Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು » ಮಹಾಭೈರವ್ ದೇವಾಲಯ

ಮಹಾಭೈರವ್ ದೇವಾಲಯ, ತೇಜ್‍ಪುರ್

1

ಮಹಾಭೈರವ್ ದೇವಾಲಯವು ತೇಜ್‍ಪುರದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಿವನಿಗಾಗಿ ನಿರ್ಮಿಸಲಾಗಿರುವ ಈ ಮಹಾಭೈರವ್ ದೇವಾಲಯವು ನಗರದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ. ದಂತ ಕತೆಗಳ ಪ್ರಕಾರ ರಾಕ್ಷಸರ ಮಹಾರಾಜನಾದ ಬಾಣಾಸುರನು ಈ ದೇವಾಲಯವನ್ನು ನಿರ್ಮಿಸಿದನಂತೆ. ಮೊದಲು ಕಲ್ಲುಗಳಿಂದ ರಚನೆಗೊಂಡಿದ್ದ ಹಳೆಯ ಕಟ್ಟಡವು 1897ರಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ನಾಶಗೊಂಡಿತು. ಆನಂತರ ನಾವಿಂದು ಕಾಣುವ ದೇವಾಲಯವನ್ನು ನಿರ್ಮಿಸಲಾಯಿತಂತೆ. ಇದನ್ನು ನಾಗಾ ಬಾಬಾ ಎಂದು ಕರೆಯಲ್ಪಡುವ ಪ್ರಸಿದ್ಧ ಯೋಗಿಯೊಬ್ಬರು ನಿರ್ಮಿಸಿದರಂತೆ. ಇಲ್ಲಿನ ಶಿವಲಿಂಗವು ಸಹ ಬೃಹದಾಕಾರದಲ್ಲಿದೆ.

ದಿಬ್ಬದ ಮೇಲೆ ನೆಲೆಗೊಂಡಿರುವ ಮಹಾಭೈರವ್ ದೇವಾಲಯದಲ್ಲಿ ಶಿವನ ವಿಗ್ರಹದ ಜೊತೆಗೆ ಗಣೇಶ ಮತ್ತು ಹನುಮಾನ್ ದೇವರುಗಳ ವಿಗ್ರಹಗಳು ಸಹ ಇವೆ. ಇದರ ಪ್ರವೇಶದ್ವಾರಗಳನ್ನು ಸೂಕ್ಷ್ಮವಾದ ಕೆತ್ತನೆಗಳಿಂದ ಸಿಂಗರಿಸಲಾಗಿದೆ. ಶಿವರಾತ್ರಿಯನ್ನು ಇಲ್ಲಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ದೇವಾಲಯದ ಸುತ್ತಲು ವಿಶಾಲವಾದ ಬಯಲು ಇದ್ದು, ಭಕ್ತಾಧಿಗಳು ಇಲ್ಲಿ ಕುಳಿತು ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat