ಆರೊವಿಲ್ ನಗರ, ಪಾಂಡಿಚೆರಿ

ಆರೋವಿಲ್ ನಗರ (ಮುಂಜಾನೆಯ ನಗರ ಎಂದೂ ಕರೆಯುತ್ತಾರೆ) ಪಾಂಡಿಚೆರಿಯಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿದೆ. ಇದು ವಿವಿಧ ರಾಷ್ಟ್ರೀಯತೆ ಹಾಗೂ ಸಂಸ್ಕೃತಿಗಳ ನಗರ. ಇಲ್ಲಿ 50 ವಿವಿಧ ರಾಷ್ಟ್ರಗಳ ಜನರು ಬಂದು ನೆಲೆಸಿರುವ ಪಟ್ಟಣವಿದೆ ಹಾಗೂ ಇದನ್ನು ಜಾಗತಿಕ ನಗರ ಎಂದು ಕರೆಯಲಾಗುತ್ತದೆ. ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾದ ಈ ನಗರ ವಿವಿಧ ಸಂಸ್ಕೃತಿಗಳ ಸಮ್ಮಿಲನಗೊಂಡ ನಗರ ಹಾಗೂ ಸಮುದಾಯ ಜೀವನದ ನಗರ ಎಂದು ಹೆಸರುವಾಸಿಯಾಗಿದೆ.

ತಾಯಿ ಎಂದು ಪ್ರಸಿದ್ಧರಾದ ಮಿರ್ರಾ ಅಲ್ಫಾಸಾ ರಿಂದ ಸ್ಥಾಪನೆಗೊಂಡ ಆರೋವಿಲ್ ನಗರ 1968 ರಲ್ಲಿ ಶ್ರೀ ಅರಬಿಂದೋ ಸಮಾಜದಿಂದ ಒಂದು ಯೋಜನೆಯಡಿ ಅಭಿವೃದ್ಧಿಗೊಂಡ ನಗರವಾಗಿದೆ. ಇಲ್ಲಿ ಎಲ್ಲಾ ರಾಷ್ಟ್ರೀಯತೆಯ ಗಂಡು ಮತ್ತು ಹೆಣ್ಣು ಎಂಬ ಭೇದ ಇರದೆ ಒಂದೇ ಕುಟುಂಬದಂತೆ ಇರಬೇಕು ಎಂಬ ಕಲ್ಪನೆಯಡಿ ನಿರ್ಮಾಣಗೊಂಡ ನಗರ ಇದಾಗಿದೆ. ಹಾಗಾಗಿ ಇಲ್ಲಿ ಸಾಮರಸ್ಯ ಮತ್ತು ಪ್ರಗತಿ ಎರಡು ಮುಖ್ಯ ಅಂಶಗಳಾಗಿವೆ.

ಆರೋವಿಲ್ ವಿವಿಧ ವಲಯಗಳನ್ನು ಹೊಂದಿದೆ. ಅವುಗಳೆಂದರೆ ಶಾಂತ ವಲಯ, ಕೈಗಾರಿಕಾ ವಲಯ, ವಸತಿ ವಲಯ, ಅಂತಾರಾಷ್ಟ್ರೀಯ ವಲಯ, ಸಾಂಸ್ಕೃತಿಕ ವಲಯ ಮತ್ತು ಹಸಿರು ವಲಯ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಮಾತ್ರಿಮಂದಿರ ಇಲ್ಲಿನ ವಾಸ್ತುಶಿಲ್ಪದ ವೈವಿಧ್ಯದಿಂದಾಗಿ ಇಲ್ಲಿ ಹೆಚ್ಚು ಜನ ಆಕರ್ಷಿತರಾಗುತ್ತಾರೆ. ಆರೋ ಕಡಲ ಕಿನಾರೆ ಈ ನಗರದ ಸಮೀಪದಲ್ಲೇ ಇದೆ ಹಾಗೂ ಇಲ್ಲಿಗೆ ಬರುವ ಎಲ್ಲಾ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

Please Wait while comments are loading...