Search
  • Follow NativePlanet
Share
ಮುಖಪುಟ » ಸ್ಥಳಗಳು» ನಾಗೂರ್

ನಾಗೂರ್ : ಮಂದಿರ, ಮಸೀದಿಯ ಸೌಹಾರ್ದ ನಗರ

11

ಪಲ್ಲವ ರಾಜ ರಾಜಸಿಂಹನಿಂದ ಆಳಲ್ಪಟ್ಟು, ಚೀನಾ ಪ್ರವಾಸಿ ಹುಯೇನ್ ಸಾಂಗ್ ಬರೆದ ಪುಸ್ತಕದಲ್ಲಿ ಬುದ್ಧ ವಿಹಾರವೆಂದು ಕರೆಯಲ್ಪಟ್ಟಿರುವ ಬಂಗಾಳ ಕೊಲ್ಲಿಯ ಸಮೀಪದಲ್ಲೇ ಇರುವ ತಮಿಳುನಾಡಿದ ನಾಗಪಟ್ಟಣಂ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳವೇ ನಾಗೂರ್. ನಗರವು ನಾಗಪಟ್ಟಣಂನಿಂದ ಉತ್ತರದಲ್ಲಿ ನಾಲ್ಕು ಕಿ.ಮೀ. ಮತ್ತು ಕಾರೈಕಲ್ ನ ದಕ್ಷಿಣಕ್ಕೆ 16 ಕಿ.ಮೀ. ದೂರದಲ್ಲಿದೆ.

ನಾಗೂರ್ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ನಾಗೂರ್ ನಗರದ ಪ್ರಮುಖ ಆಕರ್ಷಣೆ ನಾಗೂರ್ ದರ್ಗಾ. ಈ ದರ್ಗಾದಿಂದಾಗಿಯೇ ನಾಗೂರ್ ಪ್ರಮುಖ ಯಾತ್ರಾಸ್ಥಳವಾಗಿ ಗುರುತಿಸಲ್ಪಟ್ಟಿದೆ. ಈ ದರ್ಗಾವು ಮೀರನ್ ಸಾಹಿಬ್ ಅಬ್ದುಲ್ ಖಾದಿರ್ ಶಾಹುಲ್ ಹಮೀದ್ ಬಾದಶಾಹ ಅವರಿಗೆ ಸಮರ್ಪಿಸಲಾಗಿದೆ. ಯೆಜಹು ಲೆಬ್ಬಿ ಜಮಿಯಾ ಮಸೀದಿ, ಫಾತಿಮಾ ಜಮಿಯಾ ಮಸೀದಿ ಮತ್ತು ಥೀರು ಪಲ್ಲಿ ಮಸೀದಿ ನಾಗೂರ್ ನಲ್ಲಿರುವ ಜನಪ್ರಿಯ ಮಸೀದಿಗಳು. ನಗರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರುವ ಸೀರಾಲಮ್ಮನ ಮಂದಿರವು ನಾಗೊರೆಪಟ್ಟಿನಚೆರಿ ಗ್ರಾಮದಲ್ಲಿದೆ. ಇದು ನಾಗೂರ್ ರೈಲು ನಿಲ್ದಾಣಕ್ಕೆ ತುಂಬಾ ಹತ್ತಿರವಾಗಿದೆ.

ಪ್ರತೀ ವರ್ಷ ಸೀರಾಲಮ್ಮನ ಹಬ್ಬವು ಹತ್ತು ದಿನಗಳ ಕಾಲ ನಡೆಯುತ್ತದೆ. ನಾಗೂರ್ ನಲ್ಲಿ ಪ್ರತೀ ವರ್ಷ ಅಕ್ಟೋಬರ್ ಮತ್ತು ನವಂಬರ್ ನಲ್ಲಿ ನಡೆಯುವ ಕಂಧುರಿ ಹಬ್ಬವನ್ನು ಪ್ರವಾಸಿಗಳು ನೋಡಬಹುದು. ಮರಿಯಮ್ಮ ಮಂದಿರ, ಆಂಜನೇಯ ಮಂದಿರ, ಶಿವನ ಮಂದಿರ ಮತ್ತು ಪೆರುಮಲ್ ಕೊಯಿಲ್ ಮಂದಿರವು ನಗರದಲ್ಲಿನ ಕೆಲವು ಪ್ರಮುಖ ಮಂದಿರಗಳು. ಮಂದಿರ, ಮಸೀದಿ ಮತ್ತು ಪ್ರಾರ್ಥನಾ ಮಂದಿರಗಳನ್ನು ಹೊರತುಪಡಿಸಿ ನಗರದಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡೆಗೆ ಯೋಗ್ಯವಾಗಿರುವಂತಹ ಬೀಚ್ ಇದೆ. ರಾಷ್ಟ್ರದೆಲ್ಲೆಡೆಯಿಂದ ಬರುವ ಎಲ್ಲಾ ಧರ್ಮಗಳ ಪ್ರವಾಸಿಗರು ನಾಗೂರ್ ನಲ್ಲಿರುವ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ.

ನಾಗೂರ್ ಗೆ ತಲುಪುವುದು ಹೇಗೆ

ನಾಗೂರ್ ಗೆ ತಮಿಳುನಾಡಿನ ವಿವಿಧ ನಗರಗಳಿಂದ ರೈಲು, ವಿಮಾನ ಮತ್ತು ರಸ್ತೆ ಮೂಲಕ ಸಂಪರ್ಕವಿದೆ. ನಗರದಲ್ಲಿರುವ ರೈಲ್ವೆ ಜಂಕ್ಷನ್ ಚೆನ್ನೈ ಮತ್ತು ತಿರುಚಿಗೆ ರೈಲು ಸೇವೆಗಳನ್ನು ಒದಗಿಸುತ್ತದೆ. ನಾಗೂರ್ ಗೆ ತುಂಬಾ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳೆಂದರೆ ಚೆನ್ನೈ ಮತ್ತು ತಿರುಚಿ ವಿಮಾನ ನಿಲ್ದಾಣಗಳು.

ನಾಗೂರ್ ಹವಾಮಾನ

ನಗರವು ಸಮುದ್ರಕ್ಕೆ ತುಂಬಾ ಹತ್ತಿರದಲ್ಲಿದೆ. ಈ ಕಾರಣದಿಂದ ಕರಾವಳಿಯ ಹವಾಮಾನವನ್ನು ಹೊಂದಿದೆ.

ನಾಗೂರ್ ಪ್ರಸಿದ್ಧವಾಗಿದೆ

ನಾಗೂರ್ ಹವಾಮಾನ

ಉತ್ತಮ ಸಮಯ ನಾಗೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಾಗೂರ್

  • ರಸ್ತೆಯ ಮೂಲಕ
    ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶದ ಪ್ರಮುಖ ನಗರಗಳಿಗೆ ನಾಗೂರ್ ನಿಂದ ಒಳ್ಳೆಯ ಬಸ್ ಸಂಪರ್ಕವಿದೆ. ನಾಗೂರ್ ನಿಂದ ಕನ್ಯಾಕುಮಾರಿ, ತಿರುಚಿ, ಚೆನ್ನೈ, ತಾಂಜಾವೂರ್, ತಿರುವನಂತಪುರಂ, ಮಧುರೈ ಮತ್ತು ಪಾಂಡಿಚೇರಿಗೆ ಬಸ್ ವ್ಯವಸ್ಥೆಯಿದೆ. ನಾಗೂರ್ ಮತ್ತು ದಕ್ಷಿಣ ಭಾರತದ ಹಲವಾರು ನಗರಗಳಿಗೆ ಡಿಲಕ್ಸ್ ಪ್ರವಾಸಿ ಬಸ್ ಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಗರದಿಂದ ಐದು ಕಿ.ಮೀ. ದೂರದಲ್ಲಿರುವ ನಾಗಪಟ್ಟಣಂ ನಾಗೂರ್ ಗೆ ಸಮೀಪದ ರೈಲು ನಿಲ್ದಾಣ. ಭಾರತದ ಪ್ರಮುಖ ನಗರ ಚೆನ್ನೈ ಮತ್ತು ತಿರುಚಿಗೆ ರೈಲು ನಿಲ್ದಾಣವು ಒಳ್ಳೆಯ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಾಗೂರ್ ಗೆ ಹತ್ತಿರದ ವಿಮಾನ ನಿಲ್ದಾಣ ತಿರುಚಿ ವಿಮಾನ ನಿಲ್ದಾಣ. ಇದು ನಗರದಿಂದ ಸುಮಾರು 140 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಚೆನ್ನೈಗೆ ಹಲವಾರು ವಿಮಾನಗಳಿವೆ. ಚೆನ್ನೈ ವಿಮಾನ ನಿಲ್ದಾಣದಿಂದ ನಾಗೂರ್ ಗೆ ಸುಮಾರು 300 ಕಿ.ಮೀ. ದೂರವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed