Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಹವಾಮಾನ

ತೇಜ್‍ಪುರ್ ಹವಾಮಾನ

ತೇಜ್‍ಪುರವು ವರ್ಷಪೂರ್ತಿ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಆಗಾಗಿ ಇಲ್ಲಿಗೆ ಯಾವಾಗ ಬೇಕಾದರು ಭೇಟಿ ನೀಡಬಹುದು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ನಂತರವು ಇಲ್ಲಿ ಅತ್ಯಂತ ಆಹ್ಲಾದಕರವಾದ ವಾತಾವರಣವನ್ನು ನಾವು ಕಾಣಬಹುದು. ಈ ಅವಧಿಯಲ್ಲಿ ಮಳೆ ಮತ್ತು ಆರ್ದ್ರತೆಯು ಕಡಿಮೆ ಇರುವುದರಿಂದ ಪ್ರವಾಸಿಗರು ಇಲ್ಲಿ ಸ್ಥಳ ವೀಕ್ಷಣೆ ಮಾಡುತ್ತ ಕಾಲ ಕಳೆಯಬಹುದು.

ಬೇಸಿಗೆಗಾಲ

ತೇಜ್‍ಪುರದಲ್ಲಿ ಬೇಸಿಗೆ ಕಾಲವು ಮಾರ್ಚ್ ನಿಂದ ಜೂನ್ ಕಡೆಯ ವಾರದವರೆಗೆ ವಿಸ್ತರಿಸಿರುತ್ತದೆ. ಬೇಸಿಗೆಕಾಲದಲ್ಲಿ ಇಲ್ಲಿ ಸರಾಸರಿ ಉಷ್ಣಾಂಶವು 36 ಡಿಗ್ರಿ ಸೆಲ್ಶಿಯಸ್ ಹಾಸು ಪಾಸಿನಲ್ಲಿರುತ್ತದೆ. ಮೇ ತಿಂಗಳಿನಲ್ಲಿ ಇಲ್ಲಿ ಆರ್ದ್ರತೆಯು ಅಧಿಕ ಪ್ರಮಾಣವನ್ನು ತಲುಪಿರುತ್ತದೆ. ಮೇ ವರ್ಷದ ಅತ್ಯಂತ ಬಿಸಿಲಿನ ತಿಂಗಳಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದಾದಲ್ಲಿ ಹತ್ತಿಯ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.

ಮಳೆಗಾಲ

ಜೂನ್‍ನಿಂದ ಸೆಪ್ಟೆಂಬರ್ ವರೆಗೆ ತೇಜ್‍ಪುರದಲ್ಲಿ ಮಳೆಗಾಲವಿರುತ್ತದೆ. ನೈಋತ್ಯ ಮಾನ್ಸೂನ್ ಮಾರುತಗಳಿಂದಾಗಿ ಇಲ್ಲಿ ಹೆಚ್ಚಿನ ಮಳೆ ಬೀಳುತ್ತದೆ. ಇಲ್ಲಿ ಮಳೆಯು ವಿರಳವಾಗಿ ಬೀಳುತ್ತದೆ. ಆದರೆ ಮಳೆ ಬೀಳುವಾಗ ಜೋರಾಗಿಯೇ ಬೀಳುತ್ತದೆ. ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಿದಾಗ ಅಬ್ಬರದಿಂದ ಕೂಡಿದ ಮಳೆ ಬಿದ್ದಾಗ ಯಾವುದೇ ರೀತಿಯಲ್ಲಿ ಆತಂಕ ಪಡಬಾರದು. ಏಕೆಂದರೆ ಈ ಮಳೆಯು ಕೇವಲ 10 ನಿಮಿಷಗಳಲ್ಲಿ ನಿಂತು ಹೋಗುತ್ತದೆ.

ಚಳಿಗಾಲ

ತೇಜ್‍ಪುರದಲ್ಲಿ ಚಳಿಗಾಲವು ಡಿಸೆಂಬರ್, ಜನವರಿ ಮತ್ತು ಫೆಬ್ರವರಿಗಳಲ್ಲಿ ಇರುತ್ತದೆ. ಈ ಊರು ಹಿಮಾಲಯದ ತಗ್ಗಿನಲ್ಲಿರುವ ಪರ್ವತ ಶ್ರೇಣಿಗಳಿಗೆ ಸಮೀಪದಲ್ಲಿರುವುದರಿಂದಾಗಿ ಇಲ್ಲಿ ಚಳಿಗಾಲದಲ್ಲಿ ಸ್ವಲ್ಪ ಚಳಿ ಹೆಚ್ಚಾಗಿರುತ್ತದೆ. ಇಲ್ಲಿ ಈ ಅವಧಿಯಲ್ಲಿ ಕಂಡು ಬಂದಿರುವ ಗರಿಷ್ಠ ಉಷ್ಣಾಂಶವು 22 ಡಿಗ್ರಿ ಸೆಲ್ಶಿಯಸ್ ಆಗಿದ್ದರೆ, ಕನಿಷ್ಠ 7 ಡಿಗ್ರಿ ಸೆಲ್ಶಿಯಸ್ ಇರುತ್ತದೆ.