• Follow NativePlanet
Share
» »12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1

12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1

Written By:

ಭಾರತದಲ್ಲಿ ಶಿವಾಲಯಕ್ಕೆ ತನ್ನದೇ ಆದ ಮಹತ್ವವಿದೆ. ಆ ಕ್ಷೇತ್ರಗಳಲ್ಲಿ 12 ಜ್ಯೋತಿರ್ಲಿಂಗಳು ಕೂಡ ಒಂದಾಗಿದೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪುನೀತರಾಗಬೇಕು ಎಂದು ಪ್ರತಿಯೊಬ್ಬ ಭಕ್ತರ ಆಸೆಯಾಗಿರುತ್ತದೆ. ಪರಮೇಶ್ವರನು ನಮ್ಮ ಹಿಂದೂ ಧರ್ಮದವರಿಗೆ ಅತ್ಯಂತ ಪವಿತ್ರವಾದ ದೇವತಾ ಮೂರ್ತಿಯಾಗಿರುವುದರಿಂದ ಆತನ ದರ್ಶನ ಸೌಭಾಗ್ಯಕ್ಕೆ ಭಕ್ತರು ಹಲವಾರು ಪುಣ್ಯಕ್ಷೇತ್ರಗಳಿಗೆ ಹೋಗುವುದುಂಟು.

ಜ್ಯೋತಿರ್‍ಲಿಂಗವೆಂದರೆ ನಮ್ಮ ಸಂಸ್ಕøತ ಭಾಷೆಯಲ್ಲಿ "ಕಾಂತಿ ಸ್ತಂಭ" ಎಂಬ ಅರ್ಥವಿದೆ. ಪರಮಶಿವನನ್ನು ಆರಾಧಿಸುವ ಪ್ರದೇಶಕ್ಕೆ ಇದು ಸಂಕೇತವಾಗಿದೆ. ನಮ್ಮ ಭಾರತ ದೇಶದಲ್ಲಿ 12 ಜ್ಯೋತಿರ್ ಲಿಂಗ ದೇವಾಲಯಗಳು ಇವೆ. ಇವೆಲ್ಲಾ ಅತ್ಯಂತ ಪವಿತ್ರವಾದದು ಮತ್ತು ಶಕ್ತಿವಂತವಾದುದು ಎಂಬುದು ಭಕ್ತರ ಪ್ರಗಾಢವಾದ ವಿಶ್ವಾಸವಾಗಿದೆ. ಸಾಮಾನ್ಯವಾಗಿ ಈ 12 ಜ್ಯೋತಿರ್ ಲಿಂಗಗಳು ಎಲ್ಲಿವೆ ಎಂಬುದರ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲ. ಹಾಗಾಗಿ ಲೇಖನದ ಮೂಲಕ ಆ 12 ಜ್ಯೋತಿರ್‍ಲಿಂಗಗಳು ಎಲ್ಲಿವೆ? ಎಂಬುದನ್ನು ಸಂಕ್ಷೀಪ್ರವಾಗಿ ತಿಳಿಯೋಣ.

ಮಹಾಶಿವನು ಅತ್ಯಂತ ಶಕ್ತಿವಂತವಾದ ದೇವರು. ಎಂಥಹ ಬಾಧೆಗಳೇ ಆಗಲಿ ಪರಿಹಾರ ಮಾಡುವ ಆದಿ ದೇವನಾಗಿದ್ದಾನೆ. ಈ ಭಾಗದಲ್ಲಿ 12 ಜ್ಯೋತಿರ್‍ಲಿಂಗಗಳಲ್ಲಿ ಕೇವಲ 6 ಕ್ಷೇತ್ರದ ಬಗ್ಗೆ ಮಾಹಿತಿಯನ್ನು ಹಾಗು ಉಳಿದ 6 ಭಾಗವನ್ನು ಮತ್ತೊಂದು ಸಂಚಿಕೆಯಲ್ಲಿ ವಿವರವಾಗಿ ತಿಳಿದುಕೊಳ್ಳಿ.

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ನಮ್ಮ ಭಾರತ ದೇಶದಲ್ಲಿನ ಮೊದಲನೇ ಜ್ಯೋತಿರ್‍ಲಿಂಗ ಗುಜರಾತ್‍ನಲ್ಲಿನ ಸೋಮನಾಥ ದೇವಾಲಯವಾಗಿದೆ. ಈ ತೀರ್ಥಕ್ಷೇತ್ರದಲ್ಲಿರುವ ಲಿಂಗವು ಮೊದಲನೇ ಜ್ಯೋತಿರ್‍ಲಿಂಗವಾಗಿದೆ. ಈ ದೇವಾಲಯವು ಮೊಹಮದೀಯರು, ವಿದೇಶಿಗಳ ಆಕ್ರಮಣದಿಂದಾಗಿ 16 ಬಾರಿ ಹಾನಿಗೆ ಒಳಗಾಗಿ ಪುನರ್ ನಿರ್ಮಾಣವಾಗಿರುವುದು. ಪೂರ್ವ ಕಾಲದಲ್ಲಿ ಭಾರತ ದೇಶದಲ್ಲಿ ಅತ್ಯಂತ ಸಂಪತ್ತು ಭರಿತವಾದ ದೇವಾಲಗಳಲ್ಲಿ ಸೋಮನಾಥ ದೇವಾಲಯ ಅಭಿವೃದ್ಧಿ ಹೊಂದಿತ್ತು. ಇಲ್ಲಿ ಅಮೂಲ್ಯವಾದ ಸರ್ವಾಭರಣಗಳು, ವಜ್ರ ವೈಡೂರ್ಯಗಳಿಂದ ಕೂಡಿದ ಭಾರಿ ಸಂಪತ್ತು ಈ ದೇವಾಲಯದಲ್ಲಿ ಇತ್ತು.

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಈ ದೇವಾಲಯಕ್ಕೆ ಒಂದು ಸುಂದರವಾದ ಪುರಾಣವು ಕೂಡ ಇದೆ. ಅದೆನೆಂದರೆ ದಕ್ಷ ಪ್ರಜಾಪತಿಯ 27 ಕುಮಾರಿಯರನ್ನು ಚಂದ್ರನು ವಿವಾಹವಾಗುತ್ತಾನೆ. ಆದರೆ ಆತ ಹೆಚ್ಚಾಗಿ ರೋಹಿಣಿಯ ಜೋತೆ ಮಾತ್ರ ಇದ್ದು, ಉಳಿದ ಪತ್ನಿಯರನ್ನು ಹೆಚ್ಚಾಗಿ ಪ್ರೀತಿಸುತ್ತಿರುವುದಿಲ್ಲ. ಈ ವಿಷಯವನ್ನು ಉಳಿದ 26 ಪುತ್ರಿಯರು ದಕ್ಷ ಪ್ರಜಾಪತಿಗೆ ವಿಷಯವನ್ನು ತಿಳಿಸಿದರು. ದಕ್ಷ ಪ್ರಜಾಪತಿಯು ಚಂದ್ರನನ್ನು ಕರೆಸಿ ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣಬೇಕು ಎಂದು ಹೇಳುತ್ತಾನೆ.

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಆದರೂ ಕೂಡ ಚಂದ್ರ ಮಾತ್ರ ರೋಹಿಣಿಯ ಜೊತೆಯಲ್ಲಿ ಇರುತ್ತಾನೆ. ಇದರಿಂದ ಕೋಪಗೊಂಡ ದಕ್ಷನು ಚಂದ್ರನಿಗೆ ಒಂದು ಶಾಪವನ್ನು ನೀಡುತ್ತಾನೆ. ಅದೆನೆಂದರೆ ಚಂದ್ರನು ಕಾಂತಿ ಹೀನನಾದನು. ಇದರಿಂದ ಕಂಗಾಲಾದ ದೇವತೆಗಳು ಇದಕ್ಕೆ ಪರಿಹಾರವನ್ನು ತಿಳಿಸು ಎಂದಾಗ, ದಕ್ಷನು ಆ ಪರಮೇಶ್ವರನಿಗೆ ಚಂದ್ರ ಪೂಜಿಸಿದರೆ ಆತ ಚಂದ್ರಕಳೆಯನ್ನು ಪ್ರಸಾದಿಸುತ್ತಾನೆ ಎಂದು ಹೇಳಿದನು. ಈ ಮಾತನ್ನು ಕೇಳಿದ ಚಂದ್ರನು ಶಿವಾರಾಧನೆ ಮಾಡಿದನು.

ಶ್ರೀ ಶೈಲ ದೇವಾಲಯ

ಶ್ರೀ ಶೈಲ ದೇವಾಲಯ

2 ನೇ ಜ್ಯೋತಿರ್‍ಲಿಂಗ ಕ್ಷೇತ್ರ ಆಂಧ್ರ ಪ್ರದೇಶ ರಾಷ್ಟ್ರದಲ್ಲಿರುವ ಶ್ರೀ ಶೈಲ. ಇಲ್ಲಿ ಪರಮೇಶ್ವರನು ಮಲ್ಲಿಕಾರ್ಜುನನಾಗಿ ಭ್ರಮರಾಂಭ ದೇವಿಯೊಂದಿಗೆ ನೆಲೆಸಿದ್ದಾನೆ. ಈ ಕ್ಷೇತ್ರ ಕುರಿತು ಒಂದು ಸುಂದರವಾದ ಕಥೆಯು ಕೂಡ ಚಾಲ್ತಿಯಲ್ಲಿದೆ. ಪರಮೇಶ್ವರನ ಇಬ್ಬರು ಕುಮಾರರಲ್ಲಿ ಯಾರಿಗೆ ಮೊದಲು ವಿವಾಹವನ್ನು ಮಾಡಬೇಕು ಎಂದು ಅಂದುಕೊಳ್ಳುವಾಗ ಸರಿಯಾದ ನಿರ್ಣಯಕ್ಕೆ ಬಾರದೇ ಶಿವ-ಪಾರ್ವತಿ ಇಬ್ಬರು ಕೂಡ ಅಲೋಚನೆಯಲ್ಲಿ ಮುಳುಗಿದ್ದರು. ಆಗ ಪ್ರಪಂಚ ಯಾತ್ರೆ ಮಾಡಿಕೊಂಡು ಬನ್ನಿ ಎಂದು ಗಣಪತಿಗೆ ಹಾಗು ಕುಮಾರಸ್ವಾಮಿಗೆ ಕಳುಹಿಸಿದರು. ಯಾರು ಮೊದಲು ಕೈಲಾಸ ಸೇರಿಕೊಳ್ಳುತ್ತಾರೆಯೋ ಅವರಿಗೆ ಮೊದಲು ವಿವಾಹ ಮಾಡಬೇಕು ಎಂದು ಭಾವಿಸಿದರು.

ಶ್ರೀ ಶೈಲ ದೇವಾಲಯ

ಶ್ರೀ ಶೈಲ ದೇವಾಲಯ

ತಂದೆ-ತಾಯಿಯ ಆದೇಶದ ಮೇರೆಗೆ ಕುಮಾರ ಸ್ವಾಮಿ ತನ್ನ ನವಿಲು ವಾಹನ ಜೊತೆಗೆ ಯಾತ್ರೆಗೆ ತೆರಳಿದನು. ಆದರೆ ಗಣಪತಿ ಮಾತ್ರ ತನ್ನ ತಂದೆ-ತಾಯಿಗಳ ಸುತ್ತ ತಿರುಗಿ ಅವರೇ ತನ್ನ ಪ್ರಪಂಚ ಎಂದು ಹೇಳಿದನು. ಇದರಿಂದ ಸಂತುಷ್ಟರಾದ ಶಿವ-ಪಾರ್ವತಿ ಇಬ್ಬರು ಸಿದ್ಧಿ-ಬುದ್ಧಿಯರನ್ನು ನೀಡಿ ವಿವಾಹವನ್ನು ಮಾಡಿದರು. ಇದರಿಂದ ಕುಮಾರಸ್ವಾಮಿಯು ಇನ್ನೆಂದಿಗೂ ವಿವಾಹವನ್ನು ಮಾಡಿಕೊಳ್ಳುವುದಿಲ್ಲ ಎಂದು ಪರ್ವತಕ್ಕೆ ತೆರಳಿ ಬಿಟ್ಟ. ತನ್ನ ಪುತ್ರನನ್ನು ಕಾಣಲು ಶಿವಪಾರ್ವತಿಯರು ಬರುತ್ತಿದ್ದರು. ಆ ಸ್ಥಳವೇ ಶ್ರೀ ಶೈಲವಾಗಿದೆ.

ಉಜ್ಜಯಿನಿ ದೇವಾಲಯ

ಉಜ್ಜಯಿನಿ ದೇವಾಲಯ

ಮಧ್ಯ ಪ್ರದೇಶದಲ್ಲಿನ ಮತ್ತೊಂದು ಜ್ಯೋತಿರ್ ಲಿಂಗ ಕ್ಷೇತ್ರ ಇದಾಗಿದೆ. ಈ ದೇವಾಲಯದ ಸುತ್ತಲೂ ಹಲವಾರು ಕಥೆಗಳು ಇವೆ. ದೇವತೆಗಳ ಕೋರಿಕೆಗಳ ಮೇರೆಗೆ ದಾನವರನ್ನು ಓಡಿಸುವುದಕ್ಕಾಗಿ ಶಿವನು ಈ ಪ್ರದೇಶದಲ್ಲಿ ಅವತಾರವೆತ್ತಿದ ಎಂಬುದು ಸ್ಥಳೀಯರ ಪ್ರಬಲವಾದ ವಿಶ್ವಾಸ. ವಿಂದ್ಯಾ ಪರ್ವತದ ಕೋರಿಕೆಯ ಮೇರೆಗೆ ಇಲ್ಲಿ ನೆಲೆಸಿ, ತನ್ನ ಭಕ್ತರನ್ನು ಕಾಪಾಡುತ್ತಾ ಇರುತ್ತಾನೆ ಎಂದು ಭಕ್ತರು ಹೇಳುತ್ತಾರೆ.

ಉಜ್ಜಯಿನಿ ದೇವಾಲಯ

ಉಜ್ಜಯಿನಿ ದೇವಾಲಯ

ಈ ಪ್ರದೇಶವನ್ನು ಪಾಲಿಸಿದ ಮಾಂದಾತ ಮಹಾರಾಜ ಕೂಡ ಶಿವನನ್ನು ಭಕ್ತಿ, ಶ್ರದ್ಧೆಗಳಿಂದ ಆರಾಧನೆ ಮಾಡಿದ್ದರಿಂದ ಶಿವನು ಪ್ರಸನ್ನನಾಗಿ ಇಲ್ಲಿ ನೆಲೆಸಿದನು ಎಂದು ಮತ್ತೊಂದು ಪುರಾಣ ಕತೆಯ ಮೂಲಕ ಕೂಡ ತಿಳಿದುಕೊಳ್ಳಬಹುದಾಗಿದೆ.

ಕೇದಾರನಾಥ ದೇವಾಲಯ

ಕೇದಾರನಾಥ ದೇವಾಲಯ

ಮತ್ತೊಂದು ಜ್ಯೋತಿರ್ ಲಿಂಗ ಹಾಗೂ ಪ್ರಧಾನವಾದುದ ಕ್ಷೇತ್ರವೆಂದರೆ ಅದು ಕೇದಾರನಾಥ ದೇವಾಲಯವಾಗಿದೆ. ಉತ್ತರಾಖಂಡ ರಾಷ್ಟ್ರದಲ್ಲಿ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ದೇವಾಲಯ ಚಳಿಗಾಲದಲ್ಲಿ ಮುಚ್ಚಿರುತ್ತದೆ. ಏಕೆಂದರೆ ಚಳಿಗಾಲದಲ್ಲಿ ಈ ಪ್ರದೇಶಕ್ಕೆ ಯಾರು ಕೂಡ ಸೇರಿಕೊಳ್ಳಲಾಗದೇ ಇರುವುದೇ ಅದಕ್ಕೆ ಮುಖ್ಯವಾದ ಕಾರಣವಾಗಿದೆ. ಪಾಂಡವರು ತಮ್ಮ ಪಾಪಗಳಿಂದ ವಿಮುಕ್ತಿ ಹೊಂದಿ ಸ್ವರ್ಗಕ್ಕೆ ತೆರಳಬೇಕು ಎಂದು ಭಾವಿಸಿದರು.

ಕೇದಾರನಾಥ ದೇವಾಲಯ

ಕೇದಾರನಾಥ ದೇವಾಲಯ

ಆದರೆ ಶಿವನ ಆಶೀರ್ವಾದವಿದ್ದರೆ ಮಾತ್ರ ಇದು ಸಾಧ್ಯ ಎಂಬುದು ಋಷಿಗಳು ಹೇಳಿದರು. ಇದರಿಂದಾಗಿ ಋಷಿಗಳು ಅನ್ವೇಷಣೆ ಪ್ರಾರಂಭ ಮಾಡಿದರು. ಪ್ರಸ್ತುತ ಶಿವನು ಜ್ಯೋತಿರ್‍ಲಿಂಗವಾಗಿ ನೆಲೆಸಿದ ಪ್ರದೇಶದಲ್ಲಿ ಅವರು ಶಿವನನ್ನು ಕಂಡುಹಿಡಿದರು. ಮಹಾಶಿವನು ಈ ಕ್ಷೇತ್ರದಲ್ಲಿ ತ್ರಿಕೋನಾಕಾರದಲ್ಲಿ ನೆಲೆಸಿರುವುದು ವಿಶೇಷವೇ ಆಗಿದೆ. ಇದು ಅತ್ಯಂತ ಪ್ರಸಿದ್ಧವಾದ ಜ್ಯೋತಿರ್‍ಲಿಂಗವೇ ಅಲ್ಲದೇ ಅತ್ಯಂತ ಪವಿತ್ರವಾದ ಪ್ರದೇಶ ಕೂಡ ಆಗಿದೆ.

ಭೀಮಶಂಕರ ಜ್ಯೋತಿರ್‍ಲಿಂಗ

ಭೀಮಶಂಕರ ಜ್ಯೋತಿರ್‍ಲಿಂಗ

ಇದು ಮಹಾರಾಷ್ಟ್ರದ ಪುಣೆ ಸಮೀಪದಲ್ಲಿ ಭೀಮನದಿಯಲ್ಲಿ ನೆಲೆಸಿರು ಕ್ಷೇತ್ರವೇ ಭೀಮಶಂಕರ ಜ್ಯೋತಿರ್‍ಲಿಂಗ. ಭೀಮ ಎಂಬ ರಾಕ್ಷಸನ ಸಂಹಾರವಾದ ನಂತರ ಭೀಮೇಶ್ವರನಾಗಿ ಇಲ್ಲಿನ ಸ್ವಾಮಿಯು ನೆಲೆಸಿದ್ದಾನೆ. ಭೀಮ ಎಂಬ ರಾಕ್ಷಸನು ಒಂದು ದೇಶದಲ್ಲಿ ತನ್ನ ತಾಯಿಯೊಂದಿಗೆ ನಿವಾಸಿಸುತ್ತಿದ್ದನು. ಈತನು ರಾಕ್ಷಸ ರಾಜ ರಾವಣ ಸಹೋದರ ಕೊಂಭಕರ್ಣನ ಕುಮಾರನು. ತನ್ನ ತಂದೆ ಶ್ರೀರಾಮನ ಕೈಯಿಂದ ಮೃತನಾದ್ದರಿಂದ ಆತನ ಮೇಲೆ ದ್ವೇಷ ಸಾಧಿಸಲು, ಬ್ರಹ್ಮದೇವನಿಂದ ತಪಸ್ಸು ಮಾಡಿ "ಲೋಕ ವಿಜೇತನಾಗಿ" ಒಂದು ವರವನ್ನು ಪಡೆಯುತ್ತಾನೆ.

ಭೀಮಶಂಕರ ಜ್ಯೋತಿರ್‍ಲಿಂಗ

ಭೀಮಶಂಕರ ಜ್ಯೋತಿರ್‍ಲಿಂಗ

ಕಾಮರೂಪ ರಾಜನಾದ ಸುದರ್ಶನ ಮಾಹಾರಾಜನ ಮೇಲೆ ದಂಡೆತ್ತಿ ಆ ರಾಜ್ಯವನ್ನು ಆಕ್ರಮಣ ಮಾಡಿ ಮಹಾರಾಜನನ್ನು ಬಂದಿಸುತ್ತಾನೆ. ತದನಂತರ ತನ್ನ ಮುಂದೆ ಮಹಾರಾಜ ಒಂದು ಲಿಂಗವನ್ನು ಇಟ್ಟು ಪ್ರಾರ್ಥನೆ ಮಾಡುತ್ತಿದ್ದನು. ಇದನ್ನು ಕಂಡ ಭೀಮ ರಾಕ್ಷಸನು ಶಿವಲಿಂಗದ ಮೇಲೆ ತನ್ನ ಕತ್ತಿಯನ್ನು ಎಸೆಯುತ್ತಾನೆ. ಇದರಿಂದ ಪ್ರತ್ಯಕ್ಷವಾದ ಶಿವನು ಭೀಮನ ಮೇಲೆ ಆಗ್ರಹಗೊಂಡು ತನ್ನ ಮೂರನೇ ಕಣ್ಣು ತೆರದು ಭಸ್ಮ ಮಾಡುತ್ತಾನೆ. ಇದನ್ನು ಕಂಡ ದೇವತೆಗಳು ಇಲ್ಲಿಯೇ ನೆಲೆಸಬೇಕು ಎಂದು ಪರಮಶಿವನನ್ನು ಪ್ರಾರ್ಥನೆ ಮಾಡುತ್ತಾರೆ.

ಕಾಶಿ ವಿಶ್ವನಾಥ ಜ್ಯೋತಿರ್‍ಲಿಂಗಂ

ಕಾಶಿ ವಿಶ್ವನಾಥ ಜ್ಯೋತಿರ್‍ಲಿಂಗಂ

ಕಾಶಿ ವಿಶ್ವನಾಥ ದೇವಾಲಯ ನಮ್ಮ ಭಾರತ ದೇಶದಲ್ಲಿ ಅತ್ಯಂತ ಪ್ರಸಿದ್ಧಿಗಳಿಸಿರುವ ಒಂದು ಜ್ಯೋತಿರ್‍ಲಿಂಗವಾಗಿದೆ. ಈ ಜ್ಯೋತಿರ್‍ಲಿಂಗ ಉತ್ತರ ಭಾರತ ದೇಶದಲ್ಲಿನ ಪವಿತ್ರವಾದ ನಗರ ಕಾಶಿಯಲ್ಲಿ ನೆಲೆಸಿದೆ. ಈ ನಗರಕ್ಕೆ ಪ್ರಳಯನ್ನು ತಡೆಯುವ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಪರಮೇಶ್ವನು ತನ್ನ ನಿವಾಸವಾದ ಈ ನಗರದ ಮೇಲೆ ತ್ರಿಶೂಲದ ಮೇಲೆ ನಿಲ್ಲಿಸುತ್ತಾನೆ ಎಂಬುದು ಅಲ್ಲಿನ ಜನರ ಭಾವನೆಯಾಗಿದೆ.

ಕಾಶಿ ವಿಶ್ವನಾಥ ಜ್ಯೋತಿರ್‍ಲಿಂಗಂ

ಕಾಶಿ ವಿಶ್ವನಾಥ ಜ್ಯೋತಿರ್‍ಲಿಂಗಂ

ಸೃಷ್ಟಿಗೆ ಮೊದಲನೇ ಸ್ಥಳವಾಗಿ ಈ ನಗರವನ್ನು ಗುರುತಿಸುತ್ತಾರೆ. ವಿಷ್ಣು ಮೂರ್ತಿ ತನ್ನ ಸೃಷ್ಟಿ ಕಾರ್ಯಕಲಾಪಗಳಿಗಾಗಿ ತಪ್ಪಸ್ಸು ಮಾಡಿ ಶಿವನನ್ನು ಪ್ರಸನ್ನ ಮಾಡಿಕೊಂಡಿದ್ದು ಇಲ್ಲಿಯೇ. ಅಗಸ್ಯ ಮಹಾಮಹರ್ಷಿಯು ಕೂಡ ತಪಸ್ಸು ಮಾಡಿ ಶಿವನ ಅನುಗ್ರಹವನ್ನು ಪಡೆದನು. ಈ ಪರಮಪವಿತ್ರವಾದ ಕಾಶಿನಗರವನ್ನು ಓಂ ಕಾರ ಖಂಡ, ದಕ್ಷಣಾನ ಕೇದಾರ ಖಂಡ, ಮಧ್ಯದಲ್ಲಿ ವಿಶ್ವೇಶ್ವರ ಖಂಡವಿದೆ. ಪ್ರಸಿದ್ಧವಾದ ಕ್ಷೇತ್ರದಲ್ಲಿ ಪಾರ್ವತಿ, ಪರಮಶಿವರು ಒಂದೇ ಸ್ಥಳದಲ್ಲಿ ನೆಲೆಸಿರುವ ಏಕೈಕ ಪ್ರದೇಶವಿದು. ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿದರೆ ಮೋಕ್ಷ ಲಭಿಸುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ