ಉತ್ತರಪ್ರದೇಶದ ಒಂದು ರಮಣೀಯ ಪಟ್ಟಣ, ಪಿಲಿಭಿಟ್, ರಾಜ್ಯದಲ್ಲಿರುವ ಶ್ರೀಮಂತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಪಟ್ಟಣ ಅತಿ ಹೆಚ್ಚು ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ, ಆದರೆ, ನೇಪಾಳ ಜೊತೆ 54 ಕಿ. ಮೀ ಉದ್ದದ ಗಡಿ ಕೆಲವು ಸಾಮಾಜಿಕ ಭದ್ರತೆ ಸಮಸ್ಯೆಗಳನ್ನು ಒಡ್ಡುತ್ತದೆ. ಪಿಲಿಭಿಟ್ ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ಕೆಲವು ಆಸಕ್ತಿದಾಯಕ ಪುರಾತನ ಐತಿಹಾಸಿಕ ಸ್ಮಾರಕಗಳ ನೆಲೆಯಾಗಿದೆ. ಸುಂದರ ನೈಸರ್ಗಿಕ ಸೆಟ್ಟಿಂಗ್ಗಳನ್ನು ಅಥವಾ ದೃಶ್ಯಾವಳಿಗಳನ್ನು ಪ್ರವಾಸಿಗರು ಇಲ್ಲಿ ಆನಂದಿಸಬಹುದು.
ಪಿಲಿಭಿಟ್ ನಲ್ಲಿನ ಮತ್ತು ಸುತ್ತಲಿನ ಪ್ರವಾಸಿ ಸ್ಥಳಗಳು
ಪಿಲಿಭಿಟ್, ಭವ್ಯ ಪ್ರಾಣಿಗಳನ್ನು ಗುರುತಿಸಬಲ್ಲ ಪಿಲಿಭಿಟ್ ಟೈಗರ್ ಮೀಸಲು ಪ್ರದೇಶದ ನೆಲೆಯಾಗಿದೆ. ಇತರೆ ನೈಸರ್ಗಿಕ ಆಕರ್ಷಣೆಗಳೆಂದರೆ ಗೋಮತ ತಾಲ್, ದೇವಹಾ-ಘಾಗಹ ಸಂಗಮ ಮತ್ತು ರಾಜಾ ವೇಣು ಕಾ ತಿಲಾ ಮೊದಲಾದವು. ಇಲ್ಲಿ ಮಹೋಫ್ ಅರಣ್ಯ ವ್ಯಾಪ್ತಿಯಲ್ಲಿ ಚುಕಾ ಬೀಚ್ ಎಂಬ ಬೀಚ್ ಸಹ ಇದೆ. ಕಡಲತೀರದ ಸೂರ್ಯಾಸ್ತದ ಒಂದು ಸಮ್ಮೋಹನಗೊಳಿಸುವ ದೃಶ್ಯವನ್ನು ಇದು ಒದಗಿಸುತ್ತದೆ.
ಸುಮಾರು 450 ವರ್ಷಗಳ ಹಳೆಯ ಗೌರಿ ಶಂಕರ್ ದೇವಸ್ಥಾನ ಸೇರಿದಂತೆ ಪಿಲಿಭಿಟ್ ನಲ್ಲಿ ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿವೆ. ಮೌಲ್ಯಯುತವಾದ ಇತರೆ ಸ್ಥಳಗಳೆಂದರೆ, ಛಟವಿ ಪಡ್ಸಾಹಿ (Chhathavi Padshahi) ಗುರುದ್ವಾರ, ದರ್ಗಾ ಹಜರತ್ ಷಾ ಮಹಮ್ಮದ್ ಶೇರ್ ಮಿಯಾ ಕಿ, ಜಾಮಾ ಮಸೀದಿ, ಮೆಥೊಡಿಸ್ಟ್ ಚರ್ಚ್, ಅರ್ಧನಾರೀಶ್ವರ ದೇವಸ್ಥಾನ ಮತ್ತು ಜೈ ಸಂತರಿ ದೇವಿ ದೇವಾಲಯ. ಅದರ ಅಸ್ತಿತ್ವವನ್ನು 15 ನೇ ಶತಮಾನದ್ದೆಂದು ಪತ್ತೆಹಚ್ಚಲಾಗಿರುವ ಹಳೆಯ ಪಿಲಿಭಿಟ್ ಕೂಡ ಇಲ್ಲಿನ ಅತ್ಯಂತ ವರ್ಣರಂಜಿತ ಮತ್ತು ಪ್ರಸಿದ್ಧವಾದ ಸ್ಥಳವಾಗಿದೆ.
ಪಿಲಿಭಿಟ್ ಹವಾಮಾನ
ಉತ್ತರ ಭಾರತದ ಇತರ ನಗರಗಳು ಮತ್ತು ಪಟ್ಟಣಗಳಂತೆ ಪಿಲಿಭಿಟ್ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದ ಋತುವನ್ನು ಅನುಭವಿಸುತ್ತದೆ.
ಪಿಲಿಭಿಟ್ ಭೇಟಿಗೆ ಸೂಕ್ತ ಸಮಯ
ನವೆಂಬರ್ ನಿಂದದ ಏಪ್ರಿಲ್ ವರೆಗಿನ ಅವಧಿ ಪಿಲಿಭಿಟ್ ಭೇಟಿಗೆ ಸೂಕ್ತ ಸಮಯ. ಹುಲಿ ಮೀಸಲು ಪ್ರದೇಶ ಮತ್ತು ಧಾರ್ಮಿಕ ಸ್ಥಳಗಳು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತವೆ.