ಅರಬಿಂದೋ ಆಶ್ರಮ, ಪಾಂಡಿಚೆರಿ

ಬ್ರಿಟೀಷರಿಂದ ತಪ್ಪಿಸಿಕೊಂಡು ಓಡಿ ಹೋದ ಶ್ರೀ ಅರಬಿಂದೊ ಘೋಸ್ ಅವರು1926 ರಲ್ಲಿ ಅರಬಿಂದೋ ಆಶ್ರಮವನ್ನು ಕಟ್ಟಿಸಿದರು. 'ತಾಯಿ' ಎಂದೆ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಮೀರಾ ಅಲ್ಫಾಸ್ಸಾ ಅವರು ನವೆಂಬರ್ 24, 1926 ರಿಂದ ಅವರ ಮರಣವಾಗುವ ತನಕ ಈ ಆಶ್ರಮದ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದರು. ಅರಬಿಂದೊ ಅವರು 1950 ರಲ್ಲಿ ಮರಣರಾದ ನಂತರ ಕಟ್ಟಲಾದ ಅರಬಿಂದೋ ಟ್ರಸ್ಟ್ ನ್ ಮುಖ್ಯಸ್ಥರೂ ಇವರೇ ಆಗಿದ್ದರು.

ಇಲ್ಲಿ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ ಹಾಗೂ ಮೊದಲೇ ಅನುಮತಿ ಪಡೆಯದೆ ಒಳಗೆ ಛಾಯಾಚಿತ್ರ ತೆಗೆಯಲು ಸಾಧ್ಯವಿಲ್ಲ. ಈ ಆಶ್ರಮ ಬೆಳಗ್ಗೆ ಎಂಟರಿಂದ ಮಧ್ಯಾಹ್ನ 12 ರ ತನಕ ಹಾಗೂ ಸಂಜೆ 2 ರಿಂದ 6  ರ ತನಕ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿರುತ್ತದೆ. ಆಶ್ರಮದ ಅನುಮತಿ ಪಡೆದು ಇಲ್ಲಿರುವ ಗ್ರಂಥಾಲಯವನ್ನೂ ಬಳಸಿಕೊಳ್ಳಬಹುದು.

Please Wait while comments are loading...