Search
  • Follow NativePlanet
Share
» »1400 ವರ್ಷಗಳ ಅದ್ಭುತ ಕರ್ನಾಲಾ ಕೋಟೆ!

1400 ವರ್ಷಗಳ ಅದ್ಭುತ ಕರ್ನಾಲಾ ಕೋಟೆ!

By Vijay

ಮಹಾರಾಷ್ಟ್ರ ರಾಜ್ಯವು ಗುಡ್ಡ ಕೋಟೆಗಳ ರಾಜಧಾನಿ ಎಂದರೂ ತಪ್ಪಾಗಲಾರದು. ಏಕೆಂದರೆ ಇಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಅತಿ ಎತ್ತರದಲ್ಲಿ ನಿರ್ಮಿಸಲಾದ, ಸಾವಿರಾರು ವರ್ಷಗಳಷ್ಟು ಪುರಾತನವಾದ ಹಲವು ಅದ್ಭುತ ಕೋಟೆಗಳನ್ನು ನೋಡಬಹುದು.

ಇನ್ನೂ ವಿಶೇಷವೆಂದರೆ ಇಂದಿಗೂ ಸುಭದ್ರವಾಗಿ ನೆಲೆಯೂರಿರುವ ಆ ಭವ್ಯ ಕೋಟೆಗಳು ಇಂದು ಪ್ರವಾಸಿ ಆಕರ್ಷಣೆಗಳಾಗಿವೆ. ಅದರಲ್ಲೂ ವಿಶೇಷವಾಗಿ ಚಾರಣಗಳಂತಹ ಚಟುವಟಿಕೆಗಳಿಗೆ ಬಹಳ ಹೆಸರುವಾಸಿಯಾಗಿವೆ. ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಅದ್ಭುತ ಕೋಟೆಯ ಕುರಿತು ತಿಳಿಸಲಾಗಿದೆ. ಇದು ಕರ್ನಾಲಾ ಕೋಟೆ.

ಅತ್ಯದ್ಭುತ

ಅತ್ಯದ್ಭುತ

ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಈ ಕೋಟೆ ಪನ್ವೇಲ್ ನಗರದಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರಸ್ತುತ ಇದೊಂದು ರಕ್ಷಿತ ಪ್ರದೇಶವಾಗಿದ್ದು ಕರ್ನಾಲಾ ಪಕ್ಷಿಧಾಮದ ವ್ಯಾಪ್ತಿಯಲ್ಲಿ ಬರುತ್ತದೆ.

ಚಿತ್ರಕೃಪೆ: Anil R

ಗಮನವಿಡಲು

ಗಮನವಿಡಲು

ಮೂಲತಃ ಈ ಕೋಟೆಯನ್ನು ಯುದ್ಧ ಅಥವಾ ಶತ್ರುಗಳ ಆಕ್ರಮಣಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾದ ಆಯಕಟ್ಟಿನ ಸ್ಥಳದಲ್ಲಿ ನಿರ್ಮಿಸಲಾಗಿದ್ದು ಕೊಂಕಣ ಕರಾವಳಿ ಹಾಗೂ ಬೋರ್ ಘಾಟ್ ಪ್ರದೇಶಗಳ ಮೇಲೆ ಕಣ್ಣಿಡಲು ಅನುಕೂಲಕರವಾಗಿರುವಂತೆ ನಿರ್ಮಿಸಲಾಗಿದೆ.

ಚಿತ್ರಕೃಪೆ: Dupisingh

ದೇವಗಿರಿ ಯಾದವರು

ದೇವಗಿರಿ ಯಾದವರು

ಹನ್ನೆರಡು-ಹದಿಮೂರನೆಯ ಶತಮಾನದ ದೇವಗಿರಿ ಯಾದವರ ಕಾಲದಲ್ಲಿ ನಿರ್ಮಿಸಲಾದ ಕೋಟೆ ಇದಾಗಿದೆ ಎಂದು ತಿಳಿದುಬರುತ್ತದೆ. ಹಾಗಾಗಿ ಹದಿನಾಲ್ಕು ನೂರು ವರ್ಷಗಳಿಗಿಂತಲೂ ಅಧಿಕವಾದ ಇತಿಹಾಸವನ್ನು ಈ ಕೋಟೆ ಹೊಂದಿದೆ.

ಚಿತ್ರಕೃಪೆ: Dupinder singh

https://commons.wikimedia.org/wiki/File:Karnala_Fort_04.JPG

ರಾಜಧಾನಿ

ರಾಜಧಾನಿ

ಪ್ರಸ್ತುತ ಇದೊಂದು ರಕ್ಷಿತ ಪ್ರದೇಶವಾಗಿದೆ. ಶತಮಾನಗಳ ಹಿಂದೆ ಕರ್ನಾಲಾ ಈ ಪ್ರದೆಶದಲ್ಲಿ ಆಳುತ್ತಿದ್ದ ಹಲವಾರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದಿತ್ತು.

ಚಿತ್ರಕೃಪೆ: Dupinder singh

ಮೇಲೊಂದು, ಕೆಳಗೊಂದು

ಮೇಲೊಂದು, ಕೆಳಗೊಂದು

ಕರ್ನಾಲಾ ಮೂಲತಃ ಎರಡು ಕೋಟೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಒಂದು ಕೋಟೆ ಮೆಲ್ಭಾಗದಲ್ಲಿದ್ದರೆ ಇನ್ನೊಂದು ಕೆಳ ಭಾಗದಲ್ಲಿ ನಿರ್ಮಿತವಾಗಿದೆ.

ಚಿತ್ರಕೃಪೆ: Damitr

ಅವಶೇಷವಾಗಿದೆ

ಅವಶೇಷವಾಗಿದೆ

ಮೇಲ್ಭಾಗದ ಕೋಟೆಯಾವರಣದ ಮಧ್ಯದಲ್ಲಿ 125 ಅಡಿಗಳಷ್ಟು ಎತ್ತರದ ವೀಕ್ಷಣಾ ಗೋಪುರವಿದ್ದು ಇದನ್ನು ಪಾಂಡು ಗೋಪುರ ಎನ್ನಲಾಗುತ್ತದೆ. ಪ್ರಸ್ತುತ ಇದು ಅಳಿದುಳಿದ ಅವಶೇಷವಾಗಿದೆಯಷ್ಟೆ.

ಚಿತ್ರಕೃಪೆ: Bugs buny

ಇತಿಹಾಸ ಸಾರುತ್ತ

ಇತಿಹಾಸ ಸಾರುತ್ತ

ಕೋಟೆಯೊಳಗೆ ಹೋದಂತೆಲ್ಲ ಹಲವಾರು ಚಿಕ್ಕ ಪುಟ್ಟ ಪ್ರಾಚೀನ ರಚನೆಗಳು ತಮ್ಮ ಪ್ರಾಚೀನತೆಯನ್ನು ಎಳೆ ಎಳೆಯಾಗಿ ಅನಾವರಣಗೊಳಿಸುತ್ತವೆ.

ಚಿತ್ರಕೃಪೆ: Damitr

ಕಲಾತ್ಮಕತೆ

ಕಲಾತ್ಮಕತೆ

ಹಲವಾರು ಗುಪ್ತದ್ವಾರಗಳು, ಮೆಟ್ಟಿಲುಗಳು, ಅಲ್ಲಲ್ಲಿ ಗೋಡೆಯ ಮೇಲೆ ಕಡೆಯಲಾದ ಶಿಲ್ಪಗಳು ಅಂದಿನ ಕಾಲದ ಕಲಾ ಕೌಶಲ್ಯ ಹಾಗೂ ನಿರ್ಮಾಣ ಕೌಶಲ್ಯಗಳನ್ನು ಸೂಚಿಸುತ್ತವೆ.

ಚಿತ್ರಕೃಪೆ: Damitr

 ಕೆಳಭಾಗದಲ್ಲಿದೆ

ಕೆಳಭಾಗದಲ್ಲಿದೆ

ಕೋಟೆಯ ಕೆಳಭಾಗದಲ್ಲಿ ಪುಟ್ಟದಾದ ದೇವಾಲಯವೊಂದಿದ್ದು ಭವಾನಿ ದೇವಿಗೆ ಮುಡಿಪಾಗಿದೆ. ಭವಾನಿ ದೇವಿಯು ಪ್ರತ್ಯಕ್ಷಳಾಗಿ ಶಿವಾಜಿಗೆ ಕೊಟ್ಟಿದ್ದ ಖಡ್ಗದಿಂದ ಛತ್ರಪತಿ ಶಿವಾಜಿಯು ಯುದ್ಧಗಳನ್ನು ಗೆದ್ದು ಸಾಕಷ್ಟು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದನೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Ghariprasada90

ಶಾಸನಗಳು

ಶಾಸನಗಳು

ನಂತರ ಮರಾಠರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯಲ್ಲಿ ಪರ್ಷಿಯನ್ ಹಾಗೂ ಮರಾಠಿ ಭಾಷೆಯಲ್ಲಿ ಬರೆಯಲಾದ ಶಾಸನಗಳು ಕಂಡುಬರುತ್ತವೆ. ಇದು ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ.

ಚಿತ್ರಕೃಪೆ: Damitr

ನಯನಮನೋಹರ

ನಯನಮನೋಹರ

ಇಂದು ಕರ್ನಾಲಾ ಕೋಟೆ ತಾಣವು ಅವಶೇಷಗಳಿಂದ ಕೂಡಿದೆಯಾದರೂ ಇದರ ಸುತ್ತಮುತ್ತಲಿನ ಭವ್ಯ ಪರಿಸರ, ಪ್ರಕೃತಿ ಸಾಕಷ್ಟು ನಯನಮನೋಹರವಾಗಿದೆ.

ಚಿತ್ರಕೃಪೆ: Elroy Serrao

ಕಣ್ಣಿಗೆ ಹಬ್ಬ

ಕಣ್ಣಿಗೆ ಹಬ್ಬ

ಪಶ್ಚಿಮ ಘಟ್ಟಗಳಲ್ಲಿ ವ್ಯಾಪಿಸಿರುವ ಈ ಕೋಟೆಯ ಪರಿಸರವು ಮಳೆಗಾಲ ಹಾಗೂ ನಂತರದ ಸಮಯದಲ್ಲಿ ಕಣ್ಣಿಗೆ ಹಬ್ಬವನ್ನೆ ಉಂಟುಮಾಡುವಂತಿರುತ್ತದೆ.

ಚಿತ್ರಕೃಪೆ: Elroy Serrao

ಎಲ್ಲೆಡೆ

ಎಲ್ಲೆಡೆ

ಮಂಜುಗಟ್ಟಿದ ವಾತಾವರಣ, ತಂಪಾದ ಹಾಗೂ ಹಿತಕರವಾದ ಪರಿಸರ, ಎಲ್ಲೆಡೆ ದಟ್ಟ ಹಸಿರು, ಮೇಲ್ಭಾಗದದಿಂದ ಸುತ್ತಲೂ ಕಾಣುವ ರಮ್ಯ ನೋಟಗಳು ಈ ತಾಣವನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದೆ.

ಚಿತ್ರಕೃಪೆ: Elroy Serrao

ವಿಶ್ರಾಂತಿ

ವಿಶ್ರಾಂತಿ

ಇದೊಂದು ಒಂದು ಘಂಟೆಯಷ್ಟು ಏರಬಹುದಾದ ಚಾರಣ ತಾಣವಾಗಿದ್ದು ಪ್ರವಾಸಿಗರಲ್ಲಿ ಸಾಕಷ್ಟು ಜನಪ್ರೀಯವಾಗಿದೆ. ಏರುವಾಗ ಪ್ರವಾಸಿಗರಿಗೆ ಅನುಕೂಲವಾಗಲೆಂದು ಐದು ವಿವಿಧ ಸ್ಥಳಗಳಲ್ಲಿ ವಿಶ್ರಾಂತಿ ಸ್ಥಳಗಳನ್ನು ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Damitr

ಜೇನುಗೂಡುಗಳಿವೆ!

ಜೇನುಗೂಡುಗಳಿವೆ!

ಬೆಟ್ಟದ ಮೇಲ್ತುದಿಯಲ್ಲಿ ಕೋಟೆ ಪ್ರವೇಸಿಬಹುದಾದ ಸಂದರ್ಭದಲ್ಲಿ ಏರಿಕೆ ಮೊನಚಾಗಿದ್ದು ಭದ್ರತೆಗಾಗಿ ಕಬ್ಬಿಣದ ಕಂಬಿಗಳ ಆಧಾರ ಒದಗಿಸಲಾಗಿದೆ. ಗಮನವಿರಲಿ ಕೋಟೆಯ ಹಲವಾರು ರಚನೆಗಳ ಮೂಲೆಗಳಲ್ಲಿ ಜೇನು ಗೂಡುಗಳಿದ್ದು ಅಲ್ಲಿ ಅಹಾರ ತಯಾರಿಸಿ ತಿನ್ನುವುದು ಉತ್ತಮ ಆಯ್ಕೆಯಲ್ಲ.

ಚಿತ್ರಕೃಪೆ: Elroy Serrao

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more