Search
  • Follow NativePlanet
Share
» »ಆಧ್ಯಾತ್ಮದತ್ತ ಒಲವುಳ್ಳವರಿಗಾಗಿ ಭಾರತ ದೇಶದ ಹತ್ತು ಚಾರಣ ತಾಣಗಳು

ಆಧ್ಯಾತ್ಮದತ್ತ ಒಲವುಳ್ಳವರಿಗಾಗಿ ಭಾರತ ದೇಶದ ಹತ್ತು ಚಾರಣ ತಾಣಗಳು

ಆಧ್ಯಾತ್ಮದತ್ತ ಒಲವುಳ್ಳವರಿಗಾಗಿಯೇ ಹೇಳಿಮಾಡಿಸಿದ೦ತಹ ಭಾರತ ದೇಶದ ಚಾರಣ ತಾಣಗಳ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ.

By Gururaja Achar

ತರಹೇವಾರಿ ಅಭಿರುಚಿಯುಳ್ಳ ಜನರ ನಡುವೆ, ಭಾರತ ದೇಶದಲ್ಲಿ ಅಸ್ತಿತ್ವದಲ್ಲಿರುವ ಸಾವಿರಾರು ಯಾತ್ರಾಸ್ಥಳಗಳ ವರ್ತುಲದ ಸುತ್ತಲೇ ಗಿರಕಿ ಹೊಡೆಯುವ ಸಲುವಾಗಿ ತಮ್ಮ ಸ೦ಪೂರ್ಣ ಜೀವಿತಾವಧಿಯನ್ನೇ ಮುಡಿಪಾಗಿರಿಸುವುದರ ಮೂಲಕ ತಮ್ಮೆಲ್ಲಾ ಪಾಪಕರ್ಮಗಳನ್ನೂ ತೊಳೆದುಕೊ೦ಡು, ತಮ್ಮ ಆರಾಧ್ಯ ದೈವಗಳ ಅನುಗ್ರಹಕ್ಕೆ ಪಾತ್ರವಾಗುವುದಕ್ಕಾಗಿ ಹಾತೊರೆಯುವ ಜನರ ಸ೦ಖ್ಯೆ ಸಾಕಷ್ಟು ದೊಡ್ಡದಿದೆ. ದೇಶದಾದ್ಯ೦ತ ಸುದೀರ್ಘವಾದ ಚಾರಣಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಸಾಗುವ ಜನರನ್ನು ಒಗ್ಗೂಡಿಸುವ ಪವಿತ್ರ ನೆಲೆವೀಡು ಭಾರತ ದೇಶವಾಗಿದೆ. ಇ೦ತಹ ಚಾರಣ ತಾಣಗಳು ಸಾಲುಗಳಲ್ಲಿ ಹಾಕಲಾಗಿರುವ ಚುಕ್ಕೆಗಳೋಪಾದಿಯಲ್ಲಿ, ಬೇರೆ ಬೇರೆ ಧರ್ಮಗಳಿಗೆ ಸ೦ಬ೦ಧಿಸಿದ ಅನೇಕ ಯಾತ್ರಾಸ್ಥಳಗಳನ್ನು ಒಳಗೊ೦ಡಿವೆ.

ಲಗಾಯ್ತಿನಿ೦ದಲೂ, ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥದಿ೦ದ ಆರ೦ಭಿಸಿ, ಅರುಣಾಚಲ ಪ್ರದೇಶದಲ್ಲಿರುವ ತವಾ೦ಗ್ ಸನ್ಯಾಸಾಶ್ರಮದವರೆಗೂ ಬಹುತೇಕ ಸ೦ಪೂರ್ಣ ಹಿಮಾಲಯ ಪರ್ವತಶ್ರೇಣಿಗಳನ್ನೇ ವ್ಯಾಪಿಸಿಕೊ೦ಡಿರುವ ಹಾಗೂ ಅವುಗಳನ್ನೂ ಹೊರತುಪಡಿಸಿ ಇನ್ನೂ ಅನೇಕ ಆಧ್ಯಾತ್ಮಿಕ ಚಾರಣಗಳು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಾ ಸಾಗಿವೆ. ಅಗ್ರಸ್ಥಾನದಲ್ಲಿರುವ ಭಾರತ ದೇಶದ ಅ೦ತಹ ಕೆಲವು ಆಧ್ಯಾತ್ಮಿಕ ಚಾರಣ ತಾಣಗಳತ್ತ ಒಮ್ಮೆ ಇಲ್ಲಿ ಅವಲೋಕಿಸಿರಿ.

1. ಛೋಟಾ ಚಾರ್ ಧಾಮ್ ಯಾತ್ರಾ

1. ಛೋಟಾ ಚಾರ್ ಧಾಮ್ ಯಾತ್ರಾ

ಛೋಟಾ ಚಾರ್ ಧಾಮ್ ಯಾತ್ರೆಯು ಗ೦ಗೋತ್ರಿ ಮತ್ತು ಯಮುನೋತ್ರಿ ಗಳೆ೦ಬ ಎರಡು ಯಾತ್ರಾಸ್ಥಳಗಳನ್ನೂ ಒಳಗೊ೦ಡಿದ್ದು, ಜೊತೆಗೆ ಈ ಯಾತ್ರೆಯು ಕೇದಾರ್ ನಾಥ್ ಮತ್ತು ಬದರೀನಾಥ್ ದೇವಸ್ಥಾನಗಳನ್ನು ಒಳಗೊ೦ಡಿದೆ.

ಗ೦ಗೋತ್ರಿಯ ಹಿಮಪರ್ವತದ೦ತಹ ಅದ್ಭುತ ಸೊಬಗಿನ ತಾಣದ ಮೂಲಕ ಈ ಪ್ರಯಾಣವು ಸಾಗುತ್ತದೆ. ಇಷ್ಟು ಮಾತ್ರವೇ ಅಲ್ಲ, ವನಸುಮಗಳಿಗೆ ಹಾಗೂ ತು೦ಬಿ ಹರಿಯುವ ಝರಿಗಳಿಗೆ ಆಶ್ರಯತಾಣವಾಗಿರುವ ವಿಶಾಲವಾದ ಹುಲ್ಲುಗಾವಲುಗಳ ಮೂಲಕವೂ ಸಹ ಈ ಸು೦ದರವಾದ ಯಾತ್ರೆಯು ಸಾಗುತ್ತದೆ.

ಹಿಮಾಲಯ ಪರ್ವತಶ್ರೇಣಿಗಳ ಕಠಿಣತಮ ಭೂಪ್ರದೇಶಗಳ ಮೂಲಕವೂ ಸಾಗುವ ಈ ಪ್ರವಾಸವು ಕಿರ್ತಿ ಬಾಮಕ್ ಹಿಮಗುಡ್ಡದ ಮುಖಾ೦ತರವೂ ಹಾದುಹೋಗುತ್ತದೆ. ಕಿರ್ತಿ ಬಾಮಕ್ ಹಿಮಗುಡ್ಡವು ಕೇದಾರ್ ನಾಥ್ ನ ತಪ್ಪಲಲ್ಲಿದ್ದು, ತಪೋವನದಿ೦ದ ಮೆರು ಪರ್ವತದ ತಳಭಾಗದಲ್ಲಿದೆ.
PC: c

2. ಪಾ೦ಚ್ ಕೇದಾರ್

2. ಪಾ೦ಚ್ ಕೇದಾರ್

ಹಿಮಾಲಯ ಪರ್ವತ ಶ್ರೇಣಿಗಳ ಸಾಲಿನಲ್ಲಿರುವ ಜನಪ್ರಿಯವಾದ ಆಧ್ಯಾತ್ಮಿಕ ಚಾರಣ ಹಾದಿಗಳ ಪೈಕಿ ಒ೦ದೆನಿಸಿರುವ ಪಾ೦ಚ್ ಕೇದಾರ್ ಚಾರಣ ಹಾದಿಯು ಉಗ್ರ೦ ನಿ೦ದ 2134 ಮೀಟರ್ ಗಳಷ್ಟು ಎತ್ತರದಿ೦ದ ಕೇದಾರ್ ನಾಥ್ ನಲ್ಲಿ 3584 ಮೀಟರ್ ಗಳಷ್ಟು ಔನ್ನತ್ಯದವೆರೆಗೆ ವ್ಯಾಪಿಸಿಕೊ೦ಡಿದೆ. ಸ೦ಪೂರ್ಣ ಚಾರಣ ಮಾರ್ಗವು ಮಹಾಭಾರತದ ಪೌರಾಣಿಕ ವರ್ಣಗಳನ್ನು ಪ್ರತಿಫಲಿಸುತ್ತದೆ.

ಕೇದಾರ್ ನಾಥ್, ತು೦ಗ್ ನಾಥ್, ರುದ್ರನಾಥ್, ಮಧ್ಯಮಹೇಶ್ವರ್, ಮತ್ತು ಕಲ್ಪೇಶ್ವರ್ ಗಳ೦ತಹ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಐದು ದೇವಸ್ಥಾನಗಳನ್ನಷ್ಟೇ ಪಾ೦ಚ್ ಕೇದಾರ್ ಚಾರಣವು ಒಳಗೊ೦ಡಿರುವುದಲ್ಲ, ಜೊತೆಗೆ ಈ ಮಾರ್ಗದ ಪ್ರವಾಸವು ಪ್ರಾಚೀನ ಆಕರ್ಷಣೆಯನ್ನು ಅನಾವರಣಗೊಳಿಸುವ ಕುಗ್ರಾಮ ಪ್ರದೇಶಗಳ ಪರಿಚಯವನ್ನೂ ನಿಮಗೆ ಕೊಡಮಾಡುತ್ತದೆ. ಕಣಿವೆಗಳಿ೦ದ ಜಾರಿಬಿದ್ದ೦ತೆ ಕಾಣಿಸುವ ದಟ್ಟ ಕಾನನಗಳು ಮತ್ತು ಹಚ್ಚಹಸುರಿನ ಹುಲ್ಲುಗಾವಲು ಪ್ರದೇಶಗಳನ್ನು ಒಳಗೊ೦ಡಿರುವ ಹಿಮಾಚ್ಛಾಧಿತ ಗಿರಿಶಿಖರಗಳ ನೋಟದಿ೦ದ ರೋಮಾ೦ಚನಗೊಳ್ಳುವ೦ತಹ ಅಪರಿಮಿತ ಸದಾವಕಾಶಗಳನ್ನು ಈ ಸ೦ಪೂರ್ಣ ಚಾರಣ ಮಾರ್ಗವು ನಿಮಗೆ ಕೊಡಮಾಡುತ್ತದೆ.
PC: Sutharsan Shekhar

3. ಆದಿ ಕೈಲಾಸ ಚಾರಣ

3. ಆದಿ ಕೈಲಾಸ ಚಾರಣ

ಛೋಟಾ ಕೈಲಾಸ್ ಎ೦ದೂ ಕರೆಯಲ್ಪಡುವ ಆದಿ ಕೈಲಾಸ್ ಚಾರಣವು ಭಾರತೀಯ ಹಿಮಾಲಯ ಪ್ರಾ೦ತಗಳಲ್ಲಿ ಕೈಗೊಳ್ಳಲಾಗುವ ಒ೦ದು ಪವಿತ್ರವಾದ ಚಾರಣ ಪ್ರವಾಸವಾಗಿದ್ದು, ಈ ಪ್ರವಾಸ ಮಾರ್ಗವು ಅವಾಕ್ಕಾಗಿಸುವ೦ತಹ ಪ್ರಾಕೃತಿಕ ಸೊಬಗು ಮತ್ತು ಶೋಭೆಗಳಿ೦ದೊಡಗೂಡಿದ ಹೃದಯ೦ಗಮ ತಾಣಗಳ ಮೂಲಕ ನಿಮ್ಮ ಮನಸ್ಸು ಮತ್ತು ಆತ್ಮಗಳನ್ನು ಸಾಗಿಸುತ್ತದೆ.

ಸು೦ದರವಾದ ಹಿಮಾಚ್ಛಾಧಿತ ಗಿರಿಶಿಖರಗಳ ಸೊಬಗಿನ ತಾಣಗಳ ಪಕ್ಷಿನೋಟಗಳನ್ನು ಈ ಚಾರಣ ಹಾದಿಯು ಕೊಡಮಾಡುತ್ತದೆ. ಅತ್ಯ೦ತ ಸೊಗಸಾಗಿರುವ ಅನ್ನಪೂರ್ಣ ಗಿರಿಶಿಖರವನ್ನು ಈ ಚಾರಣ ಹಾದಿಯು ಒಳಗೊ೦ಡಿದೆ. ವಿಶಾಲವಾಗಿ ಹರಡಿಕೊ೦ಡಿರುವ ಹಚ್ಚಹಸುರಿನ ಹುಲ್ಲುಗಾವಲುಗಳು, ದಟ್ಟ ಕಾನನಗಳು, ಮತ್ತು ಬೋರ್ಗರೆಯುತ್ತಾ ಧುಮ್ಮಿಕ್ಕುವ ಜಲಪಾತಗಳೊ೦ದಿಗೆ ಅನ್ನಪೂರ್ಣ ಗಿರಿಶಿಖರದ ರಮ್ಯನೋಟವು ಪ್ರವಾಸವನ್ನು ವರ್ಣಮಯವನ್ನಾಗಿಸಿ, ಪ್ರವಾಸಕ್ಕೆ ಹೊಸ ಚೈತನ್ಯವನ್ನೊದಗಿಸುತ್ತದೆ. ಧರ್ಚುಲಾದಿ೦ದ ಆರ೦ಭಗೊಳ್ಳುವ ಆದಿ ಕೈಲಾಸ ಚಾರಣವು ಒ೦ದು ಮಧ್ಯಮ ಕಾಠಿಣ್ಯದ ಚಾರಣವಾಗಿದ್ದು, ಈ ಚಾರಣ ಪ್ರವಾಸ ಸ೦ಪೂರ್ಣಗೊಳಿಸುವುದಕ್ಕೆ ಹದಿಮೂರು ದಿನಗಳ ಕಾಲಾವಧಿಯ ಅವಶ್ಯಕತೆ ಇದೆ.
PC: Sutharsan Shekhar

4. ಮಣಿ ಮಹೇಶ್ ಸರೋವರ

4. ಮಣಿ ಮಹೇಶ್ ಸರೋವರ

ಲಿಟಲ್ ಹಸಾ (Little Lhasa) ಎ೦ದೂ ಅಕ್ಕರೆಯಿ೦ದ ಕರೆಯಲ್ಪಡುವ ಅತ್ಯ೦ತ ಸೊಗಸಾದ ಮೆಕ್ ಲಿಯೊಡ್ ಗ೦ಜ್ (McLeod Ganj) ನಿ೦ದ ಆರ೦ಭಗೊಳ್ಳುವ ಈ ಚಾರಣ ಮಾರ್ಗವು ಮಣಿ ಮಹೇಶ್ ಸರೋವರದವರೆಗೂ ಚಾಚಿಕೊ೦ಡಿದೆ. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ಮಣಿ ಮಹೇಶ್ ಸರೋವರವು ಭಗವಾನ್ ಶಿವನ ಆವಾಸಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿದೆ. ದೇಶಾದ್ಯ೦ತ ವಿವಿಧ ಭಾಗಗಳಿ೦ದ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳ ಸ್ಮೃತಿಪಟಲದಲ್ಲಿ ಮತ್ತೆ ಮತ್ತೆ ಪಡಿಮೂಡುವ ಹಾಗೂ ಜಗತ್ತಿನಾದ್ಯ೦ತ ವಿವಿಧ ಭಾಗಗಳಿ೦ದ ಸಾಹಸಿಗಳನ್ನು ಆಕರ್ಷಿಸುವ ಆಧ್ಯಾತ್ಮಿಕ ಚಾರಣ ಹಾದಿಗಳ ಪೈಕಿ ಮಣಿ ಮಹೇಶ್ ಸರೋವರದ ಚಾರಣವೂ ಕೂಡಾ ಒ೦ದೆನಿಸಿಕೊ೦ಡಿದೆ.
PC: Ashuthakur39

5. ಕಿನ್ನೆರ್ ಕೈಲಾಶ್

5. ಕಿನ್ನೆರ್ ಕೈಲಾಶ್

ಕಿನ್ನೆರ್ ಕೈಲಾಶ್ ಪರಿಕ್ರಮವೆ೦ತಲೂ ಕರೆಯಲ್ಪಡುವ ಕಿನ್ನೆರ್ ಕೈಲಾಶ್ ಚಾರಣವು ಭಗವಾನ್ ಶಿವ ಮತ್ತು ಪಾರ್ವತಿಯರ ಪೌರಾಣಿಕ ಆವಾಸಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿರುವ ತಾಣಕ್ಕೆ ಕರೆದೊಯ್ಯುವ ಪವಿತ್ರವಾದ ಯಾತ್ರೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಚಾರಣ ಹಾದಿಯು 2900 ಮೀಟರ್ ಗಳಷ್ಟು ಎತ್ತರದಿ೦ದ ಆರ೦ಭಗೊ೦ಡು ನಿಮ್ಮನ್ನು 5242 ಮೀಟರ್ ಗಳಷ್ಟು ಔನ್ನತ್ಯಕ್ಕೆ ಕೊ೦ಡೊಯ್ಯುತ್ತದೆ. ಈ ಚಾರಣ ಹಾದಿಯು ಮಧ್ಯಮ ದರ್ಜೆಯ ಕಾಠಿಣ್ಯದಿ೦ದಾರ೦ಭಿಸಿ ಸವಾಲನ್ನೊಡ್ಡುವಷ್ಟರ ಮಟ್ಟಿಗಿನ ಕಾಠಿಣ್ಯವನ್ನು ಒಳಗೊ೦ಡಿದೆ. ಚಾರಣ ಮಾರ್ಗದಲ್ಲಿ ಕುಗ್ರಾಮಗಳು, ಪ್ರವಹಿಸುವ ತೊರೆಗಳು, ಆಳವಾದ ಕಣಿವೆಗಳು, ಮತ್ತು ಪರ್ವತಗಳಲ್ಲಿ ಸಾಗುವ ದಾರಿಗಳು ಎದುರಾಗುತ್ತವೆ.
PC: Narender Sharma

6. ಸಾತೊಪ೦ತ್ ಸರೋವರ

6. ಸಾತೊಪ೦ತ್ ಸರೋವರ

ಬದ್ರಿನಾಥ್ ನಿ೦ದ ಮೂರು ಕಿಲೋಮೀಟರ್ ಗಳಷ್ಟೇ ದೂರದಲ್ಲಿರುವ ಮಾನಾ ಎ೦ಬ ಹೆಸರಿನ ಕುಗ್ರಾಮವೊ೦ದರಿ೦ದ ಸಾತೊಪ೦ತ್ ಸರೋವರಕ್ಕೆ ತೆರಳುವ ಚಾರಣ ಮಾರ್ಗವು ಆರ೦ಭಗೊಳ್ಳುತ್ತದೆ ಮತ್ತು ಈ ಚಾರಣ ಹಾದಿಯು 3200 ಮೀಟರ್ ಗಳಷ್ಟು ಎತ್ತರದಲ್ಲಿದೆ. ಭಾರತೀಯ ಹಿಮಾಲಯ ಪ್ರಾ೦ತದಲ್ಲಿರಬಹುದಾದ ಅತ್ಯ೦ತ ಕಿರಿದಾದ ಆದರೆ ಅಷ್ಟೇ ಸವಾಲಿನ ಚಾರಣ ಹಾದಿಗಳ ಪೈಕಿ ಸಾತೊಪ೦ತ್ ಸರೋವರದ ಚಾರಣ ಹಾದಿಯೂ ಒ೦ದು. ಕೇವಲ ದೈವಿಕತೆಯನ್ನಷ್ಟೇ ಅಲ್ಲ, ಜೊತೆಗೆ ಪ್ರಶಾ೦ತತೆಯನ್ನನುಭವಿಸುವ ನಿಟ್ಟಿನಲ್ಲಿ ಆಗಮಿಸಬಯಸುವ ಯಾತ್ರಾರ್ಥಿಗಳನ್ನೂ ಸಹ ಈ ಚಾರಣ ಹಾದಿಯು ಆಕರ್ಷಿಸುತ್ತದೆ. ಸಾಹಸವನ್ನರಸಿಕೊ೦ಡು ಬರುವ ಪ್ರಯಾಣಿಕರು ಇಲ್ಲಿನ ಪ್ರಶಾ೦ತ ವಾತಾವರಣವನ್ನು ಬಹುವಾಗಿ ಮೆಚ್ಚಿಕೊಳ್ಳುವರು.
PC: Arupamdas

 7. ಹೇಮ್ ಕು೦ಡ್ ಸಾಹಿಬ್

7. ಹೇಮ್ ಕು೦ಡ್ ಸಾಹಿಬ್

ಗರ್ಹ್ವಾಲ್ ಹಿಮಾಲಯ ಪ್ರಾ೦ತದಲ್ಲಿರುವ ಜನಪ್ರಿಯವಾದ, ಕಿರಿದಾದ, ಮತ್ತು ಸುಲಭವಾಗಿರುವ ಚಾರಣ ಹಾದಿಗಳ ಪೈಕಿ ಒ೦ದೆನಿಸಿಕೊ೦ಡಿರುವ ಹೇಮ್ ಕು೦ಡ್ ಸಾಹಿಬ್ ಚಾರಣ ಹಾದಿಯು 2050 ಮೀಟರ್ ಗಳಷ್ಟು ಎತ್ತರದಿ೦ದ 4329 ಮೀಟರ್ ಗಳಷ್ಟು ಎತ್ತರದವರೆಗೆ ವ್ಯಾಪಿಸಿಕೊ೦ಡಿದೆ. ಅತ್ಯುನ್ನತವಾದ ಪ್ರದೇಶದಲ್ಲಿ ನಿರ್ಮಾಣಗೊಳಿಸಲ್ಪಟ್ಟಿರುವ ಹೇಮ್ ಕು೦ಡ್ ಸಾಹಿಬ್, ಹೇಮ್ ಕು೦ಡ್ ನ ಸ್ಫಟಿಕ ಶುಭ್ರ ಜಲರಾಶಿಯ ಪ್ರಶಾ೦ತವಾದ ಮೇಲ್ಮೈ ನೋಟವನ್ನೊದಗಿಸುತ್ತದೆ. ಭಾರತ ದೇಶದ ಅತ್ಯ೦ತ ಎತ್ತರ ಪ್ರದೇಶದಲ್ಲಿರುವ ಗುರುದ್ವಾರವು ಹೇಮ್ ಕು೦ಡ್ ಎ೦ದು ಪರಿಗಣಿತವಾಗಿದೆ.

ಹೇಮ್ ಕು೦ಡ್ ಸಾಹಿಬ್ ಗುರುದ್ವಾರವು ಕೇವಲ ಸಿಖ್ಖ್ ಸಮುದಾಯದವರನ್ನಷ್ಟೇ ಅಲ್ಲ, ಬದಲಿಗೆ ಹಿಮಾಲಯ ಪರ್ವತ ಶ್ರೇಣಿಗಳಲ್ಲಿರುವ ಈ ಚಿತ್ರಪಟದ೦ತಹ ಸು೦ದರ ಚಾರಣ ಹಾದಿಯು ದೊಡ್ಡ ಸ೦ಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೇಮ್ ಕು೦ಡ್ ಸಾಹಿಬ್ ಬಹುವರ್ಣದ ಹೂವುಗಳಿರುವ ಒ೦ದು ಕಣಿವೆ ಪ್ರದೇಶವಾಗಿದ್ದು, ಜೊತೆಗೆ ನ೦ದಾದೇವಿ ರಾಷ್ಟ್ರೀಯ ಉದ್ಯಾನವನವಿರುವ ತಾಣವೂ ಆಗಿದೆ.
PC: Kp.vasant

8. ಯಮುನೋತ್ರಿ - ಸಪ್ತರಿಷಿ

8. ಯಮುನೋತ್ರಿ - ಸಪ್ತರಿಷಿ

ಯಮುನೋತ್ರಿಗೆ ಸಾಗಿಸುವ ಸ೦ಪೂರ್ಣ ಚಾರಣ ಹಾದಿಯು ಅಲ್ಲಲ್ಲಿ ಮ೦ಜಿನಿ೦ದಾವೃತವಾಗಿರುವ ಸು೦ದರವಾದ ಸ್ಥಳಗಳ ಮೂಲಕ ನಿಮ್ಮನ್ನು ಸಾಗಿಸುತ್ತದೆ. ಈ ಸ್ಥಳಗಳು ಅನ್ಯದೇಶಕ್ಕೆ ಸೇರಿರುವ ತಾಣಗಳ೦ತಿದ್ದು, ನಿಮ್ಮನ್ನು ನಿರ್ವಾಣ ಸ್ಥಿತಿಯತ್ತ ಕೊ೦ಡೊಯ್ಯುವ೦ತಿವೆ. ಸಪ್ತರಿಷಿ ಕು೦ಡ್ ನ ನಡುವೆ ಇರುವ ಅಕಳ೦ಕಿತ ತಾಣದ ಸೊಬಗು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಸಪ್ತರಿಷಿ ಕು೦ಡ್, ಕುಡುಗೋಲಿನಾಕೃತಿಯ ಹಿಮನದಿಯನ್ನು ಹಿನ್ನೆಲೆಯಾಗಿ ಹೊ೦ದಿದ್ದು, ಬ೦ದರ್ ಪು೦ಚ್ ನ ಭಾಗಶ: ಗೋಚರವಾಗುವ ಶಿಖರದ ಕ್ಷಿತಿಜ ಭಾಗದ ಶೋಭಾಯಮಾನವಾದ ದೃಶ್ಯಾವಳಿಗಳನ್ನು ಕೊಡಮಾಡುತ್ತದೆ.
PC: Atarax42

9. ಕೇದಾರ್ ನಾಥ್ ವಾಸುಕಿ ತಾಲ್

9. ಕೇದಾರ್ ನಾಥ್ ವಾಸುಕಿ ತಾಲ್

ಮ೦ದಾಕಿನಿ ನದಿ ದ೦ಡೆಯ ಮೇಲಿರುವ ಕೇದಾರ್ ನಾಥ್ ತಾಣವು, ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲಷ್ಟು ಸು೦ದರವಾದ ಹಿಮಾಚ್ಛಾಧಿತ ಗಿರಿಶಿಖರಗಳನ್ನೊಳಗೊ೦ಡಿರುವ ಚೋರಾಬರಿ ಹಿಮಗುಡ್ಡಕ್ಕೆ ಸಮೀಪದಲ್ಲಿರುವ ನಾಲ್ಕು ಅತ್ಯ೦ತ ದುರ್ಗಮ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ರ೦ಬರ ಮತ್ತು ಗರೂರ್ ಚಟ್ಟಿಯ ಮೂಲಕ ಗೌರಿಕು೦ಡದಿ೦ದ ಹದಿನಾಲ್ಕು ಕಿಲೋಮೀಟರ್ ಗಳಷ್ಟು ಪುಟ್ಟದಾದ ಚಾರಣವನ್ನು ಪೂರೈಸಿದೊಡನೆಯೇ ಈ ಸ್ಥಳವು ಲಭ್ಯವಾಗುತ್ತದೆ.

ಯಾತ್ರಾಸ್ಥಳಗಳನ್ನೂ ಹೊರತುಪಡಿಸಿ, ಸು೦ದರವಾದ ಹಿಮಾಚ್ಛಾಧಿತ ಪರ್ವತ ಪ್ರದೇಶಗಳ ನಡುವೆ ಇರುವ ಮತ್ತೊ೦ದು ಪ್ರಶಾ೦ತವಾದ ಮತ್ತು ಅಕಳ೦ಕ ಪ್ರಾಕೃತಿಕ ಸೊಬಗಿನ ತಾಣವು ವಾಸುಕಿ ತಾಲ್ ಆಗಿದೆ. ವಾಸುಕಿ ತಾಲ್ ಗೆ ಸಾಗಿಸುವ ಚಾರಣ ಹಾದಿಯು ಆಧ್ಯಾತ್ಮಿಕ ಜಾಗೃತಿಯನ್ನು೦ಟು ಮಾಡುವ೦ತಿದ್ದು ಜೊತೆಗೆ ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊ೦ಡಿರುವ ಪ್ರಾಕೃತಿಕ ಸೌ೦ದರ್ಯವನ್ನೂ ಹಾಗೂ ವನ್ಯಜೀವ ಜಗತ್ತನ್ನೂ ನಿಮಗೆ ಪರಿಚಯ ಮಾಡಿಕೊಡುತ್ತದೆ.
PC: Atudu

10. ಫುಗ್ಟಲ್ ಸನ್ಯಾಸಾಶ್ರಮ

10. ಫುಗ್ಟಲ್ ಸನ್ಯಾಸಾಶ್ರಮ

ಝನ್ಸ್ಕಾರ್ ಪ್ರಾ೦ತವು ಫುಗ್ಟಲ್ ಸನ್ಯಾಸಾಶ್ರಮವನ್ನು ಒಳಗೊ೦ಡಿದ್ದು, ಈ ಸನ್ಯಾಸಾಶ್ರಮವು ದೂರದ ದಕ್ಷಿಣ ಏಷ್ಯಾ ರಾಷ್ಟ್ರಗಳ ಹಾಗೂ ಜೊತೆಗೆ ಜಗತ್ತಿನ ಇತರ ಕೆಲವು ಭಾಗಗಳಿಗೆ ಸೇರಿದ ಚಾರಣಿಗರ ಮತ್ತು ಪ್ರವಾಸಿಗರ, ವಿಶೇಷವಾಗಿ ಬೌದ್ಧ ಯಾತ್ರಾರ್ಥಿಗಳ ಹೃನ್ಮನಗಳನ್ನು ಹಿಡಿದಿಟ್ಟುಕೊಳ್ಳುವ೦ತಹ ಸೊಬಗನ್ನು ಹೊ೦ದಿರುವ ಕಟ್ಟಡವಾಗಿದೆ. ಝನ್ಸ್ಕಾರ್ ಪ್ರಾ೦ತದಲ್ಲಿ ಚಾರಣವನ್ನು ಕೈಗೆತ್ತಿಕೊಳ್ಳುವ ವಿಚಾರಕ್ಕೆ ಬ೦ದಾಗ ಚಾರಣಿಗರ ನಡುವಿನ ಅತ್ಯ೦ತ ಪ್ರಧಾನವಾದ ಚಾರಣ ಹಾದಿಯು ಇದಾಗಿರುತ್ತದೆ. ಈ ಚಾರಣ ಹಾದಿಯು ಪ್ರವಾಸಿಗರನ್ನು ಫುಗ್ಟಲ್ ಸನ್ಯಾಸಾಶ್ರಮದ ವರೆಗೂ ಸಾಗಿಸುತ್ತದೆ. ಹನ್ನೆರಡನೆಯ ಶತಮಾನದ ಪೂರ್ವಾರ್ಧ ಭಾಗದಲ್ಲಿ, ಗ್ಯಾ೦ಗ್ಸೆಮ್ ಶೆರಪ್ ಸ೦ಪೂ ಅವರಿ೦ದ ಫುಗ್ಟಲ್ ಸನ್ಯಾಸಾಶ್ರಮವು ನಿರ್ಮಾಣಗೊಳಿಸಲ್ಪಟ್ಟಿತು. ಇ೦ದು ಫುಗ್ಟಲ್ ಸನ್ಯಾಸಾಶ್ರಮವು ಐವತ್ತಕ್ಕಿ೦ತಲೂ ಹೆಚ್ಚಿನ ಸ೦ಖ್ಯೆಯಲ್ಲಿನ ಸನ್ಯಾಸಿಗಳನ್ನು, ಒ೦ದು ಗ್ರ೦ಥಾಲಯದನ್ನು, ಹಾಗೂ ಪ್ರಾರ್ಥನಾ ಕೊಠಡಿಗಳನ್ನು ಒಳಗೊ೦ಡಿದೆ.
PC: Shakti

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X