Search
  • Follow NativePlanet
Share
» »ದಕ್ಷಿಣ ಭಾರತದಲ್ಲಿಯ 14 ಪ್ರಮುಖ ನರಸಿಂಹ ದೇವಾಲಯಗಳು.

ದಕ್ಷಿಣ ಭಾರತದಲ್ಲಿಯ 14 ಪ್ರಮುಖ ನರಸಿಂಹ ದೇವಾಲಯಗಳು.

ದಕ್ಷಿಣ ಭಾರತದಲ್ಲಿರುವ ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ದೇವರ ಈ ದೇವಾಲಯಗಳ ದರ್ಶನ ಮಾಡಿ ದೇವರ ಕೃಪೆಗೆ ಪಾತ್ರರಾಗಿ!

ಅಸುರ ರಾಜ ಹಿರಣ್ಯಕಶಿಪುವನ್ನು ಕೊಂದು ಭಕ್ತ ಪ್ರಹಲ್ಲಾದನನ್ನು ಆಶೀರ್ವದಿಸಿದ ನರಸಿಂಹ ದೇವರ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ವಿಷ್ಣು ದೇವರ ನಾನಾ ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದಾಗಿದೆ. ಈ ದೇವರನ್ನು ಪೂಜಿಸಲ್ಪಡುವ ಹಲವಾರು ಅದ್ಬುತ ದೇವಾಲಯಗಳಿವೆ ಮತ್ತು ಅವುಗಳಲ್ಲಿ ಕೆಲವು ದೇವಾಲಯಗಳನ್ನು ತಲುಪುವ ಮಾರ್ಗಗಳು ಅತ್ಯಂತ ಸುಂದರ, ಕುತೂಹಲಕಾರಿ ಮತ್ತು ಸಾಹಸಮಯವಾದುದಾಗಿವೆ.

ಹೆಚ್ಚಾಗಿ ನರಸಿಂಹ ದೇವರ ದೇವಾಲಯಗಳು ಒಂದೋ ಬೆಟ್ಟದ ಮೇಲೇ ನೆಲೆಸಿರುತ್ತವೆ ಇಲ್ಲವೇ ಗುಹೆಗಳ ಒಳಗೆ ನೆಲೆಸಿರುತ್ತವೆ. ಈ ದೇವರ ಆಶೀರ್ವಾದ ಪಡೆಯಲು ಅಸಂಖ್ಯಾತ ಭಕ್ತರು ನರಸಿಂಹ ದೇವಾಲಯಗಳಿಗೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆಯಲು ಇಚ್ಚಿಸುತ್ತಾರೆ. ಇಂತಹ ಕೆಲವು ದೇವಾಲಯಗಳಿಗೆ ಭೇಟಿ ಕೊಡುವ ಮುನ್ನ ನೀವು ಕೆಲವು ತಯಾರಿಗಳನ್ನು ನಡೆಸಬೇಕಾಗುತ್ತದೆ. ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಯಾತ್ರಾ ಸ್ಥಳಗಳ ಸಂಖ್ಯೆಯನ್ನು ಹೆಚ್ಚಿಸಲು ನಾವು ಈ ಕೆಲವು ಪ್ರಸಿದ್ಧ ದೇವಾಲಯಗಳಿಗೆ ಏಕೆ ನಿಮ್ಮ ಗಮನ ಸೆಳೆಯಬಾರದು?

ದಕ್ಷಿಣ ಭಾರತದಲ್ಲಿ ನೆಲೆಸಿರುವ ಹಾಗೂ ನರಸಿಂಹ ದೇವರಿಗೆ ಅರ್ಪಿತವಾದ 14 ಪುಣ್ಯ ದೇವಾಲಯಗಳ ದರ್ಶನ ಮಾಡಲು ಪ್ರವಾಸ ಆಯೋಜಿಸಿ ದೇವರ ಕೃಪೆಗೆ ಪಾತ್ರರಾಗಿ ಬನ್ನಿ!

ಪಲಕ ನರಸಿಂಹ ಸ್ವಾಮಿ ದೇವಾಲಯ , ಭದ್ರಾಚಲಂ

ಪಲಕ ನರಸಿಂಹ ಸ್ವಾಮಿ ದೇವಾಲಯ , ಭದ್ರಾಚಲಂ

ಭದ್ರಾಚಲಂ ಒಂದು ಪ್ರಸಿದ್ದ ರಾಮ ದೇವಾಲಯವಾಗಿದ್ದು, ಇದು ನರಸಿಂಹ ದೇವರಿಗೆ ಅರ್ಪಿತವಾದ ಒಂದು ಅತ್ಯಂತ ಆಸಕ್ತಿದಾಯಕ ದೇವಾಲಯವಾಗಿದೆ. ಈ ದೇವಾಲಯವನ್ನು ಪಲಕ ನರಸಿಂಹ ಸ್ವಾಮಿ ದೇವಾಲಯವೆಂದೂ ಕರೆಯಲಾಗುತ್ತದೆ. ಇಲ್ಲಿಯ ದೇವರ ವಿಗ್ರಹವನ್ನು ಸ್ವಯಂಭೂ ಎಂದೂ ಹೇಳಲಾಗುತ್ತದೆ ಮತ್ತು ಇದನ್ನು ಯೋಗಾನಂದ ಜ್ವಾಲಾ ಲಕ್ಷ್ಮಿನರಸಿಂಹ ಸ್ವಾಮಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ದಿಗುವ ಮಂಗಳಗಿರಿ ದೇವಾಲಯ ಗುಂಟೂರ್

ದಿಗುವ ಮಂಗಳಗಿರಿ ದೇವಾಲಯ ಗುಂಟೂರ್

ಮಂಗಳಗಿರಿ ಬೆಟ್ಟಗಳ ಮೇಲೆ ನೆಲೆಸಿರುವ ದಿಗುವ ಲಕ್ಷ್ಮೀ ನರಸಿಂಹ ದೇವಾಲಯವು ಗುಂಟೂರಿನಲ್ಲಿರುವ ಮೂರು ನರಸಿಂಹ ದೇವರ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಮಂಗಳಗಿರಿಯು ವಿಜಯನಗರ ದೇವಾಲಯ ಕಾಲದ ಹಿಂದಿನ ಪಟ್ಟಣವಾಗಿದೆ.

ಭೂವರಾಹ ನರಸಿಂಹ ದೇವಾಲಯ, ಹಲಸಿ

ಭೂವರಾಹ ನರಸಿಂಹ ದೇವಾಲಯ, ಹಲಸಿ

ಐತಿಹಾಸಿಕ ಪಟ್ಟಣವಾಗಿರುವ ಹಲಸಿ ಅಥವಾ ಹಳಶಿಯು ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಂದು ಇದು ಬೆಳಗಾಂ ನ ಖಾನಾಪುರದಲ್ಲಿ ನೆಲೆಸಿದೆ. ಭೂವರಾಹ ನರಸಿಂಹ ದೇವಾಲಯವು ಇಲ್ಲಿಯ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕದಂಬ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

ಲಕ್ಷೀ ನರಸಿಂಹ ದೇವಾಲಯ ನುಗ್ಗೇ ಹಳ್ಳೀ

ಲಕ್ಷೀ ನರಸಿಂಹ ದೇವಾಲಯ ನುಗ್ಗೇ ಹಳ್ಳೀ

ನುಗ್ಗೇ ಹಳ್ಳಿ ಒಂದೊಮ್ಮೆ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯ ಅಡಿಯಲ್ಲಿತ್ತು. ನುಗ್ಗೇ ಹಳ್ಳಿಯ ಲಕ್ಷ್ಮೀ ನರಸಿಂಹ ದೇವಾಲಯವು ಬೋಮಣ್ಣ ದಂಡನಾಯಕನಿಂದ ನಿರ್ಮಿಸಲ್ಪಟ್ಟಿತು. ತ್ರಿಕೂಟ ವಿಮಾನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಇದು ಸೋಪ್ ಕಲ್ಲಿನಿಂದ ಸೋಪ್ಸ್ಟೋನ್ (ಕ್ಲೋರಿಟಿಕ್ ಸ್ಕಿಸ್ಟ್) ನಿಂದ ಮಾಡಲ್ಪಟ್ಟಿರುವುದು ಈ ದೇವಾಲಯದ ಮುಖ್ಯ ಲಕ್ಷಣವಾಗಿದೆ.

ಯೋಗ ನರಸಿಂಹ ದೇವಾಲಯ, ಮೇಲ್ಕೋಟೆ

ಯೋಗ ನರಸಿಂಹ ದೇವಾಲಯ, ಮೇಲ್ಕೋಟೆ

ಕರ್ನಾಟಕದಲ್ಲಿರುವ ಮೇಲುಕೋಟೆಯು ಚೆಲುವನಾರಾಯಣ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಮೇಲುಕೋಟೆಯ ಬೆಟ್ಟಗಳಲ್ಲಿ ಇನ್ನಿತರ ದೇವಾಲಯಗಳ ಜೊತೆಗೆ ನೆಲೆಸಿರುವ ಯೋಗ ನರಸಿಂಹ ದೇವಾಲಯವೂ ಒಂದಾಗಿದೆ. ದಂತಕಥೆಗಳ ಪ್ರಕಾರ, ಈ ಯೋಗ ನರಸಿಂಹ ಪ್ರತಿಮೆಯನ್ನು ಮಹಾ ವಿಷ್ಣು ಭಕ್ತ ಪ್ರಹ್ಲಾದನೇ ಸ್ಥಾಪಿಸಿದನೆನ್ನಲಾಗುತ್ತದೆ.

ನರಸಿಂಹ ಜೀರಾ, ಬೀದರ್

ನರಸಿಂಹ ಜೀರಾ, ಬೀದರ್

ನರಸಿಂಹ ಜೀರಾ ಅಥವಾ ನರಸಿಂಹ ಜರಾನಿ ಗುಹೆ ದೇವಾಲಯವು ಕರ್ನಾಟಕದ ಬೀದರ್ ನಲ್ಲಿಯ ವಿಭಿನ್ನ ದೇವಾಲಯಗಳಲ್ಲೊಂದಾಗಿದೆ. ಇಲ್ಲಿ ಭಗವಂತ ಹೊಳೆಯಿಂದ ತುಂಬಿದ ಗುಹೆಯೊಳಗೆ ಇದ್ದಾನೆ. ವಿಗ್ರಹವೂ ಅರ್ಧ ನೀರಿನಲ್ಲಿ ಮುಳುಗಿದೆ. ಗುಹೆಯ ತುದಿಯಲ್ಲಿರುವ ವಿಗ್ರಹವನ್ನು ತಲುಪಲು ಭಕ್ತರು ಮೊಣಕಾಲುವರೆಗೆ ಇರುವ ಆಳದ ನೀರಿನಲ್ಲಿ ನಡೆಯಬೇಕು.

ಸೀಬಿ ನರಸಿಂಹ ಸ್ವಾಮಿ ದೇವಾಲಯ, ಸಿರಾ

ಸೀಬಿ ನರಸಿಂಹ ಸ್ವಾಮಿ ದೇವಾಲಯ, ಸಿರಾ

ಒಂದು ನರಸಿಂಹ ಸ್ವಾಮಿ ದೇವಾಲಯವು ಸೀಬಿ (ಸಿಬಿ) ಎಎಸ್ ಐ ಅಡಿಯಲ್ಲಿನ ಸ್ಮಾರಕಗಳಲ್ಲಿ ಒಂದಾಗಿದೆ. ದಂತ ಕಥೆಗಳ ಪ್ರಕಾರ ಒಮ್ಮೆ ನರಸಿಂಹ ದೇವರು ಒಬ್ಬ ವ್ಯಾಪಾರಿಯ ಕನಸಿನಲ್ಲಿ ಕಾಣಿಸಿಕೊಂಡು ಈ ಸ್ಥಳವನ್ನು ತನ್ನ ವಾಸಸ್ಥಾನ ಎಂಬತೆ ತೋರಿಸಿದರು ಎಂದೂ ಅದರಂತೆ ಆ ವ್ಯಾಪಾರಿಯು ಈ ಸ್ಥಳದಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದನೆಂದೂ ಹೇಳಲಾಗುತ್ತದೆ. ನಂತರದ ದಿನಗಳಲ್ಲಿ ಈ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಬಳಸಿಕೊಂಡು ದೊಡ್ಡ ದೇವಾಲಯವನ್ನು ನಿರ್ಮಿಸಲಾಯಿತು.

ವರಾಹಲಕ್ಷ್ಮಿ ನರಸಿಂಹ ಸ್ವಾಮಿ, ಸಿಂಹಾಚಲಮ್

ವರಾಹಲಕ್ಷ್ಮಿ ನರಸಿಂಹ ಸ್ವಾಮಿ, ಸಿಂಹಾಚಲಮ್

ವರಾಹಲಕ್ಷ್ಮಿ ನರಸಿಂಹ ಸ್ವಾಮಿಯ ಸುಂದರ ದೇವಾಲಯವು ಸಿಂಹಾಚಲಮ್ ಬೆಟ್ಟದ ಮೇಲೆ ನೆಲೆಸಿದ್ದು, ಇದು ಸಿಂಹಾಚಲಮ್ ದೇವಾಲಯವೆಂದು ಪ್ರಸಿದ್ದಿ ಪಡೆದಿದೆ. ಈ ದೇವಾಲಯವು ಕಳಿಂಗ ಶೈಲಿಯ ವಾಸ್ತುಶಿಲ್ಪವನ್ನು ಬಳಸಿ ನಿರ್ಮಿಸಲ್ಪಟ್ಟಿದೆ.

ಮೇಲಿನ ಅಹೋಬಿಲಂ ದೇವಾಲಯ,ಅಹೋಬಿಲಂ

ಮೇಲಿನ ಅಹೋಬಿಲಂ ದೇವಾಲಯ,ಅಹೋಬಿಲಂ

ಅಹೋಬಿಲಂ ಅನ್ನು ನವ ನರಸಿಂಹ ಕ್ಷೇತ್ರ ಎಂದು ಕರೆಯಲಾಗುತ್ತದೆ, ಅಂದರೆ ಇಲ್ಲಿ 9 ನರಸಿಂಹ ದೇವಾಲಯಗಳಿವೆ. ಮೇಲಿನ ಅಹೋಬಿಲಂ ದೇವಾಲಯವು ಉಗ್ರ ನರಸಿಂಹನನ್ನು ಪ್ರಧಾನ ದೇವತೆಯಾಗಿ ಹೊಂದಿರುವ ಪ್ರಮುಖ ದೇವಾಲಯವಾಗಿದೆ.

ಯೋಗ ನರಸಿಂಹ ದೇವಾಲಯ ದೇವರಾಯನ ದುರ್ಗ

ಯೋಗ ನರಸಿಂಹ ದೇವಾಲಯ ದೇವರಾಯನ ದುರ್ಗ

ಬೆಂಗಳೂರಿನಿಂದ ಬರುವ ಜನಪ್ರಿಯ ವಾರಾಂತ್ಯದ ತಾಣಗಳಲ್ಲಿ ದೇವರಾಯನದುರ್ಗವೂ ಒಂದು. ದೇವರಾಯನದುರ್ಗ ಬೆಟ್ಟದ ಮೇಲಿರುವ ಯೋಗನರಸಿಂಹ ಸ್ವಾಮಿ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇಗುಲವನ್ನು ಮೈಸೂರು ಸಾಮ್ರಾಜ್ಯದ ರಾಜರು (ಒಡೆಯರ್) ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X