Search
  • Follow NativePlanet
Share
» »2015 ರಲ್ಲಿ ಭೇಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

2015 ರಲ್ಲಿ ಭೇಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

2015 ಭಾರತದ ಪಾಲಿಗೆ ಅದ್ಭುತ ಪ್ರವಾಸಿ ವರ್ಷವಾಗಬಹುದೆಂದು ಹೇಳಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತರವಾಗಿರುವ ಸೌತ್ ಏಷಿಯಾ ಟ್ರಾವಲ್ ಆಂಡ್ ಟೂರಿಸಂ ಎಕ್ಸ್ಚೇಂಜ್ (SATTE) 2015 ನೇ ಸಾಲಿನ ಕಾರ್ಯಕ್ರಮವು ಭಾರತದ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ಇದೆ ಜನವರಿ 29 ರಿಂದ 31 ರ ವರೆಗೆ ನಡೆಯಲಿದೆ.

ಎಕ್ಸ್ ಪೆಡಿಯಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ

ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಈಗಾಗಲೆ ದೇಶ, ವಿದೇಶಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ. ಅಂದರೆ ಒಂದರ್ಥದಲ್ಲಿ ಭಾರತವು ಈ ವರ್ಷದಲ್ಲಿ ಗಣನೀಯವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದೆಂದು ಅಂದಾಜಿಸಲಾಗಿದೆ. ಈ ಒಂದು ನಿಟ್ಟಿನಲ್ಲಿ ಈ ಲೇಖನವು ಈ ವರ್ಷದಲ್ಲಿ ನೀವು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಬಹುದಾಗಿರುವ ಅಥವಾ ಭೇಟಿ ನೀಡಲೇಬೇಕೆಂಬುದರ ಕುರಿತು ತಿಳಿಸುತ್ತದೆ.

ವಿಶೇಷ ಲೇಖನ : 2013 ರ ಅದೃಷ್ಟವಂತ ಪ್ರವಾಸಿ ರಾಜ್ಯಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಸ್ಪಿತಿ : ಹಿಮಾಚಲ ರಾಜ್ಯದಲ್ಲಿರುವ ಸ್ಪಿತಿಯು ಪ್ರವಾಸಿ ದೃಷ್ಟಿಯಿಂದ ಕುತೂಹಲ ಕೆರಳಿಸುವ ತಾಣವಾಗಿದೆ. ಸ್ಥಳೀಯವಾಗಿ ಸ್ಪಿತಿ ಅಂದರೆ ಮಧ್ಯದ ಭೂಮಿ ಎಂಬರ್ಥ ಬರುತ್ತದೆ. ಅದಕ್ಕೆ ಪೂರಕವೆಂಬಂತೆ ಇದು ಭಾರತ ಹಾಗೂ ಟಿಬೆಟ್‌ ನಡುವೆ ಇರುವ ಪ್ರದೇಶ. ಅತಿ ಎತ್ತರವಾದ ಸ್ಥಳದಲ್ಲಿ ಈ ತಾಣವಿದೆ. ವೀಕ್ಷಣಾ ದೃಷ್ಟಿಯಿಂದ ಇದು ಅತ್ಯಂತ ಜನಪ್ರಿಯ ಪ್ರದೇಶವೂ ಕೂಡ ಆಗಿದೆ. ಸ್ಪಿತಿಗೆ ಸಮೀಪದ ರೈಲು ನಿಲ್ದಾಣ ಜೋಗಿಂದರನಗರ್‌. ಇದು ನ್ಯಾರೋಗೇಜ್‌ ರೈಲು ನಿಲ್ದಾಣವನ್ನು ಹೊಂದಿದೆ. ಇದಲ್ಲದೇ ಚಂಡಿಘಡ, ಶಿಮ್ಲಾವು ಸ್ಪಿತಿಗೆ ಹತ್ತಿರದಲ್ಲಿರುವ ಇನ್ನಿತರ ಪ್ರಮುಖ ರೈಲು ನಿಲ್ದಾಣಗಳು. ಇವು ದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಚಾರ ಸಂಪರ್ಕ ಹೊಂದಿವೆ.

ಚಿತ್ರಕೃಪೆ: Balaji.B

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಅಲ್ಮೋರಾ : ಉತ್ತರಾಖಂಡ ರಾಜ್ಯದಲ್ಲಿ ಕಂಡುಬರುವ ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ. 5 ಕಿಮೀ ಉದ್ದದ ಈ ಪರ್ವತ ಸುಯಲ್ ಮತ್ತು ಕೊಸಿ ನದಿಯ ನಡುವೆ ಇದೆ. ಪ್ರವಾಸಿಗರು ಅಲ್ಮೋರಾ ಬೆಟ್ಟಗಳ ಮೇಲಿನಿಂದ ಬೃಹತ್ ಹಿಮಾಲಯದ ಹಿಮಮಯ ಶೃಂಗಗಳ ದೃಶ್ಯಾವಳಿಗಳನ್ನು ಆನಂದಿಸಬಹುದು. ಈ ಸ್ಥಳದಲ್ಲಿ ಪ್ರತಿ ವರ್ಷ ಜಗತ್ತಿನಾದ್ಯಂತ ಎಲ್ಲ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಆಕರ್ಷಣೀಯ ತಾಣಗಳಿವೆ. ಕಸಾರ್ ದೇವಿ ದೇವಸ್ಥಾನ, ನಂದಾ ದೇವಿ ದೇವಸ್ಥಾನ, ಚಿತೈದೇವಸ್ಥಾನ ಮತ್ತು ಕತರ್ಮಲ್ ಸೂರ್ಯ/ಸನ್ ದೇವಾಲಯ ಇಲ್ಲಿನ ಇನ್ನಿತರ ಜನಪ್ರಿಯ ಧಾರ್ಮಿಕ ಕೇಂದ್ರಗಳು. ಅಲ್ಮೋರಾ ಕುರಿತು ಹೆಚ್ಚಿನ ವಿವರ

ಚಿತ್ರಕೃಪೆ: Travelling Slacker

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಜೈಸಲ್ಮೇರ್ : ಸುವರ್ಣನಗರ' ಜೈಸಲ್ಮೇರ್ ನಗರವು ಮರುಭೂಮಿಯ ಮೋಡಿಯನ್ನು, ಅರಮನೆಗಳ ಅಂದವನ್ನು ಮತ್ತು ಒಂಟೆಗಳ ಹೊಡೆದಾಟಗಳಿಂದ ಕೂಡಿ ಇಡೀ ರಾಜಸ್ಥಾನದ ಒಂದು ಸಂಕ್ಷಿಪ್ತ ರೂಪವೆಂಬಂತೆ ಕಾಣುತ್ತದೆ. ಈ ವಿಶ್ವವಿಖ್ಯಾತ ಪ್ರವಾಸಿ ಸ್ಥಳವು ಥಾರ್ ಮರುಭೂಮಿಯ ನಟ್ಟ ನಡುವೆ ನೆಲೆಸಿದೆ. ಪ್ರವಾಸೋದ್ಯಮವು ಈ ನಗರದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನುವಹಿಸಿದೆ. 12ನೇ ಶತಮಾನದಲ್ಲಿ ಆಳಿದ್ದ ರಾಜ ಜೈಸಲ್ ಈ ನಗರವನ್ನು ನಿರ್ಮಿಸಿದನು. ಹೀಗಾಗಿ ಈ ನಗರವು ಆತನ ನೆನಪಿನಾರ್ಥವಾಗಿ ಜೈಸಲ್ಮೇರ್ ಎಂಬ ಹೆಸರನ್ನು ಪಡೆಯಿತು. ಹೆಚ್ಚಿನ ವಿವರ

ಚಿತ್ರಕೃಪೆ: Koshy Koshy

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಗಣಪತಿಪುಳೆ : ಮಹಾರಾಷ್ಟ್ರ ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿಪುಳೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು, ಮುಂಬೈನಿಂದ ಅಂದಾಜು 375 ಕಿ.ಮೀ ದೂರದಲ್ಲಿದೆ. ಮಹಾರಾಷ್ಟ್ರದ ಈ ಸಣ್ಣ ಗ್ರಾಮವು ನಗರದ ಪೊಳ್ಳು ವಾಣಿಜ್ಯೀಕರಣದಿಂದ ಮುಕ್ತವಾಗಿದ್ದು, ತನ್ನ ಹಳ್ಳಿಗಾಡಿನ ನೈಜತೆಯ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿದೆ. ಹಾಗಾಗಿ ಇದು ಪ್ರಮುಖ ಯಾತ್ರಾ ಸ್ಥಳವಾಗಿ ತನ್ನ ಹೆಸರನ್ನು ಉಳಿಸಿಕೊಂಡಿದೆ. ಹೆಚ್ಚಿನ ವಿವರ

ಚಿತ್ರಕೃಪೆ: myriad ways

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಕಚ್ : ಗುಜರಾತ್ ರಾಜ್ಯದಲ್ಲಿರುವ ಕಚ್ ಒಂದು ಲವಣಾಂಶ ಹೊಂದಿದ ಮರಭೂಮಿ. ಕಚ್ ಹಿಂದೆ ಮರುಭೂಮಿಯಲ್ಲಿ ಹರಿದು ಸಮುದ್ರ ಸೇರುವ ಸಿಂಧು ನದಿಯಿಂದಾಗಿ ಮುಳುಗಿದ ಪ್ರದೇಶವಾಗಿತ್ತು. 1819ರಲ್ಲಿ ಎರಗಿದ ಭೂಕಂಪದಿಂದಾಗಿ ಸ್ಥಳದ ಸ್ವರೂಪವೇ ಬದಲಾಗಿ ಸಿಂಧು ನದಿ ಪಶ್ಚಿಮದ ಕಡೆಗೆ ಹರಿಯಲು ಆರಂಭಿಸಿದ ಪರಿಣಾಮ ರಣ್ ವಿಶಾಲವಾದ ಲವಣಾಂಶಯುಕ್ತ ಮರುಭೂಮಿಯ ನಿಕ್ಷೇಪವಾಯಿತು. ಬೇಸಿಗೆಯಲ್ಲಿ ನೀರು ಬತ್ತಿ ಹೋದಾಗ ರಣ್ ನ ಜವುಗು ಉಪ್ಪಿನ ಪದರಗಳು ಬಿಳಿ ಹಿಮಪಾತದಂತೆ ಕಾಣುತ್ತದೆ. ಹೆಚ್ಚಿನ ವಿವರಗಳು

ಚಿತ್ರಕೃಪೆ: anurag agnihotri

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಕುಮರಕಮ್ : ಎಲ್ಲಾದರೂ ಹೋಗಬೇಕೆಂದರೆ ದೋಣಿಯಲ್ಲೆ ಸಾಗುವುದು, ಇರುವ ಮನೆಯೆಂದರೆ ದೋಣಿ ಮನೆ, ಮನೆಯ ಮುಂಭಾಗದಲ್ಲೂ ನೀರು ಹಿಂಭಾಗದಲ್ಲೂ ನೀರು. ಅಲ್ಲಲ್ಲಿ ಸಂಚಾರಕ್ಕೂ ದೋಣಿಗಳೆ. ಒಂದು ವಿಶಿಷ್ಟ ರೀತಿಯ ಅನುಭವವುಂಟಾಗುವುದು ಸಹಜ. ಈ ಒಂದು ಸುಂದರ ಅನುಭವವನ್ನು ಅರಸಿ ಹೊರಟಾಗ ಸಿಗುವುದೆ ಕುಮರಕಮ್. ಕೇರಳದ ಪ್ರಮುಖ ನಗರವಾದ ಕೊಟ್ಟಾಯಂ ನಿಂದ ಕೇವಲ 16 ಕಿ.ಮೀ ದೂರದಲ್ಲಿ ನೆಲೆಸಿದೆ. ಕುಮರಕಮ್ ವಿಶೇಷ ಲೇಖನ

ಚಿತ್ರಕೃಪೆ: Sarath Kuchi

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಚಿಕ್ಕಮಗಳೂರು : ಕರ್ನಾಟಕದಲ್ಲಿ ಕಂಡುಬರುವ ಅತಿ ಸುಮಧುರ ಪ್ರೇಕ್ಷಣೀಯ ಸ್ಥಳಗಳನ್ನು ಹೆಸರಿಸುವುದಾದರೆ ಅವುಗಳಲ್ಲಿ ಚಿಕ್ಕಮಗಳೂರು ಸಹ ಒಂದು. ಹಲವು ಮನಮೋಹಕವಾದ ಗಿರಿಧಾಮಗಳನ್ನು ಹೊಂದಿರುವ ಈ ತಾಣವನ್ನು ಬಹುಶಃ ಕರ್ನಾಟಕದ ಗಿರಿಧಾಮಗಳ ರಾಣಿ ಎಂದರೂ ತಪ್ಪಾಗಲಾರದು. ನೀವು ಚಾರಣಪ್ರಿಯರಾಗಿದ್ದರೆ, ಮುಖ್ಯವಾಗಿ ಚಿಕ್ಕಮಗಳೂರಿನಲ್ಲಿ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ, ದೇವಿರಮ್ಮ ಬೆಟ್ಟ ಹಾಗು ಕೆಮ್ಮಣ್ಣುಗುಂಡಿ ಗಳಂತಹ ಗಿರಿ ಶಿಖರ ಪ್ರದೇಶಗಳಲ್ಲಿ ಅದ್ಭುತವಾದ ಚಾರಣಾನಂದವನ್ನು ಅನುಭವಿಸಬಹುದು. ಚಿಕ್ಕಮಗಳೂರು ವಿಶೇಷ ಲೇಖನ

ಚಿತ್ರಕೃಪೆ: Supriya

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಕುಣ್ಣೂರು : ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನಿಗೆ ತಮಿಳುನಾಡು ರಾಜ್ಯದ ಕುಣ್ಣೂರು, ಬಾಲ್ಯದ ಮುಗ್ಧತೆ, ಅಚ್ಚರಿಯನ್ನೊಳಗೊಂಡ ಹಲವಾರು ನೆನಪುಗಳನ್ನು ಮತ್ತೆ ಹೊರ ತರುತ್ತದೆ. ವಿಸ್ಮಯಭರಿತ ಈ ಗಿರಿಧಾಮ, ವಿಶ್ವ ಪ್ರಸಿದ್ಧ ಉದಕಮಂಡಲ (ಊಟಿ) ಹಿಲ್ ಸ್ಟೇಶನ್ ಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1850 ಮೀ. ಎತ್ತರದಲ್ಲಿರುವ ಪುಟ್ಟ ಪಟ್ಟಣದ ಒಟ್ಟಾರೆ ಪರಿಸರ ಪ್ರವಾಸಿಗರನ್ನು ಆಕರ್ಷಿಸಿ ತನ್ನತ್ತ ಒಲಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಕುಣ್ಣೂರು ಕುರಿತು

ಚಿತ್ರಕೃಪೆ: Thangaraj Kumaravel

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಹ್ಯಾವ್ಲಾಕ್ ದ್ವೀಪ : ಬ್ರಿಟೀಷ್ ವಸಾಹತು ಕಾಲದಲ್ಲಿ ಜನರಲ್ ಆಗಿದ್ದ ಹೆನ್ರಿ ಹಾವ್ ಲಾಕ್ ಹೆಸರನ್ನು ಈ ದ್ವೀಪಕ್ಕಿಡಲಾಗಿದೆ. ಇದು ಅಂಡಮಾನಿನ ಅತ್ಯಂತ ಆಕರ್ಷಣೀಯ ತಾಣವಾಗಿದ್ದು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಐದು ಊರುಗಳಾದ ಗೋವಿಂದ ನಗರ, ರಾಧಾ ನಗರ, ಬಿಜೋಯ್ ನಗರ, ಶ್ಯಾಮ್ ನಗರ, ಕೃಷ್ಣ ನಗರ ತಮ್ಮದೆ ಊರಿನ ಹೆಸರಿನ ಕಡಲ ತಡಿಗಳನ್ನು ಹೊಂದಿವೆ. ರಾಧಾನಗರ ಕಡಲ ಕಿನಾರೆ ಇವುಗಳಲ್ಲಿ ಅತ್ಯಂತ ಉತ್ತಮವಾದ ಕಡಲ ಕಿನಾರೆಯಾಗಿದ್ದು ಇದಕ್ಕೆ ಟೈಮ್ ಮ್ಯಾಗಜೀನ್ 2004 ರಲ್ಲಿಯೇ ಏಷ್ಯಾದ ಅತ್ಯಂತ ಆಕರ್ಷಣೀಯ ಕಡಲ ಕಿನಾರೆ ಎಂಬ ಬಿರುದು ಕೊಟ್ಟಿದೆ. ಅಂಡಮಾನ್ ಮತ್ತು ನಿಕೋಬಾರ್

ಚಿತ್ರಕೃಪೆ: Just Jimish

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಬಾಂಧವಗಡ್ : ಮಧ್ಯಪ್ರದೇಶ ರಾಜ್ಯದಲ್ಲಿರುವ ಬಾಂಧವಗಡ್ ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದ್ದು ಹುಲಿಗಳ ವಸತಿಗಾಗಿ ಹೆಸರುವಾಸಿಯಾಗಿದೆ. ಬಾಂಧವಗಡ್ ನ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಬಾಂಧವಗಡ್ ನ್ಯಾಶನಲ್ ಪಾರ್ಕ್ ಪ್ರಮುಖವಾದದ್ದು. ಬಾಂಧವಗಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 250 ಜಾತಿಯ ಪಕ್ಷಿಗಳು, 37 ಜಾತಿಯ ಸಸ್ತನಿಗಳು, 80 ವಿಧದ ಚಿಟ್ಟೆಗಳು ಮತ್ತು ವಿವಿಧ ಜಾತಿಯ ಸರೀಸೃಪಗಳಿವೆ. ಸಾಲ್, ಧೋಬಿನ್, ಸಲೈ, ಸಜಾ ಸೇರಿದಂತೆ ವೈವಿಧ್ಯಮಯ ಸಸ್ಯಸಂಪತ್ತು ಇಲ್ಲಿದೆ. ಬಾಂಧವಗಡ್ ಕುರಿತು ಪರಿಚಯ

ಚಿತ್ರಕೃಪೆ: vishwanath Hawargi

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಕಲಿಂಪಾಂಗ್ : ಭಾರತದ ಪಶ್ಚಿಮ ಬಂಗಾಳದಲ್ಲಿರುವ ಹಿಮಾಚ್ಛಾದಿತ ಗಿರಿಧಾಮ ಕಾಲಿಂಪಾಂಗ್. ಇದು ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿದ್ದು ಗಾಳಿ ಬೀಸುತ್ತಿರುತ್ತದೆ. ಇದೊಂದು ಉತ್ತಮ ಪ್ರವಾಸಿ ತಾಣ. ಮನೆಯವರು ಮತ್ತು ಗೆಳೆಯರೊಂದಿಗೆ ರಜೆಯಮೋಜನ್ನು ಸವಿಯಲು ಸೂಕ್ತ ತಾಣ. ಕಾಲಿಂಪಾಂಗ್ ಪಶ್ಚಿಮ ಬಂಗಾಳದ ಕಲೆ, ಆಹಾರ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಲು ಸೂಕ್ತ ತಾಣ. ಇಲ್ಲಿ ಬೌದ್ಧ ಮಠಗಳ ಪ್ರಭಾವವನ್ನು ಮತ್ತು ಮಹಾಭಾರತ ಕಾಲವನ್ನು ಒಟ್ಟಿಗೆ ನೆನಪು ಮಾಡಿಕೊಳ್ಳಬಹುದು. ಕಲಿಂಪಾಂಗ್ ಹೆಚ್ಚಿನ ವಿವರ

ಚಿತ್ರಕೃಪೆ: Abhijit Kar Gupta

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ತವಾಂಗ್ : ತವಾಂಗ್, ಅರುಣಾಚಲಪ್ರದೇಶದ ಪಶ್ಚಿಮದಲ್ಲಿರುವ ಈ ಜಿಲ್ಲೆಗೆ ಪ್ರವಾಸಕ್ಕೆ ತೆರಳುವದೇ ಒಂದು ಅವರ್ಣೀಯ ಅನುಭವ. ಏಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ (10,000 ಅಡಿಗಳಷ್ಟು) ಎತ್ತರದಲ್ಲಿದೆ. ನಗರದ ಪಶ್ಚಿಮದ ಅಂಚಿನುದ್ದಕ್ಕೂ ನಿರ್ಮಿಸಲಾಗಿದ್ದ ತವಾಂಗ್ ಮಠಗಳಿಂದಲೇ ಈ ನಗರಕ್ಕೆ ತವಾಂಗ್ ಎಂಬ ಹೆಸರು ಬಂದಿದೆ. ಇಲ್ಲಿ "ತಾ" ಎಂದರೆ ಕುದುರೆ ಮತ್ತು "ವಾಂಗ್" ಎಂದರೆ ಆಯ್ಕೆ ಎಂದರ್ಥ. ಹಾಗಾದರೆ ಈ ನಗರದ ಹೆಸರು "ಕುದುರೆಯ ಆಯ್ಕೆ" ಎಂದಾಯಿತು. ಇದಕ್ಕೆ ರೋಚಕವಾದ ಕಥೆಯೂ ಇದೆ. ಕಥೆ ಹೀಗಿದೆ:

ಚಿತ್ರಕೃಪೆ: rajkumar1220

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಮೆರಗ್ ಲಾಮಾ ಲೊದ್ರೆ ಗ್ಯಾಂತ್ಸೊ ಅವರು ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದರು. ಅದಕ್ಕಾಗಿ ಸ್ಥಳಾನ್ವೇಷಣೆಯನ್ನು ಪ್ರಾರಂಭಿಸಿದರು. ಆದರೆ ಯಾವ ಸ್ಥಳವೂ ಅವರಿಗೆ ಆಶ್ರಮ ಯೋಗ್ಯವಾಗಿ ಕಾಣಲಿಲ್ಲ. ದಾರಿಕಾಣದ ಅವರು, ತಮಗೆ ಮಾರ್ಗದರ್ಶನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ಕಣ್ತೆರೆದು ನೋಡಿದರೆ ಅವರ ಕುದುರೆ ಕಾಣೆಯಾಗಿ ಬಿಟ್ಟಿತ್ತು! ಈಗಾಗಲೇ ಅವರಿಗೆ ಆಯಾಸವಾಗಿತ್ತು. ಆದರೂ ಅವರು ತಮ್ಮ ಕುದರೆಯನ್ನು ಹುಡುಕಿಕೊಂಡು ಹೋದರು. ಅದು ಒಂದು ಬೆಟ್ಟದ ಮೇಲೆ ನಿಂತಿದ್ದನ್ನು ಕಂಡ ಲಾಮಾ ಇದನ್ನು ಶುಭ ಶಕುನವೆಂದು ಬಗೆದರು. ಈ ಸ್ಥಳಕ್ಕೆ ತವಾಂಗ್ ಎಂದು ಹೆಸರಿಟ್ಟರು. ತವಾಂಗ್ ನದ್ದು ಸುಕೋಮಲ, ಚಿತ್ರ ಸದೃಶ ಸೌಂದರ್ಯ. ಬಾಲರವಿಯ ಚೊಚ್ಚಲ ಕಿರಣಗಳು ಹಿಮಾಚ್ಛಾದಿತ ಶಿಖರಗಳಿಗೆ ಮುತ್ತಿಕ್ಕುತ್ತಿರುವಂತೆ, ಗುಲಾಬಿ ಪುಷ್ಪಗಳು ಕಿರುನಗೆ ಬೀರುತ್ತ ಸ್ವಾಗತಿಸುತ್ತವೆ. ರವಿಯ ಕೊನೆಯ ಕಿರಣದೊಂದಿಗೆ ಆಗಸದ ತಟ್ಟೆ ಅಸಂಖ್ಯ ತಾರೆಗಳಿಂದ ತುಂಬಿರುತ್ತದೆ.

ಚಿತ್ರಕೃಪೆ: rajkumar1220

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯಲ್ಲಿರುವ ಮಾವ್ ಫ್ಲಾಂಗ್ ಗ್ರಾಮವು 2015 ರಲ್ಲಿ ಭೇಟಿ ನೀಡಲು ಎದುರು ನೋಡಬೇಕಾದ ಪ್ರವಾಸಿ ಆಕರ್ಷಣೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಮಾವ್ ಎಂದರೆ ಕಲ್ಲು ಹಾಗೂ ಫ್ಲಾಂಗ್ ಎಂದರೆ ಹುಲ್ಲು ಎಂಬರ್ಥ ನೀಡುವ ಈ ಗ್ರಾಮದ ಹೆಸರು ಅಕ್ಷರಶಃ ಹುಲ್ಲುನ ಕಲ್ಲು ಎಂದಾಗುತ್ತದೆ. ಇದು ರಾಜಧಾನಿ ಶಿಲ್ಲಾಂಗ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿದೆ. ಮಾವ್ ಫ್ಲಾಂಗ್ ನಲ್ಲಿರುವ ಪವಿತ್ರವಾದ ಅರಣ್ಯ.

ಚಿತ್ರಕೃಪೆ: ChanduBandi

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಬಾಣಾವಲಿ ಕಡಲ ತೀರ : ಆಂಗ್ಲದಲ್ಲಿ ಬೆನೌಲಿಮ್ ಎಂದು ಕರೆಯಲ್ಪಡುವ ಬಾಣಾವಲಿ ಗೋವಾದ ಒಂದು ಗ್ರಾಮವಾಗಿದ್ದು ತನ್ನಲ್ಲಿರುವ ಕಡಲ ತೀರದಿಂದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Klaus Nahr

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಭೆಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕುಪ್ವಾರಾ ಜಿಲ್ಲೆಯಲ್ಲಿರುವ ಕುಪ್ವಾರಾ ಪಟ್ಟಣವು ಆಕರ್ಷಕ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತದೆ. ಇಲ್ಲಿರುವ ಸಾಕಷ್ಟು ಆಕರ್ಷಣೆಗಳ ಪೈಕಿ ಲೋಲ್ಲಾಬ್ ಕಣಿವೆ ಬಹು ಪ್ರಮುಖವಾಗಿದೆ.

ಚಿತ್ರಕೃಪೆ: jawad Gakhar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X