Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು » ಕೋಲ್ ಪಾರ್ಕ್

ಕೋಲ್ ಪಾರ್ಕ್, ತೇಜ್‍ಪುರ್

1

ಕೋಲ್ ಪಾರ್ಕ್ ಚಿತ್ರಲೇಖ ಉದ್ಯಾನವನವೆಂದು ಸಹ ಗುರುತಿಸಲ್ಪಡುತ್ತದೆ (ಇತ್ತೀಚೆಗೆ ಇದನ್ನು ಕೋಲ್ ಪಾರ್ಕ್ ಎಂದೆ ಮರು ನಾಮಕರಣ ಮಾಡಿ ಕರೆಯುತ್ತಿದ್ದಾರೆ). ಈ ಉದ್ಯಾನವನವನ್ನು ಇಲ್ಲಿನ ಪುರಾಣದೊಂದಿಗೆ ಗುರುತಿಸಲ್ಪಟ್ಟಿರುವ ಚಿತ್ರಲೇಖ ಎಂಬ ಪಾತ್ರದಿಂದ ಗುರುತಿಸಲಾಗುತ್ತದೆ. ಈಕೆಯು ಉಷಾಳ ಸಖಿಯಾಗಿದ್ದಳು, ಅಲ್ಲದೆ ಆಕೆ ಪ್ರಸಿದ್ಧ ಚಿತ್ರಗಾರ್ತಿ ಸಹ ಆಗಿದ್ದಳು.

 ಈ ಉದ್ಯಾನವನದ ಮಧ್ಯದಲ್ಲಿ ಕುದುರೆ ಲಾಳಾಕಾರದ ದೊಡ್ಡ ಕೆರೆಯನ್ನು ನಾವು ಕಾಣಬಹುದು. ಇದರ ಸುತ್ತಲು ಇರುವ ಸುಂದರವಾದ ಪರಿಸರವು ವಿಶ್ರಾಂತಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಎಲ್ಲೆಲ್ಲಿಯೂ ಹಸಿರಿನ ಹೊದಿಕೆ ಹಾಸಿರುವ, ತಂಪಾದ ಈ ತಾಣವು ಪ್ರಸಿದ್ಧ ವಿಹಾರ ತಾಣವಾಗಿ ಗುರುತಿಸಲ್ಪಟ್ಟಿದೆ.

ಕೋಲ್ ಪಾರ್ಕಿನಲ್ಲಿರುವ ಭೋಮೊರಗುರಿ ಶಾಸನವು ಸಹ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕವಾಗಿದೆ. ಇದು ಪ್ರಾಚೀನ ಕಾಲದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲು ಯೋಜಿಸಿದ್ದ ಸೇತುವೆಯ ಕುರಿತು ವಿವರಗಳನ್ನು ನೀಡುತ್ತದೆ. ಇದರ ಜೊತೆಗೆ ಇಂದು ಕಾರ್ಯ ನಿರ್ವಹಿಸುತ್ತಿರುವ ಕೊಲಿಯ ಭೊಮೊರ ಸೇತುವೆಯ ಯೋಜನೆ ಮತ್ತು ಅದನ್ನು ನಿರ್ಮಿಸುವಾಗ ನಡೆಸಿದ ಕಾರ್ಯಾಚರಣೆಗಳ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಕೋಲ್ ಪಾರ್ಕಿನಲ್ಲಿ ಬಮುನಿ ಬೆಟ್ಟಗಳ ಅವಶೇಷಗಳಿಂದ ತಂದ ಎರಡು ಅಲಂಕಾರಿಕ ಸ್ತಂಭಗಳ ಸ್ಮಾರಕಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon