• Follow NativePlanet
Share
Menu
» »ಭಾರತದ 10 ಅಪಾಯಕಾರಿ ಸ್ಥಳಗಳು ಯಾವುವು ಗೊತ್ತ?

ಭಾರತದ 10 ಅಪಾಯಕಾರಿ ಸ್ಥಳಗಳು ಯಾವುವು ಗೊತ್ತ?

Written By:

ಭಾರತದ ಪ್ರಕೃತಿ ಸಂಪತ್ತಿಗೆ ಹಾಗು ಸಂಸ್ಕøತಿಗೆ ಬೆರಗಾಗದೇ ಯಾರು ಇರಲಾರರು. ಹಾಗಾಗಿಯೇ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಿಗಳು ಕೂಡ ನಮ್ಮ ದೇಶದ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಭಾರತದ ಸಂಸ್ಕøತಿಗೆ ಜೈಕಾರ ಹಾಕುತ್ತಾರೆ.

ಭಾರತದಲ್ಲಿ ನಾವು ಎಂದೂ ಊಹಿಸಲಾಗದ ನಿಗೂಢವಾದ ಸ್ಥಳಗಳು, ದೇವಾಲಯಗಳು, ಪ್ರಾಣಿ ಸಂಕುಲವನ್ನು ಹೊಂದಿದ್ದೇವೆ. ಕೆಲವೊಮ್ಮೆ ಕೆಲವು ಸ್ಥಳಗಳಿಗೆ ಭೇಟಿ ನೀಡಲೇಬಾರದು ಎಂದು ನಿರ್ಬಂಧ ವಿಧಿಸಲಾಗುತ್ತದೆ. ಅಂತಹ 10 ಸ್ಥಳಗಳ ಬಗ್ಗೆ ನಾವು ಲೇಖನದ ಮೂಲಕ ತಿಳಿಯೋಣ.

ಇಲ್ಲಿ ಅಪಾರವಾದ ನೈಸರ್ಗಿಕವಾದ ಸೌಂದರ್ಯವು ಇದ್ದರೂ ಕೂಡ, ಆ ಪ್ರದೇಶಗಳಿಗೆ ಭೇಟಿ ನೀಡುವುದು ಅಷ್ಟು ಒಳ್ಳೆಯದಲ್ಲ. ಹಾಗಾದರೆ ಅಂತಹ ಅಪಾಯಕಾರಿ ತಾಣಗಳು ಯಾವುವು? ಏಕೆ ಅಲ್ಲಿಗೆ ಭೇಟಿ ನೀಡಬಾರದು ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ಅಕ್ಸಾಯಿ ಚಿನ್, ಜಮ್ಮು ಮತ್ತು ಕಾಶ್ಮೀರ

ಅಕ್ಸಾಯಿ ಚಿನ್, ಜಮ್ಮು ಮತ್ತು ಕಾಶ್ಮೀರ

ಅಕ್ಸಾಯಿ ಚಿನ್ ಒಂದು ಕದನ ವಿರಾಮ ಸಾಲು (ಲೈನ್). ಇದು ಚೀನಾದ ನಿಯಂತ್ರಿತವಾದ ಪ್ರದೇಶವಾಗಿದೆ. ಇದು ಭಾರತೀಯ ನಿಯಂತ್ರಿತ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸುತ್ತದೆ. ಈ ಸಾಲನ್ನು ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ ಎಂದು ಕರೆಯುತ್ತಾರೆ. ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಆದರೆ ಸ್ಥಳದ ಸೌಂದರ್ಯದ ಬಗ್ಗೆ ಹೇಳಬೇಕಾದರೆ ಅತ್ಯಂತ ಸುಂದರವಾಗಿದೆ.

ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್, ಕೇರಳ

ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್, ಕೇರಳ

ಈ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಅತ್ಯಂತ ಸುಂದರವಾದ ಪ್ರಕೃತಿಯನ್ನು ಹೊಂದಿದೆ. ಈ ಉದ್ಯಾನವನದಲ್ಲಿ ಹಲವಾರು ವನ್ಯಜೀವಿಗಳನ್ನು ಕಾಣಬಹುದಾಗಿದೆ. ಇಂಥಹ ಅದ್ಭುತವಾದ ಸ್ಥಳ ಇರುವುದು ಕೇರಳದಲ್ಲಿ. ಆದರೆ ಈ ಸ್ಥಳಕ್ಕೆ ಪ್ರವಾಸಿಗರಿಗೆ ಭೇಟಿ ನೀಡಬಾರದು. ಕಾರಣ ಇತ್ತೀಚೆಗೆ ಮಾವೋವಾದಿ ದಾಳಿಯಿಂದಾಗಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುವುದಿಲ್ಲ.

ಮಧ್ಯ ಪ್ರದೇಶದ ಚಂಬಲ್ ನದಿ ಬೇಸಿನ್

ಮಧ್ಯ ಪ್ರದೇಶದ ಚಂಬಲ್ ನದಿ ಬೇಸಿನ್

ಚಂಬಲ್ ಮಧ್ಯ ಪ್ರದೇಶದ ಅತ್ಯಂತ ಅದ್ಭುತವಾದ ತಾಣವಾಗಿದೆ. ಇಲ್ಲಿ ಹಲವಾರು ಬಾಲಿವುಡ್ ನಿರ್ಮಾಪಕರು ಇಲ್ಲಿನ ಸೌಂದರ್ಯಕ್ಕೆ ಮನಸೋತು ಸಿನಿಮಾಗಳನ್ನು ಈ ಸ್ಥಳದಲ್ಲಿ ಪ್ರಾರಂಭ ಮಾಡುತ್ತಾರೆ. ಭಾರತದಲ್ಲಿನ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಈ ಚಂಬಲ್ ನದಿ ಕುಖ್ಯಾತಿ ಪಡೆದಿದೆ. ಹಾಗಾಗಿಯೇ ಇಲ್ಲಿಗೆ ಯಾವುದೇ ಪ್ರವಾಸಿಗರು ಕೂಡ ಭೇಟಿ ನೀಡುವುದಿಲ್ಲ.

ಮನಸ್ ನ್ಯಾಷನಲ್ ಪಾರ್ಕ್, ಅಸ್ಸಾಂ

ಮನಸ್ ನ್ಯಾಷನಲ್ ಪಾರ್ಕ್, ಅಸ್ಸಾಂ

ಅಸ್ಸಾಂನಲ್ಲಿನ ಮನಸ್ ನ್ಯಾಷನಲ್ ಪಾರ್ಕ್ ಒಂದು ಭಯೋತ್ಪಾದಕ ಚಟುವಟಿಕೆಗಳು ನಡೆಯುವ ಸ್ಥಳವೆಂದು ಹೆಚ್ಚು ಪ್ರಸಿದ್ಧವಾಗಿದೆ. ಈ ಸ್ಥಳದಲ್ಲಿ ವನ್ಯಜೀವಿ ಅಭಯಾರಣ್ಯವಿದೆ. ಇದು ಭಾರತದ ಅತ್ಯಂತ ಸುಂದರವಾದ ಅರಣ್ಯ ಸಂಪತ್ತಾಗಿದೆ. ಇಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಇಲ್ಲಿ ಯಾವುದೇ ಪ್ರವಾಸಿಗರು ಭೇಟಿ ನೀಡುವುದಿಲ್ಲ.

ತುರಾ, ಮೇಘಾಲಯ

ತುರಾ, ಮೇಘಾಲಯ

ತುರಾ ಎಂಬುದು ರೋಮಾಂಚಕ ಬುಡಕಟ್ಟು, ಆಕರ್ಷಕ ಭೂದೃಶ್ಯಗಳು, ಸುತ್ತುವ ಜಲಪಾತಗಳು, ವಿಭಿನ್ನವಾದ ಗುಹೆಗಳು ಇಲ್ಲಿವೆ. ಮೇಘಾಲಯದಲ್ಲಿ ಈ ಸಣ್ಣ ಪಟ್ಟಣ ಸ್ವಲ್ಪ ಸಮಯದಿಂದ ಈಶಾನ್ಯದ ಅತ್ಯಂತ ಪ್ರಖ್ಯಾತ ಭಯೋತ್ಪಾದಕ ಸಂಘಟನೆಗಳು ಹೆಚ್ಚಾಗಿದ್ದು ಈ ಸ್ಥಳಕ್ಕೆ ಯಾವುದೇ ಪ್ರವಾಸಿಗರು ಕೂಡ ಭೇಟಿ ನೀಡುವುದಿಲ್ಲ.

ಹಫ್ಪೋಂಗ್, ಅಸ್ಸಾಂ

ಹಫ್ಪೋಂಗ್, ಅಸ್ಸಾಂ

ಅಸ್ಸಾಂನ ಎನ್ಸಿ ಹಿಲ್ಸ್ ಹೃದಯಭಾಗದಲ್ಲಿರುವ ಸುಂದರವಾದ ಪಟ್ಟಣವೆಂದರೆ ಅದು ಹಫ್ಲೋಂಗ್. ಇದು ತನ್ನ ಪ್ರವಾಸೋದ್ಯಮ ವಲಯದಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳು ಹಾಗು ಉಗ್ರಗಾಮಿಗಳಿಂದ ಕೂಡಿರುವುದರಿಂದ ಈ ಸ್ಥಳಕ್ಕೆ ಯಾವುದೇ ಪ್ರವಾಸಿಗನು ಕೂಡ ಕಾಲು ಇಡುವುದಿಲ್ಲ.

ಬಸಾರ್, ಛತ್ತೀಸ್ ಘಡ್

ಬಸಾರ್, ಛತ್ತೀಸ್ ಘಡ್

ಭಾರತೀಯ ನಯಗಾರ ಜಲಪಾತ, ಚಿತ್ರಕೂಟ್, ಬಸ್ತಾರ್ ಇವೆಲ್ಲವೂ ಛತ್ತೀಸ್ ಘಡ್‍ನ ಪ್ರಸಿದ್ಧವಾದ ಸ್ಥಳವಾಗಿದೆ. ಛತ್ತಿಸ್ ಘಡ್‍ನಲ್ಲಿನ ಸುಂದರವಾದ ಬಸಾರ್ ಎಂಬ ಸ್ಥಳವಿದೆ. ಈ ಸ್ಥಳವು ಅತ್ಯಂತ ಮನೋಹರವಾಗಿದ್ದು, ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಆದರೆ ಇಂಥಹ ಅದ್ಭುತವಾದ ತಾಣದಲ್ಲಿ ಹೆಚ್ಚು ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿವೆ. ಹಾಗಾಗಿಯೇ ಈ ತಾಣದಲ್ಲಿ ಪ್ರವಾಸಕ್ಕೆ ಯೋಗ್ಯವಾದ ತಾಣವಲ್ಲ.

ಪುಲ್ಬನಿ, ಒಡಿಶಾ

ಪುಲ್ಬನಿ, ಒಡಿಶಾ

ಒಡಿಶಾದ ಭುವನೇಶ್ವರದಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಈ ಅದ್ಭುತವಾದ ಪುಟ್ಟದಾದ ಪಟ್ಟಣವು ಅತ್ಯಂತ ಸುಂದರವಾಗಿದೆ. ಇಲ್ಲಿನ ಅದ್ಭುತವಾದ ಜಲಪಾತಗಳು ಮತ್ತು ಸುಂದರವಾದ ಭೂದೃಶ್ಯಗಳು ರಮಣೀಯವಾಗಿದೆ. ಈ ತಾಣವು ಪ್ರವಾಸಕ್ಕೆ ಯೋಗ್ಯವಾದ ತಾಣವಲ್ಲ. ಕಾರಣ ಇಲ್ಲಿ ಮಾವೋವಾದಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಇಲ್ಲಿಗೆ ಯಾರು ಕೂಡ ಪ್ರವಾಸಕ್ಕೆ ಭೇಟಿ ನೀಡುವುದಿಲ್ಲ.

ನಿಕೋಬಾರ್ ದ್ವೀಪಗಳು

ನಿಕೋಬಾರ್ ದ್ವೀಪಗಳು

ಅಂಡಮಾನ್ ಹಾಗು ನಿಕೋಬಾರ್ ಅತ್ಯಂತ ಪ್ರಾಚೀನವಾದ ದ್ವೀಪಗಳಾಗಿವೆ. ಇಲ್ಲಿ ಕಾಡುಗಳು ಸಮೃದ್ಧವಾಗಿದೆ ಮತ್ತು ಕಡಲತೀರಗಳು ಅದ್ಭುತವಾಗಿದೆ. ಇಲ್ಲಿ ಸಂಶೋಧನೆಯ ವಿಷಯ ಉದ್ದೇಶಗಳಿಗೆ ಹೊತರು ಪಡಿಸಿ ಪ್ರವಾಸಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವುದಿಲ್ಲ. ಇಲ್ಲಿ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ.

ಬರೆನ್ ದ್ವೀಪಗಳು, ಅಂಡಮಾನ್

ಬರೆನ್ ದ್ವೀಪಗಳು, ಅಂಡಮಾನ್

ಭಾರತದ ಏಕೈಕ ಜ್ವಾಮುಖಿ ಹೊಂದಿರುವ ಪರ್ವತ ಸ್ಥಳವೆಂದರೆ ಅದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು. ನೀವು ಇಲ್ಲಿ ಕೆಂಪು ಬಿಸಿ ಲಾವಾವನ್ನು ಕಾಣಬಹುದಾಗಿದೆ. ಜ್ವಾಲಮುಖಿಯು ಪರ್ವತದ ತನ್ನ ಬಾಯಿಯಿಂದ ಹೊಗೆ ಉರಿಯುತ್ತಿದ್ದೆ ಎಂದು ನಮಗೆ ಭಾಸವಾಗುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಠಿಯಿಂದ ಪರ್ವತದ ಸಮೀಪಕ್ಕೆ ಯಾರಿಗೂ ಕೂಡ ಅನುಮತಿಯನ್ನು ನೀಡುವುದಿಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ