Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಾನಿ » ಆಕರ್ಷಣೆಗಳು » ಶಾರದಾ ದೇವಸ್ಥಾನ

ಶಾರದಾ ದೇವಸ್ಥಾನ, ಪಿಲಾನಿ

1

ಪಿಲಾನಿ, ರಾಜಸ್ಥಾನ ನಲ್ಲಿರುವ ಶಾರದಾ ದೇವಾಲಯವು ಒಂದು ಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. 20 ನೇ ಶತಮಾನದ ಈ ದೇವಾಲಯವು ಸರಸ್ವತಿ ದೇವಿಗೆ ಸಮರ್ಪಿತವಾಗಿದ್ದು, ಪ್ರಸಿದ್ಧ ಉದ್ಯಮಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಉದಾರಿಯಾದ ಜಿ.ಡಿ. ಬಿರ್ಲಾರಿಂದ ನಿರ್ಮಿತವಾಗಿದೆ.

ಇಲ್ಲಿನ ಪ್ರಸಿದ್ಧ ಎಂಜಿನೀಯರಿಂಗ್ ಕಾಲೇಜಿನ, ವಿದ್ಯಾ ವಿಹಾರ್ ಕ್ಯಾಂಪಸ್ಸಿನಲ್ಲಿ ಈ ದೇವಾಲಯವು ಸ್ಥಿತವಾಗಿದೆ. ಮಕ್ರಾನಾ ಮತ್ತು ರಾಜಸ್ಥಾನದಿಂದ ತರಿಸಲಾದ ವಿಶೇಷ ಮಾರ್ಬಲ್ಲುಗಳಿಂದ ಇದನ್ನು ಕಟ್ಟಲಾಗಿದೆ. ಇಂಡೊ-ಆರ್ಯನ್ ವಾಸ್ತು ಶೈಲಿಯನ್ನು ಹೊಂದಿರುವ ಈ ದೇವಾಲಯವು, ಖುಜುರಾಹೊವಿನ ಖಂಡರಿಯಾ ಮಹಾದೇವ್ ದೇವಸ್ಥಾನದಿಂದ ಪ್ರಭಾವಿತವಾಗಿದೆ. ದೇವಾಲಯದಲ್ಲಿ ಗರ್ಭಗುಡಿ, ಪ್ರದಕ್ಷಿಣೆ ಪಥ, ಅಂತರಾಳ, ಮಂಟಪ ಮತ್ತು ಅರ್ಧ ಮಂಟಪಗಳೆಂಬ ಐದು ವಿಭಾಗಗಳಿವೆ.

ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮ್ಮಿಶ್ರಣವನ್ನು ಈ ದೇವಾಲಯದಲ್ಲಿ ಅನುಭವಿಸಬಹುದಾಗಿದೆ. ಗುಡಿಯ ಹೊರಾಂಗಣದಲ್ಲಿ ತತ್ವಜ್ಞಾನಿಗಳ, ಸಂತರ ಮತ್ತು ವಿಜ್ಞಾನಿಗಳ ಪ್ರತಿಮೆಗಳಿದ್ದು ಆಧುನಿಕತೆಯ ಛಾಪು ಎದ್ದು ಕಾಣಿಸುತ್ತದೆ.

One Way
Return
From (Departure City)
To (Destination City)
Depart On
27 Aug,Thu
Return On
28 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Aug,Thu
Check Out
28 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Aug,Thu
Return On
28 Aug,Fri