ದೇವರ ಸ್ಥಳಂನಲ್ಲಿರುವ ಭಗವಾನ್ ಶಿವನ ಮಂದಿರವು ನಾಗೂರ್ ನಲ್ಲಿರುವ ಪ್ರಸಿದ್ಧ ಮಂದಿರ. ಶೇಷಪುರಿಯೆಂದು ಕರೆಯಲ್ಪಡುವ ಈ ಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳು ಶಿವನ ಮೂರ್ತಿಯೊಂದಿಗೆ ದೇವಸ್ಥಾನದ ಆವರಣದಲ್ಲಿರುವ ಇತರ ಹಲವಾರು ಮೂರ್ತಿಗಳನ್ನು ನೋಡಬಹುದಾಗಿದೆ. ಪುರಾಣದ ಪ್ರಕಾರ ಮಂದಿರವು ರಾಹು ಮತ್ತು ಕೇತುಗೆ ಪರಿಹಾರ ಸ್ಥಳವೆಂಬ ಉಲ್ಲೇಖವಿದೆ. ವರ್ಷದಲ್ಲಿ ಎರಡು ಪ್ರಮುಖ ಹಬ್ಬಗಳನ್ನು ಆಚರಿಸಲ್ಪಡುವ ಈ ಮಂದಿರಕ್ಕೆ ಬೆಳಗಿನ ಜಾವ ಭೇಟಿ ನೀಡುವ ಭಕ್ತರು ತುಂಬಾ ಅದೃಷ್ಟಶಾಲಿಗಳೆಂದು ಸ್ಥಳೀಯರು ನಂಬಿದ್ದಾರೆ. ಮಹಾಶಿವರಾತ್ರಿ ವೇಳೆ ಮುಖ್ಯ ಪ್ರಮುಖ ಹಬ್ಬ ನಡೆಯುತ್ತದೆ ಮತ್ತು ಈ ವೇಳೆ ಶಿವನ ಆಶೀರ್ವಾದ ಪಡೆಯಬಹುದು. ನಾಗೂರ್ ನಲ್ಲಿರುವ ಹಲವಾರು ಮಂದಿರಗಳಲ್ಲಿ ಇರುವಂತೆ ಈ ಮಂದಿರದಲ್ಲೂ ಡ್ರಾವಿಡ ಶೈಲಿಯ ವಾಸ್ತುಶಿಲ್ಪವಿದೆ.