Search
  • Follow NativePlanet
Share
» »ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್?

ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವರ್ಷಕ್ಕೆರಡು ಬಾರಿ ಪುಪ್ಪ ಪ್ರದರ್ಶನ ನಡೆಯುತ್ತದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪುಪ್ಪ ಪ್ರದರ್ಶನ ನಡೆದರೆ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫಲಪುಷ್ಟ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ.

ಅಮರ್ ಜವಾನ್‌

ಅಮರ್ ಜವಾನ್‌

ಈ ಪ್ರದರ್ಶನದಲ್ಲಿ ಲಕ್ಷಾಂತರ ಹೂವುಗಳನ್ನು ಬಳಸಿ ಒಂದು ರೀತಿಯ ಥೀಮ್‌ನ್ನು ನಿರ್ಮಿಸಲಾಗುತ್ತದೆ. ಕಳೆದ ಬಾರಿ ಗಣರಾಜ್ಯೋತ್ಸವದಂದು ಬಾಹುಬಲಿಯ ಮಹಾಮಸ್ತಕಾಭಿಷೇಕದ ಥೀಮ್‌ನ್ನು ಅಳವಡಿಸಿ ಪುಪ್ಪ ಪ್ರದರ್ಶನ ಏರ್ಪಡಿಸಿದ್ದರೆ, ಈ ಬಾರಿ ಅಮರ್‌ ಜವಾನ್ ಎನ್ನುವ ಥೀಮ್‌ನಲ್ಲಿ ಪುಪ್ಪ ಪ್ರದರ್ಶನ ಏರ್ಪಡಿಸಲಾಗಿದೆ. ನವದೆಹಲಿ ಇಂಡಿಯಾ ಗೇಟ್‌ನಲ್ಲಿರುವ ಯುದ್ಧ ಸ್ಮಾರಕ ಅಮರ್ ಜವಾನ್‌ ಜ್ಯೋತಿ ಪ್ರತಿಕೃತಿ ವಿವಿಧ ಬಣ್ಣದ ಹೂವುಗಳಿಂದ ತಯಾರಾಗಿ ನಿಂತಿದೆ.

ಮಾನ್ಸೂನ್‌ನಲ್ಲಿ ಕೇರಳಕ್ಕೆ ಹೋದ್ರೆ ಈ ತಾಣಗಳನ್ನು ನೋಡಲೇ ಬೇಕು ಮಾನ್ಸೂನ್‌ನಲ್ಲಿ ಕೇರಳಕ್ಕೆ ಹೋದ್ರೆ ಈ ತಾಣಗಳನ್ನು ನೋಡಲೇ ಬೇಕು

ಎಷ್ಟು ದಿನಗಳ ಕಾಲ ನಡೆಯಲಿದೆ

ಎಷ್ಟು ದಿನಗಳ ಕಾಲ ನಡೆಯಲಿದೆ

ಪ್ರತಿ ಬಾರಿಯು 12 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಪುಪ್ಪ ಪ್ರದರ್ಶನ ನಡೆಯಲಿದೆ. ಈ 12 ದಿನಗಳಲ್ಲಿ 4 ಬಾರಿ ಹೂವುಗಳನ್ನು ಬದಲಾಯಿಸಲಾಗುತ್ತದಂತೆ. ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರ ನಿರೀಕ್ಷೆ ಇದೆ. ಆಗಸ್ಟ್‌ 15 ರ ವರೆಗೆ ಈ ಪ್ರದರ್ಶನ ನಡೆಯಲಿದೆ.

ಮುಖ್ಯ ಆಕರ್ಷಣೆಗಳು

ಮುಖ್ಯ ಆಕರ್ಷಣೆಗಳು

ಗಾಜಿನ ಮನೆಯಲ್ಲಿ ನಿರ್ಮಿಸಲಾಗಿರುವ ಉಪಗ್ರಹ ಉಡಾವಣಾ ಮಾದರಿ, ಆಕಾಶ್‌ ಮತ್ತು ಬ್ರಹ್ಮೋಸ್‌ ಕ್ಷಿಪಣಿ ಮಾದರಿಗಳು ನಿಜಕ್ಕೂ ಸುಂದರವಾಗಿದೆ. ಆಕರ್ಷಕ ಪುಷ್ಪ ಗೋಪುರಗಳ ಮೇಲೆ ಎಚ್‌ಎಎಲ್‌ ನಿರ್ಮಿತ ನಾಲ್ಕು ಬಗೆಯ ಯುದ್ಧ ವಿಮಾನಗಳು, ಹೆಲೆಕಾಪ್ಟರ್‌ಗಳ ಮಾದರಿಗಳು, ಸಮುದ್ರದ ಮೇಲಿನ ಐಎನ್‌ಎಸ್‌ ವಿಕ್ರಮಾದಿತ್ಯ ಸಮರ ನೌಕೆಯ ಮೇಲೆ ಜೆಟ್‌ ಫೈಟರ್‌ಗಳು, ಹೆಲಿಕಾಪ್ಟರ್‌ಗಳು, ಯುದ್ಧ ವಿಮಾನಗಳನ್ನು ಪುಪ್ಪ ಪ್ರದರ್ಶನಕ್ಕೆ ಬಂದಿರುವ ಪ್ರತಿಯೊಬ್ಬರನ್ನೂ ಸೆಳೆಯದೇ ಇರಲಾರದು.

ವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸ

ಸ್ಯಾಂಡಲ್‌ವುಡ್‌ಗೆ 85 ವರ್ಷ

ಸ್ಯಾಂಡಲ್‌ವುಡ್‌ಗೆ 85 ವರ್ಷ

ಕನ್ನಡ ಚಿತ್ರರಂಗವು 85 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಳೆಯ ಕಾಲದ ಫ್ಲೋರಲ್‌ ರೀಲ್‌, ಸಿನಿಮಾ ಕ್ಲಾಪ್‌ ಗೋಲ್ಡ್‌, ಕ್ಯಾಮರಾಗಳನ್ನು ಹೂವಿನಿಂದ ಸೃಷ್ಟಿಸಲಾಗಿದೆ. 15 ಸಾವಿರ ಗುಲಾಬಿಯನ್ನು ಬಳಸಿ ಈ ಸಿನಿಮಾ ರೋಲ್ ಮಾಡಲಾಗಿದೆ. ಕ್ಯಾಮಾರ ಮಾಡಲ್‌ನ್ನು ತಯಾರಿಸಲು ಏಳು ಸಾವಿರಕ್ಕೂ ಹೆಚ್ಚು ಗುಲಾಬಿ ಹೂವುಗಳಿಂದ ಅಲಂಕರಿಸಲಾಗಿದೆ.

ಟಿಕೇಟ್ ಎಷ್ಟು ?

ಟಿಕೇಟ್ ಎಷ್ಟು ?

ಪ್ರತಿಯೊಬ್ಬರಿಗೂ 70 ರೂ. ಟಿಕೇಟ್‌ ಶುಲ್ಕ ವಿಧಿಸಲಾಗಿದೆ. ಲಾಲ್‌ಬಾಗ್‌ಗೆ 4 ಗೇಟ್‌ಗಳಿದ್ದು, ನೀವು ಎಲ್ಲಿಂದ ಬೇಕಾದರೂ ಇಲ್ಲಿಗೆ ಪ್ರವೇಶಿಸಬಹುದು. ಮಕ್ಕಳಿಗೆ ರಜಾ ದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ 20 ರೂ. ಟಿಕೇಟ್ ಇರುತ್ತದೆ. ಆಗಸ್ಟ್ 5,11,12 ಮತ್ತು 15ರ ಅವಧಿಯನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.ಆನ್‌ಲೈನ್ ಮೂಲಕವೂ ಟಿಕೇಟ್ ಬುಕ್‌ಮಾಡಬಹುದು.

ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

15 ಕಲಾವಿದರ ಕೈಚಳಕ

15 ಕಲಾವಿದರ ಕೈಚಳಕ

15 ಕಲಾವಿದರು ಸೇರಿ 1.2 ಲಕ್ಷ ಹೂವನ್ನು ಬಳಿಸಿ ಈ ಪ್ರದರ್ಶನವನ್ನು ಮಾಡಿದ್ದಾರೆ. ಪ್ರತಿ ನಾಲ್ಕು ದಿನಕ್ಕೊಮ್ಮೆ 40 ಸಾವಿರ ಹೂವನ್ನು ಬದಲಾಯಿಸಲಾಗುತ್ತದೆ. 87 ವಿವಿಧ ಬಗೆಯ ಹೂಗಳನ್ನು ನೀವು ಇಲ್ಲಿ ಕಾಣಬಹುದು. ಸುಮಾರು 2 ಕೋಟಿ ಖರ್ಚು ಮಾಡಿ ಈ ಪುಪ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಪಾರ್ಕೀಂಗ್ ಎಲ್ಲಿ?

ಪಾರ್ಕೀಂಗ್ ಎಲ್ಲಿ?

ಪುಪ್ಪ ಪ್ರದರ್ಶನವು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವುತ್ತದೆ. ಖಾಸಗಿ ವಾಹನಗಳಿಗೆ ಶಾಂತಿನಗರ ಬಸ್‌ಸ್ಟ್ಯಾಂಡ್‌ನಲ್ಲಿ ಪಾರ್ಕಿಂಗ್ , ಬಿಬಿಎಂಪಿ ಕಾರ್‌ಗಳು ಜೆಸಿ ರೋಡ್, ದ್ವಿಚಕ್ರ ವಾಹನಗಳು ಅಲ್‌ ಅಮಿನ್ ಕಾಲೇಜ್‌ ಹಾಗೂ ಡಬಲ್‌ರೋಡ್‌ ಬಳಿ ಇರುವ ಹಾಪ್‌ಕಾಮ್ಸ್‌ ಮಳಿಗೆ ಬಳಿ ಪಾರ್ಕೀಂಗ್ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X