Search
 • Follow NativePlanet
Share
ಮುಖಪುಟ » ಸ್ಥಳಗಳು» ಪಿಲಾನಿ

ಪಿಲಾನಿ - ವಿದ್ವಾಂಸರನ್ನು ಆದರಿಸಲ್ಪಡುವ ಸ್ಥಳ

7

ರಾಜಸ್ಥಾನದ ಶೇಖಾವತಿ ಪ್ರದೇಶದಲ್ಲಿ ಬರುವ ಪಿಲಾನಿ ಒಂದು ಪುಟ್ಟ ಪಟ್ಟಣವಾಗಿದೆ. ಇದು ತನ್ನಲ್ಲಿರುವ ಶ್ರೇಷ್ಠ ವಿದ್ಯಾಸಂಸ್ಥೆಗಳಿಗೆ ಹೆಸರುವಾಸಿಯಾಗಿದ್ದು ಅದರಲ್ಲಿ ಬಿಟ್ಸ್ (BITS)ಪಿಲಾನಿ ಪ್ರಮುಖವಾಗಿದೆ. ಈ ಪಟ್ಟಣವು ದೆಹಲಿಯಿಂದ 180 ಕಿ.ಮೀ ದೂರದಲ್ಲಿದ್ದು, ರಾಜಸ್ಥಾನದ ರಾಜಧಾನಿಯಾದ ಜೈಪುರ್ ನಿಂದ 210 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ರಾಜಸ್ಥಾನದ ಝುನ್ ಝುನು ಜಿಲ್ಲೆಯ ಆಡಳಿತದಲ್ಲಿ ಬರುತ್ತದೆ.ಸ್ಥಳೀಯರ ಪ್ರಕಾರ, ಈ ಪಟ್ಟಣಕ್ಕೆ ಹೆಸರು ಇಲ್ಲಿಯ ಒಬ್ಬ ಯೋಧನಿಂದ ಬಂದಿದ್ದು, ಅವನು ಪಿಲಾನಿಯ ಗೋತ್ರದವನಾಗಿದ್ದ. ಅವನು ಇಲ್ಲಿರುವ ಕೋಟೆಯನ್ನು ಶತ್ರುಗಳಿಂದ ರಕ್ಷಿಸಲು ವೀರಾವೇಶದಿಂದ ಹೋರಾಡಿ ಪ್ರಾಣವನ್ನು ತ್ಯಾಗಮಾಡಿದನೆಂದು ಹೇಳಲಾಗುತ್ತದೆ. ಇದರ ಸ್ಮರಣಾರ್ಥವಾಗಿ ಅಂದಿನ ಆಡಳಿತಗಾರ ಈ ಪಟ್ಟಣಕ್ಕೆ ಅವನ ಹೆಸರನ್ನು ಇಟ್ಟನು.

ಇಂದು, ಈ ಚಿಕ್ಕ ಪಟ್ಟಣವು ತನ್ನಲ್ಲಿರುವ ಶ್ರೇಷ್ಠ ವಿದ್ಯಾಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಸುಮಾರು ಐದು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಿಟ್ಸ್ ಪಿಲಾನಿಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿಪುಣ ಅಭಿಯಂತರರನ್ನು ಉತ್ಪತ್ತಿ ಮಾಡಿದ್ದು, ಭಾರತದಲ್ಲೇ ಉತ್ತಮ ಎನ್ನಬಹುದಾದಂತಹ ಎಂಜಿನೀಯರಿಂಗ್ ವಿಷಯಗಳನ್ನು ಅಧ್ಯಯನಿಸಲು ಅವಕಾಶ ಒದಗಿಸುತ್ತಿದೆ. ಇಲ್ಲಿರುವ ಇನ್ನಿತರ ಖ್ಯಾತ ವಿದ್ಯಾ ಸಂಸ್ಥೆಗಳೆಂದರೆ ಬಿ.ಕೆ.ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಎಂಜಿನೀಯರಿಂಗ್ ಆಂಡ್ ಟೆಕ್ನಾಲಾಜಿ (BKBIET), ಜಿ.ಡಿ.ಬಿರ್ಲಾ ಮೆಮೊರಿಯಲ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ (BTTI), ಮತ್ತು ಶಾದಿಲಾಲ್ ಕಟಾರಿಯಾ ಟೀಚರ್ ಟ್ರೇನಿಂಗ್ ಕಾಲೇಜ್. ಭಾರತದಲ್ಲಿ ಮಂಚೂಣಿಯಲ್ಲಿರುವ ಉದ್ಯಮೀಯ ಮತ್ತು ಪರೋಪಕಾರಿ ಎಂದು ಪ್ರಖ್ಯಾತವಾದ ಬಿರ್ಲಾ ಕುಟುಂಬದ ಮನೆಯೂರಾದ ಕಾರಣದಿಂದಲೂ ಪಿಲಾನಿ ಹೆಸರುವಾಸಿಯಾಗಿದೆ.

ಪಿಲಾನಿ ಚಿಕ್ಕ ಪಟ್ಟಣವಾಗಿರುವುದರಿಂದ ವಿಮಾನ ನಿಲ್ದಾಣವಾಗಲಿ ಅಥವಾ ರೈಲು ನಿಲ್ದಾಣವಾಗಲಿ ಅದು ಹೊಂದಿಲ್ಲ. ಇದಕ್ಕೆ ಹತ್ತಿರವಿರುವ ರೈಲು ನಿಲ್ದಾಣವೆಂದರೆ ಚಿರಾವಾ. ಇದು ಇಲ್ಲಿಂದ 22 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಪಿಲಾನಿಗೆ ಭೇಟಿ ನೀಡಲು ಉದ್ದೇಶಿಸಿದ್ದರೆ, ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಭೇಟಿ ನೀಡುವುದು ಉತ್ತಮ, ಏಕೆಂದರೆ ಈ ಸಮಯದಲ್ಲಿ ಇಲ್ಲಿನ ವಾತಾವರಣವು ಅನುಕೂಲಕರವಾಗಿರುತ್ತದೆ.

ಪಿಲಾನಿ ಪ್ರಸಿದ್ಧವಾಗಿದೆ

ಪಿಲಾನಿ ಹವಾಮಾನ

ಉತ್ತಮ ಸಮಯ ಪಿಲಾನಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಿಲಾನಿ

 • ರಸ್ತೆಯ ಮೂಲಕ
  ಪಿಲಾನಿಯು ಅಂತಾರಾಜ್ಯ ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಆದ್ದರಿಂದ ರಸ್ತೆ ಮಾರ್ಗವು ಇಲ್ಲಿಗೆ ತಲುಪಲು ಉತ್ತಮವಾದ ಆಯ್ಕೆಯಾಗಿದೆ. ದೆಹಲಿ ಮತ್ತು ಪಿಲಾನಿಗಳ ಮಧ್ಯೆ ನಿರಂತರವಾಗಿ ಬಸ್ಸುಗಳು ಓಡಾಡುತ್ತಿರುತ್ತವೆ. ದೆಹಲಿಯಿಂದ ಚಿರಾವಾಗೆ ನೇರ ಬಸ್ಸುಗಳಿದ್ದು ಅಲ್ಲಿಂದ ಪಿಲಾನಿಗೆ ಸರಳವಾಗಿ ತಲುಪಬಹುದಾಗಿದೆ. ಇಲ್ಲವಾದಲ್ಲಿ ಸಿಂಧಿ ಕ್ಯಾಂಪ್, ಜೈಪುರ್ ನಿಂದ ರಾಜಸ್ಥಾನ್ ಸ್ಟೇಟ್ ರೋಡ್ ವೇಸ್ ಬಸ್ಸುಗಳ ಮೂಲಕ ಪಿಲಾನಿಗೆ ಹೋಗಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಿಲಾನಿಯಲ್ಲಿ ಯಾವುದೇ ರೈಲು ನಿಲ್ದಾಣಗಳಿಲ್ಲ. ಹತ್ತಿರದ ರೈಲು ನಿಲ್ದಾಣಗಳೆಂದರೆ ಚಿರಾವಾ ಮತ್ತು ಲೊಹಾರು ಕ್ರಮವಾಗಿ 16 ಕಿ.ಮೀ ಮತ್ತು 25 ಕಿ.ಮೀ ದೂರದಲ್ಲಿವೆ. ಈ ಎರಡೂ ರೈಲು ನಿಲ್ದಾಣಗಳಿಂದ ಪಿಲಾನಿಗೆ ನಿರಂತರವಾದ ಬಸ್ಸು ಹಾಗು ಟ್ಯಾಕ್ಸಿ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಿಲಾನಿಗೆ ಹತ್ತಿರವಾದ ಯಾವುದೇ ವಿಮಾನ ನಿಲ್ದಾಣಗಳಿಲ್ಲ. ಆದುದರಿಂದ ಇಲ್ಲಿಗೆ ಬರಬಯಸುವ ಪ್ರವಾಸಿಗರು ದೆಹಲಿ(180ಕಿ.ಮೀ) ಅಥವಾ ಜೈಪುರ್ (210 ಕಿ.ಮೀ) ವಾಯು ನಿಲ್ದಾಣಗಳಿಗೆ ತಲುಪಬೇಕು. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ಪಿಲಾನಿಯನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 May,Thu
Return On
27 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Thu
Check Out
27 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Thu
Return On
27 May,Fri