ಭೂತಾಯಿಯ ಮಡಿಲಲ್ಲಿ ಆನಂದದಿಂದ ವಿರಮಿಸಲು ಶಿವಗಂಗಾ ಎಂಬ ಆಕರ್ಷಣೀಯ ಸ್ಥಳ ಪಿಲಾನಿಯಲ್ಲಿದೆ. ಬಿಟ್ಸ್ ನಲ್ಲಿರುವ ವಿದ್ಯಾ ವಿಹಾರ್ ಕ್ಯಾಂಪಸ್ ನ ಹೃದಯಭಾಗದಲ್ಲಿ ಈ ತಾಣವು ಸ್ಥಿತವಾಗಿದೆ. ಈ ಸುಂದರ ಉದ್ಯಾನವು 400 ಮೀ ಸುತ್ತಳತೆಯ ಗೋಲಾಕಾರದ ಕಾಲುವೆ ಹೊಂದಿದ್ದು ಮಧ್ಯದಲ್ಲಿ ಶಿವನ ಪ್ರತಿಮೆಯನ್ನು ಹೊಂದಿದೆ. ಈ ತಾಣವು ಸಾಮಾನ್ಯವಾಗಿ ಇಲ್ಲಿನ ಜನರು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಯಂಕಾಲದ ಸಮಯದಲ್ಲಿ ಭೇಟಿ ನೀಡಲ್ಪಡುತ್ತದೆ.