ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ

ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ ಸುಮಾರು 1000 ಚದರ ಅಡಿ ಪ್ರದೇಶದಲ್ಲಿದ್ದು, ಇದು ಪಂಜಾಬ್ ನ ಗ್ರಾಮೀಣ ಜೀವನಶೈಲಿಯನ್ನು ಪರಿಚಯಿಸುತ್ತದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಜನರು ದೈನಂದಿನ ಚಟುವಟಿಕೆಗಳಲ್ಲಿ ಬಳಸುತ್ತಿದ್ದ ಕಂಚಿನ ಮಡಕೆಗಳಲ್ಲಿ ನೀರನ್ನು ಸಾಗಿಸುವುದನ್ನು(ಈಗ ವಿದ್ಯುತ್ ಮೋಟರ್ ಗಳು ಮತ್ತು ಪಂಪ್ ಗಳು ಕೆಲಸ ಮಾಡುತ್ತಿವೆ) ಪ್ರವಾಸಿಗಳು ನೋಡಬಹುದಾಗಿದೆ. ಪಂಜಾಬ್ ನ ನೈಜ ಅಥವಾ ಗ್ರಾಮೀಣ ಜೀವನವನ್ನು ನೋಡಬಯಸುವ ಪ್ರವಾಸಿಗರು ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು. ಈ ಮ್ಯೂಸಿಯಂ ಹೋಮ್ ಸೈನ್ಸ್ ಕಾಲೇಜಿನ ಹಿಂದುಗಡೆಯಿದೆ ಮತ್ತು ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮತ್ತು ಮಧ್ಯಾಹ್ನ 2ರಿಂದ 5 ಗಂಟೆ ತನಕ ಈ ಮ್ಯೂಸಿಯಂ ತೆರೆದಿರುತ್ತದೆ.

Please Wait while comments are loading...