ 6 ಕಿ.ಮೀ ಅಂತರದಲ್ಲಿದ್ದು, ಇಲ್ಲಿಗೆ ಸುಮಾರು 20 ನಿಮಿಷಗಳ ಒಳಗಾಗಿ ತಲುಪಬಹುದಾಗಿದೆ. ವರ್ಷವಿಡೀ ಅನುಕೂಲಕರವಾದ ಹವಾಮಾನದ ಜೊತೆಗೆ ದಟ್ಟವಾದ ಹಸಿರು ತೋಟಗಳಿಂದ ಕೂಡಿದ ಸ್ಥಳಗಳು ಮಡಿಕೇರಿಯನ್ನು ನಿತ್ಯಹಸಿರನ್ನಾಗಿಸುತ್ತದೆ ಇದರಿಂದಾಗಿ ಭಾರತದ ಮೂಲೆ ಮೂಲೆಗಳಿಂದ ಜನರು ಪಿಕ್ನಿಕ್ ಗಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಓಂಕಾರೇಶ್ವರ ದೇವಾಲಯ, ಟಾಟಾ ಟೀ ಎಸ್ಟೇಟ್ , ಗದ್ದಿಗೆ ರಾಜ ನ ಸಮಾಧಿ, ಮತ್ತು ರಾಜಸ್ ಸೀಟ್ ಕೆಲವು ಮಡಿಕೇರಿಯ ಇನ್ನಿತರ ಆಕರ್ಷಣೆಗಳಾಗಿವೆ. ಅಲ್ಲದೆ ಅನೇಕ ಯುದ್ದಗಳಿಗೆ ಸಾಕ್ಷಿಯಾಗಿರುವ ಮಡಿಕೇರಿ ಕೋಟೆಯೂ ಕೂಡ ಭೇಟಿ ಕೊಡಲು ಯೋಗ್ಯವಾದುದಾಗಿದೆ.

ಭಾಗಮಂಡಲ ದೇವಾಲಯ

ಭಾಗಮಂಡಲ ದೇವಾಲಯ

ಶಿವ ದೇವರಿಗೆ ಅರ್ಪಿತವಾದ ಭಾಗ ಮಂಡಲ ದೇವಾಲ್ಯವು ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ಮಹತ್ವವುಳ್ಳ ದೇವಾಲಯವಾಗಿದ್ದು ಇದು ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯುಳ್ಳ ಪ್ರವಾಸಿಗರು ನೋಡಲೇ ಬೇಕಾದ ದೇವಾಲಯವಾಗಿದೆ. ಈ ದೇವಾಲಯವು ಮಡಿಕೇರಿ ಸಿಟಿ ಸೆಂಟರ್ ನ ಸಮೀಪದಲ್ಲಿದೆ. ಈ ದೇವಾಲಯದ ಗೋಡೆಗಳಲ್ಲಿಯ ಮತ್ತು ಛಾವಣಿಯ ಮೇಲಿನ ಕೆತ್ತನೆಗಳು ಮನಮೋಹಕವಾದುದಾಗಿದೆ.

ಇಲ್ಲಿಯ ನದಿಯಲ್ಲಿ ಪವಿತ್ರ ಸ್ನಾನವನ್ನೂ ಕೂಡಾ ಮಾಡಬಹುದಾಗಿದೆ. ಪ್ರಾರ್ಥನೆಯ ನಂತರ ಈ ದೇವಾಲಯದಲ್ಲಿ ಆಹಾರವನ್ನೂ ಕೂಡಾ ಭಕ್ತರಿಗೆ ಒದಗಿಸಲಾಗುತ್ತದೆ. ಬೇಕಾದ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸ್ಥಳವಾಗಿದೆ. ಮಡಿಕೇರಿಯಿಂದ 33 ಕಿ.ಮೀ ದೂರದಲ್ಲಿರುವ ಈ ಸ್ಥಳವನ್ನು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ತಲಕಾವೇರಿ

ತಲಕಾವೇರಿ

ತಲಕಾವೇರಿಯು ಪ್ರಸಿದ್ದ ಪುಣ್ಯಕ್ಷೇತ್ರ ಮತ್ತು ಪವಿತ್ರ ನದಿ ಕಾವೇರಿಯ ಜನ್ಮಸ್ಥಳವಾಗಿದೆ. ಇದು ಭಾಗಮಂಡಲ ದೇವಾಲಯದಿಂದ 8 ಕಿ.ಮೀ ಅಂತರದಲ್ಲಿದ್ದು ಸಮುದ್ರ ಮಟ್ಟದಿಂದ 1276 ಮೀಟರ್ ಗಳಷ್ಟು ಎತ್ತರದಲ್ಲಿದೆ. ಸಾರ್ವಜನಿಕ ವಾಹನದ ಮೂಲಕ ಭಾಗಮಂಡಲದಿಂದ ಈ ಸ್ಥಳಕ್ಕೆ ತಲುಪುವುದು ಸುಲಭ.

ಈ ಸ್ಥಳಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಇಲ್ಲಿಗೆ ಹತ್ತಿರದಲ್ಲಿರುವ ಇನ್ನೂ ಕೆಲವು ಸ್ಥಳಗಳನ್ನು ಅನ್ವೇಷಿಸಬಹುದಾಗಿದೆ ಅವುಗಳಲ್ಲಿ ಬ್ರಹ್ಮಗಿರಿ ಶಿಖರ ಮತ್ತು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಗಳು ಪ್ರಮುಖವಾದವುಗಳು. ತಲಕಾವೇರಿ ದೇವಾಲಯವನ್ನು ಭೇಟಿಕೊಡಲು ಸೆಪ್ಟಂಬರ್ ನಿಂದ ಮೇ ತಿಂಗಳುಗಳ ಅವಧಿಯು ಸೂಕ್ತವಾದುದಾಗಿದೆ.

ಮೂರನೇ ದಿನ

ಮೂರನೇ ದಿನ

ಇರಪ್ಪು ಜಲಪಾತ

ಮಡಿಕೇರಿಗೆ ಪ್ರವಾಸದ ವೇಳೆಯಲ್ಲಿ ಅತ್ಯಂತ ಉತ್ತಮವಾದ ಭಾಗವೆಂದರೆ ಅದು ಇರಪ್ಪು ಜಲಪಾತಕ್ಕೆ ಭೇಟಿ ಕೊಡುವುದಾಗಿದೆ. ವಿಶ್ರಾಂತಿಗೆ, ಸ್ನಾನ, ಮೋಜಿಗಾಗಿ ಮತ್ತು ಭಾವಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ನಯನ ಮನೋಹರ ನೋಟಗಳನ್ನು ಆನಂದಿಸಲು ಈ ಸ್ಥಳವು ಸೂಕ್ತವಾದುದಾಗಿದೆ.ಎತ್ತರದಿಂದ ಜೋರಾಗಿ ಧುಮುಕುವ ಈ ಜಲಪಾತವು ರಭಸವಾಗಿ ಕೆಳಗೆ ಹರಿಯುವಾಗ ಗುಡುಗು ಪರ್ವತದ ಸಂದಿಯಿಂದ ಕೆಳಗೆ ಬೀಳುತ್ತಿದೆಯೋ ಎಂಬಂತೆ ಕೇಳಿಸುತ್ತದೆ. ಈ ಸುಂದರವಾದ ಜಲಪಾತವನ್ನು ನೋಡಲು 120 ಮೆಟ್ಟಿಲುಗಳನ್ನು ಹತ್ತಲು ತಯಾರಾಗಿರಿ.

ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲ. ಮಳೆಗಾಲದ ಮೊದಲು ಅಥವಾ ನಂತರ ನೀವು ಭೇಟಿ ನೀಡಿದರೂ ಸಹ ಆನಂದಿಸಲು ಸಾಕಷ್ಟು ನೀರು ಇರುತ್ತದೆ.

ಈ ಜಲಪಾತದ ಆಸುಪಾಸಿನಲ್ಲಿ ಹಲವಾರು ರೆಸಾರ್ಟ್ ಗಳು, ಹೋಮ್ ಸ್ಟೇಗಳು ಇರುವುದರಿಂದ ಆಹಾರದ ಅಥವಾ ಉಳಿದುಕೊಳ್ಳುವ ವ್ಯವಸ್ಥೆಯ ಕೊರತೆ ಇರುವುದಿಲ್ಲ. ಈ ಸ್ಥಳವನ್ನು ತಲುಪಲು 106 ಕಿ.ಮೀ. ಗಳಷ್ಟು ಪ್ರದೇಶವನ್ನು ಪ್ರಯಾಣಿಸಬೇಕಾದುದರಿಂದ ತಲಕಾವೇರಿಯಿಂದ ಇಲ್ಲಿಗೆ ತಲುಪಲು ಸುಮಾರು 3 ಗಂಟೆಗಳ ಸಮಯ ತೆಗೆದುಕೊಳ್ಳಬಹುದು. ಆಗಸ್ಟ್‌ನಿಂದ ಜನವರಿ ವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ತಿಂಗಳುಗಳು

ನಾಗರಹೊಳೆ

ನಾಗರಹೊಳೆ

ಇರಪ್ಪು ಜಲಪಾತಗಳು, ಕುಟ್ಟ ಮತ್ತು ರಾಮೇಶ್ವರ ದೇವಾಲಯಗಳು ಇಲ್ಲಿಯ ಅತ್ಯಂತ ಪ್ರಮುಖವಾದ ಪ್ರವಾಸಿ ತಾಣಗಳಾಗಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಭೇಟಿಗೆ ಯೋಗ್ಯವಾದುದಾಗಿದೆ. ಇದು ಶ್ರೀಮಂತ ವನ್ಯಜೀವಿಗಳು ಮತ್ತು ಕಚ್ಚಾ ಸೌಂದರ್ಯತೆಯ ಸಂಪೂರ್ಣ ಮಿಶ್ರಣವಾಗಿದೆ. ಇಲ್ಲಿ ಆನೆಗಳು, ಜಿಂಕೆಗಳು, ನರಿಗಳು, ಮೊಸಳೆಗಳು, ಚಿರತೆಗಳವರೆಗೆ ಅನೇಕ ವನ್ಯಜೀವಿಗಳಿಗೆ ನೆಲೆಯಾಗಿದ್ದು ವನ್ಯಜೀವಿಗಳ ಒಂದು ವೈಭವೋಪೇತ ನೋಟವನ್ನು ಸಂದರ್ಶಕರಿಗೆ ನೀಡುತ್ತದೆ.

ನಾಗರಹೋಳೆಗೆ ಭೇಟಿ ನೀಡಲು ಉತ್ತಮ ತಿಂಗಳುಗಳು ಫೆಬ್ರವರಿಯಿಂದ ಡಿಸೆಂಬರ್ ವರೆಗೆ. ಇರುಪ್ಪು ಜಲಪಾತದಿಂದ ಇಲ್ಲಿಗೆ ತಲುಪಲು ಸುಮಾರು 20 ನಿಮಿಷಗಳು ಬೇಕಾಗಬಹುದು, ಏಕೆಂದರೆ ಇವೆರಡರ ಅಂತರ ಕೇವಲ 9 ಕಿ.ಮೀ. ಆಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X