ತಮಿಳುನಾಡಿನ ನಾಗೂರ್ ಸಮೀಪದಲ್ಲಿರುವ ಪ್ರಸಿದ್ಧ ಹಿಂದೂ ಮಂದಿರವೇ ಮಾರಿಯಮ್ಮನ ಮಂದಿರ. ಮಂದಿರದ ಮುಖ್ಯ ಮೂರ್ತಿಯನ್ನು ಮರಳು ಮತ್ತು ಜೇಡಿಮಣ್ಣಿನಿಂದ ರಚಿಸಿದ್ದು, ಇದನ್ನು ಮಾರಿಯಮ್ಮನೆಂದು ಕರೆಯುತ್ತಾರೆ. ಮೂರ್ತಿಯ ಎದುರಿನಲ್ಲೇ ಒಂದು ಸಣ್ಣ ಕಲ್ಲಿದ್ದು, ಮೂರ್ತಿಯ ಬದಲಿಗೆ ಈ ಕಲ್ಲಿಗೆ ಅಭಿಷೇಕ ಮಾಡಲಾಗುತ್ತದೆ. ಆದಿತ್ಯವಾರ, ಶುಕ್ರವಾರ ಮತ್ತು ಮಂಗಳವಾರದಂದು ಮಂದಿರಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸುತ್ತಾರೆ.
ತಮಿಳುನಾಡಿನಲ್ಲಿ ಥಾಯಿ ತಿಂಗಳಲ್ಲಿ ಮಾಡಲಾಗುವ ಥಾಯಿ ಪೂಸಂ ಹಬ್ಬ ಮಂದಿರದಲ್ಲಿ ಮುಖ್ಯವಾಗಿ ಆಚರಿಸಲ್ಪಡಲಾಗುತ್ತದೆ. ಗ್ರಾಮೀಣ ಜಾನಪದ ಅಧ್ಯಯನಕ್ಕೆ ರಾಜ್ಯ ಸರ್ಕಾರವು ಮಂದಿರವನ್ನು ಒಳ್ಳೆಯ ಉದಾರಣೆಯನ್ನಾಗಿಸಿದೆ. ದೇವಸ್ಥಾನದ ಮುಖ್ಯ ಸಭಾಂಗಣದಲ್ಲಿ ಹಲವಾರು ಮೂರ್ತಿಗಳಿವೆ. ರಜಾದಿನ ಸಹಿತ ಮಂದಿರವು ಪ್ರತೀ ದಿನ ತೆರೆದಿರುತ್ತದೆ ಮತ್ತು ಭಕ್ತರಿಗೆ ಆಡಳಿತ ಮಂಡಳಿ ವತಿಯಿಂದ ಪ್ರಸಾದ ವಿತರಿಸಲಾಗುತ್ತದೆ.