ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿರುವ ಸುಂದರ ನಗರ ನಾಗೂರ್ ತನ್ನ ಬೀಚ್ ನಿಂದಾಗಿ ರಾಜ್ಯದ ಇತರ ಕಡೆಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಅತ್ಯಂತ ರಮಣೀಯವಾಗಿರುವ ಈ ಬೀಚ್ ನ್ನು ಮಹಾನಗರ ಪಾಲಿಕೆ ಆಡಳಿತವು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬಂದು ಕಾಲ ಕಳೆಯಲು ಇದೊಂದು ಒಳ್ಳೆಯ ಪಿಕ್ನಿಕ್ ತಾಣ.
ಕುದುರೆ ಮೇಲಿನ ಸವಾರಿಯೊಂದಿಗೆ ಇಲ್ಲಿನ ಆಕರ್ಷಣೆ ನೋಟವು ಮನಸ್ಸಿಗೆ ಮುದ ನೀಡಲಿದೆ. ಸಮುದ್ರ ತೀರದಲ್ಲಿ ನಿಂತು ಮನಸ್ಸಿಗೆ ಸಿಗುವ ಆನಂದವು ಹಣ ಕೊಟ್ಟರೂ ಬೇರೆ ಯಾವುದೇ ಸ್ಥಳದಲ್ಲೂ ಸಿಗಲಾರದು. ಬೀಚ್ ನಲ್ಲಿರುವ ಕೆಲವು ಅಂಗಡಿಗಳಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರವು ಲಭ್ಯವಿದೆ. ಜನಪ್ರಿಯ ಪ್ರವಾಸಿ ತಾಣವಾಗಿರುವ ಈ ಬೀಚ್ ವಿದೇಶಿಗರಿಂದ ತುಂಬಿ ಹೋಗಿರುತ್ತದೆ. ಹರ್ಜತ್ ಮಿಯಾ ದರ್ಗಾದಿಂದಲೂ ಬೀಚ್ ಜನಪ್ರಿಯ.