ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ

ಧೀರ ಯೋಧರಿಗೆ ಗೌರವ ಸೂಚಕವಾಗಿ ಪಂಜಾಬ್ ಸರ್ಕಾರ 1999ರಲ್ಲಿ ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂನ್ನು ಸ್ಥಾಪಿಸಿತು. ಇದು ಲುಧಿಯಾನ ರೈಲ್ವೆ ನಿಲ್ದಾಣದಿಂದ 6.7 ಕಿ.ಮೀ. ದೂರದಲ್ಲಿರುವ ಜಿಟಿ ರಸ್ತೆ(ಲುಧಿಯಾನ-ಅಮೃತಸರ ಹೈವೇ)ಯಲ್ಲಿದೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲಿ ಮಹಾರಾಜ ರಂಜಿತ್ ಸಿಂಗ್ ರ ದೊಡ್ಡ ಮೂರ್ತಿಯಿದೆ. ಮೂರ್ತಿಯ ಬದಿಯಲ್ಲಿ ಐಎನ್ ಎಸ್ ವಿಕ್ರಾಂತ್ ನ ಮಾದರಿ ಸೇರಿದಂತೆ ಹಳೆಯ ಶಸ್ತ್ರಾಸ್ತ್ರಗಳಿವೆ. ಮ್ಯೂಸಿಯಂನಲ್ಲಿ ಬೆಳಕು ಮತ್ತು ಶಬ್ದದ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಪರಮವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರಗಳಂತಹ ಪ್ರತಿಷ್ಠಿತ ಶೌರ್ಯ ಪ್ರಶಸ್ತಿಗಳನ್ನು ಪಡೆದಿರುವಂತಹ ಪಂಜಾಬಿಗಳ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಬ್ರಿಟಿಷರ ಕಾಲದಿಂದ ಹಿಡಿದು ಇಂದಿನವರೆಗಿನ ಭಾರತದ ಸೇನೆಯ ಯೂನಿಫಾರಂನ್ನು ಇಲ್ಲಿ ಪ್ರದರ್ಶಿಸಲಾಗಿದೆ.

Please Wait while comments are loading...