ಕೆಟಕೇಶ್ವರ್ ದೇವಾಲ್ ಶಿವನಿಗಾಗಿ ನಿರ್ಮಿಸಲಾಗಿರುವ ಒಂದು ದೇವಾಲಯವಾಗಿದೆ. ಇದು ಈ ನಗರದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಇದರಲ್ಲಿ ವಿಶ್ವದ ಅತ್ಯಂತ ದೊಡ್ಡ ಶಿವಲಿಂಗವನ್ನು ನಾವು ಕಾಣಬಹುದು. ವೈಚಿತ್ರ್ಯವೇನೆಂದರೆ ಇಲ್ಲಿ ಶಿವಲಿಂಗದ ಮೇಲ್ಭಾಗ ದೇವಾಲಯದ ಒಂದು ಭಾಗದಲ್ಲಿದ್ದರೆ, ಅದರ ಅಡಿಪಾಯ ಅಥವಾ ಕೆಳಭಾಗ ಇನ್ನೊಂದು ಮೂಲೆಯಲ್ಲಿ ಕಂಡು ಬರುತ್ತದೆ. ಇದಕ್ಕೆ ಇಲ್ಲಿ ಉಂಟಾದ ಪ್ರಬಲ ಭೂಕಂಪವೇ ಕಾರಣ ಎಂದು ಹೇಳುತ್ತಾರೆ. ಭೂಕಂಪದಲ್ಲಿ ಈ ಬೃಹತ್ ಶಿವಲಿಂಗವು ಎರಡು ಹೋಳುಗಳಾಗಿ ಭಾಗಗೊಂಡಿತು ಎಂದು ಹೇಳುತ್ತಾರೆ.
ಹೀಗಾಗಿ ಕೆಟಕೇಶ್ವರ್ ದೇವಾಲ್ ಪ್ರಸಿದ್ಧಿಯನ್ನು ಗಳಿಸಿದೆ. ಮೊದಲು ಈ ಲಿಂಗವನ್ನು ಪ್ರಸ್ತುತ ನಾವು ನೋಡುತ್ತಿರುವ ಸ್ಥಳಕ್ಕೆ ತಂದಾಗ ಅಲ್ಲಿ ಕೇವಲ ಬಿದಿರು ಮೆಳೆಗಳು ಇದ್ದವಂತೆ, ನಂತರ ನಾವೀಗ ನೋಡುತ್ತಿರುವ ದೇವಾಲಯವನ್ನು ಇಲ್ಲಿ ನಿರ್ಮಿಸಲಾಯಿತಂತೆ.
ಪ್ರವಾಸಿಗರು ಈ ದೇವಾಲಯಕ್ಕೆ ಯಾವಾಗ ಬೇಕಾದರು ಭೇಟಿ ನೀಡಬಹುದು. ಇದು ವರ್ಷಪೂರ್ತಿ ತೆರೆದಿರಲ್ಪಟ್ಟಿದೆ. ಪ್ರಸ್ತುತ ಈ ದೇವಾಲಯವನ್ನು ಸ್ಥಳೀಯರು ನಿರ್ವಹಿಸುತ್ತಿದ್ದಾರೆ.


Click it and Unblock the Notifications