ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರ, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರ

ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರವು ಲುಧಿಯಾನದಿಂದ 39 ಕಿ.ಮೀ. ದೂರದಲ್ಲಿರುವ ಮಚ್ಛಿವಾರ ನಗರದಲ್ಲಿನ ಚರಣ್ ಕಮಲ್ ರಸ್ತೆಯಲ್ಲಿದೆ. ಈ ಗುರುದ್ವಾರದಲ್ಲಿರುವ ಉದ್ಯಾನದಲ್ಲಿ ಗುರು ಗೋಬಿಂದ್ ಸಿಂಗ್ ಜೀ ಅವರು ನೀರು ಕುಡಿದು ಕಿರು ನಿದ್ದೆ ಮಾಡಿದರೆಂಬ ನಂಬಿಕೆಯಿದೆ. ಇದೇ ಸ್ಥಳದಲ್ಲಿ ಅವರ ಮೂವರು ಅನುಯಾಯಿಗಳಾದ ಧರಂ ಸಿಂಗ್, ದಾಗಾ ಸಿಂಗ್ ಮತ್ತು ಮನು ಸಿಂಗ್ ಜತೆ ಸೇರಿದರು. ಈ ಮಹತ್ವದ ಘಟನೆ ನಡೆದ ಸ್ಮರಣಾರ್ಥಕವಾಗಿ ಡಿಸೆಂಬರ್ ತಿಂಗಳಲ್ಲಿ ಬೃಹತ್ ಮೇಳವನ್ನು ನಡೆಸಲಾಗುತ್ತದೆ. ಇದರ ಸಮೀಪದಲ್ಲೇ ಇರುವ ಮತ್ತೊಂದು ಪೂಜಾ ಕೇಂದ್ರವೆಂದರೆ ಗುರುದ್ವಾರ ಚುಬಾರ ಸಾಹಿಬ್. ಇದನ್ನು ಗುಲಾಬದ ಬುಬಾರ ಎಂದು ಕರೆಯಲಾಗುತ್ತದೆ. ಗುಲಾಬ್ ಮಸಂದ್ ಮನೆಯಲ್ಲಿ ಗುರುಜೀ ಒಂದು ರಾತ್ರಿ ಕಳೆದಿದ್ದರೆಂಬ ಪ್ರತೀತಿಯಿದೆ.

Please Wait while comments are loading...