ಹಲವಾರು ಮಂದಿರಗಳನ್ನು ಹೊಂದಿರುವ ತಮಿಳುನಾಡಿನ ಒಂದು ನಗರವೇ ನಾಗೂರ್. ನಾಗೂರ್ ನಲ್ಲಿರುವ ಅತ್ಯಂತ ಪುರಾತನ ಮಂದಿರವೆಂದರೆ ಪೆರುಮಾಳ ಕೊಯಿಲ್. ಇದೊಂದು ಶ್ರೇಷ್ಠ ಮಂದಿರವಾಗಿದ್ದು, ಇಲ್ಲಿರುವ ದೇವರನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಮಂದಿರವು ದಕ್ಷಿಣದ ಶೈಲಿಯ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಮಂದಿರವು ಸಾವಿರಾರು ವರ್ಷ ಪುರಾತನವಾದದ್ದಾಗಿದೆ. ಇಲ್ಲಿ ವಿಧಿವಿಧಾನಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಮತ್ತು ದೇವರಿಗೆ ನೀಡುವ ಆರತಿಯನ್ನು ನೋಡುವುದೇ ಮನಸ್ಸಿಗೊಂದು ಆನಂದ.
ಮುಖ್ಯ ದೇವರ ಆಶೀರ್ವಾದ ಪಡೆಯಲು ರಾಜ್ಯದೆಲ್ಲೆಡೆಯಿಂದ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಭಗವಂತ ವಿಷ್ಣುವಿನ ಒಂದು ಅವತಾರವಾಗಿರುವ ಈ ಮಂದಿರದ ದೇವರು ನೂರ ಎಂಟು ದಿವ್ಯ ದೆಶಂಗಳಲ್ಲಿ ಒಂದಾಗಿದೆ. ಮಂದಿರದಲ್ಲಿ ಮಳಿಗೆಯೊಂದಿದ್ದು, ಇದರಲ್ಲಿ ಒಂದು ಸಭಾಂಗಣವಿದೆ. ಸಭಾಂಗಣವನ್ನು ಮರದಿಂದ ಕೆತ್ತಲ್ಪಟ್ಟಿರುವ ಹಲವಾರು ಕಲಾಕೃತಿಗಳಿವೆ. ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ಪ್ರಮುಖ ಹಬ್ಬವನ್ನು ಆಚರಿಸಲಾಗುತ್ತದೆ.